ಆಸ್ಟ್ರೇಲಿಯಾದ ಶಾಲೆಗಳಲ್ಲಿ ಸಿಖ್ ವಿಧ್ಯಾರ್ಥಿಗಳಿಗೆ “ಕೃಪಾಣ” ಇಟ್ಟುಕೊಳ್ಳಲು ಕೋರ್ಟ್ ನಿಂದ ಅನುಮತಿ !

(ಕೃಪಾಣ ಅಂದರೆ ಸಣ್ಣ ಚಾಕು. ಇದು ಸಿಖ್ಖರ ಐದು ಧಾರ್ಮಿಕ ಸಂಕೇತಗಳಲ್ಲಿ ಒಂದಾಗಿದೆ. ಮತ್ತು ಪ್ರತಿಯೊಬ್ಬ ಸಿಖ್ ತನ್ನ ಧರ್ಮದ ಪ್ರಕಾರ ಎಲ್ಲಾ ಸಮಯದಲ್ಲೂ ಅದನ್ನು ತನ್ನೊಂದಿಗೆ ಇಟ್ಟುಕೊಳ್ಳಬೇಕು, ಎಂದು ಅವರ ಧರ್ಮದ ಕಲಿಕೆಯಾಗಿದೆ.)

ಬ್ರಿಸ್ಬೇನ್ (ಆಸ್ಟ್ರೇಲಿಯಾ) – ದೇಶದ ಕ್ವೀನ್ಸ್ ಲ್ಯಾಂಡ್ ಪ್ರಾಂತ್ಯದಲ್ಲಿ ಸರಕಾರವು ಶಾಲೆಗಳಲ್ಲಿ ಸಿಖ್ ವಿಧ್ಯಾರ್ಥಿಗಳು “ಕೃಪಾಣ” ತರುವುದನ್ನು ನಿಷೇಧಿಸಿತ್ತು. ಇದರ ವಿರುದ್ಧ ಸಿಖ್ ಮಹಿಳೆ ಕಮಲಜಿತ ಕೌರ ಅಠವಾಲ ಕ್ವೀನ್ಸ್ ಲ್ಯಾಂಡ್ ಪ್ರಾಂತ್ಯದ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದರು.

ಈ ಕುರಿತು ನ್ಯಾಯಾಲಯವು ಕೃಪಾಣ ಮೇಲೆ ನಿರ್ಬಂಧ ಹಾಕಿದ ಘಟನೆ ಅಸಂವಿಧಾನಕವಾಗಿದೆ, ಶಾಲೆಗಳಲ್ಲಿ ಸಿಖ್ ವಿಧ್ಯಾರ್ಥಿಗಳು ಕೃಪಾಣ ತೆಗೆದುಕೊಂಡು ಹೋಗಬಹುದು ಎಂದು ತೀರ್ಪು ನೀಡಿದೆ.