ಜೈಪುರನ ‘ಸಿ-20’ ಪರಿಷತ್ತಿನಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಆಧ್ಯಾತ್ಮಿಕ ಸಂಶೋಧನೆ ಸಾದರ !
‘ವೈವಿಧ್ಯತೆ, ಸಮಾವೇಶ ಮತ್ತು ಪರಸ್ಪರ ಗೌರವ’ ಕುರಿತು ‘ಸಿ-20’ ಪರಿಷತ್ತಿನ ಕಾರ್ಯಕಾರಿ ಗುಂಪಿನಲ್ಲಿ ಭಾಗವಹಿಸಲು ಆಮಂತ್ರಣ ಸಿಕ್ಕಿದನಂತರ ಆನಂದವಾಯಿತು; ಏಕೆಂದರೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ‘ಆಧ್ಯಾತ್ಮಿಕ ಸಂಶೋಧನಾ ಕೇಂದ್ರ’ ಮೇಲಿನ 3 ಅಂಶಗಳ ಪ್ರತ್ಯಕ್ಷ ಉದಾಹರಣೆಯಾಗಿದೆ. ಯಶಸ್ವಿ ಜೀವನಕ್ಕಾಗಿ, ನಾವು ಸಾತ್ವಿಕ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು, ಜೊತೆಗೆ ನಕಾರಾತ್ಮಕತೆಯನ್ನು ತೊಡೆದುಹಾಕಲು ನಿರಂತರವಾಗಿ ಆಧ್ಯಾತ್ಮಿಕ ಸ್ತರದಲ್ಲಿ ಪ್ರಯತ್ನಿಸಬೇಕು. ಈ ಅಂಶವು ಎಲ್ಲಾ ಸಂಸ್ಕೃತಿಗಳಿಗೂ ಅನ್ವಯಿಸುತ್ತದೆ ಮತ್ತು ಸಮಾಜದಲ್ಲಿ ಐಕ್ಯತೆಯನ್ನು ತರುವ ದೃಷ್ಟಿಯಿಂದ ಒಗ್ಗೂಡಿಸುತ್ತದೆ’, ಎಂದು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಶ್ರೀ. ಶಾನ್ ಕ್ಲಾರ್ಕ್ ಅವರು ಪ್ರತಿಪಾದಿಸಿದರು. ರಾಜಸ್ಥಾನದ ಜೈಪುರದಲ್ಲಿ ಇತ್ತೀಚೆಗೆ ನಡೆದ ‘ಸಿ-20’ ಪರಿಷತ್ತಿನಲ್ಲಿ ಶ್ರೀ. ಕ್ಲಾರ್ಕ್ ಮಾತನಾಡುತ್ತಿದ್ದರು. ಈ ವರ್ಷ ಭಾರತವು ಜಿ-20 ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿದೆ. ‘C-20’ ಇದು ‘G-20’ ಪರಿಷತ್ತಿನ ನಾಗರಿಕ ವಿಭಾಗವಾಗಿದೆ.
ಶ್ರೀ. ಶಾನ್ ಕ್ಲಾರ್ಕ್ ಅವರು ಪರಾತ್ಪರ ಗುರು ಡಾ. ಜಯಂತ ಆಠವಲೆ ಅವರ ಮಾರ್ಗದರ್ಶನದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಔರಾ ಮತ್ತು ಎನರ್ಜಿ ಸ್ಕ್ಯಾನರ್‌ಗಳಂತಹ ಸಾಧನಗಳನ್ನು ಬಳಸಿಕೊಂಡು ನಡೆಯುತ್ತಿರುವ ವಿನೂತನ ಆಧ್ಯಾತ್ಮಿಕ ಸಂಶೋಧನೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಓರ್ವ ವ್ಯಕ್ತಿಯ ಪ್ರಭಾವಳಿಯಲ್ಲಿರುವ ನಕಾರಾತ್ಮಕ ಶಕ್ತಿಯು ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಮಟ್ಟದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದನ್ನು ವಿವರಿಸಲು, ದೈನಂದಿನ ಜೀವನದ ಸಾಮಾನ್ಯ ಅಂಶಗಳಾದ ಆಹಾರ, ಸಂಗೀತ, ಚಲನಚಿತ್ರಗಳು, ಆಭರಣಗಳು ಇತ್ಯಾದಿಗಳು ವ್ಯಕ್ತಿಯ ಪ್ರಭಾವಳಿಯ ಮೇಲೆ ಯಾವ ರೀತಿ ಸಕಾರಾತ್ಮಕ ಅಥವಾ ನಕಾರಾತ್ಮಕ ಪರಿಣಾಮ ಬೀರುತ್ತವೆ, ಎಂಬುದಕ್ಕೆ ಸಂಬಂಧಿಸಿದ ವಿವಿಧ ಆಧ್ಯಾತ್ಮಿಕ ಸಂಶೋಧನಾ ಪ್ರಯೋಗಗಳನ್ನು ಅವರು ಪ್ರಸ್ತುತಪಡಿಸಿದರು.
ಉದಾಹರಣೆಗೆ, ಭಯಾನಕ(ಹಾರರ್ ಚಲನಚಿತ್ರ) ಚಲನಚಿತ್ರವನ್ನು ವೀಕ್ಷಿಸುವ ಪ್ರೇಕ್ಷಕರ ಉರ್ಜೆಯ ಸ್ತರದಲ್ಲಾಗುವ ಪರಿಣಾಮವನ್ನು ಅಧ್ಯಯನ ಮಾಡಲು 17 ಜನರ ಮೇಲೆ ಪ್ರಯೋಗವನ್ನು ನಡೆಸಲಾಯಿತು. ಚಲನಚಿತ್ರವನ್ನು ವೀಕ್ಷಿಸುವ ಮೊದಲು ಮತ್ತು ನಂತರ, ಅವರ ಉರ್ಜೆಯ ಮಟ್ಟವನ್ನು ಎರಡು ವೈಜ್ಞಾನಿಕ ಉಪಕರಣಗಳಾದ ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಮತ್ತು ‘ಗ್ಯಾಸ್ ಡಿಸ್ಚಾರ್ಜ್ ವಿಜ್ವಲೈಜೆಶನ್’ ಮತ್ತು ಸೂಕ್ಷ್ಮದರ್ಶಕ ಪರೀಕ್ಷಣೆಯನ್ನು ಬಳಸಿ ಅಧ್ಯಯನ ಮಾಡಲಾಯಿತು. ಚಲನಚಿತ್ರ ನೋಡುವ ಮುನ್ನ 17 ಮಂದಿಯಲ್ಲಿದ್ದ ಸಕಾರಾತ್ಮಕ ಶಕ್ತಿಯು ಚಲನಚಿತ್ರ ನೋಡಿದ ನಂತರ ಶೇ.60 ರಷ್ಟು ಕಮ್ಮಿಯಾಯಿತು. ಕೆಲವರಲ್ಲಿ ಸಂಪೂರ್ಣ ನಾಶವಾಯಿತು. ಎಲ್ಲಾ ವೀಕ್ಷಕರಲ್ಲಿ ನಕಾರಾತ್ಮಕ ಶಕ್ತಿಯು ಶೇ. 107 ರಷ್ಟು ಹೆಚ್ಚಾಯಿತು ಮತ್ತು ಮರುದಿನ ಶೇ. 55 ರಷ್ಟು ಉಳಿದಿತ್ತು. ಇದರಿಂದ ಭಯಾನಕ ಚಲನಚಿತ್ರಗಳನ್ನು ನೋಡುವುದು ನಮ್ಮ ಪ್ರಭಾವಳಿಗಳ ಮೇಲೆ ಹೇಗೆ ಭಯಾನಕ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ, ಎಂಬುದು ಸ್ಪಷ್ಟವಾಗುತ್ತದೆ.
ಪ್ರಸ್ತುತ ಎಲ್ಲಾಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಈ ರೀತಿಯ ಆಧ್ಯಾತ್ಮಿಕ ಮಟ್ಟದ ಮಾಲಿನ್ಯವು ಹೆಚ್ಚಾಗಿದೆ. ಇದರಿಂದ ನಮ್ಮ ರಕ್ಷಣೆಯಾಗಬೇಕೆಂದು ಸಾತ್ವಿಕ ಯಾವುದು ಮತ್ತು ಅಸಾತ್ವಿಕ ಯಾವುದು ಎಂದು ತಿಳಿದು ಸಾಧ್ಯವಿರುವಲ್ಲೆಲ್ಲಾ ಅಸಾತ್ವಿಕ ಆಯ್ಕೆಯನ್ನು ತಪ್ಪಿಸುವುದು ಆವಶ್ಯಕವಾಗಿದೆ; ಆದರೆ ಇದು ಯಾವಾಗಲೂ ಸಾಧ್ಯವಿಲ್ಲ. ಆದ್ದರಿಂದ ಇಂದು ಮುಖ್ಯವಾಗಿ ಅಸಾತ್ವಿಕ ಜಗತ್ತಿನಲ್ಲಿ ನಮ್ಮನ್ನು ರಕ್ಷಿಸಿಕೊಳ್ಳಲು ಜೊತೆಗೆ ನಮಗೆ ಯಶಸ್ಸು ಹಾಗೂ ಆನಂದಮಯ ಜೀವನವನ್ನು ಜೀವಿಸಲು ತಮ್ಮ ತಮ್ಮ ಧರ್ಮದಲ್ಲಿ ಹೇಳಿದಂತೆ ನಾಮಜಪ ಮಾಡುವುದು ಉತ್ತಮ ಪರಿಹಾರವಾಗಿದೆ ಎಂದು ಶ್ರೀ. ಕ್ಲಾರ್ಕ್ ಕೊನೆಯಲ್ಲಿ ತಿಳಿಸಿದರು.