ಚೀನಾವು ಭಾರತಕ್ಕೆ ದ್ವಿಪಕ್ಷೀಯ ಮಾತುಕತೆಗೆ ಕೇಳಿತ್ತು ! – ಭಾರತ

ಭಾರತದ ಬೇಡಿಕೆಯ ಮೇರೆಗೆ ಮೋದಿ-ಜಿನಪಿಂಗ್ ಭೇಟಿಯಾಗಿರುವ ಚೀನಾದ ದಾವೆಯನ್ನು ತಳ್ಳಿಹಾಕಿದ ಭಾರತ

ಪ್ರಧಾನಿ ಮೋದಿ ಮತ್ತು ಚೀನಾದ ಅಧ್ಯಕ್ಷ ಶೀ ಜಿನಪಿಂಗ್

ನವ ದೆಹಲಿ – ಭಾರತದ ಕಡೆಯಿಂದ ಅಲ್ಲ, ಚೀನಾದಿಂದಲೇ ಹಲವು ದಿನಗಳ ಹಿಂದೆಯೇ ದ್ವಿಪಕ್ಷೀಯ ಮಾತುಕತೆಗೆ ಬೇಡಿಕೆ ಮಾಡಿತ್ತು, ಎಂದು ಭಾರತದ ವಿದೇಶಾಂಗ ಸಚಿವ ವಿನಯ ಕ್ವಾತ್ರ ಇವರು ಇಲ್ಲಿಯ ಸುದ್ದಿಗಾರರಿಗೆ ಹೇಳಿದ್ದಾರೆ. ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಉಭಯ ದೇಶಗಳು ಔಪಚಾರಿಕ ಮಾತುಕತೆ ನಡೆಸಲಿಲ್ಲ. ಆದರೆ ‘ಲೀಡರ್ಸ್ ಲಾಂಜ್’ ನಲ್ಲಿ ಪ್ರಧಾನಿ ಮೋದಿ ಮತ್ತು ಚೀನಾದ ಅಧ್ಯಕ್ಷ ಶೀ ಜಿನಪಿಂಗ್ ಅವರು ಅನೌಪಚಾರಿಕ ಮಾತುಕತೆ ನಡೆಸಿದರು. ಭಾರತದ ಬೇಡಿಕೆಯ ಮೇರೆಗೆ ಈ ಇಬ್ಬರು ನಾಯಕರ ನಡುವೆ ಈ ಚರ್ಚೆ ನಡೆದಿದೆ ಎಂಬ ಚೀನಾದ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ.