ಅಮೇರಿಕಾ ಸರಕಾರದ ವಾರ್ಷಿಕ ವರದಿಯಲ್ಲಿನ ಮಾಹಿತಿ !
ನವ ದೆಹಲಿ – ವಿಶ್ವಸಂಸ್ಥೆ ಮತ್ತು ಇತರ ವೇದಿಕೆಗಳಲ್ಲಿ ಪಾಕಿಸ್ತಾನವು ನಿರಂತರವಾಗಿ ಜಮ್ಮು ಕಾಶ್ಮೀರನ ಸಮಸ್ಯೆ ಮಂಡಿಸುತ್ತಿದೆ ಮತ್ತು ಭಾರತ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತದೆ. ಈಗ ಪಾಕಿಸ್ತಾನ ಇತರ ದೇಶದ ಸಂಸದರಿಗೆ ಹಣ ನೀಡಿ ಭಾರತದ ವಿರುದ್ಧ ಮಾತನಾಡಲು ಪ್ರಚೋದಿಸುತ್ತಿರುವ ಮಾಹಿತಿ ಅಮೆರಿಕಾದ ಒಂದು ವರದಿಂದ ಬಹಿರಂಗವಾಗಿದೆ. ಅಮೇರಿಕಾದಲ್ಲಿನ ಭಾರತ ವಿರೋಧಿ ಮಹಿಳಾ ಸಾಂಸದೆ ಇಲ್ಹಾನ ಉಮರ್ ಇವರಿಗೆ ಕಳೆದ ವರ್ಷ ಪಾಕಿಸ್ತಾನ ಹಣ ನೀಡಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಕಳುಹಿಸಲಾಗಿತ್ತು ಎಂದು ಅಮೆರಿಕಿ ಸರಕಾರದ ವಾರ್ಷಿಕ ವರದಿಯಲ್ಲಿ ಮಾಹಿತಿ ನೀಡಲಾಗಿದೆ. ಇಲ್ಹಾನ ಉಮರ್ ಇವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಗೆ ಭಾರತ ವಿರೋಧಿ ಹೇಳಿಕೆ ನೀಡಿದ್ದರು. ಆ ಸಮಯದಲ್ಲಿ ಭಾರತವು ಇಲ್ಹಾನ ಉಮರ್ ಇವರನ್ನು ವಿರೋಧಿಸಿತ್ತು.
ಅಮೇರಿಕ ಸರಕಾರದ ವರದಿಯಲ್ಲಿ, ಏಪ್ರಿಲ್ ೧೮ ರಿಂದ ೨೪, ೨೦೨೨ ರಲ್ಲಿ ಸಂಸದೆ ಇಲ್ಹಾನ ಉಮರ್ ಇವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಗುವ ಎಲ್ಲಾ ಖರ್ಚು ವೆಚ್ಚ ಪಾಕಿಸ್ತಾನ ಬರಿಸಿತ್ತು ಎಂದು ಹೇಳಿತ್ತು.
(ಸೌಜನ್ಯ:Republic World)
ಸಂಪಾದಕರ ನಿಲುವು* ತಂತ್ರಗಾರಿಕೆಯಲ್ಲಿ ಭಾರತದಕ್ಕಿಂತಲೂ ನೈಪುಣ್ಯವಿರುವ ಪಾಕಿಸ್ತಾನ ! ಇಂತಹ ಕಪಟ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರದ ಭಾಷೆ ತಿಳಿಯುತ್ತಿದ್ದರಿಂದ ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನುಗ್ಗಿ ಅದಕ್ಕೆ ಪಾಠ ಕಲಿಸಬೇಕು, ಎಂದು ದೇಶಪ್ರೇಮಿ ಭಾರತೀಯರ ಇಚ್ಛೆಯಾಗಿದೆ ! |