|
ಒಟವಾ – ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರದೇಶದಲ್ಲಿನ ಸರೆ ಇಲ್ಲಿಯ ಪ್ರಸಿದ್ಧ ಶ್ರೀ ಲಕ್ಷ್ಮೀ ನಾರಾಯಣ ದೇವಸನದ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿ ಧ್ವಂದ ಮಾಡಿದ್ದಾರೆ. ಬ್ರಿಟಿಷ್ ಕೊಲಂಬಿಯಾ ಪ್ರದೇಶದಲ್ಲಿರುವ ಎಲ್ಲಕ್ಕಿಂತ ಪ್ರಾಚೀನ ಮತ್ತು ಎಲ್ಲಕ್ಕಿಂತ ದೊಡ್ಡದಾದ ದೇವಸನವಾಗಿತ್ತು. ದೇವಸನದ ಪ್ರವೇಶ ದ್ವಾರದಲ್ಲಿ ಸ್ವತಂತ್ರ ಖಲಿಸ್ತಾನಕ್ಕಾಗಿ ಜನಾಭಿಪ್ರಾಯ ಸಂಗ್ರಹದ ಫಲಕಗಳು ಹಾಕಲಾಗಿತ್ತು. ಅದರಲ್ಲಿ ಖಲಿಸ್ತಾನಿ ಉಗ್ರ ಹರದೀಪ ಸಿಂಹ ನಿಜ್ಜರನ ಛಾಯಾಚಿತ್ರ ಕೂಡ ಅಂಟಿಸಲಾಗಿತ್ತು. ಖಲಿಸ್ತಾನಿ ಉಗ್ರ ಹರದೀಪ ಸಿಂಹ ನಿಜ್ಜರ ಇವನು ಸರೆ ಇಲ್ಲಿಯ ಗುರುನಾನಕ ಸಿಖ ಗುರುದ್ವಾರ ಸಾಹೇಬನ ಪ್ರಮುಖನಾಗಿದ್ದನು. ಗುರುದ್ವಾರದ ಪರಿಸರದಲ್ಲಿ ಜೂನ್ ೧೮ ರಂದು ೨ ದುಷ್ಕರ್ಮಿಗಳು ಅವನನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದರು.
ಹಿಂದೂ ದೇವಸ್ಥಾನದ ಮೇಲಿನ ಇದು ವರ್ಷದಲ್ಲಿನ ಮೂರನೆಯ ದಾಳಿ !
ಕೆನಡಾದಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ದಾಳಿಯ ಅನೇಕ ಘಟನೆಗಳು ಘಟಿಸಿವೆ. ಈ ವರ್ಷ ಹಿಂದೂ ದೇವಸ್ಥಾನಗಳ ಮೇಲಿನ ದಾಳಿಯ ಇದು ಮೂರನೆಯ ಘಟನೆಯಾಗಿದೆ. ಈ ಹಿಂದೆ ಜನವರಿ ೩೨ ರಂದು ಕೆನಡಾದಲ್ಲಿನ ಬ್ರಮ್ಪ್ಟನ ಪ್ರದೇಶದಲ್ಲಿ ಒಂದು ಪ್ರಸಿದ್ಧ ಹಿಂದೂ ದೇವಸ್ಥಾನದ ಮೇಲೆ ದಾಳಿ ನಡೆಸಿ ಅಲ್ಲಿ ಭಾರತ ವಿರೋಧಿ ಘೋಷಣೆ ಬರೆದಿದ್ದರು. ಅದರ ನಂತರ ಏಪ್ರಿಲ್ ನಲ್ಲಿ ಕೆನಡಾದಲ್ಲಿನ ಒಟಾರಿಯೋ ಇಲ್ಲಿ ಒಂದು ಹಿಂದೂ ದೇವಸ್ಥಾನದ ಮೇಲೆ ದಾಳಿಯಾಗಿತ್ತು. ಖಲಿಸ್ತಾನಿ ಬೆಂಬಲಿಗರು ಈ ದಾಳಿ ನಡೆಸಿರುವ ಆರೋಪವಿತ್ತು. ಕೆನಡಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯಿಂದ ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.
Hindu temple desecrated in #Canada‘s British Columbia; ‘Wanted’ posters of #Indian consulate officials put uphttps://t.co/IWRvIeHRVD pic.twitter.com/MA0RVGdO4k
— Hindustan Times (@htTweets) August 13, 2023
ಸಂಪಾದಕೀಯ ನಿಲುವುಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೋ ಇವರು ಖಲಿಸ್ತಾನಿಯರ ಬೆಂಬಲಿಗರಾಗಿದ್ದಾರೆ. ಆದ್ದರಿಂದ ಅವರು ಕೆನಡಾದಲ್ಲಿನ ಹೆಚ್ಚುತ್ತಿರುವ ಹಿಂದೂ ವಿರೋಧಿ ಮತ್ತು ಖಲಿಸ್ತಾನಿಗಳ ಚಟುವಟಿಕೆ ತಡೆಯಬಹುದು, ಇದರ ಅಪೇಕ್ಷೆಯೇ ಬೇಡ. ಈಗ ಅದನ್ನು ತಡೆಯುವದಕ್ಕಾಗಿ ಭಾರತವೇ ನೇರ ಕ್ರಮ ಕೈಗೊಳ್ಳುವುದು ಅವಶ್ಯಕ ! |