ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥುರ್‌ ಇವರು ನೀಡಿದ ವ್ಯಷ್ಟಿ ಸಾಧನೆಯ ಅಮೂಲ್ಯ ದೃಷ್ಟಿಕೋನ !

‘ನನಗೆ ರಾಮನಾಥಿ (ಗೋವಾ)ಯಲ್ಲಿನ ಸನಾತನ ಆಶ್ರಮದಲ್ಲಿ ಸ್ವಭಾವದೋಷ ಹಾಗೂ ಅಹಂ ನಿರ್ಮೂಲನ ಪ್ರಕ್ರಿಯೆಯನ್ನು ಕಲಿಯುವ ಅವಕಾಶ ಸಿಕ್ಕಿತು. ಆಗ ನನಗೆ ಶೇ. ೬೭ ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥೂರ್‌ ಇವರು ವ್ಯಷ್ಟಿ ಸಾಧನೆಯ ವರದಿಯಲ್ಲಿ ನೀಡಿದ ದೃಷ್ಟಿಕೋನವನ್ನು ಮುಂದಿಡುತ್ತಿದ್ದೇನೆ.

ಶ್ರೀಮತಿ ಅಶ್ವಿನಿ ಪ್ರಭು

೧. ‘ಅಂತರ್ಮುಖತೆ, ಎಂದರೆ ಸತತ ಕಲಿಯುತ್ತಾ ಇರುವುದು !

೨. ಸಮಷ್ಟಿಯಲ್ಲಿರುವುದರ ಲಾಭ

ಅ. ಸಮಷ್ಟಿ ಎಂಬುದು ಕನ್ನಡಿಯಾಗಿದ್ದು ನಮ್ಮ ಮನಸ್ಸಿನ ಸ್ಥಿತಿಯು ಸಮಷ್ಟಿಯ ಮೂಲಕ ಸ್ಪಷ್ಟವಾಗಿ ಅರಿವಾಗುತ್ತದೆ.
ಆ. ಸಮಷ್ಟಿಯೆಂದರೆ ನಮ್ಮ ಅಂತರ್ಮನಸ್ಸು !
ಇ. ಸಮಷ್ಟಿಯು ನಮ್ಮಲ್ಲಿನ ಸ್ವಭಾವದೋಷ ಹಾಗೂ ಅಹಂನ ಮಜಲುಗಳನ್ನು ತೋರಿಸಿದರೆ ನಾವು ವಿಚಲಿತರಾಗಬಾರದು. ನಾವು
ಪರಿಸ್ಥಿತಿಯನ್ನು ಸ್ವೀಕರಿಸಬೇಕು ಹಾಗೂ ಅದರಿಂದ ಕಲಿಯಬೇಕು.
ಈ. ‘ನಮ್ಮ ಸಾಧನೆ ಯೋಗ್ಯ ರೀತಿಯಲ್ಲಿ ನಡೆಯಬೇಕೆಂದು ಈಶ್ವರನು ಇದೆಲ್ಲವನ್ನೂ ತೋರಿಸಿದ್ದಾನೆ. ಇದನ್ನು ಗಾಂಭೀರ್ಯ ದಿಂದ ಸ್ವೀಕರಿಸಿ ಕೃತಜ್ಞತಾಭಾವದಲ್ಲಿರುವುದು’, ಮೊದಲ ಹಂತದ ಅಂತರ್ಮುಖತೆ !
ಉ. ನಾವು ಪ್ರಾಮಾಣಿಕವಾಗಿ ಅಂತರ್ಮನಸ್ಸಿನಿಂದ ಚಿಂತನೆ ಮಾಡಿದರೆ ನಮ್ಮಿಂದ ಚೈತನ್ಯವು ಗ್ರಹಿಸಲ್ಪಟ್ಟು ಮನಃಪೂರ್ವಕವಾಗಿ ನಮ್ಮಿಂದ ವ್ಯಷ್ಟಿ ಸಾಧನೆಯ ಪ್ರಯತ್ನಗಳಾಗುತ್ತವೆ.

೩. ವ್ಯಷ್ಟಿ ಸಾಧನೆಯು ಮನಸ್ಸಿನ ಪ್ರಕ್ರಿಯೆಯಾಗಿದೆ !

ವ್ಯಷ್ಟಿ ಸಾಧನೆಯು ಮನಸ್ಸಿನ ಪ್ರಕ್ರಿಯೆಯಾಗಿದೆ. ಅದಕ್ಕೆ ಶಾರೀರಿಕ ಕ್ಷಮತೆಯೊಂದಿಗೆ ಯಾವುದೇ ಸಂಬಂಧವಿಲ್ಲ. ‘ಶಾರೀರಿಕ ಅಡಚಣೆಯಿಂದ ವ್ಯಷ್ಟಿ ಸಾಧನೆ ಆಗಿಲ್ಲ’, ಎಂದು ಹೇಳುವುದೆಂದರೆ ಸಹಾನುಭೂತಿಯನ್ನು ಅಪೇಕ್ಷಿಸುವುದು, ಮತ್ತು ರಿಯಾಯಿತಿ ತೆಗೆದುಕೊಳ್ಳುವುದು ಎಂದಾಗಿದೆ. ಯಾವುದೇ ಅಡಚಣೆ ಇದ್ದರೂ ಅದನ್ನು ವ್ಯಷ್ಟಿ ಸಾಧನೆಯ ವರದಿಯಲ್ಲಿ ಹೇಳಿ ಅಲ್ಲಿ ಹೇಳಿದಂತಹ ಪ್ರಯತ್ನಗಳನ್ನು ಮಾಡಬೇಕು.’

– ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨). ಮಂಗಳೂರು. (೧೫.೪.೨೦೨೨)