ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ರಾಜೀನಾಮೆ ಹಿಂದೆ ಅಮೆರಿಕದ ಷಡ್ಯಂತ್ರ !

ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದಕ್ಕೂ ಅಮೆರಿಕಾಗೆ ಜೀರ್ಣವಾಗಲಿಲ್ಲ !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಸಂಸತ್ತನ್ನು ವಿಸರ್ಜಿಸಲಾಗಿದ್ದು, ಮುಂದಿನ 90 ದಿನಗಳಲ್ಲಿ ಅಲ್ಲಿ ಚುನಾವಣೆಗಳು ನಡೆಯಲಿವೆ. ಈ ಮೂಲಕ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವುದರ ಹಿಂದೆ ಅಮೆರಿಕದ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಕಳೆದ ವರ್ಷ, ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಇಮ್ರಾನ್ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ವಿದೇಶಾಂಗ ನೀತಿಯನ್ನು ತುಂಬಾ ಹೊಗಳಿದ್ದರು. ಅಲ್ಲದೆ, ಅವರು ತೈಲ ಖರೀದಿಸಲು ರಷ್ಯಾದಲ್ಲಿ ಪುತಿನ್ ಅವರನ್ನು ಭೇಟಿಯಾಗಿದ್ದರು. ಈ ಸಂಗತಿಗಳು ಅಮೆರಿಕಾಗೆ ಇಷ್ಟವಾಗಲಿಲ್ಲ. ಯುದ್ಧದ ಒತ್ತಡಕ್ಕೆ ಸಿಲುಕಿರುವ ಅಮೆರಿಕಾವು ಇಮ್ರಾನ್ ಖಾನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.

‘ಅಲ್-ಜಜೀರಾ’ ವೆಬ್‌ಸೈಟ್ ಪ್ರಕಾರ, ಅಮೆರಿಕದ ಪತ್ರಿಕೆಯೊಂದು ದಾವೆ ಮಾಡಿದೆ. ಇದಕ್ಕಾಗಿ ಅಮೆರಿಕ ಮತ್ತು ಪಾಕಿಸ್ತಾನದ ಅಧಿಕಾರಿಗಳ ನಡುವಿನ ಸೂಕ್ಷ್ಮ ಸಂವಾದವು ಬಹಿರಂಗ ಪಡಿಸಲಾಗಿದೆ ಎಂದು ಪತ್ರಿಕೆ ಹೇಳುತ್ತದೆ.

1. ಅಮೆರಿಕದ ಒತ್ತಡದಿಂದಾಗಿ, ಇಮ್ರಾನ್ ಖಾನ್ ಆಡಳಿತದಲ್ಲಿ ಪಾಕಿಸ್ತಾನದಲ್ಲಿ ಹಣದುಬ್ಬರವು ಬೃಹತ್ ಪ್ರಮಾಣದಲ್ಲಿ ಹೆಚ್ಚಾಯಿತು. ಸರಕಾರದ ವಿರುದ್ಧ ದೊಡ್ಡ ದೊಡ್ಡ ಪ್ರತಿಭಟನೆಗಳು ನಡೆದವು ಮತ್ತು ಇಡೀ ವಿರೋಧ ಪಕ್ಷಗಳು ಒಗ್ಗೂಡಿವೆ, ಎಂದು ಅಲ್-ಜಜೀರಾ ಹೇಳಿದೆ.

2. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ, ಪಾಕಿಸ್ತಾನವು ತಟಸ್ಥತೆಯ ನಿಲುವು ತಳೆದಿದ್ದರೂ, ಅದು ತಟಸ್ಥವಾಗಿ ಕಾಣಿಸುತ್ತಿರಲಿಲ್ಲ, ಎಂದು ಅಮೆರಿಕಾದ ಅಧಿಕಾರಿಗಳು ಪಾಕಿಸ್ತಾನದ ಆಡಳಿತದ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

3. ಒಟ್ಟಿನಲ್ಲಿ ಆ ಅವಧಿಯಲ್ಲಿ ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯಕ್ಕೆ ಅಮೆರಿಕ ಸಾಕಷ್ಟು ಬಲ ನೀಡಿತ್ತು.

4. ಇಮ್ರಾನ್ ಖಾನ್ ಇವರು ಅವರಿಗೆ ದೊರಕಿದ ಉಡುಗೊರೆಗಳನ್ನು ಠೇವಣಿ ಮಾಡುವ ವಿಷಯದಲ್ಲಿ ಭ್ರಷ್ಟಾಚಾರ ನಡೆದಿದ್ದರಿಂದ ಅವರನ್ನು ಬಂಧಿಸಲಾಯಿತು ಮತ್ತು ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಲಾಯಿತು. ಜೈಲು ವಾಸದಲ್ಲಿರುವಾಗ ಮಾಜಿ ಪ್ರಧಾನಿಯಾಗಿ ಅವರಿಗೆ ಯಾವುದೇ ವಿಶೇಷ ಸೌಲಭ್ಯಗಳು ಸಿಗಲಿಲ್ಲ. ಅವರ ‘ಪಿಟಿಐ’ ಪಕ್ಷವು ಒಂದು ರೀತಿಯಲ್ಲಿ ನಷ್ಟ ಗೊಳಿಸಲಾಯಿತು.