ಪ್ರಾಚೀನ ಭಾರತೀಯ ಋಷಿಮುನಿಗಳು ಮಾನವನ ಸರ್ವಾಂಗೀಣ ಉನ್ನತಿಗಾಗಿ ಅನೇಕ ಶಾಸ್ತ್ರಗಳನ್ನು ರಚಿಸಿದರು, ಉದಾ. ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಆಯುರ್ವೇದ, ಸಂಗೀತ, ಮಂತ್ರಶಾಸ್ತ್ರ ಇತ್ಯಾದಿ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಜ್ಯೋತಿಷ್ಯಶಾಸ್ತ್ರದಲ್ಲಿ ಸಂಶೋಧನೆಯ ಕಾರ್ಯವು ನಡೆಯುತ್ತಿದೆ. ಅದರ ಅಂತರ್ಗತ ಜ್ಯೋತಿಷ್ಯಶಾಸ್ತ್ರವನ್ನು ಇತರ ಭಾರತೀಯ ಶಾಸ್ತ್ರಗಳೊಂದಿಗೆ (ವಾಸ್ತುಶಾಸ್ತ್ರ, ಆಯುರ್ವೇದ, ಸಂಗೀತ, ಮಂತ್ರಶಾಸ್ತ್ರ ಇತ್ಯಾದಿಗಳೊಂದಿಗೆ) ಸಂಯೋಜಿಸುವ ಸಂಶೋಧನಾತ್ಮಕ ಅಧ್ಯಯನವನ್ನು ಮಾಡಬೇಕಾಗಿದೆ, ಉದಾ ಯಾರಾದರೊಬ್ಬ ವೈದ್ಯರು, ‘ಇಂತಿಂತಹ ಕಾಯಿಲೆಯು ಇಂತಿಷ್ಟು ಕಾಲಾವಧಿಯ ನಂತರ ಹೆಚ್ಚಾಗುತ್ತದೆ ಅಥವಾ ಕಡಿಮೆಯಾಗುತ್ತದೆ, ಎಂದು ಹೇಳುತ್ತಾರೆ, ಹಾಗಾದರೆ ವ್ಯಕ್ತಿಯ ಕುಂಡಲಿಯಿಂದ ಅದು ಗಮನಕ್ಕೆ ಬರುತ್ತದೆಯೇ ? ‘ಯಾವ ವಯಸ್ಸಿನ ಬಳಿಕ ಯಾರಾದರೊಬ್ಬ ವ್ಯಕ್ತಿಯ ಆಧ್ಯಾತ್ಮಿಕ ಪ್ರಗತಿ ಆಗಲಿದೆ ?’, ಎಂಬುದು ಅವನ ಕುಂಡಲಿಯನ್ನು ನೋಡಿ ತಿಳಿಯಬಹುದೇ ? ಇತ್ಯಾದಿ. ಈ ಬಗೆಗಿನ ಸಂಶೋಧನೆಯ ವಿಷಯವನ್ನು ಮುಂದೆ ಕೊಡಲಾಗಿದೆ.
೧. ಜ್ಯೋತಿಷ್ಯಶಾಸ್ತ್ರ ಮತ್ತು ಆಯುರ್ವೇದ
ಅ. ಆಯುರ್ವೇದದಲ್ಲಿನ ವಾತ, ಪಿತ್ತ, ಮತ್ತು ಕಫ ಈ ತ್ರಿದೋಷಗಳಿಗೆ ಜ್ಯೋತಿಷ್ಯಶಾಸ್ತ್ರದಲ್ಲಿನ ಗ್ರಹಗಳು, ರಾಶಿಗಳು ಮತ್ತು ನಕ್ಷತ್ರಗಳೊಂದಿಗಿರುವ ಸಂಬಂಧವನ್ನು ಬಿಚ್ಚಿಡುವುದು
ಆ. ಜನ್ಮಕುಂಡಲಿಯಿಂದ ವ್ಯಕ್ತಿಯ ಪ್ರಕೃತಿ, ಪ್ರತಿರೋಧಕಶಕ್ತಿ, ಅವರಿಗಾಗುವ ಸಂಭಾವ್ಯ ಕಾಯಿಲೆ ಮತ್ತು ವ್ಯಾಧಿ ಮತ್ತು ಆಯುಷ್ಯದ ಅಧ್ಯಯನ ಮಾಡುವುದು
ಇ. ಜನ್ಮಕುಂಡಲಿಯಲ್ಲಿರುವ ಯಾವ ಗ್ರಹಯೋಗಗಳು ‘ವಿವಿಧ ಕಾಯಿಲೆಗಳು ಮತ್ತು ವ್ಯಾಧಿಗಳಿಗೆ ಕಾರಣವಾಗಿವೆ ?’, ಎಂಬುದರ ಅಧ್ಯಯನ ಮಾಡುವುದು
ಈ. ‘ರೋಗ ಮತ್ತು ಕಾಯಿಲೆ ಯಾವ ಕಾಲಾವಧಿಯಲ್ಲಿ ಉಲ್ಬಣಗೊಳ್ಳುವುದು ಅಥವಾ ಕಡಿಮೆಯಾಗುವುದು ?’, ಎಂದು ಗ್ರಹಸ್ಥಿತಿಯಿಂದ ತಿಳಿದುಕೊಳ್ಳುವುದು
೨. ಜ್ಯೋತಿಷ್ಯಶಾಸ್ತ್ರ ಮತ್ತು ವಾಸ್ತುಶಾಸ್ತ್ರ
ಅ. ವಾಸ್ತುಶಾಸ್ತ್ರದಲ್ಲಿನ ಅಷ್ಟದಿಕ್ಕುಗಳು ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿನ ಗ್ರಹಗಳು ಮತ್ತು ರಾಶಿಗಳ ನಡುವಿನ ಸಂಬಂಧ ವನ್ನು ಬಿಚ್ಚಿಡುವುದು
ಆ. ‘ಜನ್ಮಕುಂಡಲಿಯಲ್ಲಿನ ಗ್ರಹಯೋಗಗಳಿಗನುಸಾರ ವ್ಯಕ್ತಿಗೆ ಒಳ್ಳೆಯ ಅಥವಾ ದೋಷಯುಕ್ತ ವಾಸ್ತು ಸಿಗುವುದೇ ?’, ಎಂಬುದರ ಅಧ್ಯಯನ ಮಾಡುವುದು
೩. ಜ್ಯೋತಿಷ್ಯಶಾಸ್ತ್ರ ಮತ್ತು ಸಂಗೀತ
ಅ. ಸಂಗೀತದಲ್ಲಿನ ಸ್ವರ, ರಾಗಗಳಿಗೆ ಜ್ಯೋತಿಷ್ಯಶಾಸ್ತ್ರದಲ್ಲಿನ ಗ್ರಹಗಳು, ರಾಶಿ ಇತ್ಯಾದಿಗಳೊಂದಿಗೆ ಇರುವ ಸಂಬಂಧವನ್ನು ಬಿಚ್ಚಿಡುವುದು
ಆ. ‘ಗ್ರಹದೋಷಗಳ ನಿವಾರಣೆಗಾಗಿ ಸಂಗೀತ-ಉಪಚಾರ ಉಪಯುಕ್ತವಾಗಬಹುದೇ ?’, ಎಂಬುದರ ಅಧ್ಯಯನ ಮಾಡುವುದು
ಇ. ‘ಗಾಯನ, ವಾದನ ಮತ್ತು ನೃತ್ಯ ಈ ಕಲೆಗಳು ವ್ಯಕ್ತಿಯಲ್ಲಿ ಕರಗತವಾಗಬೇಕಾದರೆ ಜನ್ಮಕುಂಡಲಿಯಲ್ಲಿ ಆವಶ್ಯಕವಾಗಿರುವ ಗ್ರಹಯೋಗಗಳು ಯಾವುವು ?’, ಇದರ ಅಧ್ಯಯನವನ್ನು ಮಾಡುವುದು
೪. ಜ್ಯೋತಿಷ್ಯಶಾಸ್ತ್ರ ಮತ್ತು ಮಂತ್ರಶಾಸ್ತ್ರ
ಅ. ವಿವಿಧ ದೇವತೆಗಳು, ಅಕ್ಷರಗಳು ಮತ್ತು ಸಂಖ್ಯೆಗಳಿಗೆ, ಗ್ರಹಗಳು, ರಾಶಿ ಮತ್ತು ಇವುಗಳೊಂದಿಗಿರುವ ಸಂಬಂಧವನ್ನು ಬಿಚ್ಚಿಡುವುದು
ಆ. ‘ಗ್ರಹದೋಷಗಳ ನಿವಾರಣೆಗಾಗಿ ಯಾವ ಮಂತ್ರಜಪ, ಅಂಕೆಜಪ, ದೇವತೆಗಳ ನಾಮಜಪ ಇತ್ಯಾದಿ ಉಪಯುಕ್ತ ವಾಗುತ್ತವೆ ?’, ಇದರ ಅಧ್ಯಯನ ಮಾಡುವುದು
ಇ. ‘ಜನ್ಮಕುಂಡಲಿಗನುಸಾರ ವ್ಯಕ್ತಿಯು ಯಾವ ದೇವತೆಯ ಉಪಾಸನೆಯನ್ನು ಮಾಡಬೇಕು ?’, ಇದರ ಅಧ್ಯಯನ ಮಾಡುವುದು
೫. ಜ್ಯೋತಿಷ್ಯಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
ಅ. ಜನ್ಮಕುಂಡಲಿಗನುಸಾರ ವ್ಯಕ್ತಿಯ ಸ್ವಭಾವ, ಅವನ ಆಧ್ಯಾತ್ಮಿಕ ವೈಶಿಷ್ಟ್ಯಗಳು, ಸಾಧನಾಮಾರ್ಗ, ಪೂರ್ವಜನ್ಮದ ಸಾಧನೆ ಇತ್ಯಾದಿಗಳ ಬಗ್ಗೆ ಅಧ್ಯಯನ ಮಾಡುವುದು
ಆ. ಜನ್ಮಕುಂಡಲಿಗನುಸಾರ ವ್ಯಕ್ತಿಗೆ ಸಾಧನೆಗಾಗಿ ಲಭಿಸಿದ ಅನುಕೂಲ ಅಥವಾ ಪ್ರತಿಕೂಲ ಪರಿಸ್ಥಿತಿಗಳು, ಅವರಿಗಿರುವ ಆಧ್ಯಾತ್ಮಿಕ ತೊಂದರೆಗಳು, ಇಷ್ಟ-ಅನಿಷ್ಟ ಪ್ರಾರಬ್ಧಗಳು, ಚಿತ್ತದಲ್ಲಿರುವ ಸಂಸ್ಕಾರಗಳು ಇತ್ಯಾದಿಗಳ ಬಗ್ಗೆ ಅಧ್ಯಯನವನ್ನು ಮಾಡುವುದು
ಇ. ಜನ್ಮಕುಂಡಲಿಗನುಸಾರ ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿ ಯಾಗಲು ಪೂರಕ ಸಮಯವನ್ನು ತಿಳಿದುಕೊಳ್ಳುವುದು
ಈ. ‘ಮೃತ್ಯುಕುಂಡಲಿ (ವ್ಯಕ್ತಿಯ ಮೃತ್ಯುವಿನ ಸಮಯದ ಕುಂಡಲಿ)ಯನ್ನು ರಚಿಸಿ ಜೀವದ ಮೃತ್ಯುವಿನ ನಂತರದ ಸ್ಥಿತಿಯನ್ನು ತಿಳಿದುಕೊಳ್ಳಬಹುದೇ ?’, ಎಂಬುದರ ಅಧ್ಯಯನ ಮಾಡುವುದು ಮೇಲಿನ ಸಂಶೋಧನೆಯ ಕಾರ್ಯದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರಿಗೆ ಆ ಕುರಿತಾದ ಕುಂಡಲಿಗಳನ್ನು ಕಳುಹಿಸಲಾಗುವುದು.’
– ಶ್ರೀ. ರಾಜ ಕರ್ವೆ (ಜ್ಯೋತಿಷ್ಯ ವಿಶಾರದ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೧.೭.೨೦೨೩)
ವಿ-ಅಂಚೆ : [email protected]