ಭಾರತದ ಚಂದ್ರ ‘ವಿಕ್ರಮ’!

ಜ್ಯೋತಿಷ್ಯಶಾಸ್ತ್ರಕ್ಕನುಸಾರ, ‘ಚಂದ್ರ’ ಮಾನವನ ಮನಸ್ಸಿನ ಕಾರಕನಾಗಿದ್ದಾನೆ. ‘ಇದೇ ಚಂದ್ರನ ಮೇಲೆ ಭಾರತದ ‘ಚಂದ್ರಯಾನ-೩’ ಯಶಸ್ವಿಯಾಗಿ ಇಳಿಯಲಿದೆಯೇ?’, ಎನ್ನುವ ನಿರೀಕ್ಷೆಯಲ್ಲಿ ೧೪೦ ಕೋಟಿ ’ಮನಗಳು’ ಕಾತುರದಿಂದ ಕಾಯುತ್ತಿದ್ದವು. ಅರ್ಥಾತ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಂದರೆ ‘ಇಸ್ರೋ’ ದ ಪ್ರತಿಭಾವಂತ ವಿಜ್ಞಾನಿಗಳ ತಪಸ್ಸು ಮತ್ತು ಕೋಟಿಗಟ್ಟಲೆ ಭಾರತೀಯರ ಪ್ರಾರ್ಥನೆ, ಹೋಮ, ಹವನಾದಿ ಆಚರಣೆಗಳು ಫಲಿಸಿತು ಮತ್ತು ಕೊನೆಗೂ ಭಾರತೀಯರ ಧ್ಯೇಯ ಸಫಲವಾಯಿತು! ಚಂದ್ರನ ಮೇಲೆ ಯಶಸ್ವಿಯಾಗಿ ಹೆಜ್ಜೆಯಿಡುವಲ್ಲಿ ಭಾರತವು ಸೋವಿಯತ್ ಒಕ್ಕೂಟ, ಅಮೇರಿಕಾ ಮತ್ತು ಚೀನಾ ಬಳಿಕ ನಾಲ್ಕನೇ ರಾಷ್ಟ್ರವಾಗಿದೆ. ಆದರೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಹೆಜ್ಜೆಯಿಟ್ಟ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ವೈಶಿಷ್ಟ್ಯಪೂರ್ಣ ಪರಾಕ್ರಮ !

ಭಾರತ ಸಾಧಿಸಿರುವ ಈ ಪರಾಕ್ರಮವು ಹಲವು ರೀತಿಯಲ್ಲಿ ವಿಶೇಷವಾಗಿದೆ. ಭಾರತದ ‘ಚಂದ್ರಯಾನ-೩’ ರ ಒಟ್ಟು ವೆಚ್ಚ ೬೧೫ ಕೋಟಿ ರೂಪಾಯಿಗಳು ಅಂದರೆ ೭೪ ದಶಲಕ್ಷ ಅಮೇರಿಕನ್ ಡಾಲರ್ ಗಳಷ್ಟು ‘ಮಾತ್ರವೇ’ ಆಗಿದೆ. ಈ ವೆಚ್ಚ ಎಷ್ಟು ಕಡಿಮೆ ಎನ್ನುವುದು, ನಾವು ೨ ಹಾಲಿವುಡ್ ಚಲನಚಿತ್ರಗಳನ್ನು ಅಧ್ಯಯನ ಮಾಡಿದರೆ ನಮಗೆ ಗಮನಕ್ಕೆ ಬರುತ್ತದೆ. ಗುರುತ್ವಾಕರ್ಷಣೆಯ ಮಹತ್ವವನ್ನು ತಿಳಿಸಿ, ಬಾಹ್ಯಾಕಾಶದ ಉಸಿರು ಬಿಗಿಹಿಡಿಯುವ ಅನುಭವವನ್ನು ಆಧರಿಸಿದ ೨೦೧೩ ರಲ್ಲಿ ತಯಾರಿಸಲಾದ ‘ಗ್ರಾವಿಟಿ’ ಹೆಸರಿನ ಈ ಚಲನಚಿತ್ರಕ್ಕೆ ೬೪೪ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿತ್ತು. ಭವಿಷ್ಯದಲ್ಲಿ ಭೂಮಿ ಮಾನವನಿಗಾಗಿ ವಾಸಿಸಲು ಯೋಗ್ಯವಾಗಿರಲಾರದು. ಇದಕ್ಕಾಗಿ ಅನ್ಯಗ್ರಹಗಳನ್ನು ಹುಡುಕಿಕೊಂಡು ಹೋದ ಮಾನವನಿಗೆ ವಿವಿಧ ಗ್ರಹಗಳ ಮೇಲೆ ಆದಂತರ ವಿಚಿತ್ರ ಅನುಭವಗಳ ಮೇಲೆ, ವಿಶೇಷವಾಗಿ ಐನ್‌ಸ್ಟೈನ್ ಇವರ ಸಾಪೇಕ್ಷತಾ ಸಿದ್ಧಾಂತವನ್ನು ಆಧರಿಸಿದ ೨೦೧೪ ರ ‘ಇಂಟರಸ್ಟೆಲಾರ’ ಈ ಚಲನಚಿತ್ರಕ್ಕಾಗಿ ಹೆಸರಾಂತ ಚಲನಚಿತ್ರ ನಿರ್ಮಾಪಕ ಕ್ರಿಸ್ಟೋಫರ ನೊಲಾನ ಇವರು ಒಟ್ಟು ೧ ಸಾವಿರ ೩೭೦ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದರು. ಈ ಮೊತ್ತವು ‘ಚಂದ್ರಯಾನ-೩’ ವೆಚ್ಚದ ದುಪ್ಪಟ್ಟಿಗಿಂತಲೂ ಅಧಿಕವಾಗಿದೆ. ಈ ಎರಡೂ ‘ಸೈನ್ಸ ಫಿಕ್ಷನ್ ಮೂವೀಸ್’ ಅಂದರೆ ವೈಜ್ಞಾನಿಕ ಸಿದ್ಧಾಂತಗಳ ಆಧಾರದಲ್ಲಿ ನಿರ್ಮಾಣ ಮಾಡಿರುವ ಕಲ್ಪನಾಶಕ್ತಿಯ ಆವಿಷ್ಕಾರದ ಚಿತ್ರಣದ ಚಲನಚಿತ್ರವೇ, ಭಾರತದ ಯಥಾರ್ಥವೇ ಎನ್ನಬಹುದು. ಇದರಿಂದಲೇ ಭಾರತೀಯ ವಿಜ್ಞಾನಿಗಳ ಶ್ರೇಷ್ಠತೆ ಗಮನ ಸೆಳೆಯುತ್ತದೆ.
ರಾಷ್ಟ್ರೀಯ ಅತ್ಯಾನಂದದ ಈ ಕ್ಷಣದಲ್ಲಿ, ಭಾರತೀಯರನ್ನು ಅವಮಾನಿಸುವವರನ್ನು ನಾವು ಮರೆಯಲು ಸಾಧ್ಯವಿಲ್ಲ. ದಶಕದ ಹಿಂದಿನ ಘಟನೆ! ಭಾರತವು ಮಂಗಳ ಗ್ರಹದ ಕಡೆಗೆ ‘ಮಾರ್ಸ್ ಆರ್ಬಿಟರ್ ಮಿಷನ್’ ಅನ್ನು ಉಡಾವಣೆ ಮಾಡಿರುವ ಬಗ್ಗೆ ಭಾರತದ್ವೇಷದಿಂದ ತುಂಬಿಕೊಂಡಿದ್ದ ‘ನ್ಯೂಯಾರ್ಕ ಟೈಮ್ಸ್’ ಒಂದು ವ್ಯಂಗ್ಯಚಿತ್ರವನ್ನು ಪ್ರಸಾರ ಮಾಡಿತು. ಅದರಲ್ಲಿ ‘ಒಂದು ಕಚೇರಿಯಲ್ಲಿ ಬಾಹ್ಯಾಕಾಶ ಸಂಶೋಧನೆಯಲ್ಲಿ ಪ್ರಮುಖವಾಗಿರುವ ರಾಷ್ಟ್ರಗಳ ಪ್ರತಿನಿಧಿಗಳು ಕುಳಿತಿರುವಂತೆ ತೋರಿಸಿದ್ದರು ಮತ್ತು ಹೊರಗೆ ಒಬ್ಬ ಭಾರತೀಯ ರೈತ ತನ್ನ ಹಸುವಿನೊಂದಿಗೆ ಕಾಣಿಸುತ್ತಿದ್ದನು. ಅವನು ಬಾಗಿಲು ತೆರೆದು ಒಳಗೆ ಬರಲು ಅನುಮತಿಯನ್ನು ಕೇಳುತ್ತಿದ್ದಾನೆ’, ಈ ರೀತಿ ಭಾರತವನ್ನು ಅವಮಾನಿಸುವ ವ್ಯಂಗ್ಯ ಚಿತ್ರವಿತ್ತು. ಅರ್ಥಾತ್ ‘ನ್ಯೂಯಾರ್ಕ್ ಟೈಮ್ಸ್’ಗೆ ಈ ಬಗ್ಗೆ ಕ್ಷಮೆ ಯಾಚಿಸುವಂತೆ ನಾವು ಮಾಡಿದ್ದೆವು ಮತ್ತು ೩ ವರ್ಷಗಳ ಬಳಿಕ ಯಶಸ್ವಿ ಮಂಗಳಯಾನ ನಡೆಸಿದ ಬಳಿಕ ಈ ಪತ್ರಿಕೆಯೊಂದಿಗೆ ಇಡೀ ಪಾಶ್ಚಿಮಾತ್ಯ ಜಗತ್ತು ಬಾಯಿಯಲ್ಲಿ ಬೆರಳು ಇಡುವಂತಾಯಿತು. ಇಂದಿಗೂ ಭಾರತವು ಅಂತಹದೇ ಪರಾಕ್ರಮವನ್ನು ಸಾಧಿಸಿ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಹಾರಿಸಿದೆ. ಇರಲಿ,
‘ಚಂದ್ರಯಾನ-೩’ ಯಶಸ್ಸಿನಿಂದಾಗಿ ಈಗ ಹಲವು ಸಂಶೋಧನೆಗಳ ಅನೇಕ ಹೆಬ್ಬಾಗಿಲು ತೆರೆದುಕೊಂಡಿವೆ. ಈಗ, ‘ವಿಕ್ರಮ್ ಲ್ಯಾಂಡರ್’ನಿಂದ ‘ಪ್ರಜ್ಞಾನ್ ರೋವರ್’ ಕೆಳಗಿಳಿದು, ಚಂದ್ರನ ಮೇಲ್ಮೈನಲ್ಲಿರುವ ಮಂಜುಗಡ್ಡೆ, ನೀರು, ಪ್ರಾಣವಾಯು, ಖನಿಜಗಳ ಅಧ್ಯಯನ ಮಾಡಲಿದೆ. ಅಮೇರಿಕಾ ಮತ್ತು ಚೀನಾ ಭವಿಷ್ಯದಲ್ಲಿ ಚಂದ್ರನ ಮೇಲೆ ಮಾನವಸಹಿತ ನೌಕೆಯನ್ನು ಕಳುಹಿಸಲು ಬಯಸುತ್ತಿವೆ. ಇದಕ್ಕಾಗಿ ಭಾರತ ನಡೆಸಿದ ಸಂಶೋಧನೆಯಿಂದ ಹೆಚ್ಚಿನ ಪ್ರಯೋಜನವಾಗಲಿದೆ. ಇದರಿಂದ ಪಾಶ್ಚಿಮಾತ್ಯ ದೇಶಗಳ ಭವಿಷ್ಯದ ಸಂಭಾವ್ಯ ಮಾನವ ವಸಾಹತುಗಳಿಗೆ ಮಾರ್ಗವೂ ಸುಲಭವಾಗಲಿದೆ. ಇದರ ಹಿಂದಿರುವ ಅವರ ಉದ್ದೇಶ ಸಹಜವಾಗಿಯೇ ಭಾರತೀಯ ತತ್ತ್ವಜ್ಞಾನದ ಸಂಪೂರ್ಣ ವಿರುದ್ಧವಾಗಿದೆ. ಪಾಶ್ಚಿಮಾತ್ಯರು ಬುದ್ಧಿಯನ್ನು ‘ಪ್ರಕೃತಿ ಮಾನವನಿಗಾಗಿಯೇ ಇದ್ದು, ಅದನ್ನು ಹೇಗೆ ನಾಶಗೊಳಿಸಬಹುದು’ ಎನ್ನುವ ಕುರಿತೇ ಖರ್ಚುಮಾಡುತ್ತದೆ, ಆದರೆ ಭಾರತೀಯ ಜ್ಞಾನಪರಂಪರೆಯು ಪ್ರಕೃತಿಯನ್ನು ಕೃತಜ್ಞತೆಯಿಂದ ನೋಡುತ್ತದೆ ಮತ್ತು ವಿವೇಕವನ್ನು ಜಾಗೃತವಾಗಿಟ್ಟುಕೊಂಡು ಮಾನವನಹಿತಕ್ಕಾಗಿ ಕಾರ್ಯವನ್ನು ಮಾಡುತ್ತದೆ. ಇದರಿಂದ ಭೂಮಿಯ ಸಂಪನ್ಮೂಲಗಳನ್ನು ನಾಶಪಡಿಸಿ, ಚಂದ್ರನ ಮೇಲೆ ಆಘಾತ ಮಾಡುವ ವಿಚಾರ ‘ಇಸ್ರೋ’ ಮತ್ತು ಭಾರತ ಎಂದಿಗೂ ಮಾಡುವುದಿಲ್ಲ!

ಸಾಮಾನ್ಯ ಭಾರತೀಯರಿಗೆ ಲಾಭ!

‘ಚಂದ್ರಯಾನ-೩’ ಭಾರಿ ಯಶಸ್ಸನ್ನು ಸಾಧಿಸಿತು, ಅದರ ಹಿಂದೆ ದೇಶಾದ್ಯಂತ ಇರುವ ‘ಇಸ್ರೋ’ ದ ೨೧ ಸಂಸ್ಥೆಗಳ ಕೊಡುಗೆಯಿದೆ. ಇಸ್ರೋ ಮುಖ್ಯಸ್ಥ ಶ್ರೀಧರ್ ಪಣಿಕರ್ ಸೋಮನಾಥ್ ಅವರ ನೇತೃತ್ವದಲ್ಲಿ ಈ ಎಲ್ಲಾ ಸಂಸ್ಥೆಗಳು ಹೊಸ ಅಧ್ಯಾಯವನ್ನು ಬರೆದವು; ಆದರೆ ಕೆಲವು ಜನರು ‘ಭಾರತದಂತಹ ಬಡ ರಾಷ್ಟ್ರ ಚಂದ್ರನನ್ನು ತಲುಪಲು ಏಕೆ ಇಷ್ಟೊಂದು ಪ್ರಯತ್ನಿಸಬೇಕು’ ಎನ್ನುವ ಪ್ರಶ್ನೆಯನ್ನು ಎತ್ತಿದ್ದರು. ಇದರ ಉತ್ತರವೆಂದರೆ ಕಳೆದ ೭೦ ವರ್ಷಗಳಲ್ಲಿ ವಿವಿಧ ದೇಶಗಳು ಒಟ್ಟು ೧೧೧ ಚಂದ್ರಯಾನಗಳನ್ನು ನಡೆಸಿವೆ. ಅದರಲ್ಲಿ ೮ ಅಭಿಯಾನಗಳು ಮಾತ್ರ ಸ್ವಲ್ಪ ಯಶಸ್ಸನ್ನು ಕಂಡವು. ಇಂತಹ ಹಲವು ಬಾಹ್ಯಾಕಾಶ ಅಭಿಯಾನಗಳು ನಡೆದವು. ಅವುಗಳಿಂದ ಸಾಮಾನ್ಯ ಮಾನವ ಜೀವನಕ್ಕೆ ಬಹಳ ಲಾಭವಾಗಿದೆ ಮತ್ತು ಇಂತಹುದೇ ಲಾಭ ‘ಚಂದ್ರಯಾನ-೩’ ನಿಂದ ಭಾರತೀಯರಿಗೂ ಸಿಗಲಿದೆ. ಖಗೋಳ ಭೌತಶಾಸ್ತ್ರದ ಸಂಕೀರ್ಣತೆ; ಇಂಜಿನಿಯರಿಂಗ್, ಪದಾರ್ಥ ವಿಜ್ಞಾನ ಮುಂತಾದ ವಿವಿಧ ವಿಜ್ಞಾನಗಳಲ್ಲಿರುವ ಅತ್ಯಂತ ಕಠಿಣ ಸಮೀಕರಣಗಳು, ಸಿದ್ಧಾಂತಗಳ ಆಧಾರದಲ್ಲಿ ಯಾವ ಬಾಹ್ಯಾಕಾಶ ಉಡಾವಣೆಗಾಗಿ ಅಭಿವೃದ್ಧಿ ಪಡಿಸಲಾಗುತ್ತದೆಯೋ, ಅದರ ಉಪಯೋಗ ‘ವ್ಯಾಕ್ಯೂಮ್ ಕ್ಲೀನರ್’ಗಳಂತಹ ದೈನಂದಿನ ಉಪಯೋಗದ ವಸ್ತುಗಳು, ಹಾಗೆಯೇ ವಿಮಾನದ ಹಾರಾಟವನ್ನು ನಿಯಂತ್ರಿಸಲು ಬಳಸುವ ನಿಖರ ತಂತ್ರಜ್ಞಾನ, ಹೃದಯ ಬಡಿತವನ್ನು ನಿಯಂತ್ರಿಸಲು ಬಳಸುವ ಪಂಪ್, ಛಾಯಾಚಿತ್ರಗಳಲ್ಲಿ ಬಳಸುವ ‘ಸೆನ್ಸಾರ್’ ಇಷ್ಟೇ ಅಲ್ಲ, ಇಂಟರ್ನೆಟ್ ಮತ್ತು ‘ಜಿಪಿಎಸ್’ ತಂತ್ರಜ್ಞಾನದ ಉಗಮವೂ ಇದೇ ಬಾಹ್ಯಾಕಾಶ ತಂತ್ರಜ್ಞಾನದ ಅಭಿವೃದ್ಧಿಯಿಂದ ಆಗಿದೆ. ಎರಡನೆಯದಾಗಿ, ಭಾರತದ ‘ಚಂದ್ರಯಾನ-೩’ ಯಶಸ್ಸಿನ ದೂರಗಾಮಿ ಪರಿಣಾಮಗಳು ವಿಶ್ವದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸುತ್ತವೆ. ಅಂತಾರಾಷ್ಟ್ರೀಯ ರಾಜಕೀಯ, ವ್ಯಾಪಾರ ಮತ್ತು ಆರ್ಥಿಕತೆಯಲ್ಲಿ ಬಹಳಷ್ಟು ಧನಾತ್ಮಕ ಬದಲಾವಣೆಗಳು ಕಂಡುಬರಲಿವೆ.

ಅಮೇರಿಕ ಮತ್ತು ಇತರ ಕೆಲವು ದೇಶಗಳು ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಖಾಸಗೀಕರಣಗೊಳಿಸಿ, ಅದರ ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುವ ರೀತಿಯಲ್ಲಿಯೇ, ಇಸ್ರೋ ಕೂಡ ಅಂತಹದೇ ಪ್ರಯತ್ನವನ್ನು ಕೈಗೊಂಡಿದೆ. ಕೇಂದ್ರ ಸರ್ಕಾರವು ‘ಇನ್-ಸ್ಪೇಸ್’ ಕಂಪನಿಯನ್ನು ಸ್ಥಾಪಿಸುವ ಮೂಲಕ ಖಾಸಗಿ ಸಂಸ್ಥೆಗಳನ್ನು ಈ ಕಾರ್ಯದೊಂದಿಗೆ ಜೋಡಿಸಿಕೊಳ್ಳಲು ಪ್ರಾರಂಭಿಸಿದೆ. ‘ಚಂದ್ರಯಾನ-೩’ ಯಶಸ್ಸಿನಿಂದಾಗಿ ಈಗ ಈ ಕಾರ್ಯಕ್ರಮಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ. ಅಂತಹುದೇ ಬಾಹ್ಯಾಕಾಶ ವಿಜ್ಞಾನವನ್ನು ಪ್ರಚಾರ-ಪ್ರಸಾರ ಮಾಡಲು, ಹಾಗೆಯೇ ಯುವಕರನ್ನು ಆಕರ್ಷಿಸಲು ಇದೇ ರೀತಿಯ ಉತ್ತೇಜನ ಸಿಗಲಿದೆ. ಇದರಿಂದಾಗಿ ‘ವಿಕ್ರಮ್ ಲ್ಯಾಂಡರ್’ ಮಾಡಿದ ದಾಖಲೆ ಇಡೀ ಭಾರತೀಯರಿಗೆ ಹೆಮ್ಮೆಯ ವಿಷಯವೇ ಆಗಿದೆ.

‘ಚಂದ್ರಯಾನ-೩’ ಸ್ಥಾಪಿಸಿದ ‘ವಿಕ್ರಮ್’ ಜಗತ್ತಿಗೆ ಮತ್ತೊಮ್ಮೆ ಭಾರತದ ಬುದ್ಧಿಮತ್ತೆಯ ತುಣುಕನ್ನು ತೋರಿಸಿದೆ!