‘ಭಾರತೀಯ ಉದ್ಯಮ ಗುಂಪುಗಳ ಹಗರಣಗಳನ್ನು ಬಹಿರಂಗ ಪಡಿಸಲಾಗುವುದು – ಅಮೆರಿಕಾದ ಬಿಲಿಯನೇರ್ ಜಾರ್ಜ್ ಸೊರೊಸ್’ !’

  • ಭಾರತದ್ವೇಷಿ ಅಮೆರಿಕಾದ ಬಿಲಿಯನೇರ್ ಜಾರ್ಜ್ ಸೊರೊಸ್’ ಹಾಗೆಯೇ ‘ಫೋರ್ಡ್ ಫೌಂಡೇಶನ್’ ನ ಆರ್ಥಿಕ ಬೆಂಬಲವನ್ನು ಪಡೆದಿರುವ ಸಂಸ್ಥೆಯ ದುರಹಂಕಾರ !

  • ‘ಆರ್ಗನೈಸ್ಡ್ ಕ್ರೈಮ್ ಅಂಡ್ ಕರಪ್ಷನ್ ರಿಪೋರ್ಟಿಂಗ್ ಪ್ರಾಜೆಕ್ಟ್’ ಎಂಬ ಸಂಸ್ಥೆಯ ದಾವೆ !

ನ್ಯೂಯಾರ್ಕ್ (ಅಮೆರಿಕಾ) – ಭಾರತೀಯ ಉದ್ಯಮ ಗುಂಪಿನ ತಥಾಕಥಿತ ಹಣಕಾಸು ವಂಚನೆಯ ವರದಿಯನ್ನು ಅಮೇರಿಕಾದ ‘ಹಿಂಡೆನ್ಬರ್ಗ್ ರಿಸರ್ಚ್’ ಕಂಪನಿಯು ಪ್ರಸಾರ ಮಾಡಿತ್ತು. ಈ ವರದಿಯಿಂದ ಅದಾನಿ ಸಮೂಹದ ಷೇರುಗಳು ಮೇಲೆ ಪರಿಣಾಮವಾಗಿತ್ತು; ಆದರೆ ಈ ವರದಿ ಕೆಲವು ತಿಂಗಳುಗಳ ಮೊದಲು ಕೇಂದ್ರ ಸರಕಾರ ಆಧಾರ ರಹಿತ ಎಂದು ಸ್ಪಷ್ಟಪಡಿಸಿತ್ತು. ಈಗ ‘ಆರ್ಗನೈಸ್ಡ್ ಕ್ರೈಮ್ ಅಂಡ್ ಕರಪ್ಷನ್ ರಿಪೋರ್ಟಿಂಗ್ ಪ್ರಾಜೆಕ್ಟ್’ ಈ ಸಂಸ್ಥೆಯು ನಾವು ಭಾರತದ ಉದ್ಯೋಗ ಸಮೂಹ ಮಾಡಿರುವ ಹಣಕಾಸು ಹಗರಣಗಳನ್ನು ಬಯಲಿಗೆಳೆಯುತ್ತೇವೆ’ ಎಂದು ಹೇಳಿದೆ.

ಸಂಸ್ಥೆಯು ವಿಶ್ವಾದ್ಯಂತ ತನಿಖಾ ಪತ್ರಕರ್ತರ ಜಾಲವನ್ನು ಹೊಂದಿದೆ. ಅವರು ಅಪರಾಧ ಮತ್ತು ಭ್ರಷ್ಟಾಚಾರದ ಪ್ರಕರಣಗಳನ್ನು ಬಹಿರಂಗಪಡಿಸಲು ಕೆಲಸ ಮಾಡುತ್ತಾರೆ. ಈ ಸಂಸ್ಥೆಯು ಭಾರತದ್ವೇಷಿ ಬಿಲಿಯನೇರ್ ಜಾರ್ಜ್ ಸೊರೊಸ್ ಅವರ ‘ಓಪನ್ ಸೊಸೈಟಿ ಫೌಂಡೇಶನ್’ ಈ ಸಂಸ್ಥೆ, ಹಾಗೆಯೇ ‘ಫೋರ್ಡ್ ಫೌಂಡೇಶನ್’ ಮತ್ತು ‘ರಾಕ್ಫೆಲ್ಲರ್ ಬ್ರದರ್ಸ್ ಫಂಡ್’ನಂತಹ ಭಾರತದ್ವೇಷಿ ಸಂಸ್ಥೆಗಳ ಬೆಂಬಲ ಪಡೆದಿದೆ. ‘ಜನರು ಮೋಸ ಹೋಗಬಾರದು ಮತ್ತು ಅವರ ಹಕ್ಕುಗಳು ಹಾಗೆಯೇ ಉಳಿಯಬೇಕು’ ಎಂಬುದು ಈ ಸಂಘಟನೆಯ ಉದ್ದೇಶವೆಂದು ಸಂಸ್ಥೆಯ ಹೇಳಿಕೆಯಾಗಿದೆ. ಈ ಸಂಸ್ಥೆಯು ಭಾರತದ ಕೆಲವು ಸಂಸ್ಥೆಗಳೊಂದಿಗೆ ಸಂಶೋಧನೆಯನ್ನು ಪ್ರಕಟಿಸುವ ಪ್ರಕ್ರಿಯೆಯಲ್ಲಿದೆ ಎಂದು ‘ಪಿಟಿಐ’ ಸುದ್ದಿ ಸಂಸ್ಥೆ ತಿಳಿಸಿದೆ. ಈ ಸಂಶೋಧನೆಯಲ್ಲಿ ಭಾರತೀಯ ಸಂಸ್ಥೆಗಳ ಷೇರುಗಳು ಮತ್ತು ವಿದೇಶಿ ಹೂಡಿಕೆಗಳ ಮೇಲೆ ಬೆಳಕು ಚೆಲ್ಲುವ ಸಾಧ್ಯತೆಯಿದೆ.

ಸಂಪಾದಕೀಯ ನಿಲುವು

ಮುಂಬರುವ ಅವಧಿಯಲ್ಲಿ ಕಟ್ಟರ ಭಾರತದ್ವೇಷಿ ವ್ಯಕ್ತಿಗಳು ಮತ್ತು ಸಂಘಟನೆಗಳು ಒಂದುಗೂಡಿ ಭಾರತವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ ಎಂಬುದನ್ನು ಇದು ಸಾಬೀತು ಪಡಿಸುತ್ತದೆ !