೧. ಭಾರತದಲ್ಲಿ ಅಸುರಕ್ಷಿತ ಬಹುಸಂಖ್ಯಾತ ಹಿಂದೂಗಳು !
ಹರಿಯಾಣಾದ ಮುಸಲ್ಮಾನ ಬಹುಸಂಖ್ಯಾತ ನೂಹ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳು ನಡೆಸಿದ ಭಗವಾ ಯಾತ್ರೆಯ ಮೇಲೆ ಮುಸಲ್ಮಾನರು ಮನೆಯ ಛಾವಣಿಗಳಿಂದ ಭಾರೀ ಸಂಖ್ಯೆಯಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಮಯದಲ್ಲಿ ಮುಸಲ್ಮಾನರು ಗಾಳಿಯಲ್ಲಿ ಗುಂಡು ಹಾರಿಸಿದ ಬಗ್ಗೆಯೂ ವಾರ್ತೆ ಇದೆ.
೨. ಭಾರತದಲ್ಲಿಯೇ ಅಸುರಕ್ಷಿತವಾಗಿರುವುದು ಹಿಂದೂಗಳಿಗೆ ಲಜ್ಜಾಸ್ಪದ !
ನೂಹ(ಹರಿಯಾಣಾ) ದಲ್ಲಿ ಜುಲೈ ೩೧ ರಂದು ವಿಶ್ವ ಹಿಂದೂ ಪರಿಷತ್ತು ಹೊರಡಿಸಿದ ವ್ರಜ ಮಂಡಲ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರು ನಡೆಸಿದ ದಾಳಿಯಲ್ಲಿ ೪ ಹಿಂದೂಗಳು ಹತರಾದರು. ಇದರಲ್ಲಿ ಗೃಹರಕ್ಷಣಾ ಪಡೆಯ ಸೈನಿಕ ನೀರಜ ಮತ್ತು ಗುರುಸೇವಫ್ ಇವÀರು ಒಳಗೊಂಡಿದ್ದಾರೆ.
೩. ಜನಪ್ರತಿನಿಧಿಗಳು ಹೇಗೆ ಶ್ರೀಮಂತರಾಗುತ್ತಾರೆ ?, ಎಂಬುದು ಜನತೆಗೆ ತಿಳಿದಿದೆ !
‘ಎ.ಡಿ.ಎ.ಆರ್.’ ಈ ಸ್ವಯಂಸೇವಿ ಸಂಸ್ಥೆಯ ವರದಿಯ ಪ್ರಕಾರ, ದೇಶದÀ ೪ ಸಾವಿರ ಶಾಸಕರ ಬಳಿ ಒಟ್ಟು ೫೪ ಸಾವಿರ ೫೪೫ ಕೋಟಿ ರೂಪಾಯಿಗಳಷ್ಟು ಆಸ್ತಿ ಇದೆ. ಒಬ್ಬ ಶಾಸಕನ ಸರಾಸರಿ ಆಸ್ತಿ ೧೩ ಕೋಟಿ ೬೩ ಲಕ್ಷ ರೂಪಾಯಿಗಳಷ್ಟಿದೆ.
೪. ಇದರಿಂದ ಭಾರತದಲ್ಲಿ ಶಾಂತಿ ನೆಲೆಸುವುದೇ ?
ಚಲನಚಿತ್ರ ವಿಮರ್ಶಕ ರಶಿದ ಖಾನ್ ಅಲಿಯಾಸ್ ಕೆ.ಆರ್.ಕೆ. ಇವರು ಭಾರತದ ಮುಸಲ್ಮಾನರು ಪುನಃ ಮತಾಂತರಗೊಂಡು ಹಿಂದೂ ಧರ್ಮವನ್ನು ಸ್ವೀಕರಿಸಬೇಕೆಂದು ಸಲಹೆ ನೀಡಿದ್ದಾರೆ.
೫. ಇಸ್ಲಾಮೀ ದೇಶಗಳಲ್ಲಿನ ಹಿಂದೂಗಳ ಸ್ಥಿತಿ !
ಬಾಂಗ್ಲಾದೇಶದ ಶಿಕಾರಪುರ ಪ್ರದೇಶದಲ್ಲಿನ ದುರ್ಗಾದೇವಿಯ ದೇವಸ್ಥಾನದ ಮೇಲೆ ಕೆಲವು ಜಿಹಾದಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಅವರು ದುರ್ಗಾದೇವಿಯ ಮೂರ್ತಿ, ಹಾಗೆಯೇ ಇತರ ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾರೆ.
೬. ಧರ್ಮಾಭಿಮಾನಶೂನ್ಯ ಹಿಂದೂ ವಿದ್ಯಾರ್ಥಿಗಳು ಇದನ್ನು ಗಮನಿಸುವರೇ ?
ತ್ರಿಪುರಾ ರಾಜ್ಯದ ‘ಕೊರೊಯಿಮುರಾ ಉಚ್ಚ ಮಾಧ್ಯಮಿಕ ವಿದ್ಯಾಲಯದ’ ಮುಖ್ಯೋಪಾಧ್ಯಾಯರು ವಿದ್ಯಾರ್ಥಿನಿಯರಿಗೆ ಹಿಜಾಬ್ ಬದಲು ಶಾಲಾ ಸಮವಸ್ತ್ರದಲ್ಲಿ ಬರಲು ಹೇಳಿದ್ದರಿಂದ ಉದ್ರೇಕಗೊಂಡ ಮುಸಲ್ಮಾನ ವಿದ್ಯಾರ್ಥಿಗಳು ಮುಖ್ಯೋಪಾಧ್ಯಾಯರ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ.
೭. ಅಲ್ಪಸಂಖ್ಯಾತರು ಬಹುಸಂಖ್ಯಾತರಾಗಿರುವ ಪರಿಣಾಮ !
ನೂಹ(ಹರಿಯಾಣಾ)ದಲ್ಲಿ ಮತಾಂಧ ಮುಸಲ್ಮಾನರು ಜುಲೈ ೩೧ ರಂದು ಹಿಂದೂಗಳ ಶೋಭಾಯಾತ್ರೆಯ ಮೇಲೆ ದಾಳಿ ಮಾಡುವುದರೊಂದಿಗೆ ನಗರದಲ್ಲಿನ ಸೈಬರ್ ಪೊಲೀಸ್ ಠಾಣೆಯನ್ನೂ ಸುಟ್ಟಿದ್ದರು. ಹಾಗೆಯೇ ಠಾಣೆಯಲ್ಲಿ ಇಟ್ಟಿರುವ ಸೈಬರ್ ಅಪರಾಧಗಳ ಅನೇಕ ಪುರಾವೆಗಳನ್ನು ನಾಶಗೊಳಿಸುವ ಪ್ರಯತ್ನವನ್ನೂ ಮಾಡಿದ್ದರು.