ಭಕ್ತಿಯೋಗದ ಆಧ್ಯಾತ್ಮಿಕ ಗುಣವೈಶಿಷ್ಟ್ಯ ಮತ್ತು ಇತರ ಯೋಗಮಾರ್ಗಗಳಿಗಿಂತ ಭಕ್ತಿಮಾರ್ಗದ ಸಾಧನೆಯಿಂದ ಸಂತರಾದವರ ಸಂಖ್ಯೆ ಹೆಚ್ಚಿರಲು ಕಾರಣಗಳು !

ಅಧ್ಯಾತ್ಮದಲ್ಲಿ ಜ್ಞಾನಯೋಗ, ಧ್ಯಾನಯೋಗ, ಕರ್ಮಯೋಗ, ಹಠಯೋಗ, ಶಕ್ತಿಪಾತಯೋಗ, ನಾಮಸಂಕೀರ್ತನಯೋಗ ಮತ್ತು ಭಕ್ತಿಯೋಗ ಇಂತಹ ವಿವಿಧ ಯೋಗಮಾರ್ಗಗಳಿವೆ. ವಿವಿಧ ಯೋಗಮಾರ್ಗಗಳಿಗನುಸಾರ ಸಾಧನೆಯನ್ನು ಮಾಡಲು ಆವಶ್ಯಕವಾಗಿರುವ ಗುಣಗಳು ಮತ್ತು ಅವುಗಳಿಂದ ವಿಕಸನಗೊಳ್ಳುವ ಗುಣಗಳು ಮುಂದಿನಂತಿವೆ.

ಕು. ಮಧುರಾ ಭೋಸಲೆ

೧. ವಿವಿಧ ಯೋಗಮಾರ್ಗಗಳ ಆಧ್ಯಾತ್ಮಿಕ ಮಹತ್ವ !

೨. ಕರ್ಮಗಳ ಮೇಲೆ ವಿವಿಧ ಯೋಗಮಾರ್ಗಗಳಿಂದಾಗುವ ಪರಿಣಾಮ : ಜ್ಞಾನಯೋಗದಿಂದ ಪರಿಪೂರ್ಣತೆ, ಧ್ಯಾನಯೋಗದಿಂದ ಕರ್ಮದಲ್ಲಿ ಏಕಾಗ್ರತೆ ಮತ್ತು ಸ್ಪಷ್ಟತೆ (ನಿಖರತೆ), ಕರ್ಮಯೋಗದಿಂದ ಜಿಗುಟುತನ ಮತ್ತು ಕೃತಿಶೀಲತೆ, ಮತ್ತು ಭಕ್ತಿಯೋಗದಿಂದ ಭಾವಪೂರ್ಣತೆ.

೩. ಭಕ್ತಿಯೋಗದ ಆಧ್ಯಾತ್ಮಿಕ ಮಹತ್ವ : ‘ಭಕ್ತಿಯ ಮಾಧ್ಯಮದಿಂದ ಭಗವಂತನೊಂದಿಗೆ ಅನುಸಂಧಾನ ಸಾಧಿಸುವುದು, ಇದು ಭಕ್ತಿಯೋಗದ ವೈಶಿಷ್ಟ್ಯವಾಗಿದೆ. ಭಕ್ತಿಯೋಗದ ಸಂತರಲ್ಲಿ ಭಗವಂತನ ಬಗ್ಗೆ ಭಾವ ಮತ್ತು ಭಕ್ತಿ, ಸೇವಾವೃತ್ತಿ, ತ್ಯಾಗ, ಪ್ರೀತಿ, ಪರೇಚ್ಛೆಯಿಂದ ವರ್ತನೆ, ಅಹಂ ಕಡಿಮೆ, ಇತ್ಯಾದಿ ಗುಣವೈಶಿಷ್ಟ್ಯಗಳು ಅತ್ಯಧಿಕ ಪ್ರಮಾಣದಲ್ಲಿ ಕಂಡು ಬರುತ್ತವೆ. ಈ ಗುಣವೈಶಿಷ್ಟ್ಯಗಳ ಮಹತ್ವ ಮುಂದಿನಂತಿದೆ.

೪. ಇತರ ಯೋಗಮಾರ್ಗಗಳ ತುಲನೆಯಲ್ಲಿ ಭಕ್ತಿಮಾರ್ಗಿ ಜೀವದ ಆಧ್ಯಾತ್ಮಿಕ ಉನ್ನತಿಯು ಬೇಗನೆ ಆಗಿ ಅವನು ಬೇಗನೆ ಸಂತಪದವಿಯನ್ನು ಪಡೆಯುವುದರ ಹಿಂದಿನ ವಿವಿಧ ಕಾರಣಗಳು !

೪ ಅ. ವಿವಿಧ ಪ್ರಕಾರದ ಲಯಗಳು, ಸಂಬಂಧಿತ ಸೂಕ್ಷ್ಮ ದೇಹ ಮತ್ತು ಸೂಕ್ಷ್ಮ ಕೋಶಗಳು ಮತ್ತು ಲಯವಾಗುವ ಪ್ರಕ್ರಿಯೆ ಎಷ್ಟು ಶೇ. ಮಟ್ಟದಿಂದ ಆರಂಭವಾಗುತ್ತದೆ ?

ಟಿಪ್ಪಣಿ – ಮೇಲಿನ ಕೋಷ್ಟಕದಿಂದ, ‘ಇತರ ಯೋಗಮಾರ್ಗಗಳ ತುಲನೆಯಲ್ಲಿ ಭಕ್ತಿಮಾರ್ಗದ ಸಾಧನೆಯನ್ನು ಮಾಡುವುದರಿಂದ ಜೀವದ ಮನೋಲಯ, ಬುದ್ಧಿಲಯ, ಅಹಂಲಯ ಮತ್ತು ಚಿತ್ತಲಯವು ತುಲನಾತ್ಮಕ ರೀತಿಯಲ್ಲಿ ಬೇಗನೆ ಆಗುತ್ತದೆ’ ಎಂಬುದು ಸ್ಪಷ್ಟವಾಗುತ್ತದೆ. ಆದುದರಿಂದ ಇತರ ಯೋಗಮಾರ್ಗದವರ ತುಲನೆಯಲ್ಲಿ ಭಕ್ತಿಮಾರ್ಗದ ಜೀವದ ಆಧ್ಯಾತ್ಮಿಕ ಉನ್ನತಿಯು ಬೇಗನೆ ಆಗಿ ಅದು ಬೇಗನೆ ಸಂತಪದವಿಯನ್ನು ಪಡೆಯುತ್ತದೆ ಉದಾ. ಪರಾತ್ಪರ ಗುರು ಡಾ. ಆಠವಲೆಯವರ ಗುರು ಪ.ಪೂ. ಭಕ್ತರಾಜ ಮಹಾರಾಜರು ತಮ್ಮ ಗುರುಗಳಾದ ಪ.ಪೂ. ಅನಂತಾನಂದ ಸಾಯೀಶ ಇವರ ಸೇವೆಯನ್ನು ಎಷ್ಟು ಭಾವಪೂರ್ಣ ಮಾಡಿದ್ದರೆಂದರೆ, ಅವರಿಗೆ ೯ ಫೆಬ್ರವರಿ ೧೯೫೬ ರಂದು ಅವರ ಗುರುಗಳ ಭೇಟಿಯಾದ ನಂತರ ೧೫ ಫೆಬ್ರವರಿ ೧೯೫೬ ರಂದು ಗುರುಮಂತ್ರವು ಸಿಕ್ಕಿತು ಮತ್ತು ೧೬ ಫೆಬ್ರವರಿ ೧೯೫೬ ರಂದು ಪ.ಪೂ. ಅನಂತಾನಂದ ಸಾಯೀಶ ಇವರು ಅವರ ನಾಮಕರಣವನ್ನು ‘ಭಕ್ತರಾಜ’ ಎಂದು ಮಾಡಿದುದರಿಂದ ಅವರು ಸಂತಪದವಿಯಲ್ಲಿ ವಿರಾಜಮಾನರಾದರು.

೪ ಆ. ಮನಸ್ಸಿನಲ್ಲಿರುವ ಭಾವದ ಸೂಕ್ಷ್ಮ ಕೇಂದ್ರದ ಮಹತ್ವ : ಭಾವದ ಕೇಂದ್ರವು ಅನಾಹತಚಕ್ರದ ಸ್ಥಳದಲ್ಲಿರುತ್ತದೆ. ದೇಹದಲ್ಲಿನ ಅನಾಹತಚಕ್ರವು ಮನಸ್ಸಿಗೆ ಸಂಬಂಧಿತವಾಗಿದೆ. ಆದುದರಿಂದ ಯಾವಾಗ ಭಾವಜಾಗೃತಿಯಾಗುತ್ತದೆಯೋ, ಆಗ ಮನಸ್ಸಿನಲ್ಲಿ ಭಗವಂತನೊಂದಿಗೆ ನೇರ ಅನುಸಂಧಾನವು ಸಾಧಿಸಲ್ಪಡುತ್ತದೆ. ಆಗ ಭಗವಂತನ ಬಗೆಗಿನ ಪ್ರೀತಿಮಯ ಆಪತತ್ತ್ವದಿಂದ ತುಂಬಿಕೊಂಡ ಭಾವದ ಚೈತನ್ಯಲಹರಿಗಳು ಸಂಪೂರ್ಣ ಮನಸ್ಸಿನಲ್ಲಿ ಹರಡಿ ಮನಸ್ಸಿನ ಶುದ್ಧಿಯಾಗಿ ಮನಸ್ಸಿನ ರಜ-ತಮ ಪ್ರಧಾನ ಘಟಕಗಳು ಕಡಿಮೆಯಾಗಿ ಮನಸ್ಸು ಸಾತ್ತ್ವಿಕವಾಗಲು ಸಹಾಯವಾಗುತ್ತದೆ. ಆದುದರಿಂದ ಯಾವಾಗ ಭಾವಜಾಗೃತಿಯಾಗು ತ್ತದೆಯೋ, ಆಗ ವ್ಯಕ್ತಿಯ ಮನಸ್ಸಿನ ಶುದ್ಧೀಕರಣದ ಪ್ರಕ್ರಿಯೆ ಆರಂಭವಾಗುತ್ತದೆ. ಈ ರೀತಿ ಯಾವಾಗ ಮನಸ್ಸಿನ ಭಾವದ ಸೂಕ್ಷ್ಮ ಕೇಂದ್ರವು ದೃಢವಾಗುತ್ತದೆಯೋ, ಆಗ ಬಾಹ್ಯ ಮನಸ್ಸು, ಬುದ್ಧಿ, ಅಹಂ ಮತ್ತು ಚಿತ್ತ (ಸೂಕ್ಷ್ಮ ಮನಸ್ಸು) ಇವುಗಳ ಶುದ್ಧಿಯಾಗುತ್ತದೆ. ಆದುದರಿಂದ ಮನೋಲಯ, ಬುದ್ಧಿಲಯ, ಅಹಂಲಯ ಮತ್ತು ಚಿತ್ತಲಯ ಇವುಗಳ ಲಯದ ಪ್ರಕ್ರಿಯೆ ವೇಗದಿಂದ ಪೂರ್ಣಗೊಂಡು ವ್ಯಕ್ತಿಯ ಸಂಪೂರ್ಣ ಪಿಂಡ ಅಥವಾ ಲಿಂಗ ದೇಹವು ಇತರ ಯೋಗಮಾರ್ಗಗಳ ತುಲನಾತ್ಮಕ ರೀತಿಯಲ್ಲಿ ಬೇಗನೆ ಶುದ್ಧವಾಗುತ್ತದೆ. ಇಂತಹ ಭಕ್ತಿಮಾರ್ಗದ ಜೀವದ ಶುದ್ಧ ಅಂತಃಕರಣದಲ್ಲಿ ಭಗವಂತನು ಸದಾ ನೆಲೆಸಿರುತ್ತಾನೆ.

೪ ಇ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದ ಭಾವದ ವಿವಿಧ ಘಟಕಗಳು ಮತ್ತು ಅವುಗಳ ಪ್ರಮಾಣ

ಟಿಪ್ಪಣಿ – ಪ್ರಾರ್ಥನೆ, ಕೃತಜ್ಞತೆ, ಸೇವೆ ಮತ್ತು ಪ್ರೀತಿ ಈ ಘಟಕಗಳು ಕೃತಿಯ ಸ್ತರದ್ದಾಗಿವೆ. ಮತ್ತು ಆನಂದ ಮತ್ತು ಶಾಂತಿ ಇವು ಪರಿಣಾಮ ಸ್ವರೂಪವಾಗಿವೆ. ಇತರ ಘಟಕಗಳಲ್ಲಿ ಅಷ್ಟಸಾತ್ತ್ವಿಕ ಭಾವ, ಅಂದರೆ

೧. ಸ್ವೇದ (ಬೆವರು)

೨. ಸ್ತಂಭ (ತೋಚದಿರುವುದು, ನಿಲ್ಲುವುದು, ಸ್ತಬ್ಧವಾಗುವುದು (ಬೆರಗಾಗುವುದು),

೩. ರೋಮಾಂಚ

೪. ಸ್ವರಭಂಗ (ಸ್ವರವು ಗದ್ಗದಿತವಾಗುವುದು)

೫. ಕಂಪನ

೬. ವೈವರ್ಣ್ಯ (ವರ್ಣ, ಬಣ್ಣ ಬದಲಾಗುವುದು)

೭. ಕಣ್ಣೀರು

೮. ಮೂರ್ಛೆ ಇವು ಒಳಗೊಂಡಿವೆ. (ಮುಂದುವರಿಯುವುದು)

(ಆಧಾರ : ಸನಾತನದ ಗ್ರಂಥ : ‘ಭಾವ ಮತ್ತು ಭಾವದ ವಿಧಗಳು’.)

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ), (ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೬.೨೦೨೩)