‘ಕರಿಯರ್’ ಮತ್ತು ‘ಧನಯೋಗ’ ಇವು ಇಂದಿನ ಸ್ಪರ್ಧಾತ್ಮಕ ಜಗತ್ತಿನ ವ್ಯಕ್ತಿಯ ಆಸಕ್ತಿಯ ವಿಷಯಗಳಾಗಿವೆ. ‘೧೦ ನೇ ತರಗತಿಯ ಬಳಿಕ ಮಕ್ಕಳನ್ನು ಯಾವ ಶಾಖೆಗೆ (ವಿಭಾಗಕ್ಕೆ) ಸೇರಿಸಿದರೆ ಅವರಿಗೆ ಜೀವನದಲ್ಲಿ ಯಶಸ್ಸು ಸಿಗುವುದು ? ನನ್ನ ಕುಂಡಲಿಯಲ್ಲಿರುವ ಗ್ರಹಗಳನ್ನು ನೋಡಿ ಯಾವ ಕರಿಯರ್ ಆಯ್ಕೆ ಮಾಡಿದರೆ ನನಗೆ ಧನ ಲಾಭವಾಗುವುದು?’, ಎನ್ನುವ ಪ್ರಶ್ನೆಗಳನ್ನು ಕೇಳುವ ಅನೇಕ ಜಾತಕಗಳು ನಮಗೆ ಬರುತ್ತವೆ; ಏಕೆಂದರೆ ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ಉದ್ಯಮದಲ್ಲಿ ಬಿಡುವಿಲ್ಲದ ಜೀವನ ನಡೆಸುವ ಬದಲು ವ್ಯಾಪಾರ ಮಾಡುವತ್ತ ಒಲವು ತೋರುತ್ತಿದ್ದಾರೆ.
‘ಕುಂಡಲಿಗನುಸಾರ ಯಾವ ಕ್ಷೇತ್ರದಿಂದ ಅರ್ಥಪ್ರಾಪ್ತಿಯಾಗುವುದು?’, ಎನ್ನುವ ವಿಚಾರವಿಟ್ಟು ಶಿಕ್ಷಣ ಪಡೆಯುವುದು ಸೂಕ್ತವಾಗಿದೆ. ‘ಯಾವ ಉದ್ಯಮವನ್ನು ಮಾಡಬೇಕು? ಯಾವ ಉದ್ಯಮದಿಂದ ಅಧಿಕ ಹಣ ಸಿಗುವುದು?’, ಇದಕ್ಕಾಗಿ ಜಾತಕದಲ್ಲಿರುವ ಆರ್ಥಿಕ ತ್ರಿಕೋಣ ಎಂದರೆ ೨, ೬ ಮತ್ತು ೧೦ ನೇ ಸ್ಥಾನಗಳು, ಹಾಗೆಯೇ ಆ ರಾಶಿಯ ಗ್ರಹಸ್ಥಿತಿಗಳು ಉದ್ಯಮದ ದೃಷ್ಟಿಯಿಂದ ಮಹತ್ವದ್ದೆಂದು ನಿರ್ಧರಿಸಲ್ಪಡುತ್ತದೆ. ದಶಮಸ್ಥಾನವು ಆರ್ಥಿಕ ತ್ರಿಕೋಣದ ಒಂದು ಮಹತ್ವದ ಸ್ಥಾನವಾಗಿದೆ.
೧. ಉದ್ಯಮದಲ್ಲಿ ಯಶಸ್ವಿಯಾಗಲು ಆವಶ್ಯಕವಿರುವ ಗ್ರಹ
ಅ. ಶ್ರೀಮಂತ ಗ್ರಹ ಶುಕ್ರ
ಆ. ದೈವೀ ಬೆಂಬಲ ಸಿಗಲು ಗುರುಗ್ರಹ
ಇ. ಆತ್ಮಿಕ ಸಮಾಧಾನ ಮತ್ತು ರಾಜಾಶ್ರಯಕ್ಕಾಗಿ ರವಿ ಗ್ರಹ
ಈ. ಮಾನಸಿಕ ಸಮಾಧಾನಕ್ಕಾಗಿ ಚಂದ್ರ ಗ್ರಹ
ಉ.’ಕರಿಯರ್’ನಲ್ಲಿ ಉನ್ನತಿ ಹೊಂದಲು ಶನಿ ಗ್ರಹ
ಊ. ಬೌದ್ಧಿಕ ನಿರ್ಣಯಕ್ಕಾಗಿ ಬುಧ
ಈ. ಎಲ್ಲ ಗ್ರಹಗಳು ಶುಭ ಮತ್ತು ಶಕ್ತಿಶಾಲಿಯಾಗಿರುವುದು ಆವಶ್ಯಕವಿದೆ.
೨. ಉದ್ಯಮದಲ್ಲಿ ಯಶಸ್ಸು ಗಳಿಸಲು ಜಾತಕದಲ್ಲಿರುವ ಆರ್ಥಿಕ ತ್ರಿಕೋನ ಮತ್ತು ಲಾಭಸ್ಥಾನ ಮಹತ್ವದ್ದಾಗಿವೆ !
ಉದ್ಯಮದಲ್ಲಿ ಯಶಸ್ಸು ಗಳಿಸಲು ಕುಂಡಲಿಯಲ್ಲಿರುವ ಆರ್ಥಿಕ ತ್ರಿಕೋನ, ಅಂದರೆ ೨, ೬ ಮತ್ತು ೧೦ ಈ ಸ್ಥಾನಗಳು, ಅಲ್ಲದೇ ಲಾಭಕ್ಕಾಗಿ ಲಾಭಸ್ಥಾನ ಮಹತ್ವದ್ದಾಗಿರುತ್ತದೆ. ೨, ೬, ೧೦ ಮತ್ತು ೧೧ ಈ ನಾಲ್ಕು ಸ್ಥಾನಗಳ ಸ್ವಾಮಿಗಳು ಪರಸ್ಪರ ಶುಭಯೋಗದಲ್ಲಿದ್ದರೆ ಉದ್ಯಮದಲ್ಲಿ ಯಶಸ್ಸು ಸಿಗುತ್ತದೆ. ಸಪ್ತಮೇಶ, ಅಂದರೆ ಸಪ್ತಮ ಸ್ಥಾನದ ಸ್ವಾಮಿ ಶುಭಯೋಗ ದಲ್ಲಿದ್ದರೆ ಉದ್ಯಮದಲ್ಲಿ ಒಳ್ಳೆಯ ಪಾಲುದಾರರು ಸಿಗುತ್ತಾರೆ.
ಅ. ಆರ್ಥಿಕ ತ್ರಿಕೋನ : ಕುಂಡಲಿಯ ಆರ್ಥಿಕ ತ್ರಿಕೋನವೆಂದರೆ ೨, ೬ ಮತ್ತು ೧೦ ಈ ಸ್ಥಾನಗಳನ್ನು ಕುಂಡಲಿಯಲ್ಲಿ ತೋರಿಸುವ ಆಕೃತಿ
೩. ಸ್ವಂತ ಉದ್ಯಮದ ದೃಢ ವಿಚಾರ ಮನಸ್ಸಿನಲ್ಲಿ ಬರಲು ಆವಶ್ಯಕವಿರುವ ಕುಂಡಲಿಯಲ್ಲಿರುವ ಸ್ಥಾನ ಮತ್ತು ಗ್ರಹ
‘ಕರಿಯರ್’ ಅಥವಾ ಸ್ವಂತ ಉದ್ಯಮದ ವಿಚಾರ ಮಾಡುವಾಗ ಕುಂಡಲಿಯಲ್ಲಿರುವ ಲಗ್ನಸ್ಥಾನ, ಲಗ್ನೇಶ, ದಶಮ ಸ್ಥಾನ, ದಶಮೇಶ, ಅಲ್ಲದೇ ರವಿ ಮತ್ತು ಚಂದ್ರ ಈ ಗ್ರಹಗಳ ಸಹಾಯವಿರುವುದು ಮಹತ್ವದ್ದಾಗಿರುತ್ತದೆ. ಲಗ್ನ ಸ್ಥಾನದಿಂದ (ಪ್ರಥಮ ಸ್ಥಾನದಿಂದ) ವ್ಯಕ್ತಿಯ ಮಹತ್ವಾಕಾಂಕ್ಷೆ ನಿರ್ಧರಿಸಲ್ಪಡುತ್ತದೆ ಮತ್ತು ದಶಮ ಸ್ಥಾನ, ಎಂದರೆ ಕರ್ಮಸ್ಥಾನವು ವ್ಯಕ್ತಿಗೆ ಎದುರಾಗುವ ಸವಾಲನ್ನು ಸರಿ ದೂಗಿಸಿಕೊಂಡು ಹೋಗುವ ಕ್ಷಮತೆಯನ್ನು ತೋರಿಸುತ್ತದೆ. ಲಗ್ನೇಶ ಶಕ್ತಿಶಾಲಿಯಾಗಿದ್ದರೆ, ವ್ಯಕ್ತಿ ಯಾವುದೇ ಸವಾಲನ್ನು ಸರಿದೂಗಿಸಿಕೊಂಡು ಹೋಗಲು ಸಕ್ಷಮನಾಗಿರುತ್ತಾನೆ. ಆ ವ್ಯಕ್ತಿಯ ಸ್ವತಂತ್ರ ಉದ್ಯಮ ಮಾಡುವ ವಿಚಾರ ದೃಢವಾಗಿರುತ್ತದೆ. ಅವರು ಸ್ವಂತ ಸಾಮರ್ಥ್ಯದಿಂದ ಯಶಸ್ಸು ಗಳಿಸುತ್ತಾರೆ.
೪. ಉದ್ಯಮದಲ್ಲಿ ಎದುರಾಗುವ ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಹೋಗಲು ಕುಂಡಲಿಯಲ್ಲಿ ಆವಶ್ಯಕವಿರುವ ಸ್ಥಾನ ಮತ್ತು ಗ್ರಹ :
‘ವ್ಯಕ್ತಿಯಲ್ಲಿ ‘ಕರಿಯರ್’ನಲ್ಲಿ ಎದುರಾಗುವ ಹೊಸ ಹೊಸ ಸವಾಲುಗಳನ್ನು ಎದುರಿಸುವ ಕ್ಷಮತೆ ಎಷ್ಟಿದೆ ?’, ಎಂದು ನೋಡಲು ಜಾತಕದ ೩, ೬, ೧೦ ಮತ್ತು ೧೧ ಈ ಉಪಚಯ (ಸಮೃದ್ಧಿ) ಸ್ಥಾನಗಳನ್ನು ಪರಿಶೀಲಿಸಬೇಕಾಗುತ್ತದೆ. ಉಪಚಯ ಸ್ಥಾನಗಳಲ್ಲಿ ಯಾವ ಸ್ಥಾನ ಬಲವಾಗಿರುತ್ತದೆಯೋ, ಆ ಕ್ಷೇತ್ರದಲ್ಲಿ ವ್ಯಕ್ತಿಗೆ ವಿಶೇಷ ಯಶಸ್ಸು ಸಿಗುತ್ತದೆ, ಹಾಗೆಯೇ ಸಂಬಂಧಿಸಿದ ಗ್ರಹಗಳ ದಶೆಯಲ್ಲಿ ಉದ್ಯಮ ಪ್ರಾರಂಭವಾಗುತ್ತದೆ ಅಥವಾ ಯಶಸ್ಸು ದೊರಕುತ್ತದೆ.
ಅ. ಜಾತಕದಲ್ಲಿರುವ ಉಪಚಯ ಸ್ಥಾನಗಳನ್ನು ತೋರಿಸುವ ಕುಂಡಲಿ
ಆ. ಉದ್ಯಮದ ದೃಷ್ಟಿಕೋನದಿಂದ ಕುಂಡಲಿ (ಜಾತಕ)
೫. ಜಾತಕದಲ್ಲಿರುವ ಉಪಚಯ ಸ್ಥಾನಗಳ ವಿಶ್ಲೇಷಣೆ
ಅ. ತೃತೀಯ ಸ್ಥಾನ : ತೃತೀಯ ಸ್ಥಾನಕ್ಕೆ ‘ಪರಾಕ್ರಮ ಸ್ಥಾನ’ ಎಂದೂ ಹೇಳುತ್ತಾರೆ. ತೃತೀಯ ಸ್ಥಾನವು ಕರ್ಮ ಸ್ಥಾನದ ಷಷ್ಠ (ಆರನೆಯ) ಸ್ಥಾನವಾಗಿದೆ. ಷಷ್ಠ ಸ್ಥಾನದಿಂದ ರಿಪು ಅಂದರೆ ಶತ್ರು ಮತ್ತು ರೋಗಗಳಿರುವ ಬಗ್ಗೆ ಅಧ್ಯಯನ ಮಾಡುತ್ತಾರೆ. ಕೈಗೆತ್ತಿಕೊಂಡ ಕಾರ್ಯದಲ್ಲಿ ಎದುರಾಗುವ ಅಡಚಣೆಗಳು ಮತ್ತು ಕಷ್ಟಗಳನ್ನು ತೋರಿಸುವ ಸ್ಥಾನ ಇದಾಗಿದೆ. ತೃತೀಯ ಸ್ಥಾನ ಬಲ ವಾಗಿಲ್ಲದಿದ್ದರೆ, ಪರಾಕ್ರಮದ ಪರಾಕಾಷ್ಠೆಯನ್ನು ತಲುಪಲು ಆ ವ್ಯಕ್ತಿ ಸಿದ್ಧನಾಗಿರಬೇಕಾಗುತ್ತದೆ.
ಆ. ಷಷ್ಠ ಸ್ಥಾನ : ಷಷ್ಠ ಸ್ಥಾನವು ಕರ್ಮ ಸ್ಥಾನದ ಭಾಗ್ಯಸ್ಥಾನವಾಗಿದೆ. ಭಾಗ್ಯಸ್ಥಾನದಿಂದ ಭಾಗ್ಯೋದಯ, ಗುರುಕೃಪೆ ಮತ್ತು ಈಶ್ವರಿ ಕೃಪೆಯ ಅಧ್ಯಯನ ಮಾಡಲಾಗುತ್ತದೆ. ಇದಕ್ಕಾಗಿ ‘ಕರಿಯರ್‌ನಲ್ಲಿ ನಮ್ಮ ಕೈಕೆಳಗೆ ಕೆಲಸ ಮಾಡುವ ಜನರು ಹೇಗಿರುತ್ತಾರೆ ? ನಮ್ಮ ಶತ್ರುಗಳಾಗಿರುತ್ತಾರೆಯೇ ? ಹಾಗೆಯೇ ಕರಿಯರ್‌ಗಾಗಿ ಬೇಕಾಗುವ ಸಾಲ ಸಿಗುವುದೇ ಅಥವಾ ತೆಗೆದುಕೊಂಡ ಸಾಲ ಸಾಧ್ಯವಾದಷ್ಟು ಬೇಗನೆ ತೀರುವುದೇ ? ಅಂದರೆ ಉದ್ಯಮದಲ್ಲ್ಲಿ ಭಾಗ್ಯೋದಯ ಯಾವಾಗ ಆಗುವುದು ?’, ಮುಂತಾದವುಗಳ ಅಧ್ಯಯನಕ್ಕಾಗಿ ಷಷ್ಠ ಸ್ಥಾನವನ್ನು ನೋಡಬೇಕಾಗುತ್ತದೆ. ಷಷ್ಠೇಶ ಬಲವಾಗಿದ್ದರೆ, ಅಂದರೆ ದಶಮಸ್ಥಾನದ ಭಾಗ್ಯ ಕಡಿಮೆ ಬೀಳುತ್ತಿದ್ದಲ್ಲಿ ವ್ಯಕ್ತಿಗೆ ತನ್ನ ಕೈಕೆಳಗಿರುವವÀರೊಂದಿಗೆ ನಮ್ರತೆಯಿಂದ, ಸಾಮೋಪಚಾರದಿಂದ ವರ್ತಿಸಿ, ಹಾಗೆಯೇ ತೆಗೆದುಕೊಂಡ ಸಾಲವನ್ನು ಯೋಗ್ಯವಾಗಿ ವಿನಿಯೋಗಿಸಿ ಉದ್ಯಮ ನಡೆಸುವ ಆವಶ್ಯಕತೆಯಿದೆ.
ಇ. ದಶಮ ಸ್ಥಾನ : ದಶಮ ಸ್ಥಾನ, ಅಂದರೆ ಕರ್ಮಸ್ಥಾನ. ‘ಯಾವ ಉದ್ಯಮ ಅಥವಾ ವ್ಯಾಪಾರ ಮಾಡಬೇಕು ?’, ಈ ವಿಷಯದ ಮಾಹಿತಿ ನೀಡುವ, ಹಾಗೆಯೇ ಸಾಮಾಜಿಕ ಗೌರವವನ್ನು ತೋರಿಸುವ ಸ್ಥಾನವಾಗಿದೆ. ‘ಕರಿಯರ್’ನ ಪ್ರತ್ಯಕ್ಷ ವಿಚಾರಕ್ಕೆ ಕೃತಿಗಳನ್ನು ಜೋಡಿಸಬೇಕಾಗುತ್ತದೆ. ಅದಕ್ಕಾಗಿ ಇದು ಮಹತ್ವದ ಸ್ಥಾನವಾಗಿದೆ.
ಈ. ಹನ್ನೊಂದನೇ ಸ್ಥಾನ : ಹನ್ನೊಂದನೇ ಸ್ಥಾನ, ಅಂದರೆ ಲಾಭ ಸ್ಥಾನ. ದಶಮ ಸ್ಥಾನದ ಧನಸ್ಥಾನ ಇದಾಗಿರುವುದರಿಂದ ಉದ್ಯಮದಲ್ಲಿ ಸಿಗುವ ಧನ ಮತ್ತು ಆಗುವ ಲಾಭವನ್ನು ತೋರಿಸುವ ಸ್ಥಾನವಾಗಿದೆ. ಈ ಸ್ಥಾನ ಬಲವಾಗಿದ್ದರೆ ಜನಪ್ರಿಯತೆ ಸಿಗುತ್ತದೆ.
೬. ಉದ್ಯಮದ ಕಾರ್ಯಕ್ಷೇತ್ರ ಹೇಗೆ ಆರಿಸಬೇಕು ?
ದಶಮಸ್ಥಾನದಲ್ಲಿರುವ ರಾಶಿಯ ತತ್ತ್ವಕ್ಕನುಸಾರ ಉದ್ಯಮದ ಕಾರ್ಯಕ್ಷೇತ್ರ ಆರಿಸಲು ಸಾಧ್ಯವಾಗುತ್ತದೆ.
ಅ. ದಶಮಸ್ಥಾನದಲ್ಲಿ ಮೇಷ, ಸಿಂಹ ಮತ್ತು ಧನು ಈ ಅಗ್ನಿತತ್ತ್ವದ ರಾಶಿಯಿದ್ದರೆ ಕಬ್ಬಿಣ ಮತ್ತು ಧಾತುವಿಗೆ ಸಂಬಂಧಿಸಿದ ಉದ್ಯಮದಲ್ಲಿ ಯಶಸ್ಸು ಸಿಗುತ್ತದೆ.
ಆ. ದಶಮಸ್ಥಾನದಲ್ಲಿ ವೃಷಭ, ಕನ್ಯಾ ಮತ್ತು ಮಕರ ಈ ಪೃಥ್ವಿತತ್ವದ ರಾಶಿಗಳಿದ್ದರೆ ಆಡಳಿತ (ಸರಕಾರಿ ನೌಕರಿ), ಆರ್ಥಿಕಕ್ಷೇತ್ರ, ಹಾಗೆಯೇ ಭೂಮಿಗೆ ಸಂಬಂಧಿಸಿದ ಉದ್ಯಮದಿಂದ ಯಶಸ್ಸು ಸಿಗುತ್ತದೆ.
ಇ. ದಶಮಸ್ಥಾನದಲ್ಲಿ ಮಿಥುನ, ತುಲಾ ಮತ್ತು ಕುಂಭ ಈ ವಾಯುತತ್ವದ ರಾಶಿಗಳಿದ್ದರೆ ಶಾಸ್ತ್ರೀಯ ಸಂಶೋಧನೆಗೆ ಸಂಬಂಧಿಸಿದ ಉದ್ಯಮದಲ್ಲಿ ಯಶಸ್ಸು ಸಿಗುತ್ತದೆ.
ಈ. ದಶಮಸ್ಥಾನದಲ್ಲಿ ಕರ್ಕ, ವೃಶ್ಚಿಕ ಮತ್ತು ಮೀನ ಈ ಜಲತತ್ತ್ವದ ರಾಶಿಗಳು ಇದ್ದರೆ ದ್ರವಪದಾರ್ಥಗಳಿಗೆ ಸಂಬಂಧಿಸಿದ ಉದ್ಯಮದಿಂದ ಪ್ರಗತಿಯಾಗುತ್ತದೆ.
– ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ್ಯ ಫಲಿತ ವಿಶಾರದ, ಸನಾತನ ಆಶ್ರಮ, ರಾಮನಾಥಿ, ಗೋವಾ.