ಪಾಕಿಸ್ತಾನವು ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಿದೆ !

  • ಕಚ್ಚಾ ತೈಲವನ್ನು ಸಂಸ್ಕರಿಸುವ ತಂತ್ರಜ್ಞಾನ ಅಭಿವೃದ್ಧಿಯಾಗದ ಕಾರಣ ಕೈಗೊಂಡ ನಿರ್ಧಾರ

  • ಭಾರತದೊಂದಿಗೆ ಪೈಪೋಟಿ ಮಾಡುವ ಪಾಕಿಸ್ತಾನದ ಪ್ರಯತ್ನಿಸುವ ಮೊದಲೇ ವಿಫಲ !

ಇಸ್ಲಾಮಾಬಾದ್ (ಪಾಕಿಸ್ತಾನ) – ದಿವಾಳಿಖೋರ ಪಾಕಿಸ್ತಾನಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಇನ್ನು ಮುಂದೆ ರಷ್ಯಾದಿಂದ ಪಡೆಯುತ್ತಿದ್ದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ. ಕಚ್ಚಾ ತೈಲವನ್ನು ಶುದ್ಧೀಕರಿಸುವಲ್ಲಿ ಪಾಕಿಸ್ತಾನದ ಕಾರ್ಖಾನೆಗಳಿಗೆ ಕಡಿಮೆ ಪ್ರಮಾಣದಲ್ಲಿ ಯಶಸ್ಸು ಸಿಕ್ಕಿದ್ದರಿಂದ ಅವರು ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು. ಇದರಿಂದ ಅವರು ಸಾಕಷ್ಟು ಆರ್ಥಿಕ ನಷ್ಟವನ್ನು ಅನುಭವಿಸಬೇಕಾಯಿತು. ರಷ್ಯಾ-ಉಕ್ರೇನ್ ಯುದ್ಧದ ನಂತರ, ಅನೇಕ ದೇಶಗಳು ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸಿದವು. ಆದರೂ ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸಿತು. ಇದು ಭಾರತದ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿತು. ಆದ್ದರಿಂದ ಪಾಶ್ಚಿಮಾತ್ಯ ದೇಶಗಳು ಕೂಡ ಭಾರತವನ್ನು ಟೀಕಿಸಿದವು, ಆದರೂ ಭಾರತವು ತನ್ನ ನಿಲುವಿನಲ್ಲಿ ದೃಢವಾಗಿತ್ತು. ಪಾಕಿಸ್ತಾನವೂ ಈ ನಿಲುವನ್ನು ತಳೆದು ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿತು; ಆದರೆ ‘ಭಾರತದೊಂದಿಗೆ ಪೈಪೋಟಿ ಮಾಡುವ ಮೊದಲೇ ವಿಫಲವಾಯಿತು’ ಎನ್ನಲಾಗುತ್ತಿದೆ.

1. ರಷ್ಯಾಗೆ ಅಸಮಾಧಾನವಾಗಬಾರದೆಂದು ಪಾಕಿಸ್ತಾನವು ಈ ಹಿಂದೆ ಕಚ್ಚಾ ತೈಲ ಆಮದಿನ ಮೇಲೆ ನಿಷೇಧ ಹೇರಿದೆ. ಕಾಲಾನಂತರದಲ್ಲಿ, ಅದನ್ನು ಶಾಶ್ವತವಾಗಿ ನಿಷೇಧಿಸಲಾಗುವುದು.

2. 3 ತಿಂಗಳ ಹಿಂದೆಯಷ್ಟೇ ಪಾಕಿಸ್ತಾನ ಮತ್ತು ರಷ್ಯಾ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದು ಪಾಕಿಸ್ತಾನದ ರಾಜನೀತಿಕ ವಿಜಯ ಎಂಬಂತೆ ಆಗಿನ ಪ್ರಧಾನಿ ಶಹಬಾಜ್ ಷರೀಫ್ ಅವರು ವ್ಯಾಪಕವಾಗಿ ಪ್ರಚಾರ ಮಾಡಿದ್ದರು.

3. ಆದರೆ ಇದೀಗ ಪಾಕಿಸ್ತಾನ ಕೈಗೊಂಡಿರುವ ಈ ನಿರ್ಧಾರದಿಂದ ಎಲ್ಲೆಡೆ ನಗೆಪಾಟಲಿಗೀಡಾಗಿದೆ.

4. ಪಾಕಿಸ್ತಾನದ ತೈಲ ಶುದ್ಧೀಕರಣ ಮಾಡುವ ಕಾರ್ಖಾನೆಗಳು 60 ವರ್ಷಗಳಷ್ಟು ಹಳೆಯ ತಂತ್ರಜ್ಞಾನವನ್ನು ಬಳಸುತ್ತಿರುವುದರಿಂದ, ರಷ್ಯಾದ ತೈಲವನ್ನು ಶುದ್ಧೀಕರಿಸುವುದು ಅಸಾಧ್ಯವಾಗಿದೆ. ಅರಬ್ ದೇಶಗಳಿಂದ ಆಮದು ಮಾಡಿಕೊಳ್ಳುವ ತೈಲವನ್ನು ಶ್ರಮದಾಯಕವಾಗಿ ಸಂಸ್ಕರಿಸಲಾಗುತ್ತದೆ.

5. ‘ರಷ್ಯಾದ ತೈಲವನ್ನು ಶುದ್ಧೀಕರಿಸಲು ಪ್ರಯತ್ನಿಸಿದರೆ ಅರಬ್ ತೈಲದ ಶುದ್ಧೀಕರಣವೂ ನಿಲ್ಲುತ್ತದೆ’, ಎಂದು ತಯಾರಕರಿಂದ ಭಯ ವ್ಯಕ್ತವಾಗುತ್ತಿತ್ತು.

ಸಂಪಾದಕೀಯ ನಿಲುವು

ಭಾರತದೊಂದಿಗೆ ಸ್ಪರ್ಧಿಸುವ ಭರಾಟೆಯಲ್ಲಿ ಪಾಕಿಸ್ತಾನ ತನ್ನ ಅರ್ಹತೆಯನ್ನು ಮರೆಯಿತು. ಆದ್ದರಿಂದಲೇ ತಲೆತಗ್ಗಿಸುವಂತಾಯಿತು !

ಪಾಕಿಸ್ತಾನ ದ್ವೇಷದ ಆಧಾರದ ಮೇಲೆ ಸ್ಥಾಪನೆಯಾಗಿದೆ. ಈ ದ್ವೇಷದಿಂದಲೇ ದೇಶದ ಅಸ್ತಿತ್ವವನ್ನೇ ಕೊನೆಗಾಣಿಸಲಿದೆ. ಪಾಕಿಸ್ತಾನದ ರಾಜಕಾರಣಿಗಳು ಇದನ್ನು ಅರಿತುಕೊಳ್ಳುವ ದಿನವೇ ಸುದಿನ !