‘ಆಶ್ರಮ’ ವೆಬ್ ಸರಣಿ : ಜೋಧಪೂರ ನ್ಯಾಯಾಲಯವು ನ್ಯಾಯವಾದಿ ಖುಶ ಖಂಡೆಲವಾಲ ಇವರ ಅರ್ಜಿ ಸ್ವೀಕರಿಸಿದೆ !

‘ಆಶ್ರಮ’ ವೆಬ್ ಸರಣಿಯ ನಿರ್ಮಾಪಕ ಪ್ರಕಾಶ್ ಝಾ ಮತ್ತು ನಟ ಬಾಬಿ ದೇವೊಲ್ ಇವರ ವಿರುದ್ಧದ ಅರ್ಜಿಯ ಪ್ರಕರಣ

ಮುಂಬಯಿ – ೨೦೨೦ ರಲ್ಲಿ ಪ್ರಸಾರವಾಗಿರುವ ‘ಆಶ್ರಮ’ ಈ ವೆಬ್ ಸೀರೀಜನ ನಿರ್ಮಾಪಕ ಪ್ರಕಾಶ ಝಾ ಮತ್ತು ನಟ ಬಾಬಿ ದೇವೋಲ ಇವರ ವಿರುದ್ಧ ನ್ಯಾಯವಾದಿ ಖುಶ ಖಂಡೆಲವಾಲ ಇವರು ದಾಖಲಿಸಿರುವ ಅರ್ಜೆ ಜೋಧಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸ್ವೀಕರಿಸಿದೆ. ನ್ಯಾಯವಾದಿ ಖಂಡೆಲವಾಲ ಇವರು ಕಳೆದ ೩ ವರ್ಷದಿಂದ ಈ ಕುರಿತು ಕಾನೂನಿನ ಹೋರಾಟ ನಡೆಸಿದ್ದಾರೆ.

ನ್ಯಾಯವಾದಿ ಖುಶ ಖಂಡೆಲವಾಲ ಇವರು ನೀಡಿರುವ ಅರ್ಜಿಗಳು ಮತ್ತು ನಡೆಸಿರುವ ಕಾನೂನಿನ ಹೋರಾಟ !

೧. ‘ಆಶ್ರಮ’ ಈ ವೆಬ್ ಸರಣಿಯ ಮೂಲಕ ಹಿಂದೂ ಸಾಧು ಸಂತರ ಅವಮಾನಕಾರಿ ಚಿತ್ರಣ ಮತ್ತು ಹಿಂದೂ ಧರ್ಮಕ್ಕೆ ಕಳಂಕ ತರುವಂತಹ, ಈ ಪ್ರಕರಣ ಆಗಸ್ಟ್ ೨೨, ೨೦೨೦ ರಲ್ಲಿ ಪ್ರಕಾಶ ಝಾ ಮತ್ತು ಬಾಬಿ ದೇವೊಲ್ ಇವರ ವಿರುದ್ಧ ಎಫ್ಐಆರ್ ನೋಂದಾಯಿಸುವುದಕ್ಕೆ ನ್ಯಾಯವಾದಿ ಖಂಡೆಲವಾಲ ರಾಜಸ್ಥಾನದಲ್ಲಿನ ಜೋಧಪುರದ ಕುಡಿ ಭಗತಾಸನಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದರು.

೨. ಕುಡಿ ಪೊಲೀಸರು ಈ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ನ್ಯಾಯವಾದಿ ಖಂಡೆಲವಾಲ ಇವರು ಜೋಧಪುರದಲ್ಲಿನ ಪ್ರಥಮ ದರ್ಜೆಯ ನ್ಯಾಯದಂಡಾಧಿಕಾರಿಗಳ ಬಳಿ ದೂರು ದಾಖಲಿಸಿ ಅವರಿಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲು ಮನವಿ ಮಾಡಿದ್ದರು. ನವಂಬರ್ ೧೭, ೨೦೨೦ ರಂದು ನ್ಯಾಯದಂಡಾಧಿಕಾರಿಗಳಿಂದ ಯಾವುದೇ ಯೋಗ್ಯ ಕಾರಣ ನೀಡದೆ ಈ ಮನವಿ ತಿರಸ್ಕರಿಸಿದರು.

೩. ಇದರ ಕುರಿತು ನ್ಯಾಯವಾದಿ ಖಂಡೆಲವಾಲ ಇವರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಕ್ರಿಮಿನಲ್ ಅರ್ಜಿ ದಾಖಲಿಸಿ ನ್ಯಾಯದಂಡಾಧಿಕಾರಿಗಳ ಆದೇಶಕ್ಕೆ ಪ್ರಶ್ನಿಸಲಾಗಿತ್ತು. ಅದರಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರಂಭದಲ್ಲಿ ಪ್ರಕಾಶ ಝಾ ಮತ್ತು ಬಾಬಿ ದೇವೊಲಗೆ ನೋಟಿಸ್ ಜಾರಿಗೊಳಿಸಿತ್ತು.

೪. ಅದರ ನಂತರ ಜಿಲ್ಲಾ ನ್ಯಾಯಾಲಯವು ಎರಡು ಪಕ್ಷದ ಹೇಳಿಕೆ ಕೇಳಿ ನಂತರ ಖಂಡೆಲವಾಲ ಇವರ ಮನವಿ ಸ್ವೀಕರಿಸಿ ಖಂಡೆಲವಾಲ ಇವರ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸುವ ಬಗ್ಗೆ ಮರು ಪರಿಶೀಲನೆ ಮಾಡಲು ನ್ಯಾಯದಂಡಾಧಿಕಾರಿ ನ್ಯಾಯಾಲಯಕ್ಕೆ ಆದೇಶ ನೀಡಿದೆ.