ರಾಜಸ್ಥಾನದಲ್ಲಿ ಸಂತ ಮೋಹನ್ ದಾಸರಿಗೆ ಚಾಕು ಇರಿದು ಹತ್ಯೆ !

ನಾಗೌರ್ (ರಾಜಸ್ಥಾನ) – ಇಲ್ಲಿನ ರಸಾಳ್ ಗ್ರಾಮದಲ್ಲಿ 70 ವರ್ಷದ ಸಂತ ಮೋಹನ್ ದಾಸ್ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಆವರ ದೇಹ ಆಶ್ರಮದ ನೆಲದ ಮೇಲೆ ಬಿದ್ದಿತ್ತು. ಅವರ ಕೈಕಾಲುಗಳನ್ನು ಹಗ್ಗಗಳಿಂದ ಕಟ್ಟಲಾಗಿತ್ತು. ಅವರ ಬಾಯಿ ಮತ್ತು ಕಣ್ಣುಗಳನ್ನು ಪಟ್ಟಿಯಿಂದ ಕಟ್ಟಲಾಗಿತ್ತು. ಹರಿರಾಮ ಬಾಬಾರವರ ಆಶ್ರಮದಲ್ಲಿರುವ ಭೈರೋಬಾಬಾ ದೇವಸ್ಥಾನದಲ್ಲಿ ಸಂತ ಮೋಹನ್ ದಾಸ್ ಇವರು 14 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಈ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ ಮೋಹನ್ ದಾಸ್ ರ ಸಂಬಂಧಿಕರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. `ಪೊಲೀಸರು ಆರೋಪಿಯನ್ನು ಬಂಧಿಸುವವರೆಗೂ ಶವವನ್ನು ವಶಕ್ಕೆ ಪಡೆಯುವುದಿಲ್ಲ’ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಹಿಂದೂ ಸಾಧು-ಸಂತರ ಹತ್ಯೆಯಾಗುವುದು ಲಜ್ಜಾಸ್ಪದ !