ನಿಃಶ್ಯಸ್ತ್ರೀಕರಣದ ಷಡ್ಯಂತ್ರ !

ಹಿಂದೂಗಳ ಬ್ರಜಮಂಡಲ ಜಲಾಭಿಷೇಕ ಯಾತ್ರೆಯ ಮೇಲಿನ ದಾಳಿಗೆ ಸಂಬಂಧಿಸಿದಂತೆ ಹರ್ಯಾಣ ಪೊಲೀಸರು ಗೋರಕ್ಷಕ ಬಿಟ್ಟು ಬಜರಂಗಿಯವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು (ಎಫ್.ಐ.ಆರ್) ದಾಖಲಿಸಲಾಗಿದೆ. ಯಾತ್ರೆಯ ವೇಳೆ ಆಯುಧಗಳನ್ನು ಕೊಂಡೊಯ್ಯಲು ಅವಕಾಶ ಇಲ್ಲದಿರುವಾಗಲೂ ಬಿಟ್ಟು ಹಾಗೂ ಇತರೆ ೧೫ ರಿಂದ ೨೦ ಜನರು ‘ತ್ರಿಶೂಲ’ ಮತ್ತು ‘ತಲವಾರ’ಗಳಂತಹ ‘ಮಾರಕಾಸ್ತ್ರ’ಗಳನ್ನು ಹೊಂದಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಯಾರೋ ಹೇಳುವುದು ಮತ್ತು ಹಿಂದೂಗಳು, ಹಿಂದೂ ಧರ್ಮದ ಮೇಲೆ ಆರೋಪ ಹೊರಿಸುವುದು ಇದು ಒಂದು ರೀತಿಯಲ್ಲಿ ಪದ್ಧತಿಯಾಗಿದೆ. ಹಿಂದೂಗಳ ಸಂದರ್ಭದಲ್ಲಿ ಏನೇ ಮಾಡಿದರೂ ಅದು ನಡೆಯುತ್ತದೆ. ಯಾವ ಹಿಂದೂವೂ ಇದರ ವಿರುದ್ಧ ಧ್ವನಿ ಎತ್ತುವುದಿಲ್ಲ ಎಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತಾಗಿದೆ. ಯಾತ್ರೆಯಲ್ಲಿ ಆಯುಧಗಳಿಗೆ ಅವಕಾಶ ನೀಡದಿರುವುದು ನಿಜವಾಗಿದ್ದರೂ, ಮತಾಂಧ ಮುಸಲ್ಮಾನರು ಮಾರಣಾಂತಿಕ ದಾಳಿ ನಡೆಸಿರುವುದಂತೂ ಸತ್ಯವೇ ಆಗಿದೆ. ಹಾಗಿರುವಾಗ ಅದರಲ್ಲಿ ಹಿಂದೂಗಳು ತಮ್ಮ ಬಲಿ ಕೊಡಬೇಕಾಗಿತ್ತೇ? ಮತಾಂಧರ ಭೀಕರ ದಾಳಿಯನ್ನು ವಿರೋಧಿಸಲು ಹಿಂದೂಗಳು ತಮ್ಮ ಬಳಿ ಯಾವುದಾದರೂ ಅಸ್ತ್ರವನ್ನು ಏಕೆ ಇಟ್ಟುಕೊಳ್ಳಬಾರದು?’ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಮತಾಂಧರ ಇದುವರೆಗಿನ ಹಿಂಸಾತ್ಮಕ ದಾಳಿಯ ಇತಿಹಾಸವನ್ನು ನೋಡಿದರೆ, ಹಿಂದೂಗಳೇನು ಕೇವಲ ಕಲ್ಲು ಮತ್ತು ಲಾಠಿಗಳಿಂದಷ್ಟೇ ತಮ್ಮನ್ನು ರಕ್ಷಿಸಿಕೊಳ್ಳುವುದೇ? ಇಷ್ಟು ವಸ್ತುಗಳಿಂದ ಏನು ಸಾಧ್ಯವಾಗುವುದು? ‘ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸ್ವಾತಂತ್ರ್ಯವನ್ನು ಜಾತ್ಯತೀತ ದೇಶದ ಸಂವಿಧಾನವು ಹಿಂದೂಗಳಿಗೂ ನೀಡಿದೆ’ ಎನ್ನುವುದನ್ನು ಪೊಲೀಸರು ಗಮನದಲ್ಲಿಟ್ಟುಕೊಳ್ಳಬೇಕು. ‘ಹಿಂದೂಗಳ ಯಾತ್ರೆಯ ಮೇಲೇಕೆ ದಾಳಿ ಮಾಡಿದರು’ ಎಂದು ಯಾರೂ ಮತಾಂಧರಿಗೆ ಛೀಮಾರಿ ಹಾಕುತ್ತಿಲ್ಲ ಅಥವಾ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ, ಹಿಂದೂಗಳ ಮೇಲೆ ಮಾತ್ರ ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ, ಯಾವುದೇ ರೀತಿಯಲ್ಲಿ ಗೂಂಡಾಗಿರಿ ಮಾಡುವ ಅಧಿಕಾರವೇ ಸಿಕ್ಕಿರುವಂತೆ ಪೊಲೀಸರು ಹಿಂದೂಗಳ ಸಂದರ್ಭದಲ್ಲಿ ತಮ್ಮ ಪೌರುಷವನ್ನು ಪ್ರದರ್ಶಿಸುತ್ತಿರುತ್ತಾರೆ. ಆದರೆ ಹಿಂದೂಗಳು ಅವರಿಗೆ ಬಲಿಬೀಳುವುದಿಲ್ಲ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು. ಇದು ಈಗ ನಿಲ್ಲಲೇಬೇಕಾಗಿದೆ. ಹಿಂದೂದ್ವೇಷಿಗಳು ಹಿಂದೂಗಳ ಸಹಿಷ್ಣುತೆಯ ಅಂತ್ಯವನ್ನು ನೋಡಬಾರದು. ಈಗ ಯಾರೂ ಹಿಂದೂಗಳನ್ನು ಷಂಢರು ಮತ್ತು ಅಸ್ಮಿತೆಹೀನರು ಎಂದು ಪರಿಗಣಿಸಬಾರದು. ಪ್ರತಿಯೊಬ್ಬ ಹಿಂದುವೂ ಈಗ ಧರ್ಮದ ಬಗ್ಗೆ ಜಾಗೃತರಾಗುತ್ತಿದ್ದಾನೆ. ಇದು ಹಿಂದೂಗಳ ಭವಿಷ್ಯದ ದೃಷ್ಟಿಯಿಂದ ಆಶಾದಾಯಕವಾಗಿದೆ.

೨೦೨೧ ರಲ್ಲಿ, ಅಸ್ಸಾಂನಲ್ಲಿ ಮತಾಂತರಗೊಂಡ ಕ್ರೈಸ್ತರು ಹಿಂದೂಗಳ ಪ್ರಾಚೀನ ಧಾರ್ಮಿಕ ಸ್ಥಳದಿಂದ ಶಿವಲಿಂಗ ಮತ್ತು ತ್ರಿಶೂಲವನ್ನು ಕಿತ್ತುಹಾಕಿದ್ದರು. ೧೦೦ ವರ್ಷಗಳಿಗೂ ಹೆಚ್ಚು ಕಾಲ, ಹಿಂದೂಗಳು ಅಲ್ಲಿನ ಶಿವಲಿಂಗವನ್ನು ಪೂಜಿಸುತ್ತಿದ್ದರು; ಆದರೆ ಅಲ್ಲಿ ಪೂಜೆ ಮಾಡದಂತೆ ಕ್ರೈಸ್ತರು ಹಿಂದೂಗಳಿಗೆ ಬೆದರಿಕೆ ಹಾಕಿದರು. ತ್ರಿಶೂಲದ ವಿರುದ್ಧ ಹರಿಯಾಣ ಮತ್ತು ಅಸ್ಸಾಂನ ಈ ೨ ಘಟನೆಗಳನ್ನು ಹಿಂದೂಗಳು ಗಂಭೀರವಾಗಿ ಪರಿಗಣಿಸಬೇಕು.

ಹಿಂದೂ ಧರ್ಮವನ್ನು ಮುಗಿಸಲು ಷಡ್ಯಂತ್ರ!

ಹಿಂದೂಗಳ ಶಸ್ತ್ರಗಳಿಗೆ ಆಗುತ್ತಿರುವ ವಿರೋಧವು ಹಿಂದೂ ಧರ್ಮ ಆಯುಧಗಳ ರೂಪದಲ್ಲಿ ಪಡೆದಿರುವ ದೈವಿಕ ಪರಂಪರೆಯ, ತೇಜಸ್ಸು, ಶಕ್ತಿಯನ್ನು ನಾಶಪಡಿಸಲು ರಚಿಸಿರುವ ಷಡ್ಯಂತ್ರವಾಗಿದೆ. ಇದು ಹಿಂದೂಗಳನ್ನು ನಿಃಶ್ಯಸ್ತ್ರಗೊಳಿಸಿ ನಿರ್ನಾಮ ಮಾಡುವ ಪ್ರಯತ್ನವಾಗಿದೆ. ‘ಇಂತಹ ಮಾಧ್ಯಮಗಳಿಂದ ಹಿಂದೂ ಧರ್ಮವನ್ನು ಅಂತ್ಯಗೊಳಿಸುವ ಸಂಚು ರೂಪಿಸಲಾಗುತ್ತಿದೆ’ ಎಂದು ಹೇಳಿದರೆ ತಪ್ಪಾಗಲಾರದು. ಇದಕ್ಕೆ ಕಾರಣ ಹಿಂದೂಗಳಲ್ಲಿರುವ ಸಹಿಷ್ಣುತೆಯೇ ಎಂಬುದನ್ನು ಹಿಂದೂಗಳು ಗಮನಿಸಬೇಕು. ‘ಹಿಂದೂಗಳು ಇಟ್ಟುಕೊಳ್ಳುವ ಆಯುಧಗಳನ್ನು ಮುಸ್ಲಿಮರ ವಿರುದ್ಧ ಬಳಸುತ್ತಾರೆ’ ಎಂದು ನೆಪ ಹೇಳುತ್ತಾ ಆ ಶಸ್ತ್ರಾಸ್ತ್ರಗಳನ್ನು ವಿರೋಧಿಸಲಾಗುತ್ತದೆ. ಆ ಶಸ್ತ್ರಾಸ್ತ್ರಗಳನ್ನು ಒಂದು ರೀತಿಯಲ್ಲಿ ನಿರ್ನಾಮಗೊಳಿಸಲು ಪ್ರಯತ್ನಿಸಲಾಗುತ್ತದೆ. ವಿಶೇಷವೆಂದರೆ ಈ ವಿರೋಧ ಭಾಜಪ ಸರಕಾರವಿರುವ ಹರಿಯಾಣ ರಾಜ್ಯದಲ್ಲಿ ನಡೆಯುತ್ತಿರುವುದು ದುರದೃಷ್ಟಕರ. ಇಂತಹ ಹಿಂದೂದ್ವೇಷಿ ಪೊಲೀಸರ ವಿರುದ್ಧ ಭಾಜಪ ಸರಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಇಂದು ಪ್ರಾಣಘಾತಕ ಅಸ್ತ್ರವೆಂದು ಹೇಳುತ್ತಿರುವ ತ್ರಿಶೂಲವನ್ನು ನಾಳೆ ಎಲ್ಲೆಡೆಯ ಶಿವಾಲಯಗಳಿಂದ ತೆಗೆಯಲು ಈ ಹಿಂದೂದ್ವೇಷಿ ಪೊಲೀಸರು ಹಿಂಜರಿಯಲಾರರು.

ಹಿಂದೂಗಳ ಪ್ರತಿಯೊಂದು ಆಯುಧವು ದೇವತೆಗೆ ಸಂಬಂಧಿಸಿದೆ. ತ್ರಿಶೂಲವು ದತ್ತ ಮತ್ತು ಶಿವ ದೇವರುಗಳು ಹಿಡಿದಿರುವ ಆಯುಧವಾಗಿದೆ. ತ್ರಿಶೂಲವನ್ನು ‘ಮಾರಕಾಸ್ತ್ರ’ ಎಂದು ಕರೆಯುವುದು ಹಿಂದೂ ದೇವರುಗಳಿಗೆ ಮಾಡಿದ ಅವಮಾನ. ಹಾಗೆ ಮಾಡುವ ಪೊಲೀಸರಿಗೆ ಹಿಂದೂಗಳು ತಕ್ಷಣವೇ ಖಂಡಿಸಬೇಕು; ಏಕೆಂದರೆ ಅವರು ಅನ್ಯ ಧರ್ಮದವರ ಆರಾಧನಾ ಸ್ಥಳಗಳ ವಿರುದ್ಧ ‘ಚಕಾರ’ವೆತ್ತುವ ವಿಚಾರ ಅವರ ಮನಸ್ಸಿನಲ್ಲಿ ಸುಳಿಯುವುದಿಲ್ಲ ಮತ್ತು ಹಿಂದೂಗಳ ಬಗ್ಗೆ ಮಾತ್ರ ಕಡಿವಾಣವಿಲ್ಲದೆ ಮಾತನಾಡುತ್ತಾರೆ ಮತ್ತು ವರ್ತಿಸುತ್ತಾರೆ. ‘ಹಿಂದೂ ಬಹುಸಂಖ್ಯಾತವಿರುವ ರಾಷ್ಟ್ರದ ಸರ್ಕಾರ ಇಂತಹವರ ವಿರುದ್ಧ ಯಾವಾಗ ಕಠಿಣ ಕ್ರಮ ಕೈಗೊಳ್ಳುತ್ತದೆ?’ ಎಂಬ ಪ್ರಶ್ನೆ ಪ್ರತಿಯೊಂದು ಧರ್ಮವಿರೋಧಿ ದಾಳಿಯ ನಂತರ ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಇದಕ್ಕೆ ಸರಕಾರ ಉತ್ತರಿಸುವುದೇ?

೨೦೨೨ ರಲ್ಲಿ ಕೋಲಕಾತಾ (ಬಂಗಾಳ)ದಲ್ಲಿ ನವರಾತ್ರಿ ಉತ್ಸವದ ಸಮಯದಲ್ಲಿ, ಶ್ರೀ ದುರ್ಗಾದೇವಿಯನ್ನು ವೇಶ್ಯೆಯ ರೂಪದಲ್ಲಿ ತೋರಿಸಲಾಗಿತ್ತು. ಈ ಸಮಯದಲ್ಲಿ ಅವಳ ಕೈಯಲ್ಲಿ ಒಂದೇ ಒಂದು ಶಸ್ತ್ರಗಳನ್ನು ತೋರಿಸಿರಲಿಲ್ಲ. ಇದು ದೇವಿಗೆ ಮಾಡಿದ ಅವಮಾನವೇ ಆಗಿದೆ. ಈ ಘಟನೆಯನ್ನು ನೋಡಿದರೆ ಹಿಂದೂಗಳನ್ನು ಶಸ್ತ್ರವಿಹೀನರನ್ನಾಗಿ ಮಾಡಲು ಹೆಜ್ಜೆಗಳನ್ನು ಇಡಲಾಗುತ್ತಿದೆಯೆನ್ನುವ ಪರಿಸ್ಥಿತಿ ಹಿಂದೂಗಳಿಗೆ ಅಪಾಯದ ಕರೆಗಂಟೆಯಾಗಿದೆ.

ಹಿಂದೂಗಳ ಮೇಲೆ ಒತ್ತಡ; ಆದರೆ ಮುಸಲ್ಮಾನ ವೈಭವೀಕರಣ

ಹಿಂದೂಗಳು ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡರೆ ಅವರತ್ತ ಬೊಟ್ಟು ಮಾಡಿ ತೋರಿಸುತ್ತಾರೆ, ಹೀಗಿರುವಾಗ ಮತಾಂಧ ಮುಸ್ಲಿಮರು ಹಾಡುಹಗಲೇ ಮಚ್ಚು ಮತ್ತು ಬಂದೂಕುಗಳೊಂದಿಗೆ ಬೀದಿಗಳಲ್ಲಿ ತಿರುಗುತ್ತಾರೆ, ನಾಗರಿಕರನ್ನು ಕೊಲ್ಲುತ್ತಾರೆ, ಆ ಸಮಯದಲ್ಲಿ ಅವರ ಶಸ್ತ್ರಾಸ್ತ್ರಗಳನ್ನು ಏಕೆ ವಿರೋಧಿಸುವುದಿಲ್ಲ? ವಿರೋಧಿಸದೇ ಇರುವುದರಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ‘ತಲ್ವಾರ್ ಗ್ಯಾಂಗ್’ನ ಪ್ರತಿಯೊಂದು ಸಂದರ್ಭದಲ್ಲಿಯೂ ಉದಾತ್ತೀರಣವಾಗುತ್ತಿರುತ್ತದೆ. ‘ಮೊಹರಂ’ ಸಮಯದಲ್ಲಿ ಮಾತಮ್ ಸಮಯದಲ್ಲಿ ಮುಸ್ಲಿಮರು ಆಯುಧಗಳಿಂದ ತಮ್ಮನ್ನು ತಾವು ಗಾಯಗೊಳಿಸಿಕೊಳ್ಳುತ್ತಾರೆ. ಹಾಗಾದರೆ ಅವರು ಮಾಡುವ ಈ ಪ್ರಕಾರ ಹೇಗೆ ಸರಿಯೆನಿಸುತ್ತದೆ? ಅವರ ಈ ಪದ್ಧತಿಯನ್ನು ವಿರೋಧಿಸಲು ಯಾರಿಗೂ ಧೈರ್ಯ ಸಾಲುವುದಿಲ್ಲ ಎನ್ನುವುದೇ ಸತ್ಯ! ‘ಕಾನೂನು ಸುವ್ಯವಸ್ಥೆಯ ರಕ್ಷಕರು’ ಎಂದು ಕರೆಸಿಕೊಳ್ಳುವ ಪೊಲೀಸರಿಗೆ ಇದು ನಾಚಿಕೆಗೇಡಿನ ಸಂಗತಿಯೇ ಹೌದು. ಹಿಂದೂಗಳ ಶಸ್ತ್ರಾಸ್ತ್ರಗಳನ್ನು ವಿರೋಧಿಸುವ ಪೋಲೀಸರು ‘ಮತಾಂಧ ಮುಸ್ಲಿಮರ ಹಿಂಸಾತ್ಮಕ ಗ್ಯಾಂಗ್‌ಗಳನ್ನು ಯಾವಾಗ ತಹಬಂದಿಗೆ ತರುತ್ತಾರೆ?’ ಎಂದು ಹೇಳಬೇಕು.

ಬ್ರಿಟಿಷರು ಹಿಂದೂಗಳನ್ನು ನಿಶ್ಯಸ್ತ್ರಗೊಳಿಸಿದರು. ‘ಹಿಂದೂಗಳು ತಮ್ಮ ಆಳ್ವಿಕೆಯನ್ನು ವಿರೋಧಿಸಬಾರದು, ಹಿಂದೂಗಳು ನಪುಂಸಕರಾಗಬೇಕು’ ಎಂಬುದೇ ಅದರ ಹಿಂದಿನ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ, ತ್ರಿಶೂಲಕ್ಕೆ ಆಗುತ್ತಿರುವ ವಿರೋಧವು ಭವಿಷ್ಯದಲ್ಲಿ ಹಿಂದೂ ಅಸ್ತ್ರಗಳ ಮತ್ತಷ್ಟು ವಿಡಂಬನೆಯಾಗಬಾರದು ಎಂದು ಹಿಂದೂಗಳು ಸಂಘಟಿತರಾಗುವ ಸಮಯ ಈಗ ಬಂದಿದೆ. ಇದಕ್ಕಾಗಿ ಹಿಂದೂಗಳೇ ಹೆಜ್ಜೆಯಿಡುವ ಆವಶ್ಯಕತೆಯಿದೆ.

ಹಿಂದೂಗಳ ಶಸ್ತ್ರಾಸ್ತ್ರಗಳನ್ನು ವಿರೋಧಿಸುವ ಪೊಲೀಸರು ಮತಾಂಧ ಮುಸಲ್ಮಾನರ ಹಿಂಸಾತ್ಮಕ ಗ್ಯಾಂಗ್.ಗಳನ್ನು ಯಾವಾಗ ನಿಯಂತ್ರಿಸುತ್ತಾರೆ?