‘ಪ್ರಧಾನಮಂತ್ರಿಗಳು ಆಗಸ್ಟ್ 15 ರ ಭಾಷಣದಲ್ಲಿ ನೂಹ್ ನಲ್ಲಿ ನಡೆದ ಕಾರ್ಯಾಚರಣೆಯನ್ನು ಖಂಡಿಸಬೇಕಂತೆ !’ – ಎಂ.ಐ.ಎಂ. ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ

  • ಎಂ.ಐ.ಎಂ. ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ ಪುನಃ ಕಿಡಿಕಾರಿದರು !

  • ನೂಹ್‌ನಲ್ಲಿನ ಅಕ್ರಮ ಅಂಗಡಿಗಳು ಮತ್ತು ಮನೆಗಳ ಮೇಲೆ ನಡೆಸಲಾದ ಬುಲ್ಡೋಜರ್‌ಗಳ ಕಾರ್ಯಾಚರಣೆಯ ಕುರಿತು ಹೇಳಿಕೆ !


ನವ ದೆಹಲಿ – ನೂಹ್‌ನ ಮುಸಲ್ಮಾನರು ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದರು. 1947 ರಲ್ಲಿ ಮ. ಗಾಂಧಿಯವರು ನೂಹ್‌ನ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ತೆರಳದಂತೆ ತಡೆದಿದ್ದರು. ನಾವು ನೂಹ್‌ನಲ್ಲಿನ ಹಿಂಸಾಚಾರವನ್ನು ನಾವು ಖಂಡಿಸುತ್ತೇವೆ; ಆದರೆ ಒಂದು ಸಮುದಾಯವನ್ನು ಗುರಿ ಮಾಡಲಾಗುತ್ತಿದೆ. ಪ್ರಧಾನಿಯವರು ತಮ್ಮ ಆಗಸ್ಟ್ 15 ರ ಭಾಷಣದಲ್ಲಿ ನೂಹ್‌ನಲ್ಲಿ ಸರಕಾರದಿಂದ ಮನೆ ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಿರುವುದನ್ನು ಖಂಡಿಸಬೇಕು. ಈ ಉದ್ದೇಶಿತ ಹಿಂಸೆಯನ್ನು ನಿಷೇಧಿಸಬೇಕು. ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ್ದೀರಿ. ನೀವು ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಈ ರೀತಿ ಕಾನೂನನ್ನು ಕೈಗೆ ತೆಗೆದುಕೊಳ್ಳುವುದಿಲ್ಲ ಎಂದು ಎಂ.ಐ.ಎಂ. ಪಕ್ಷದ ಅಧ್ಯಕ್ಷರಾದ ಅಸದುದ್ದೀನ ಓವೈಸಿಯವರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಈ ರೀತಿಯ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಓವೈಸಿ ಮಹಾಶಯರಿಗೆ ನೂಹ್‌ನಲ್ಲಿ ಮತಾಂಧ ಮುಸ್ಲಿಮರು ನಡೆಸಿದ ಧ್ವಂಸ, ನೂರಾರು ಕಾರುಗಳಿಗೆ ಹಚ್ಚಿದ ಬೆಂಕಿ, ಪೊಲೀಸ್ ಠಾಣೆಗೆ ಬೆಂಕಿ ಇಟ್ಟ ಇತ್ಯಾದಿ ಭಯಾನಕ ಘಟನೆಗಳನ್ನು ಮರೆಮಾಚಲು ಬಯಸುತ್ತಾರೆ, ಎನ್ನುವುದನ್ನು ಅರಿಯಿರಿ !