ಗಣೇಶಭಕ್ತರೇ, ಧರ್ಮಹಾನಿ ತಡೆಗಟ್ಟಿ !

ಒಬ್ಬ ಮೂರ್ತಿಕಾರನು ಪ್ಲ್ಯಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ತಯಾರಿಸಿದ ಕೈಯಲ್ಲಿ ಬುಗುರಿಯನ್ನು ಹಿಡಿದಿರುವ ರೈತನ ವೇಷದಲ್ಲಿ ಶ್ರೀ ಗಣೇಶನ ಮೂರ್ತಿಯ ಛಾಯಾಚಿತ್ರವು ಒಂದು ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಪ್ರಸ್ತುತ ‘ಇಕೊ ಫ್ರೆಂಡಲಿ’ (ಪರಿಸರಕ್ಕೆ ಅನುಕೂಲವಾಗಿರುವ) ಕಾಗದ, ಆಕಳ ಸೆಗಣಿ, ಪಟಕಾರ, ರಟ್ಟು ಇತ್ಯಾದಿಗಳಿಂದ ಗಣೇಶನ ಮೂರ್ತಿಗಳನ್ನು ತಯಾರಿಸಲಾಗು ತ್ತದೆ. ಹಾಗೆಯೇ ಕಲಾವಿದರ, ಗಗನಯಾತ್ರಿಗಳ ಅಥವಾ ರಾಜಕೀಯ ಮುಖಂಡರ ರೂಪದಲ್ಲಿಯೂ ಗಣೇಶ ಮೂರ್ತಿ ಗಳನ್ನು ಸಿದ್ಧಪಡಿಸಲಾಗುತ್ತದೆ. ಶ್ರೀ ಗಣೇಶ ಮೂರ್ತಿ ಮೂರ್ತಿಶಾಸ್ತ್ರಗನುಸಾರ ಯೋಗ್ಯ ಆಕಾರದಲ್ಲಿದ್ದರೆ, ಅಂದರೆ ಶ್ರೀ ಗಣೇಶ ದೇವತೆಯ ಪ್ರತ್ಯಕ್ಷ ರೂಪದ ಹಾಗಿದ್ದರೆ ಮಾತ್ರ ಭಕ್ತರಿಗೆ ಚೈತನ್ಯದ ಲಾಭವಾಗುತ್ತದೆ.

ಹಿಂದಿನ ದಿನಗಳಲ್ಲಿ ಸರಳವಾಗಿ ಆಚರಿಸಲಾಗುವ ಮತ್ತು ಸಾತ್ತ್ವಿಕ ಆನಂದವನ್ನು ನೀಡುವ ಗಣೇಶೋತ್ಸವದ ಸ್ವರೂಪವು ಪ್ರಸ್ತುತ ಬದಲಾಗಿದೆ. ಅದಕ್ಕೆ ೨೧ ನೇ ಶತಮಾನದ ಆಧುನೀಕರಣ, ಜಾಗತೀಕರಣದ, ಬಂಡವಾಳಶಾಹಿ ಮತ್ತು ಜಾಹೀರಾತುಗಳು ಅಡ್ಡಿಯಾಗಿವೆ ! ಶ್ರೀ ಗಣೇಶನನ್ನು ಮನುಷ್ಯನ ರೂಪದಲ್ಲಿ ತೋರಿಸುವುದೆಂದರೆ ಆ ದೇವತೆಯ ವಿಡಂಬನೆಯಾಗಿದೆ. ಇತರ ಪಂಥಗಳು ತಮ್ಮ ಧಾರ್ಮಿಕಸ್ಥಳಗಳನ್ನು ಈ ರೀತಿ ಯಾವತ್ತೂ ಅಪಮಾನಿಸುವುದಿಲ್ಲ. ಧರ್ಮಶಿಕ್ಷಣದ ಕೊರತೆಯಿಂದ ಇಂತಹ ಅಶಾಸ್ತ್ರೀಯ ಕೃತಿಗಳು ನಡೆಯುತ್ತವೆ. ನಾವು ನಮ್ಮ ತಾಯಿ-ತಂದೆಯರ ವಿಡಂಬನೆ ಅಥವಾ ಅಪಮಾನವನ್ನು ಸಹಿಸಿ ಕೊಳ್ಳುತ್ತೇವೆಯೇ ? ಇವರಿಗಿಂತಲೂ ದೇವತೆಗಳು ಶ್ರೇಷ್ಠರಾಗಿ ದ್ದಾರೆ. ದೇವತೆಗಳ ಅವಮಾನಿಸುವವರಿಗೆ ಕೃಪಾಶೀರ್ವಾದ ದೊರಕುವುದೇ ? ೧೯೫೦ ರಲ್ಲಿ ಮಹಾರಾಷ್ಟ್ರ ಸರಕಾರವು ಶ್ರೀ ಗಣೇಶಮೂರ್ತಿಯ ವೇಷ ಮತ್ತು ಮಾನವೀಕರಣವನ್ನು ನಿಷೇಧಿಸಿತ್ತು; ಆದರೆ ಕಾಲಾಂತರದಿಂದ ಈ ನಿಯಮಗಳು ಸಡಿಲಗೊಂಡವು. ‘ವಿವಿಧ ರೂಪಗಳಲ್ಲಿನ ಮತ್ತು ವೇಷ ಭೂಷಣಗಳಲ್ಲಿನ ಮೂರ್ತಿಗಳು ಜನರ ಮನಸ್ಸಿನಲ್ಲಿರುವ ಆ ದೇವತೆಯ ಬಗೆಗಿನ ಶ್ರದ್ಧೆಯ ಮೇಲೆ ಮತ್ತು ಭಾವದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ’, ಎಂಬುದನ್ನು ಗಮನಿಸಬೇಕು. ದೇವತೆಗಳ ಮೇಲಿರುವ ಭಕ್ತಿಯು ಮೂಲವು ಶ್ರದ್ಧೆಯಲ್ಲಿರುತ್ತದೆ. ‘ದೇವತೆಗಳ ಯಾವುದೇ ರೀತಿಯ ವಿಡಂಬನೆಯು ಶ್ರದ್ಧೆಯನ್ನು ಕಡಿಮೆಗೊಳಿಸುತ್ತದೆ’, ಇದರಿಂದಾಗಿ ಧರ್ಮಹಾನಿಯಾಗುತ್ತದೆ.

ದುಬೈಯು ಮುಸಲ್ಮಾನ ರಾಷ್ಟ್ರವಾಗಿದ್ದರೂ ಗಣೇಶೋತ್ಸವದ ಕಾಲದಲ್ಲಿ ಪ್ರತಿದಿನ ಅಥರ್ವಶೀರ್ಷವನ್ನು ಪಠಿಸುತ್ತಾರೆ, ಕೀರ್ತನೆ ಮತ್ತು ಪ್ರವಚನಗಳೂ ನಡೆಯುತ್ತವೆ. ಸಂಪೂರ್ಣ ಜಗತ್ತಿನಲ್ಲಿ ಭಾರತವು ಕಳೆದ ಸಾವಿರಾರು ವರ್ಷಗಳಿಂದ ಆಧ್ಯಾತ್ಮಿಕ ಕೇಂದ್ರ ವಾಗಿತ್ತು, ಇದೆ ಮತ್ತು ಮುಂದೆಯೂ ಇರುವುದು; ಆದರೆ ಪ್ರಸ್ತುತ ನಾವು ನಮ್ಮ ಮೂಲ ಧರ್ಮಪರಂಪರೆ, ಸಂಸ್ಕೃತಿ, ಗ್ರಂಥ, ಶಿಕ್ಷಣಪದ್ಧತಿಗಳನ್ನು ಮರೆತಿದ್ದೇವೆ. ‘ಭಾರತೀಯ ಸಂಸ್ಕೃತಿಯನ್ನು ಈಗ ಭಾರತದ ಹೊರಗೆಯೇ ಹೆಚ್ಚು ಜೋಪಾಸನೆ ಮಾಡಲಾಗುತ್ತಿದೆ, ಎಂದು ಹೇಳುವ ಸಮಯ ಬರಬಾರದು’, ಅದಕ್ಕಾಗಿ ಗಣೇಶಭಕ್ತರೂ ಇದನ್ನರಿತು ಜಾಗೃತ ರಾಗಿ ಧರ್ಮಹಾನಿಯನ್ನು ತಡೆಗಟ್ಟಬೇಕು ಮತ್ತು ಶಾಸ್ತ್ರ ಗನು ಸಾರ ಯೋಗ್ಯವಾಗಿರುವ ಸಾತ್ತ್ವಿಕ ಮೂರ್ತಿಗಳನ್ನೇ ಸ್ಥಾಪಿಸ ಬೇಕು !

– ಸೌ. ಅಪರ್ಣಾ ಜಗತಾಪ, ಪುಣೆ