ದೇಹದ ಮೇಲೆ ಬಂದಿರುವ ಕೆಟ್ಟ ಶಕ್ತಿಗಳ ಆವರಣವನ್ನು ತೆಗೆಯುವ ಬಗ್ಗೆ ಸದ್ಗುರು ಡಾ. ಮುಕುಲ ಗಾಡಗೀಳ ಇವರು ಹೇಳಿದ ಮಹತ್ವಪೂರ್ಣ ಅಂಶಗಳು !

ಎರಡೂ ಕೈಗಳ ಮಧ್ಯದ ಬೆರಳುಗಳನ್ನು ಪರಸ್ಪರ ಜೋಡಿಸಿ ಮನೋರಾ ಮುದ್ರೆಯನ್ನು (‘ಟವರ್‌’ಮುದ್ರೆಯನ್ನು ಮಾಡಿ) ಮಾಡುತ್ತಿರುವ ಸದ್ಗುರು ಡಾ. ಮುಕುಲ ಗಾಡಗೀಳ

೧. ಶರೀರದ ಸುತ್ತಲೂ ಬಂದ ಆವರಣವನ್ನು ತೆಗೆಯುವ ಬಗೆಗಿನ ಅಂಶಗಳು

ಅ. ‘ಒಂದು ಕೈಯ ಅಂಗೈಯನ್ನು ಎದುರಿನ ದಿಕ್ಕಿಗೆ ಮತ್ತು ಇನ್ನೊಂದು ಕೈನ ಅಂಗೈಯನ್ನು ಸ್ವತಃದ ಕಡೆಗೆ’, ಹೀಗೆ ಮುದ್ರೆಯನ್ನು ಮಾಡಿ ಮೂಲಾಧಾರಚಕ್ರದಿಂದ ಸಹಸ್ರಾರದ ವರೆಗೆ ಕೆಳಗಿನಿಂದ ಮೇಲೆ ಮತ್ತು ಮೇಲಿನಿಂದ ಕೆಳಗೆ ಆವರಣವನ್ನು ತೆಗೆಯಬೇಕು. ಆವರಣವನ್ನು ತೆಗೆಯುವಾಗ ಯಾವ ಸ್ಥಳದಲ್ಲಿ ತೊಂದರೆಯ ಅರಿವಾಗುತ್ತದೆಯೋ, ಆ ಸ್ಥಳದಲ್ಲಿ ಕೈಯ ಮುದ್ರೆಯನ್ನು ಹೆಚ್ಚು ಸಮಯ ಹಿಡಿಯಬೇಕು. ಈ ಮುದ್ರೆಯಿಂದ ಆವರಣ ಬೇಗನೆ ಕಡಿಮೆಯಾಗುತ್ತದೆ.

ಆ. ಎರಡೂ ಕೈಗಳ ಮಧ್ಯದ ಬೆರಳುಗಳನ್ನು ಪರಸ್ಪರ ಜೋಡಿಸಿ ಗೋಪುರ ಮುದ್ರೆಯನ್ನು (‘ಟವರ್’ ಮುದ್ರೆ ಮಾಡಿ) ಮೂಲಾಧಾರಚಕ್ರದಿಂದ ಸಹಸ್ರಾರಚಕ್ರದ ವರೆಗೆ ಕೆಳಗಿನಿಂದ ಮೇಲೆ ಮತ್ತು ಮೇಲಿನಿಂದ ಕೆಳಗೆ ಆವರಣವನ್ನು ತೆಗೆಯಬೇಕು.

ಇ. ಅನಂತರ ಆವರಣ ಉಳಿದುಕೊಂಡಿದ್ದರೆ ಕೈಗಳಿಂದ ಆವರಣವನ್ನು ತೆಗೆಯಬೇಕು. ಕೈಗಳಿಂದ ಆವರಣವನ್ನು ತೆಗೆಯುವಾಗ ದೇಹದ ಒಳಗಿನ ಮತ್ತು ದೇಹದ ಸುತ್ತಲಿನ ಆವರಣವನ್ನು ಮುಷ್ಠಿಯಲ್ಲಿ ಹಿಡಿದು ತೆಗೆದುಹಾಕಬೇಕು.

೨. ಕಣ್ಣುಗಳ ಮೇಲಿನ ಆವರಣವನ್ನು ತೆಗೆಯುವ ವಿಷಯದಲ್ಲಿ

೨ ಅ. ಕಣ್ಣುಗಳ ಸುತ್ತಲಿರುವ ಆವರಣವನ್ನು ತೆಗೆಯುವ ಪದ್ಧತಿ ! : ಕಣ್ಣುಗಳ ತುದಿಗಳು ಇವು ಕೆಟ್ಟ ಶಕ್ತಿಗಳು ಶರೀರದಲ್ಲಿ ಪ್ರವೇಶಿಸುವ ಸ್ಥಾನಗಳಾಗಿವೆ. ಆದುದರಿಂದ ಅಲ್ಲಿ ಉಪಾಯ ಮಾಡುವುದು ಆವಶ್ಯಕವಾಗಿದೆ. ಅದಕ್ಕಾಗಿ ಕೈಗಳ ೫ ಬೆರಳುಗಳನ್ನು ಜೋಡಿಸಿ ಎರಡೂ ಕಣ್ಣುಗಳ ಮೇಲೆ ತಿರುಗಿಸಬೇಕು. ನಂತರ ನಾಮಜಪವನ್ನು ಕಂಡು ಹಿಡಿಯುವಾಗ ಮೊದಲು ಶೂನ್ಯ, ಮಹಾಶೂನ್ಯ, ನಿರ್ಗುಣ, ಓಂ ಇವುಗಳಲ್ಲಿ ಯಾವ ನಾಮಜಪ ಬರುವುದೋ, ಅದನ್ನು ಮಾಡುವಾಗ ಅಂಗೈಯನ್ನು ಕಣ್ಣುಗಳ ಮೇಲೆ ಹಿಡಿಯಬೇಕು. ಇವುಗಳ ಪೈಕಿ ಯಾವುದೇ ನಾಮಜಪ ಬರದಿದ್ದರೆ ಅಗ್ನಿ, ವಾಯು ಮತ್ತು ಆಕಾಶ ಇವುಗಳ ಪೈಕಿ ಯಾವ ನಾಮಜಪ ಬರುತ್ತದೆಯೋ, ಆ ಮುದ್ರೆಯನ್ನು ಕಣ್ಣುಗಳ ತುದಿಗೆ ಹಿಡಿದು ಮಾಡಬೇಕು. ಅಗ್ನಿದೇವತೆಯ ನಾಮಜಪ ಬಂದರೆ ಮಧ್ಯಮಾ ಮತ್ತು ಹೆಬ್ಬೆರಳಿನ ತುದಿಗಳನ್ನು ಜೋಡಿಸಿ ಬರುವ ಮುದ್ರೆಯನ್ನು ಮಾಡಬೇಕು. ವಾಯುದೇವತೆಯ ನಾಮಜಪವು ಬಂದರೆ, ತರ್ಜನಿ ಮತ್ತು ಹೆಬ್ಬೆರಳುಗಳ ತುದಿಗಳನ್ನು ಜೋಡಿಸಿ ಬರುವ ಮುದ್ರೆಯನ್ನು ಮಾಡಬೇಕು. ಆಕಾಶದೇವತೆಯ ನಾಮಜಪ ಬಂದರೆ, ತರ್ಜನಿಯ ತುದಿಯನ್ನು ಹೆಬ್ಬೆರಳಿನ ಮೂಲಕ್ಕೆ ಹಚ್ಚಿ ಬರುವ ಮುದ್ರೆಯನ್ನು ಮಾಡಬೇಕು.

‘ಕಣ್ಣುಗಳ ಮೇಲೆ ಮುದ್ರೆಯನ್ನು ಮಾಡಿ ಕೈಯನ್ನು ತಿರುಗಿಸುವಾಗ ಕಣ್ಣುಗಳು ಜಡ ಅನಿಸುತ್ತಿದ್ದರೆ, ‘ಕಣ್ಣುಗಳ ಮೇಲೆ ಇನ್ನೂ ಆವರಣವಿದೆ’, ಎಂದು ತಿಳಿಯಬೇಕು ಮತ್ತು ಮತ್ತೊಮ್ಮೆ ಆವರಣ ತೆಗೆಯಬೇಕು. ‘ಕಣ್ಣುಗಳು ಹಗುರವೆನಿಸಿದರೆ, ಆವರಣ ಕಡಿಮೆಯಾಗಿದೆ’, ಎಂದು ತಿಳಿಯಬೇಕು. ಕಣ್ಣುಗಳ ಮೇಲಿನ ಆವರಣವನ್ನು ತೆಗೆದು ಉಪಾಯವನ್ನು ಮಾಡಿದರೆ ಕಡಿಮೆ ಸಮಯದಲ್ಲಿ ಆವರಣ ಹೋಗುತ್ತದೆ. ಕಣ್ಣುಗಳ ಮೇಲಿನ ಆವರಣವು ಹೋದಾಗ ಶರೀರ ಪೂರ್ಣ ಹಗುರವಾಗುತ್ತದೆ ಮತ್ತು ತಂಪು ಅನಿಸುತ್ತದೆ.

೩. ಸದ್ಗುರು ಡಾ. ಮುಕುಲ ಗಾಡಗೀಳ ಇವರು ಹೇಳಿದ ಆಧ್ಯಾತ್ಮಿಕ ಸ್ತರದ ಉಪಾಯ ಮಾಡಿದುದರಿಂದ ಆದ ಲಾಭ

ಶ್ರೀ. ಶಂಕರ ನರುಟೆ

ಅ. ಆರಂಭದಲ್ಲಿ ಆವರಣವಿದ್ದುದರಿಂದ ನನಗೆ ಆನಂದದ ಅರಿವಾಗುತ್ತಿರಲಿಲ್ಲ; ಆದರೆ ಸದ್ಗುರು ಗಾಡಗೀಳ ಕಾಕಾ ಇವರು ಮೇಲೆ ಹೇಳಿದಂತೆ ನಾನು ಉಪಾಯ ಮಾಡಿದಾಗ ಕಡಿಮೆ ಸಮಯದಲ್ಲೇ ಆವರಣವು ದೂರವಾಗಿ ಶರೀರ ಹಗುರವಾಯಿತು.

ಆ. ನನಗೆ ಆನಂದವೆನಿಸತೊಡಗಿತು ಮತ್ತು ನನ್ನ ಮನಸ್ಸಿಗೂ ಉತ್ಸಾಹವೆನಿಸಿತು.

ಇ. ನನ್ನ ಮನಸ್ಸಿನ ಉತ್ಸಾಹ ಹೆಚ್ಚಾದುದರಿಂದ ದಿನವಿಡಿ ಸೇವೆಯೂ ಚೆನ್ನಾಗಿ ಆಯಿತು.

ಈ. ಆವರಣವನ್ನು ತೆಗೆದುದರಿಂದ ಸಾಧನೆಯ ಪ್ರಯತ್ನಕ್ಕೆ ಮಾರ್ಗ ಸಿಕ್ಕಿತು, ನಂತರ ನನ್ನ ಸೇವೆ ಸಹ ಚೆನ್ನಾಗಿ ಆಯಿತು. ಸಾಧಕರಿಗೆ ಸ್ವತಃದ ಮೇಲಿನ ಕೆಟ್ಟ ಶಕ್ತಿಗಳ ಆವರಣವನ್ನು ತೆಗೆಯುವುದನ್ನು ಕಲಿಸಿದ ಪರಾತ್ಪರ ಗುರು ಡಾ. ಆಠವಲೆ ಯವರು ಮತ್ತು ಸದ್ಗುರು ಗಾಡಗೀಳ ಕಾಕಾ ಇವರ ಚರಣಗಳಲ್ಲಿ ಕೋಟಿಶಃ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.’

– ಶ್ರೀ. ಶಂಕರ ನರುಟೆ (ಆಧ್ಯಾತ್ಮಿಕ ಮಟ್ಟ ಶೇ. ೬೬, ವಯಸ್ಸು ೩೭, ಸನಾತನ ಆಶ್ರಮ, ದೇವದ, ಪನವೇಲ. (೨೪.೪.೨೦೨೨)