144 ಕೋಟಿ ರೂಪಾಯಿಯ ಸ್ಕಾಲರ್ಶಿಪ್ ವಿದ್ಯಾರ್ಥಿವೇತನದ ಹಗರಣವನ್ನು ಬಹಿರಂಗಪಡಿಸಿದೆ ಅಲ್ಪಸಂಖ್ಯಾತ ಸಚಿವಾಲಯ !

  • ಅಲ್ಪಸಂಖ್ಯಾತರ ಒಟ್ಟು 830 ಮದರಸಾಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳು ಕೇವಲ ದಾಖಲೆಗಳಲ್ಲಿ!

  • ಕೇಂದ್ರ ತನಿಖಾ ದಳದಿಂದ ತನಿಖೆ !

ನವ ದೆಹಲಿ – ಅಲ್ಪಸಂಖ್ಯಾತರ ಸಚಿವಾಲಯವು ವಿದ್ಯಾರ್ಥಿವೇತನ ಯೋಜನೆಯಲ್ಲಿ ನಡೆದಿರುವ ಒಂದು ದೊಡ್ಡ ಹಗರಣವನ್ನು ಭೇದಿಸಿದೆ. ಇದರಲ್ಲಿ 21 ರಾಜ್ಯಗಳ 1 ಸಾವಿರದ 572 ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು 830 ಸಂಸ್ಥೆಗಳು, ಅಂದರೆ ಶೇ.53 ಸಂಸ್ಥೆಗಳ ನೊಂದಣಿ ಕೇವಲ ದಾಖಲೆಗಳಲ್ಲಿದೆ. ಈ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ವಹಿಸಲಾಗಿದೆ. ಆಡಳಿತ ಅಧಿಕಾರಿಗಳು ನಕಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ಕಳೆದ 5 ವರ್ಷಗಳಲ್ಲಿ 144 ಕೋಟಿ 83 ಲಕ್ಷಗಳನ್ನು ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ.

(ಸೌಜನ್ಯ – IndiaTV)

1. ವಿದ್ಯಾರ್ಥಿ ವೇತನ ಯೋಜನೆಯ ಹೆಸರಿನಲ್ಲಿ ನಕಲಿ ಮದರಸಾಗಳು ಮತ್ತು ನಕಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ವಿದ್ಯಾರ್ಥಿ ವೇತನದ ಬ್ಯಾಂಕ್ ಖಾತೆಗಳಿಂದ ಕೋಟ್ಯಂತರ ರೂಪಾಯಿಗಳನ್ನು ತೆಗೆಯಲಾಗಿದೆ.
2. ಪ್ರಸ್ತುತ ದೇಶದಲ್ಲಿ ಸಾಧಾರಣ 1 ಲಕ್ಷ 80 ಸಾವಿರ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳಿವೆ. ಅದರಲ್ಲಿ 1 ಲಕ್ಷ 75 ಸಾವಿರ ಮದರಸಾಗಳಿದ್ದು, ಅವುಗಳಲ್ಲಿ ಕೇವಲ 27 ಸಾವಿರ ಮದರಸಾಗಳಷ್ಟೇ ನೊಂದಣಿಕೃತಗೊಂಡಿವೆ. ಅವರು ಮಾತ್ರ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿದ್ದಾರೆ.
3. ಈ ವಿದ್ಯಾರ್ಥಿವೇತನವನ್ನು 1 ನೇ ತರಗತಿಯಿಂದ ವಿದ್ಯಾವಾಚಸ್ಪತಿ (ಪಿಹೆಚ್.ಡಿ.) ವರೆಗಿನ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಇದರಲ್ಲಿ ಕನಿಷ್ಠ 4 ಸಾವಿರದಿಂದ ಗರಿಷ್ಠ 25 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ.

ಹಗರಣದ ಬೆಚ್ಚಿ ಬೀಳಿಸುವ ಅಂಕಿ ಅಂಶಗಳು!

  • ಒಂದೇ ಮೊಬೈಲ ನಂಬರನಲ್ಲಿ 22 ವಿದ್ಯಾರ್ಥಿಗಳ ಹೆಸರು ನೋಂದಣಿಯಾಗಿದೆ ! ಕೇರಳದ ಮಲ್ಲಪುರಮ್ ಜಿಲ್ಲೆಯಲ್ಲಿ ಕಳೆದ 4 ವರ್ಷಗಳಲ್ಲಿ ಇದೇ ರೀತಿ 8 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ !
  • ಅಸ್ಸಾಂನ ನೌಗಾಂವ್ನಲ್ಲಿರುವ ಬ್ಯಾಂಕಿನ ಒಂದು ಶಾಖೆಯಲ್ಲಿ ವಿದ್ಯಾರ್ಥಿ ವೇತನದ ಒಟ್ಟು 66 ಸಾವಿರ ಖಾತೆಗಳನ್ನು ಒಂದೇ ಸಮಯದಲ್ಲಿ ತೆರೆಯಲಾಗಿದೆ !
  • ಕಾಶ್ಮೀರದ ಅಂತನಾಗ್ ನಲ್ಲಿರುವ ಒಂದು ಕಾಲೇಜಿನಲ್ಲಿ 5 ಸಾವಿರ ವಿದ್ಯಾರ್ಥಿಗಳು ಓದುತ್ತಿರುವಾಗ 7 ಸಾವಿರ ವಿದ್ಯಾರ್ಥಿಗಳ ಹೆಸರಿನಲ್ಲಿ ವಿದ್ಯಾರ್ಥಿವೇತನ !
  • 1 ಲಕ್ಷದ 32 ಸಾವಿರ ವಿದ್ಯಾರ್ಥಿಗಳು ಹಾಸ್ಟೇಲ್ ನಲ್ಲಿ ವಾಸಿಸದಿದ್ದರೂ, ಅವರ ಹೆಸರಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿತ್ತು.

ಈ ರೀತಿ ಹಗರಣ ಬಯಲು !

1. ಅಲ್ಪಸಂಖ್ಯಾತರ ಸಚಿವಾಲಯದ ಮೂಲಗಳ ಪ್ರಕಾರ, 2016 ರಲ್ಲಿ ಸಂಪೂರ್ಣ ವಿದ್ಯಾರ್ಥಿವೇತನ ಪ್ರಕ್ರಿಯೆಯನ್ನು ‘ಡಿಜಿಟಲೀಕರಣ’ ಮಾಡಿದಾಗ, ಹಗರಣದ ಮಾಹಿತಿಯು ಬೆಳಕಿಗೆ ಬಂದಿತು.

2. 2022 ರಲ್ಲಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಅಲ್ಪಸಂಖ್ಯಾತರ ಸಚಿವಾಲಯದ ಜವಾಬ್ದಾರಿಯನ್ನು ನೀಡಿದಾಗ, ಪ್ರಕರಣದ ಗಂಭೀರತೆಯನ್ನು ಗುರುತಿಸಿ ಉನ್ನತ ಮಟ್ಟದ ತನಿಖೆಯನ್ನು ಪ್ರಾರಂಭಿಸಲಾಯಿತು.

3. ಕೇಂದ್ರ ಸರಕಾರವು ಇಲ್ಲಿಯವರೆಗೆ ಅಲ್ಪಸಂಖ್ಯಾತರ ಸಂಸ್ಥೆಗಳಲ್ಲಿನ ಮಕ್ಕಳಿಗಾಗಿ ಇದುವರೆಗೆ 22 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದೆ, ಕಳೆದ 4 ವರ್ಷಗಳಲ್ಲಿ ಪ್ರತಿ ವರ್ಷ 2 ಸಾವಿರದ 239 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ದೇಶದ ವಿವಿಧ ಬ್ಯಾಂಕ್ಗಳ 12 ಲಕ್ಷ ಶಾಖೆಗಳಲ್ಲಿ ತಲಾ 5 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಹಣ ಹೋಗುತ್ತಿತ್ತು.

ಸಂಪಾದಕೀಯ ನಿಲುವು

ಭಯೋತ್ಪಾದನೆ, ಲವ್ ಜಿಹಾದ್, ಮತಾಂತರ, ಬಲಾತ್ಕಾರ ಮುಂತಾದವರುಗಳ ಭಯಾನಕ ಕೇಂದ್ರಗಳಾಗಿರುವ ಮದರಸಾಗಳು ಭಾರತಕ್ಕೆ ಭಾರವಾಗಿವೆ. ಈಗಂತೂ ನಕಲಿ ಮದರಸಾಗಳಲ್ಲಿ ನಕಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ಲೂಟಿ ಗೈದ ಕೋಟ್ಯಂತರ ರೂಪಾಯಿಗಳು ಹಿಂದೂಗಳ ತೆರಿಗೆಯ ಹಣವೇ ಆಗಿದೆ. ಆದ್ದರಿಂದ ಇಂತಹ ಮದರಸಾಗಳ ಮೇಲೆ ಶಾಶ್ವತವಾಗಿ ಏಕೆ ನಿಷೇಧ ಹೇರಬಾರದು ?

ಈ ಹಗರಣಕ್ಕೆ ಕಾರಣರಾಗಿರುವ ಎಲ್ಲ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ, ಅವರಿಂದ ಹಣವನ್ನು ವಸೂಲಿ ಮಾಡಿ ಅವರಿಗೆ ಜೀವಾವಧಿ ಶಿಕ್ಷೆ ನೀಡಬೇಕು !