೬೦೦ ವರ್ಷಗಳ ಹಿಂದೆ ಕಾಶ್ಮೀರದಲ್ಲಿನ ಎಲ್ಲಾ ಜನರು ಹಿಂದುಗಳೇ ಆಗಿದ್ದರು; ಮತಾಂತರದಿಂದ ಅವರು ಮುಸಲ್ಮಾನರಾದರು ! – ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಆಜಾದ್

ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಆಜಾದ್ ಇವರ ಸ್ಪಷ್ಟೀಕರಣ !

ಡೋಡಾ (ಜಮ್ಮು ಕಾಶ್ಮೀರ) – ನಮ್ಮ ಬಳಿ ಕಾಶ್ಮೀರದ ಉದಾಹರಣೆ ಇದೆ. ೬೦೦ ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಒಬ್ಬ ಮುಸಲ್ಮಾನನೂ ಇರಲಿಲ್ಲ. ಕಾಶ್ಮೀರಿ ಹಿಂದುಗಳನ್ನು ಇಸ್ಲಾಂಗೆ ಮತಾಂತರ ಮಾಡಲಾಯಿತು. ಕೇವಲ ಭಾರತದಲ್ಲಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಇಸ್ಲಾಂ ಧರ್ಮ ಸ್ವೀಕರಿಸಲಾಯಿತು. ಇಸ್ಲಾಂ ೧ ಸಾವಿರದ ೪೦೦ ವರ್ಷಗಳಷ್ಟು ಹಳೆಯದಾಗಿದೆ; ಆದರೆ ಹಿಂದೂ ಧರ್ಮ ಅದಕ್ಕಿಂತಲೂ ಪ್ರಾಚೀನವಾಗಿದೆ, ಎಂದು ‘ಡೆಮೊಕ್ರಟಿಕ್ ಪ್ರೋಗ್ರೆಸ್ಸಿವ್ ಆಜಾದ್ ಪಾರ್ಟಿ’ಯ ಮುಖ್ಯಸ್ಥ ಗುಲಾಮ್ ನಬಿ ಆಜಾದ್ ಇವರು ಹೇಳಿದರು. ಅವರು ಆಗಸ್ಟ್ ೯ ರಂದು ಇಲ್ಲಿ ನಡೆದಿರುವ ಒಂದು ಮೇಳದಲ್ಲಿ ಮಾತನಾಡುತ್ತಿದ್ದರು. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ‘ಧರ್ಮವನ್ನು ರಾಜಕಾರಣಕ್ಕೆ ಜೋಡಿಸಬಾರದು. ಜನರು ಧರ್ಮದ ಆಧಾರದಲ್ಲಿ ಮತದಾನ ಮಾಡಬಾರದು’, ಎಂದು ಗುಲಾಮ್ ನಬಿ ಆಜಾದ್ ಇವರು ಕರೆ ನೀಡಿದರು.

ಗುಲಾಮ್ ನಬಿ ಆಜಾದ್ ಇವರು ಮಾತು ಮುಂದುವರೆಸುತ್ತಾ, ನಾವು ಈ ರಾಜ್ಯ ಹಿಂದೂ, ಮುಸಲ್ಮಾನ್, ದಲಿತ್ ಮತ್ತು ಕಾಶ್ಮೀರಿ ಇವರಿಗಾಗಿ ನಿರ್ಮಿಸಿದ್ದೇವೆ. ಇದು ನಮ್ಮ ಭೂಮಿಯಾಗಿದೆ. ಇಲ್ಲಿ ಹೊರಗಿನಿಂದ ಯಾರೂ ಬಂದಿಲ್ಲ. ನಾನು ಸಂಸತ್ತಿನಲ್ಲಿ ಇಂತಹ ಅನೇಕ ವಿಷಯಗಳನ್ನು ನೋಡಿದ್ದೇನೆ, ಅವು ನಿಮ್ಮವರೆಗೆ ತಲುಪುವುದೇ ಇಲ್ಲ. ನನ್ನ ಒಬ್ಬ ಸಹಯೋಗಿ ಸಂಸದರು, ‘ಕಾಶ್ಮೀರದಲ್ಲಿ ಕೆಲವು ಜನರು ಹೊರಗಿನಿಂದ ಬಂದಿದ್ದಾರೆ’; ಎಂದು ಹೇಳಿದರು ಆದರೆ ಅದನ್ನು ನಾನು ನಿರಾಕರಿಸಿದೆ. ನಮ್ಮ ಭಾರತದಲ್ಲಿ ಇಸ್ಲಾಂ ಕೇವಲ ೧ ಸಾವಿರದ ೪೦೦ ರಷ್ಟು ಹಳೆಯದಾಗಿದೆ. ಹಿಂದೂ ಧರ್ಮ ಬಹಳ ಪ್ರಾಚೀನವಾಗಿದೆ. ೧೦ – ೨೦ ಜನ ಮೊಗಲರು ಸೈನ್ಯದಿಂದ ಇಲ್ಲಿಗೆ ಬಂದರು ಮತ್ತು ಅವರು ಹಿಂದುಗಳ ಮತಾಂತರ ಮಾಡಿದರು ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದಲ್ಲಿನ ಮುಸಲ್ಮಾನರ ಇದೇ ಇತಿಹಾಸವಾಗಿದೆ. ಆದ್ದರಿಂದ ಅವರು ಇತಿಹಾಸದಲ್ಲಿ ನಡೆದಿರುವ ತಪ್ಪು ಸುಧಾರಿಸಿ ಮತ್ತೆ ಹಿಂದೂ ಧರ್ಮಕ್ಕೆ ಬರಬೇಕು ಮತ್ತು ದೇಶದ ವಿಕಾಸದಲ್ಲಿ ಸಹಭಾಗಿ ಆಗಬೇಕು !