|
ವಾರಾಣಸಿ (ಉತ್ತರಪ್ರದೇಶ) – ಇಲ್ಲಿಯ ಜ್ಞಾನವಾಪಿ ಪರೀಸರದ ವೈಜ್ಞಾನಿಕ ಸಮೀಕ್ಷೆ ಆಗಸ್ಟ್ ೪ ಬೆಳಿಗ್ಗೆ ೭.೪೫ ಗಂಟೆಯಿಂದ ಪ್ರಾರಂಭಿಸಲಾಯಿತು. ಮಧ್ಯಾಹ್ನ ೧೨ ಗಂಟೆಯವರೆಗೆ ಸಮೀಕ್ಷೆ ನಡೆಸಿದ ನಂತರ ಮಧ್ಯಾಹ್ನದ ನಮಾಜಿಗಾಗಿ ನಿಲ್ಲಿಸಲಾಯಿತು. ಮಧ್ಯಾಹ್ನ ೩ ಗಂಟೆಯ ನಂತರ ಸಂಜೆ ೫ ರ ವರೆಗೆ ಮತ್ತೆ ಸಮೀಕ್ಷೆ ನಡೆಯಿತು. ಮುಂದಿನ ಕೆಲವು ದಿನ ಈ ಸಮೀಕ್ಷೆ ನಡೆಯಲಿದೆ. ಅಲಹಾಬಾದ್ ಉಚ್ಚ ನ್ಯಾಯಾಲಯದಿಂದ ಆಗಸ್ಟ್ ೩ ರಂದು ಸಮೀಕ್ಷೆಗೆ ಅನುಮತಿ ನೀಡಿದ ನಂತರ ಈ ಸಮೀಕ್ಷೆ ಪುರಾತತ್ವ ಇಲಾಖೆಯಿಂದ ನಡೆಯುತ್ತಿದೆ.
Supreme Court: ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ#SupremeCourt #GyanvapiSurvey #vistaranews
*ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ* 👇https://t.co/9NBKoDAxqZhttps://t.co/8y8wZgLJsc
— Vistara News (@VistaraNews) August 4, 2023
೧. ಜ್ಞಾನವಾಪಿ ಪರಿಸರದ ೪ ಭಾಗಗಳು (ಬ್ಲಾಕ್ ನಲ್ಲಿ) ವಿಭಾಗಿಸಲಾಗಿದೆ. ಎಲ್ಲಾ ಕಡೆ ಕ್ಯಾಮೆರ ಅಳವಡಿಸಲಾಗಿದೆ. ಸಂಪೂರ್ಣ ಪರಿಸರದ ಚಿತ್ರೀಕರಣ ನಡೆಯಲಿದೆ. ಇಲ್ಲಿಯ ವಜೂ ಖಾನಾ (ನಮಾಜದ ಮೊದಲು ಕೈಕಾಲು ತೊಳೆಯುವ ಸ್ಥಳ) ಬಿಟ್ಟು ಉಳಿದೆಲ್ಲ ಪರಿಸರದ ಸಮೀಕ್ಷೆ ನಡೆಯಲಿದೆ. ಜ್ಞಾನವಾಪಿಯ ಪಶ್ಚಿಮದ ಗೋಡೆಯನ್ನು ವಿಶೇಷವಾಗಿ ಗಮನಿಸಲಾಗುವುದು.
೨. ಸಮೀಕ್ಷೆಗಾಗಿ ಪುರಾತತ್ವ ಇಲಾಖೆಯ ೬೧ ಸದಸ್ಯರು ಸಹಭಾಗಿದ್ದಾರೆ. ಈ ಸಮಯದಲ್ಲಿ ಹಿಂದೂ ಪಕ್ಷದ ಪ್ರತಿನಿಧಿಗಳು ಕೂಡ ಉಪಸ್ಥಿತರಿದ್ದರು. ಸಮೀಕ್ಷೆಯ ಹಿನ್ನೆಲೆಯಲ್ಲಿ ಈ ಪರಿಸರದಲ್ಲಿ ಹೆಚ್ಚಿನ ಪೊಲೀಸ ಬಂದೋಬಸ್ತು ಮಾಡಲಾಗಿದೆ.
ವೈಜ್ಞಾನಿಕ ಸಮೀಕ್ಷೆ ಹೇಗೆ ಮಾಡುತ್ತಿದ್ದಾರೆ ?೧. ಯಾವುದೇ ಅಗಿಯುವ ಕೆಲಸ ಮಾಡದೆ ರೇಡಿಯೋ ತರಂಗಗಳ ಸಹಾಯದಿಂದ ಭೂಮಿ ಮತ್ತು ಗೋಡೆಯ ಒಳಗೆ ಏನು ಇದೆ ? ಇದು ತಿಳಿದುಕೊಳ್ಳಲಾಗುತ್ತಿದೆ. ೨. ‘ಕಾರ್ಬನ್ ಡೇಟಿಂಗ್ ಪದ್ಧತಿ’ಯಿಂದ (ವಾಸ್ತು ಎಷ್ಟು ಪ್ರಾಚೀನವಾಗಿದೆ, ಇದನ್ನು ಪರಿಶೀಲಿಸುವ ಪದ್ಧತಿ) ವಾಸ್ತು ಪರಿಶೀಲನೆ ಮಾಡಲಾಗುತ್ತಿದೆ. ೩. ಗೋಡೆ, ಜ್ಞಾನವಾಪಿಯ ಅಡಿಪಾಯ ಮತ್ತು ಅಲ್ಲಿಯ ಮಣ್ಣಿನ ಬಣ್ಣದಲ್ಲಿ ಬದಲಾವಣೆ ಇದರ ಪರಿಶೀಲನೆ ಮಾಡಲಾಗುತ್ತಿದೆ. |