ಚೀನಾದ ಆರ್ಥಿಕ ವ್ಯವಸ್ಥೆ ಕುಸಿಯಲು ಶೀ ಜಿನಪಿಂಗ ಇವರ ತಪ್ಪು ನೀತಿಯೇ ಕಾರಣ !

ವಿಶ್ವಮಟ್ಟದ ಆರ್ಥಿಕ ತಜ್ಞರ ಅಭಿಪ್ರಾಯ

ಬೀಜಿಂಗ (ಚೀನಾ) – ಚೀನಾ ಅಮೇರಿಕಾವನ್ನು ಹಿಂದಕ್ಕಿ ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಆರ್ಥವ್ಯವಸ್ಥೆ ಎಂದು ಹೆಸರು ಪಡೆಯುವುದೆಂದು ಹೇಳಲಾಗುತ್ತಿತ್ತು, ಆದರೆ ಪ್ರತ್ಯಕ್ಷದಲ್ಲಿ ಮಾತ್ರ ಚೀನಾ ದೊಡ್ಡ ಆರ್ಥಿಕ ಹಿಂಜರಿತದ ಸಂಕಷ್ಟಕ್ಕೆ ಸಿಲುಕಿದೆಯೇ ? ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚೀನಾದಲ್ಲಿ ಏನಾದರೂ ದೊಡ್ಡ ಪ್ರಮಾಣದಲ್ಲಿ ಹಿಂಜರಿತ ಉಂಟಾದರೆ ಅದರಿಂದ ಹೊರ ಬರಲು ಅದಕ್ಕೆ ಅನೇಕ ವರ್ಷಗಳೇ ಬೇಕಾಗುವುದು, ಎಂದು ಅನೇಕ ಆರ್ಥಿಕ ತಜ್ಞರಿಗೆ ಅನಿಸುತ್ತದೆ. ಭೂಮಿ ಖರಿದಿ-ಮಾರಾಟ, ಕಟ್ಟಡ ಕಾಮಗಾರಿ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಚೀನಾದಲ್ಲಿ ಬೃಹತ್ ಹಿಂಜರಿತ ಕಾಣುತ್ತಿದೆ. ಕಳೆದ ೪೦ ವರ್ಷದಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಎತ್ತರಕ್ಕೆ ಹಾರಿರುವ ಚೀನಾದ ಈ ಪರಿಸ್ಥಿತಿಗೆ ಕಾರಣ ಇರುವ ಅಂಶಗಳ ಬಗ್ಗೆ ಅಧ್ಯಯನ ನಡೆಸಿರುವ ಆರ್ಥಿಕ ತಜ್ಞರ ಹೇಳಿಕೆಯ ಪ್ರಕಾರ, ಈ ಎಲ್ಲದಕ್ಕೂ ಚೀನಾದ ರಾಷ್ಟ್ರಾಧ್ಯಕ್ಷ ಷಿ ಜಿನಪಿಂಗ ಇವರ ತಪ್ಪಾದ ನೀತಿಯೇ ಆಗಿದೆ ಎಂದು ಹೇಳಲಾಗಿದೆ.

೧. ಕಳೆದ ಕೆಲವು ಸಮಯದಲ್ಲಿ ಗ್ರಾಹಕರಿಂದ ಆಗುವ ಖರ್ಚು, ಹೂಡಿಕೆ ಮತ್ತು ರಫ್ತು ಈ ಕ್ಷೇತ್ರದಲ್ಲಿ ಇಳಿಕೆ ಕಾರಣವಾಗಿದೆ. ಈ ವರ್ಷ ಚೀನಾದ ಎರಡನೆಯ ತ್ರೈಮಾಸಿಕ ಆರ್ಥ ವ್ಯವಸ್ಥೆಯಲ್ಲಿ ಶೇಕಡ ೩.೨ ಹೆಚ್ಚಳ ಹಾಗೂ ಅಮೇರಿಕಾದ ಆರ್ಥ ವ್ಯವಸ್ಥೆಯ ಹೆಚ್ಚಳ ಶೇಕಡ ೬ ರಷ್ಟು ಇರುವುದೆಂದು ಅಂದಾಜಿಸಲಾಗಿದೆ.

೨. ಅಮೇರಿಕಾ ವಿರುದ್ಧ ಬಹಳಷ್ಟು ಸಮಯ ವ್ಯಾಪಾರಿ ಯುದ್ಧದಲ್ಲಿ ತೊಡಗಿರುವ ದೂರಗಾಮಿ ಪರಿಣಾಮ ಚೀನಾದಲ್ಲಿ ಈಗ ಕಾಣುತ್ತಿದೆ.

೩. ‘ದಿ ಎಕನಾಮಿಸ್ಟ್’ ಇದರ ವರದಿಯ ಪ್ರಕಾರ ಚೀನಾದ ಮೇಲೆ ಬಂದಿರುವ ಈ ಪರಿಸ್ಥಿತಿಗಾಗಿ ರಾಷ್ಟ್ರಪತಿ ಶೀ ಜಿನಪಿಂಗ ಇವರೇ ಎಲ್ಲಕ್ಕಿಂತ ಹೆಚ್ಚಿನ ಹೊಣೆಗಾರರಾಗಿದ್ದಾರೆ. ಅವರ ವಿಸ್ತರಣಾವಾದಿ ನೀತಿ ಹಾಗೂ ಚಿಕ್ಕ ಮತ್ತು ಬಡ ದೇಶಗಳನ್ನು ಸಾಲದ ಬಲೆಗೆ ಸಿಲುಕಿಸುವ ನೀತಿಯಿಂದಾಗಿ ಚೀನಾದ ಆರ್ಥ ವ್ಯವಸ್ಥೆಯಲ್ಲಿ ಹಿಂಜರಿತ ನಡೆಯುತ್ತಿದೆ. ಜಿನ್ ಪಿಂಗ ಇವರ ಕಾರ್ಯಕಾಲದಲ್ಲಿ ನಡೆದಿರುವ ಅಧಿಕಾರ ಕೇಂದ್ರೀಕರಣದಿಂದ ಕೂಡ ಪರಿಸ್ಥಿತಿ ಹದಗೆಟ್ಟಿದೆ. ಆದ್ದರಿಂದ ದೇಶದ ಪರಿಸ್ಥಿತಿ ಅದು ಜಗತ್ತಿನಿಂದ ಮರೆಮಾಚುತ್ತಿದೆ. ಇತ್ತೀಚಿಗೆ ನಡೆದಿರುವ ‘ಬ್ರಿಕ್ಸ್’ ಸಭೆಯ ಸಮಯದಲ್ಲಿ ಅವರು ಮಹತ್ವದ ಸಭೆಗಳಿಂದ ದೂರ ಉಳಿಯುತ್ತಿರುವುದು ಕಂಡುಬಂದಿತು.

ಚೀನಾದ ದುರಾವಸ್ತೆ ಅಂಕಿ-ಅಂಶ !

* ದೇಶದಲ್ಲಿನ ಶೇಕಡ ೧೬ ರಷ್ಟು ಕಟ್ಟಡ ಕಾಮಗಾರಿ ಉದ್ಯಮಿಗಳ ಮೇಲೆ ಸಂಪೂರ್ಣ ದೇಶಾಂತರ್ಗತ ಉತ್ಪಾದನೆಯಲ್ಲಿ ನೀವ್ವಳ ಶೇಕಡ ೧೬ ರಷ್ಟು ಸಾಲ !

* ವರ್ಷದ ಎರಡನೆಯ ತ್ರೈಮಾಸಿಕದಲ್ಲಿ ವಿದೇಶಿ ಹೂಡಿಕೆಯಲ್ಲಿ ಶೇಕಡ ೮೭ ರಷ್ಟು ಇಳಿತ !

* ಕಳೆದ ಕೆಲವು ತಿಂಗಳಲ್ಲಿ ಲಕ್ಷಾಂತರ ಕೋಟಿ ರೂಪಾಯಿ ವಿದೇಶಿ ಕರೆನ್ಸಿ ದೇಶದ ಹೊರಗೆ ಹೋಗಿರುವುದು !