ಭಯೋತ್ಪಾದನೆಯ ಹೊಸ ರೂಪ!

ನೂಹ್ ನಲ್ಲಿ ಜಿಹಾದಿಗಳು ನಡೆಸಿದ ಹಿಂಸಾಚಾರ ಪೂರ್ವ ನಿಯೋಜಿತ!

ಹರಿಯಾಣದ ನೂಹ್ ನಲ್ಲಿ ನಡೆದ ಘಟನೆಯು ಹಿಂದೂಗಳಿಗೆ ದಿಗ್ಭ್ರಮೆಗೊಳಿಸುವಂತಿದೆ. ಹಾಗೆ ನೋಡಿದರೆ ಭಾರತದಲ್ಲಿ, ಹಿಂದೂಗಳ ಮೇಲೆ ಜಿಹಾದಿಗಳಿಂದ ನಡೆಯುವ ದಾಳಿ ಮತ್ತು ಗಲಭೆಗಳು ಹೊಸತೇನಲ್ಲ; ಆದರೆ ನೂಹ್‌ನಲ್ಲಿ ಜಿಹಾದಿಗಳು ನಡೆಸಿದ ಹಿಂಸಾಚಾರವು ಪೂರ್ವನಿಯೋಜಿತವಾಗಿತ್ತು. ಇನ್ನೂ ಮುಂದುವರಿದು ಈ ಘಟನೆಯು ಜಿಹಾದಿಗಳು ಹಿಂಸಾಚಾರವನ್ನು ನಡೆಸಲು ಮಾಡಿಕೊಂಡಿರುವ ಪೂರ್ವಸಿದ್ಧತೆ ಮತ್ತು ಆಕ್ರಮಣಶೀಲತೆಯ ಮೇಲೆ ಬೆಳಕು ಚೆಲ್ಲುವಂತಹದ್ದಾಗಿದೆ. ಕೆಲವು ಹಿಂದೂಗಳ ಅಭಿಪ್ರಾಯದಂತೆ ಈ ಗಲಭೆಯನ್ನು ನಡೆಸಲು 6 ತಿಂಗಳ ಹಿಂದೆ ಯೋಜಿಸಲಾಗಿತ್ತು. ಈ ಗಲಭೆಯಲ್ಲಿ ಜಿಹಾದಿಗಳು ಎಕೆ 47 ರೈಫಲ್‌ಗಳಿಂದ ಗುಂಡಿನ ದಾಳಿ ನಡೆಸಿದ್ದಾರೆ. ಭಾರತದಲ್ಲಿ ಗಲಭೆಕೋರರು ಖಡ್ಗ, ಕಲ್ಲು ಮತ್ತು ಇತರ ಆಯುಧಗಳನ್ನು ಬಳಸುತ್ತಾರೆ; ಆದರೆ ಈಗ ಅವರಿಗೆ ಎಕೆ 47 ರೈಫಲ್ ಸಿಗುತ್ತಿರುವುದನ್ನು ಗಮನಿಸಿದರೆ, ಅವರು ಕೇವಲ ಗಲಭೆಕೋರರಲ್ಲ, ಅವರು ಭಯೋತ್ಪಾದಕರಾಗಿದ್ದಾರೆ ಎನ್ನುವುದು ಗಮನಕ್ಕೆ ಬರುತ್ತದೆ. ಈ ಗಲಭೆಯಲ್ಲಿ ಹತನಾದ ಬಜರಂಗದಳ ಕಾರ್ಯಕರ್ತ ಅಭಿಷೇಕ್ ರಜಪೂತ್ ಮೇಲೆ ಮೊದಲು ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಅವರ ಕತ್ತು ಕೊಯ್ದು ಕಲ್ಲುಗಳಿಂದ ಚಚ್ಚಿದ್ದಾರೆ. ಈ ಪದ್ಧತಿಯನ್ನು ತಾಲಿಬಾನ್ ಭಯೋತ್ಪಾದಕರು ಉಪಯೋಗಿಸುತ್ತಾರೆ. ಇಸ್ಲಾಮಿಕ್ ಸ್ಟೇಟ್ ಉದಯಿಸಿದ ಬಳಿಕ ಅವರು ಜಗತ್ತಿನಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲು ಜನರ ಕತ್ತು ಕೊಯ್ಯುವ ಹಲವಾರು ವೀಡಿಯೊಗಳನ್ನು ಬಿಡುಗಡೆ ಮಾಡಿದ್ದರು. ಭಯೋತ್ಪಾದಕರು ಏನು ಮಾಡುತ್ತಾರೆಯೋ, ಅದನ್ನೇ ನೂಹನಲ್ಲಿ ಗಲಭೆಕೋರರು ಮಾಡಿದರು. ಇದರಿಂದ, ಭಯೋತ್ಪಾದಕರು ತಮ್ಮ ತಂತ್ರವನ್ನು ಬದಲಾಯಿಸಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ. ಭಾರತದಲ್ಲಿ ಹಿಂದೂಗಳನ್ನು ನಿರ್ನಾಮ ಮಾಡಲು, ಇನ್ನು ಮುಂದೆ ಅವರ ವಿಧಾನ ಬದಲಾಗಿದೆ. ಹಿಂದೆಲ್ಲ ಕಾಶ್ಮೀರ ಮತ್ತು ಮತ್ತಿತರ ಕಡೆಗಳಲ್ಲಿ ಬಾಂಬ್ ಸ್ಫೋಟ ನಡೆಸಿ ಹಿಂದೂಗಳ ಹತ್ಯೆ ನಡೆಯುವ ಘಟನೆಗಳು ನಡೆಯುತ್ತಿತ್ತು. ಈಗ ಅಲ್ಲಲ್ಲಿ ಗಲಭೆ ನಡೆಸುವುದು, ಹಿಂದೂಗಳ ಆಸ್ತಿಪಾಸ್ತಿಗೆ ಹಾನಿ ಮಾಡುವ, ಶಿರಚ್ಛೇದ ಮಾಡುವ ಮುಂತಾದ ಕುಕೃತ್ಯಗಳನ್ನು ನಡೆಸಿ ಹಿಂದೂಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುವ ಹೊಸ ಪ್ರಕಾರ ಸಧ್ಯಕ್ಕೆ ನಡೆಯುತ್ತಿದೆ. ನೂಹ ಗಲಭೆಯ ಬಗ್ಗೆ ಇನ್ನು ಮುಂದೆ ಕೆಲವು ಕಾಲ ಚರ್ಚೆಯಲ್ಲಿರಬಹುದು; ಆದರೆ ಭಯೋತ್ಪಾದಕರ ಈ ಹೊಸ ನಡೆಯನ್ನು ವಿಫಲಗೊಳಿಸಲು ಸರಕಾರಿ ವ್ಯವಸ್ಥೆ ಸಿದ್ಧಗೊಂಡಿದೆಯೇ? ನೂಹ್ ನಲ್ಲಿ ನಡೆದ ಬ್ರಿಜಮಂಡಲ ಯಾತ್ರೆಯಲ್ಲಿ ಭಾಗವಹಿಸಲು ಬಂದಿದ್ದ ಭಕ್ತರು ಉತ್ಸಾಹದಲ್ಲಿದ್ದರು, ಅಲ್ಲಿನ ಶಿವ ದೇವಸ್ಥಾನದ ಪರಿಸರದಲ್ಲಿ ಸುಮಾರು 5-6 ಸಾವಿರ ಭಕ್ತರು ಸೇರಿದ್ದರು ಎಂದು ಅಂದಾಜಿಸಲಾಗಿದೆ. ಈ ದೇವಸ್ಥಾನದ ನಾಲ್ಕೂ ಬದಿಯಲ್ಲಿ ಪರ್ವತಗಳಿವೆ. ಈ ಗುಡ್ಡಗಾಡು ಪ್ರದೇಶದಿಂದ ಭಕ್ತರ ಮೇಲೆ ಕಲ್ಲು ತೂರಾಟ, ಗುಂಡಿನ ದಾಳಿ ನಡೆಸಲಾಯಿತು. ಈ ದಾಳಿಯಲ್ಲಿ ಸುಮಾರು 150 ಹಿಂದೂಗಳ ಕಾರುಗಳು ಸುಟ್ಟು ಭಸ್ಮವಾಗಿದ್ದು, ಹಾಗೆಯೇ ಹಿಂದೂಗಳ ಅಂಗಡಿಗಳೂ ಸುಟ್ಟು ಕರಕಲಾಗಿವೆ. ಇದಕ್ಕೆ ಬೇಕಾಗುವ ಇಂಧನ ಎಲ್ಲಿಂದ ಬಂದಿದೆ? ಈ ದಾಳಿಯಿಂದ ತಪ್ಪಿಸಿಕೊಳ್ಳಲು ಭಕ್ತರು ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದರು. ಆದರೂ ಜಿಹಾದಿಗಳಿಂದ ಗುಂಡಿನ ದಾಳಿ, ಕಲ್ಲು ತೂರಾಟ ಮುಂದುವರಿದಿತ್ತು. ಒಂದು ವರದಿಯ ಪ್ರಕಾರ, ದೇವಸ್ಥಾನದಲ್ಲಿ ಸಿಲುಕಿದ್ದ ಭಕ್ತರನ್ನು ಹೊರತೆಗೆಯಲು ಪೊಲೀಸರಿಗೆ 7 ಗಂಟೆಗಳ ಕಾಲಾವಧಿ ತಗುಲಿತು. ಇದರರ್ಥ ಜಿಹಾದಿಗಳ ಬಳಿ ಶಸ್ತ್ರಾಸ್ತ್ರಗಳ ಸಂಗ್ರಹ ಎಷ್ಟು ದೊಡ್ಡದಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ಗಲಭೆಯ ಮೂಲಕ ಜಿಹಾದಿಗಳು ಏನನ್ನು ಸಾಧಿಸಬೇಕೆಂದುಕೊಂಡಿದ್ದರೋ ಅದನ್ನು ಸಾಧಿಸಿದ್ದಾರೆ. ಈಗ ಜಿಹಾದಿಗಳನ್ನು ಬಂಧಿಸಲಾಗುತ್ತದೆ. ಅವರ ಮೇಲಿನ ಪ್ರಕರಣಗಳು ವರ್ಷಾನುಗಟ್ಟಲೆ ನಡೆಯುತ್ತವೆ. ಅಲ್ಲಿಯವರೆಗೆ ಅವರಿಗೆ ಜಾಮೀನು ಕೂಡ ಸಿಗಲಿದೆ. ಮುಂದೇನು ?` ಈ ಗಲಭೆಯಲ್ಲಿ ಎಲ್ಲವನ್ನೂ ಕಳೆದುಕೊಂಡ ಹಿಂದೂಗಳು ಏನು ಮಾಡಬೇಕು?’`ಯಾರ ಅಂಗಡಿಗಳು ಸುಟ್ಟು ಹೋದವೋ, ಅವರ ಆದಾಯದ ಮೂಲವೇ ನಷ್ಟವಾಗಿದೆ. ಅವರು ಮುಂದಿನ ಜೀವನ ಹೇಗೆ ನಡೆಯುವುದು?’, ‘ಅವರಿಗೆ ನ್ಯಾಯ ಸಿಗುತ್ತದೆಯೇ?’, ಹೀಗೆ ಹಲವಾರು ಬಿಡಿಸಲಾಗದ ಪ್ರಶ್ನೆಗಳಿವೆ.

ಎಕೆ 47 ರೈಫಲ್‌ಗಳು ಗಲಭೆಕೋರರ ವರೆಗೆ ತಲುಪಿದ್ದು ಹೇಗೆ? ಇಷ್ಟು ದೊಡ್ಡ ಸಂಖ್ಯೆಯ ಕಾರುಗಳು ಮತ್ತು ಅಂಗಡಿಗಳನ್ನು ಸುಡಲು ಜಿಹಾದಿಗಳಿಗೆ ಇಂಧನವನ್ನು ಪೂರೈಸಿದವರು ಯಾರು?

ರಣತಂತ್ರವನ್ನು ಬದಲಾಯಿಸಿ !

ಜಿಹಾದಿಗಳ ಕೃತ್ಯಗಳನ್ನು ಗಮನದಲ್ಲಿಟ್ಟುಕೊಂಡು ರಕ್ಷಣಾ ವ್ಯವಸ್ಥೆಗಳು ತಮ್ಮ ರಣತಂತ್ರವನ್ನು ಬದಲಾಯಿಸಿದೆಯೇ? ಧಗಧಗಿಸುತ್ತಿರುವ ಗಲಭೆಗಳ ಸ್ವರೂಪವನ್ನು ಗಮನಿಸಿದರೆ, ಇದು ಪೂರ್ವಯೋಜಿತ ಎಂದು ಯಾರೂ ಕೂಡ ಹೇಳಲು ಸಾಧ್ಯವಿದೆ. ಹೀಗಿರುವಾಗ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಗಲಭೆ ನಡೆಸುವರಲ್ಲಿಗೆ ಎಕೆ 47 ರೈಫಲ್‌ಗಳು ಹೇಗೆ ತಲುಪಿತು? ಇಷ್ಟು ದೊಡ್ಡ ಪ್ರಮಾಣದಲ್ಲಿ ವಾಹನಗಳನ್ನು ಮತ್ತು ಅಂಗಡಿಗಳನ್ನು ಸುಡಲು ಜಿಹಾದಿಗಳಿಗೆ ಇಂಧನವನ್ನು ಪೂರೈಸಿದವರು ಯಾರು? ಗಲಭೆ ನಡೆದ ಬಳಿಕ ಈ ಮಾಹಿತಿ ಸಿಗುತ್ತದೆ; ಆದರೆ ಮೊದಲೇ ಪೊಲೀಸರಿಗೆ ಏಕೆ ದೊರಕಲಿಲ್ಲ? ಹಿಂದೂಗಳು ಒಂದು ಸಾಮಾನ್ಯ ಸಭೆಯನ್ನು ಆಯೋಜಿಸಲು ಬಯಸಿದಾಗ ಪೊಲೀಸರು, ‘ಯಾರು ಹಾಜರಿರುತ್ತಾರೆ? ಎಷ್ಟು ಜನ ಭಾಗವಹಿಸುತ್ತಾರೆ? ಮುಂತಾದ ವಿವಿಧ ಪ್ರಶ್ನೆಗಳನ್ನು ಕೇಳಿ ಸಭೆ, ಕಾರ್ಯಕ್ರಮ ಅಥವಾ ಮೆರವಣಿಗೆಯನ್ನು ಆಯೋಜಿಸುವವರನ್ನು ಗಲಿಬಿಲಿಗೊಳಿಸಿ ಬಿಡುತ್ತಾರೆ. ಇದೇ ರೀತಿ ವಿಚಾರಣೆಯನ್ನು ಮುಸ್ಲಿಮರಿಗೂ ಏಕೆ ಮಾಡುವುದಿಲ್ಲ? ಅವರ ಚಲನವಲನಗಳ ಮೇಲೆಯೂ ಏಕೆ ಗಮನವಿಡುವುದಿಲ್ಲ? ಭದ್ರತಾ ಸಂಸ್ಥೆ ಜಾಗರೂಕತೆಯಿಂದ ಇಲ್ಲದಿರುವುದರಿಂದಲೇ ಗಲಭೆಗಳು ಸಂಭವಿಸುತ್ತವೆ.
ಕೇವಲ ನೂಹ್ ಮಾತ್ರವಲ್ಲ, ಬದಲಾಗಿ ಭಾರತದಾದ್ಯಂತ, ಗಲಭೆಗಳನ್ನು ತಡೆಯಲು ಪೊಲೀಸರಿಗೆ ಅತ್ಯುತ್ತಮ ತರಬೇತಿ ನೀಡಬೇಕಾಗಿದೆ. ನೂಹ್ ನ ಗಲಭೆಯನ್ನು ಹತೋಟಿಗೆ ತರಲು ಪೊಲೀಸರಿಗೆ ಗಂಟೆಗಟ್ಟಲೆ ಸಮಯ ತಗಲುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಒಂದು ವೇಳೆ ಗಲಭೆಕೋರರಿಗೆ ಎಕೆ 47 ಸಿಗುತ್ತಿದ್ದರೆ, ಪೊಲೀಸರಿಗೂ ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜುಗೊಳಿಸುವುದು ಆವಶ್ಯಕವಾಗಿದೆ. ಅದಕ್ಕಿಂತ ಹೆಚ್ಚಿನದಾಗಿ ಗಲಭೆಗಳು ಸಂಭವಿಸಿದಾಗ ಅದನ್ನು ನಿಯಂತ್ರಿಸಲು ಪೊಲೀಸರಿಗೆ `ಮುಕ್ತವಾಗಿ ಕಾರ್ಯಾಚರಣೆ’ ನಡೆಸಲು ಕಾನೂನು ರಚಿಸಬೇಕು. ಈ ಗಲಭೆಯಲ್ಲಿ 14 ವರ್ಷದ ಬಾಲಕರು ಕೂಡ ಹಿಂದೂಗಳ ಮೇಲೆ ದಾಳಿ ನಡೆಸಿದ್ದರು. ಅಪ್ರಾಪ್ತರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ’ ಎಂಬುದು ಜಿಹಾದಿಗಳಿಗೆ ಗೊತ್ತು. ಹಾಗಾಗಿ ಮಕ್ಕಳನ್ನು ಮುಂದಿಟ್ಟುಕೊಂಡು ತಮ್ಮ ಉದ್ದೇಶವನ್ನು ಸಾಧಿಸುತ್ತಿದ್ದಾರೆ. ಹೀಗೆಯೇ ನಡೆಯುತ್ತಿದ್ದರೆ, ಅವರನ್ನು ಸರಿದಾರಿಗೆ ತರಲು ಕಾನೂನಿನಲ್ಲೂ ಬದಲಾವಣೆ ಮಾಡಬೇಕು. ಅದಕ್ಕಿಂತ ಮುಂದೆ ಹೋಗಿ ಪೊಲೀಸ್ ಇಲಾಖೆಯನ್ನು ‘ಸರ್ವಧರ್ಮಸಮಭಾವ’ ಮನಸ್ಥಿತಿಯಿಂದ ಮುಕ್ತಗೊಳಿಸಬೇಕು. ಜಿಹಾದಿಗಳು ಬೆಂಕಿ ಹಚ್ಚುತ್ತಿದ್ದಾಗ ಅವರನ್ನು ತಡೆಯಲು ಪೊಲೀಸರು ಎಲ್ಲಿ ವಿಫಲರಾದರು? ಯಾವಾಗಲೂ ಹಿಂದೂಗಳ ಮೇಲೆ ತಮ್ಮ ಶಕ್ತಿಯನ್ನು ಪ್ರದರ್ಶಿಸುವ ಪೊಲೀಸರು ಜಿಹಾದಿಗಳ ಮುಂದೆ ಏಕೆ ಅಸಹಾಯಕರಂತೆ ಕೈಚೆಲ್ಲುತ್ತಾರೆ? ಒಂದು ವೇಳೆ ಜಿಹಾದಿಗಳು ಚಿಕ್ಕ ಮಕ್ಕಳನ್ನು ಉಪಯೋಗಿಸಿ ಹಿಂದೂಗಳನ್ನು ನಿರ್ನಾಮ ಮಾಡುವವರಿದ್ದರೆ, ಹಿಂದೂಗಳನ್ನು ಕಾಯುವವರು ಯಾರು? ಈಗ ನಡೆದ ಘಟನೆಯಿಂದ ಹಿಂದೂಗಳಿಗೆ ಹಾನಿಯಾಗಿದೆ. ಮುಂದುವರೆದು, ಮಾನಸಿಕವಾಗಿ ಕುಸಿದಿರುವ ಹಿಂದೂಗಳು ಭವಿಷ್ಯದಲ್ಲಿ ಹೇಗೆ ಎದ್ದು ನಿಲ್ಲಬಲ್ಲರು?

‘ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಕಡಿಮೆಯಾಗಿದೆ’ ಎಂದು ಯಾರಾದರೂ ಹೇಳುತ್ತಿದ್ದರೆ, ಅವರು ನೂಹ್‌ನಲ್ಲಿ ನಡೆದ ಘಟನೆಯನ್ನು ನೋಡಬೇಕು. ಇದರಿಂದ ಜಿಹಾದಿಗಳು ಹೆಚ್ಚು ಜಾಗೃತರಾಗಿದ್ದಾರೆ, ಶಸ್ತ್ರಸಜ್ಜಿತರಾಗಿದ್ದಾರೆ ಎಂದು ಕಂಡು ಬರುತ್ತದೆ. ಭಾರತವನ್ನು ‘ಗಜವಾ-ಎ-ಹಿಂದ್’ ಮಾಡಲು ಅವರು ವಿವಿಧ ಷಡ್ಯಂತ್ರ್ಯಗಳನ್ನು ರಚಿಸುತ್ತಿದ್ದಾರೆ ಮತ್ತು ದುರ್ದೈವದಿಂದ ಅದರಲ್ಲಿ ಅವರು ಯಶಸ್ವಿಯಾಗುತ್ತಿದ್ದಾರೆ. ಇದರಿಂದ ಹಿಂದೂಗಳ ಭವಿಷ್ಯ ಅಪಾಯದಲ್ಲಿದೆ. ಅವರನ್ನು ಪೊಲೀಸರು ರಕ್ಷಿಸುವುದಿಲ್ಲ, ಸರಕಾರವೂ ರಕ್ಷಿಸುವುದಿಲ್ಲ, ರಾಜಕಾರಣಿಗಳೂ ರಕ್ಷಿಸುವುದಿಲ್ಲ. ನೂಹ್ ನಂತರ ಘಟನೆಗಳು ಇದೇ ರೀತಿ ಮುಂದುವರಿದರೆ, ಹಿಂದೂಗಳು ಅಲ್ಪಸಂಖ್ಯಾತರಾಗಲು ಸಮಯ ತಗಲುವುದಿಲ್ಲ.

ಭಾರತವನ್ನು ಇಸ್ಲಾಮಿಸ್ತಾನಗೊಳಿಸುವ ಜಿಹಾದಿಗಳ ಷಡ್ಯಂತ್ರವನ್ನು ನಾಶಗೊಳಿಸಲು ರಕ್ಷಣಾ ಇಲಾಖೆಯು ಅಧಿಕ ಸುಸಜ್ಜಿತಗೊಳ್ಳುವುದು ಆವಶ್ಯಕ