ಹಿಂದು ರಾಷ್ಟ್ರದ ಸ್ಥಾಪನೆಯಲ್ಲಿ ಆಧ್ಯಾತ್ಮಿಕ ಶಕ್ತಿಯ ಕೊಡುಗೆ !

ಸದ್ಯ ನಮ್ಮ ದೇಶದಲ್ಲಿ ಹಿಂದು ರಾಷ್ಟ್ರದ ಬೇಡಿಕೆ, ಅಥವಾ ಹಿಂದು ರಾಷ್ಟ್ರಕ್ಕೆ ಸಂಬಂಧಿಸಿದ ಚರ್ಚೆಗಳು ಬಹಳ ಉತ್ಸಾಹದಿಂದ ನಡೆಯುತ್ತಿವೆ. ಹೀಗಿದ್ದರೂ, ನಮ್ಮ ದೇಶದ ಸದ್ಯದ ವ್ಯವಸ್ಥೆಯ ಅಧ್ಯಯನ ಮಾಡಿದರೆ ನಮಗೆ ಏನು ಕಂಡುಬರುತ್ತದೆ, ಎಂದರೆ ಈಗಲೂ ನಮ್ಮ ದೇಶದ ಮೂಲೆಮೂಲೆಗಳಲ್ಲಿ ಹಿಂದು ರಾಷ್ಟ್ರವನ್ನು ವಿರೋಧಿಸುವವರ ಸಂಖ್ಯ ಬಹಳಷ್ಟಿದೆ ಮತ್ತು ಹಿಂದೂಗಳು ಇನ್ನೂ ಸಂಪೂರ್ಣ ಸಂಘಟಿತರಾಗಿಲ್ಲ.

ಶ್ರೀ. ರವೀಂದ್ರ ಬನಸೋಡ

ಹಿಂದು ರಾಷ್ಟ್ರವನ್ನು ತರಲು ಧರ್ಮದ ಪುನರ್ಸ್ಥಾಪನೆಯನ್ನು ಮಾಡಬೇಕಾಗುವುದು !

ನಮ್ಮ ದೇಶದ ಸಂಪೂರ್ಣ ವ್ಯವಸ್ಥೆ ತಥಾಕಥಿತ ಜಾತ್ಯತೀತವಾದಿಗಳ (ಸೆಕ್ಯುಲರ್) ಕೈಯಲ್ಲಿಯೇ ಇದೆ. ಕೆಲವರು ಜಾತ್ಯತೀತೆಯ ಮತ್ತು ಮಾನವತೆಯ ಹೆಸರಿನಲ್ಲಿ ಜಿಹಾದಿಗಳನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಹಿಂದೂಗಳ ಮತಾಂತರ ಮಾಡುವ ಕ್ರೈಸ್ತರನ್ನು ಬೆಂಬಲಿಸುತ್ತಾರೆ. ದೇಶದ ಸರಕಾರ, ಆಡಳಿತವ್ಯವಸ್ಥೆ ಮತ್ತು ನ್ಯಾಯವ್ಯವಸ್ಥೆ ಭಷ್ಟಾಚಾರಿಗಳ ಹಾಗೂ ಅಧರ್ಮಿಗಳ ಕೈಯಲ್ಲಿದೆ. ನಮ್ಮ ದೇಶವು ಈಗಲೂ ಪ್ರಚಂಡ ಭ್ರಷ್ಟಾಚಾರ ಮತ್ತು ಅಧರ್ಮದ ಕೆಸರಿನಲ್ಲಿ ಮುಳುಗಿದೆ. ಅದು ಎಷ್ಟೊಂದು ಮುಳುಗಿದೆಯೆಂದರೆ, ಅದನ್ನು ಸರ್ವಸಾಮಾನ್ಯ ವ್ಯಕ್ತಿ ಹೊರಗೆ ತೆಗೆಯಲಾರನು. ಹಾಗಾದರೆ ಇಂತಹ ಪರಿಸ್ಥಿತಿಯಲ್ಲಿ ಭಾರತದಲ್ಲಿ ಹಿಂದು ರಾಷ್ಟ್ರ ಬರಲು ಸಾಧ್ಯವಿಲ್ಲವೇನು ? ಖಂಡಿತ ಸಾಧ್ಯವಿದೆ ; ಆದರೆ ಅದು ಮನುಷ್ಯನ ಸಾಮಾನ್ಯ ಪ್ರಯತ್ನಗಳಿಂದ ಬರಲು ಸಾಧ್ಯವಿಲ್ಲ.

ಹಿಂದು ರಾಷ್ಟ್ರವನ್ನು ತರಲು ನಮಗೆ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಪ್ರಯತ್ನ ಮಾಡಬೇಕಾಗುವುದು. ಹಿಂದು ರಾಷ್ಟ್ರದ ಸ್ಥಾಪನೆಯನ್ನು ಮಾಡುವುದೆಂದರೆ ಅಧರ್ಮವನ್ನು ನಾಶಮಾಡಿ ಧರ್ಮದ ಪುನರ್ಸ್ಥಾಪನೆಯನ್ನು ಮಾಡುವುದು. ಧರ್ಮದ ಪುನರ್ಸ್ಥಾಪನೆಯನ್ನು ಕೇವಲ ಈಶ್ವರ ಅಥವಾ ಈಶ್ವರೀ ಅವತಾರ, ಹಾಗೆಯೇ ನಿಜವಾದ ಗುರುಗಳು ಮತ್ತು ಸಂತರೇ ಮಾಡಬಲ್ಲರು; ಏಕೆಂದರೆ ಸಾಮಾನ್ಯ ಮತ್ತು ಭೌತಿಕ ಸ್ತರದಲ್ಲಿ ಮಾಡಿದ ಪ್ರಯತ್ನಗಳಿಂದ ನಮ್ಮ ದೇಶದಲ್ಲಿಯೇ ಅಲ್ಲ, ಜಗತ್ತಿನಲ್ಲಿ ಎಲ್ಲಿಯೂ ಧರ್ಮದ ಪುನರ್ಸ್ಥಾಪನೆ ಆಗಲು ಸಾಧ್ಯವಿಲ್ಲ.

ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಲು ಸಾಧನೆಯೇ ಆವಶ್ಯಕ !

ಹಾಗಾದರೆ ನಾವು ಏನು ಮಾಡಬೇಕು ? ಇದಕ್ಕಾಗಿ ನಮಗೆ ನಿಜವಾದ ಸಂತರ ಮತ್ತು ಗುರುಗಳ (ಯಾರು ಹಿಂದು ರಾಷ್ಟ್ರದ ಸ್ಥಾಪನೆಗಾಗಿ ಆಧ್ಯಾತ್ಮಿಕ ಸ್ತರದಲ್ಲಿ ಕಾರ್ಯನಿರತರಾಗಿದ್ದಾರೆ ಅವರ) ಮಾರ್ಗದರ್ಶನವನ್ನು ಪಡೆದು ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಲು ಸಾಧನೆಯನ್ನು ಮಾಡಬೇಕಾಗುವುದು. ಹಾಗೆಯೇ ಹಿಂದು ರಾಷ್ಟ್ರದ ಸ್ಥಾಪನೆಗಾಗಿ ತಳಮಳದಿಂದ ಪ್ರಯತ್ನಿಸುವ ಹಿಂದುತ್ವನಿಷ್ಠ ಸಂಘಟನೆಗಳಲ್ಲಿ ಪಾಲ್ಗೊಂಡು ಭೌತಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಪ್ರಯತ್ನ ಮಾಡಬೇಕಾಗುವುದು.

– ಶ್ರೀ. ರವೀಂದ್ರ ಬನಸೋಡ, ಫೋಂಡಾ, ಗೋವಾ. (೭.೪.೨೦೨೩)