‘ಜ್ಞಾನವಾಪಿಯಲ್ಲಿನ ಹಿಂದೂ ಪ್ರತಿಕಗಳು ಹಿಂದೂ ಮುಸಲ್ಮಾನ ಸಂಸ್ಕೃತಿಯ ಐಕ್ಯತೆಯ ಪ್ರತಿಕವಂತೆ !’ – ಜ್ಞಾನವಾಪಿಯ ಮುಖ್ಯ ಇಮಾಮ್

  • ಜ್ಞಾನವಾಪಿಯ ಮುಖ್ಯ ಇಮಾಮಾನ ಹಾಸ್ಯಸ್ಪದ ಹೇಳಿಕೆ !

  • ಜ್ಞಾನವಾಪಿಯ ಮೂರನೆಯ ದಿನದ ಸಮೀಕ್ಷೆಯಲ್ಲಿ ಮುಸಲ್ಮಾನ ಪಕ್ಷದವರು ಸಹಭಾಗಿ !

 

ವಾರಾಣಸಿ (ಉತ್ತರಪ್ರದೇಶ) – ಇಲ್ಲಿಯ ಜ್ಞಾನವಾಪಿಯಲ್ಲಿ ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಯಿಂದ ಮೂರನೇ ದಿನವೂ ಕೂಡ ಅಂದರೆ ಆಗಸ್ಟ್ ೬ ರಂದು ವೈಜ್ಞಾನಿಕ ಸಮೀಕ್ಷೆ ನಡೆಯಿತು. ಅದು ಸಂಜೆ ೫ ಗಂಟೆಯವರೆಗೆ ನಡೆಯಿತು. ಸರಕಾರಿ ನ್ಯಾಯವಾದಿ ರಾಜೇಶ ಮಿಶ್ರಾ ಇವರು ಈ ಮಾಹಿತಿ ನೀಡಿದರು. ಮಿಶ್ರ ಇವರು, ಆಗಸ್ಟ್ ೬ ರಂದು ಸಮೀಕ್ಷೆಯ ಕಾರ್ಯದಲ್ಲಿ ಮುಸಲ್ಮಾನ ಪಕ್ಷದಿಂದ ಕೂಡ ಮುಸಲ್ಮಾನ ಪಕ್ಷದ ನ್ಯಾಯವಾದಿ ಅಖಲಾಕ ಮತ್ತು ನ್ಯಾಯವಾದಿ ಮುಮ್ತಾಜ್ ಅಹಮದ್ ಇವರ ಜೊತೆಗೆ ೫ ಜನರು ಸಹಭಾಗಿಯಾಗಿದ್ದರು. ಅವರು ಹಿಂದಿನ ದಿನ ಎಂದರೆ ಆಗಸ್ಟ್ ೫ ರಂದು ನಡೆದಿರುವ ಸಮೀಕ್ಷೆಯಲ್ಲಿ ಮುಸಲ್ಮಾನ ಪಕ್ಷದವರು ಸಹಭಾಗಿ ಆಗಿರಲಿಲ್ಲ. ಮಧ್ಯಾಹ್ನ ೧ ರಿಂದ ೩ ರ ವರೆಗೆ ಸಮೀಕ್ಷೆಯ ಕಾರ್ಯ ಊಟಕ್ಕಾಗಿ ನಿಲ್ಲಿಸಲಾಗಿತ್ತು.

ಇಂತಹದರಲ್ಲಿ ಜ್ಞಾನವಾಪಿಯ ಮುಖ್ಯ ಇಮಾಮ್ ಮುಫ್ತಿ ಅಬ್ದುಲ್ ಬಾತಿ ನೋಮನಿ ಇವರು ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ. ಅವರು, ಜ್ಞಾನವಾಪಿ ಎಂದು ಯಾವ ಛಾಯಾಚಿತ್ರಗಳು ಬೆಳಕಿಗೆ ಬಂದಿವೆ, ಪ್ರತ್ಯಕ್ಷದಲ್ಲಿ ಅವು ಅಲ್ಲಿವು ಅಲ್ಲ. ಜ್ಞಾನವಾಪಿ ಪರಿಸರದಲ್ಲಿ ದೊರೆಯುತ್ತಿರುವುದು ಹಿಂದುಗಳ ಚಿಹ್ನೆ ಇದು ಔರಂಗಜೇಬನು ಹಿಂದೂ ಮುಸಲ್ಮಾನ ಐಕ್ಯತೆಯ ಪ್ರತೀಕವೆಂದು ನಿರ್ಮಿಸಿದ್ದನು ಎಂದು ಹೇಳಿದರು.

ಹಿಂದೂ ಪಕ್ಷಗಳ ನ್ಯಾಯವಾದಿ ಸುಭಾಷ್ ಚತುರ್ವೇದಿ ಮಾತನಾಡಿ, ಸಮೀಕ್ಷಾ ತಂಡವು ಮಸೀದಿ ಸಂಕೀರ್ಣದ ಕೇಂದ್ರ ಗುಮ್ಮಟ, ಪ್ರಾರ್ಥನೆ ಸಲ್ಲಿಸುವ ಸ್ಥಳ ಮತ್ತು ಗುಮ್ಮಟದ ಮಧ್ಯದ ಭಾಗ, ಹಾಗೆಯೇ ಜ್ಞಾನವಾಪಿ ಪ್ರದೇಶದಲ್ಲಿ ವ್ಯಾಸ ಕುಟುಂಬಕ್ಕೆ ಸೇರಿದ ನೆಲಮಾಳಿಗೆಯನ್ನು ಸಮೀಕ್ಷೆ ಮಾಡಿದೆ. ಸಮೀಕ್ಷಾ ತಂಡ ಇದುವರೆಗೂ ಮುಸಲ್ಮಾನರ ವಶದಲ್ಲಿರುವ ಎರಡನೇ ನೆಲಮಾಳಿಗೆಗೆ ಇನ್ನೂ ತಲುಪಿಲ್ಲ. ಉಳಿದ ಎರಡು ನೆಲಮಾಳಿಗೆಗಳನ್ನು ಮುಚ್ಚಲಾಗಿದೆ. ಜ್ಞಾನವಾಪಿಯಿಂದ ಹೊರಗೆ ಬಂದ ನಂತರ, ಹಿಂದೂ ಪರ ಅರ್ಜಿದಾರರಾದ ಸೀತಾ ಸಾಹು ಅವರು ಮಾತನಾಡಿ, ಜ್ಞಾನವಾಪಿ ಸಂಕೀರ್ಣದ ಪಶ್ಚಿಮ ಗೋಡೆಯ ಮೇಲೆ ಪ್ರಾಣಿಗಳ ಆಕೃತಿಗಳನ್ನು ಮತ್ತು ದೇವತೆಯ ವಿಗ್ರಹ ಕಂಡು ಬಂದಿತು. ನೆಲಮಾಳಿಗೆಯಲ್ಲಿ ಭಗ್ನಗೊಂಡ ವಿಗ್ರಹ ಮತ್ತು ಕಂಬಗಳು ಬಿದ್ದಿರುವು ಕಂಡು ಬಂದಿದೆ ಎಂದು ಹೇಳಿದರು.

(ಸೌಜನ್ಯ – Aaj Tak)

ನಾವು ಸಮೀಕ್ಷೆಯಿಂದ ತೃಪ್ತರಾಗಿದ್ದೇವೆ ! – ಮುಸ್ಲಿಂ ಪಕ್ಷಗಳ ನ್ಯಾಯವಾದಿ ಮುಮ್ತಾಜ್

ಮುಸ್ಲಿಂ ಪಕ್ಷದ ನ್ಯಾಯವಾದಿ ಮುಮ್ತಾಜ್ ಮಾತನಾಡಿ, ‘’ಸಮೀಕ್ಷೆ ಕಾರ್ಯ ನಮಗೆ ತೃಪ್ತಿ ತಂದಿದೆ. ಈ ಕಾರ್ಯಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ.” ಎಂದು ಹೇಳಿದರು.

ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ಜಂಟಿ ಕಾರ್ಯದರ್ಶಿ ಮಹಮ್ಮದ್ ಯಾಸಿನ್ ಅವರು ಅಗಸ್ಟ್ 4 ರಂದು “ನಾವು ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸುತ್ತೇವೆ ಮತ್ತು ಸಮೀಕ್ಷೆಗೆ ಸಹಕರಿಸುತ್ತೇವೆ” ಎಂದು ಹೇಳಿದರು.

ಸಂಪಾದಕೀಯ ನಿಲುವು

ಔರಂಗಜೇಬನ ವೈಭವೀಕರಣ ಮಾಡುವ ಮುಸಲ್ಮಾನರ ಇಂತಹ ಧಾರ್ಮಿಕ ನಾಯಕನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !