ಮದರಸಾದ ಮುಖ್ಯಸ್ಥ ಸೇರಿ ನಾಲ್ವರ ವಿರುದ್ಧ ದೂರು ದಾಖಲು !
ಪ್ರಯಾಗರಾಜ (ಉತ್ತರ ಪ್ರದೇಶ) – ಇಲ್ಲಿಯ ಗೌಸಿಯ ಇಸ್ಲಾಮಿಯ ಜಿಂತುಲ ಉಲುಮಾದ ಮದರಸಾದಲ್ಲಿ ರಾಷ್ಟ್ರ ಧ್ವಜದ ಮೇಲೆ ತಿಂಡಿ ಇಟ್ಟಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ, ಪೋಲೀಸರು ಮದರಸಾದ ಮುಖ್ಯಸ್ಥ ಸೇರಿ 4 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ರಾಷ್ಟ್ರಧ್ವಜದ ಅಪಮಾನ ಗೊಳಿಸುವಿಕೆ ತಡೆ ಕಾಯ್ದೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ದಿನ ಟೇಬಲ್ ಮೇಲೆ ರಾಷ್ಟ್ರ ಧ್ವಜವನ್ನು ಹಾಸಿ ಅದರ ಮೇಲೆ ಲಘು ಉಪಾಹಾರ ಕೊಟ್ಟಿರುವ ಫೋಟೋ ಕಂಡು ಬಂದಿತ್ತು. ಸ್ಥಳೀಯ ಜನರಿಗೆ ಈ ವಿಷಯ ತಿಳಿದ ನಂತರ ಮದರಸಾದ ಹೊರಗಡೆ ಪ್ರತಿಭಟನೆ ಮಾಡಿದರು.
प्रयागराज के एक मदरसे में राष्ट्रध्वज तिरंगे को मेज पर बिछा कर चाय-नाश्ता करते कुछ लोगों की तस्वीर वायरल होने पर FIR दर्ज की गई है।#Tiranga #Madrasa #Prayagraj https://t.co/zlnFfratIJ
— ऑपइंडिया (@OpIndia_in) August 18, 2023
(ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ರಾಷ್ಟ್ರೀಯ ಭಾವನಗೆಳಿಗೆ ನೋವನ್ನು ಉಂಟುಮಾಡುವುದಾಗಿರದೇ ಮಾಹಿತಿಗಾಗಿ ಪ್ರಕಾಶಿಸಲಾಗಿದೆ. – ಸಂಪಾದಕರು)
ಸಂಪಾದಕೀಯ ನಿಲುವುಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು ಪಾಕಿಸ್ತಾನದ ರಾಷ್ಟ್ರಧ್ವಜಕ್ಕೆ ಈ ರೀತಿ ಅವಮಾನ ಮಾಡಿದ್ದರೆ ಅವರನ್ನು ಅಲ್ಲಿಯೇ ಗುಂಡಿಕ್ಕಿ ಕೊಲ್ಲುತ್ತಿದ್ದರು ! ಭಾರತದಲ್ಲಿ ಅಲ್ಪಸಂಖ್ಯಾತರ ಇಂತಹ ಕೃತ್ಯಗಳಿಂದ ಅವರ ದೇಶ ಪ್ರೇಮದ ಬಗ್ಗೆ ಸಂಶಯ ಮೂಡುತ್ತದೆ, ಇದು ಸೆಕ್ಯುಲರ್ ಗಳಿಗೆ ಯಾವಾಗ ತಿಳಿಯುವುದು ? ‘ಇಂತಹ ಮದರಸಾಗಳನ್ನು ಏಕೆ ಮುಚ್ಚಿಸಲಿಲ್ಲ ?’, ಎಂದು ರಾಷ್ಟಾಭಿಮಾನಿಗಳು ಆಡಳಿತಕ್ಕೆ ಕೇಳಬೇಕಾಗಿದೆ ! |