‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಡಿಯಲ್ಲಿ ‘ವಾಸ್ತುಗಳ ಸಾತ್ತ್ವಿಕತೆಯ ಅಧ್ಯಯನ ಕ್ಕೆ ಸಂಬಂಧಿತ ಸಂಶೋಧನಾ ಕಾರ್ಯದಲ್ಲಿ ಪಾಲ್ಗೊಳ್ಳಿ ! – ಸೌ. ಮಧುರಾ ಕರ್ವೆ

‘ಪ್ರಸ್ತುತ ಸಮಾಜದಲ್ಲಿ ವಾಸ್ತು ಶಾಸ್ತ್ರವು ಬಹಳ ಪ್ರಚಲಿತವಿದೆ. ಪ್ರತಿಯೊಬ್ಬರಿಗೂ, ತಮ್ಮ ಮನೆಯು ವಾಸ್ತುಶಾಸ್ತ್ರಕ್ಕನುಸಾರ ಇರಬೇಕು, ಎಂದು ಅನಿಸುತ್ತದೆ. ಮನೆಯಲ್ಲಿ ವಾಸ್ತುದೋಷಗಳಿದ್ದರೆ ಅಲ್ಲಿ ವಾಸಿಸುವವರ ಮೇಲೆ ವಿಪರೀತ ಪರಿಣಾಮಗಳಾಗುತ್ತವೆ. ವಾಸ್ತು ದೋಷವನ್ನು ದೂರಗೊಳಿಸುವ ವಿವಿಧ ಉಪಚಾರಪದ್ಧತಿಗಳು ಸಮಾಜದಲ್ಲಿ ಪ್ರಚಲಿತವಾಗಿವೆ. ಇಲ್ಲಿ ಗಮನದಲ್ಲಿಡಬೇಕಾದ ಅಂಶವೆಂದರೆ ವಾಸ್ತುಶಾಸ್ತ್ರಕ್ಕನುಸಾರ ಮನೆ ಕಟ್ಟಲು ತುಂಬಾ ಮಿತಿಗಳಿರುತ್ತವೆ. ಹಾಗೆಯೇ ವಾಸ್ತುದೋಷ ನಿವಾರಣೆಗಾಗಿ ಎಷ್ಟು ಹಣ ಖರ್ಚು ಮಾಡಿ ಪರಿಹಾರ ಮಾಡಿದರೂ ಅದರ ಪರಿಣಾಮ ಶಾಶ್ವತವಾಗಿರುವುದಿಲ್ಲ. ಇದರ ಮೇಲೆ ಪರಿಣಾಮಕಾರಿ ಪರಿಹಾರವೆಂದರೆ ಪ್ರತಿಯೊಬ್ಬರೂ ನಿಯಮಿತವಾಗಿ ಸಾಧನೆಯನ್ನು ಮಾಡಿ ತಮ್ಮಲ್ಲಿ ಸಾತ್ತ್ವಿಕತೆಯನ್ನು ಹೆಚ್ಚಿಸಬೇಕು, ಆಗ ಅದರಿಂದ ವಾಸ್ತುವಿನ ಮೇಲೆ ಸತತವಾಗಿ ಸಕಾರಾತ್ಮಕ ಪರಿಣಾಮವಾಗುತ್ತಿರುತ್ತದೆ ಮತ್ತು ಅದು ದೀರ್ಘಕಾಲದ ವರೆಗೆ ಇರುತ್ತದೆ. ಇದರ ಅತ್ಯಂತ ಸುಂದರ ಉದಾಹರಣೆಯೆಂದರೆ ಸಂತರ ನಿವಾಸ. ಇಲ್ಲಿ ಹೋದಾಗ ಎಲ್ಲರಿಗೂ ಒಳ್ಳೆಯ ಅನುಭೂತಿಗಳು ಬರುತ್ತವೆ. ಇದರ ಕಾರಣವೇನೆಂದರೆ, ಸಂತರಲ್ಲಿನ ಚೈತನ್ಯದಿಂದ ಅವರ ನಿವಾಸಸ್ಥಾನವು ಸಾತ್ತ್ವಿಕವಾಗಿರುತ್ತದೆ. ಇಂತಹ ಸಾತ್ತ್ವಿಕ ವಾಸ್ತುಗಳಲ್ಲಿ ಚೈತನ್ಯವಿರುವುದರಿಂದ ಅಲ್ಲಿರುವವರಿಗೆ ಅದರ ಲಾಭವಾಗುತ್ತದೆ.

ಸೌ. ಮಧುರಾ ಧನಂಜಯ ಕರ್ವೆ

೧. ವಾಸ್ತುಗಳ ವಿಧಗಳು

೧ ಅ. ಗೃಹವಾಸ್ತು : ಇದರಲ್ಲಿ ಹಂಚಿನ ಮನೆಗಳು, ಹಳೆಯ ಮನೆಗಳು, ಬಡಾವಣೆ (ಫ್ಲ್ಯಾಟ್), ಬಂಗಲೆಗಳು ಇತ್ಯಾದಿ ವಿವಿಧ ರೀತಿಯ ನಿವಾಸಸ್ಥಾನಗಳು ಒಳಗೊಂಡಿವೆ. ಇದರಲ್ಲಿ ಸರ್ವಸಾಮಾನ್ಯ ವ್ಯಕ್ತಿ, ತೊಂದರೆ ಇರುವವರ, ತೊಂದರೆ ಇಲ್ಲದಿರುವವರ, ಶೇ. ೬೦ ರಷ್ಟು ಅಥವಾ ಹೆಚ್ಚು ಮಟ್ಟವಿರುವ ಸಾಧಕರ, ದೈವೀ ಬಾಲಕರ (ಉಚ್ಚ ಸ್ವರ್ಗಲೋಕ, ಮಹರ್ಲೋಕ), ಬಾಲಸಂತರ, ಸಂತರ (ಗುರುಗಳು, ಸದ್ಗುರುಗಳು, ಪರಾತ್ಪರ ಗುರುಗಳು) ಇವರ ನಿವಾಸಸ್ಥಾನಗಳ ಅಧ್ಯಯನ ಮಾಡಬಹುದು.

೧ ಆ. ಔದ್ಯೋಗಿಕ ವಾಸ್ತು : ಇದರಲ್ಲಿ ಅಂಗಡಿಗಳು, ಕಂಪನಿಗಳು, ಕಾರ್ಖಾನೆಗಳು, ಆಸ್ಪತ್ರೆಗಳು ಮುಂತಾದ ವಿಧದ ಔದ್ಯೋಗಿಕ ವಾಸ್ತುಗಳಿರುತ್ತವೆ. ಇದರಲ್ಲಿ ಸರ್ವಸಾಮಾನ್ಯ ವ್ಯಕ್ತಿಯ ಮತ್ತು ಸಾಧಕರ ಔದ್ಯೋಗಿಕ ವಾಸ್ತುಗಳ ಅಧ್ಯಯನ ಮಾಡಬಹುದು. ಇದರಿಂದ ಔದ್ಯೋಗಿಕ ಮಾಡುವ ವ್ಯಕ್ತಿಯು ಸಾಧನೆಯನ್ನು ಮಾಡಿದರೆ, ಅವರ ಸಾತ್ತ್ವಿಕತೆಯಿಂದ ಔದ್ಯೋಗಿಕ ವಾಸ್ತುವಿನ ಮೇಲೆ ಉತ್ತಮ ಪರಿಣಾಮವಾಗಿ ಅದೂ ಚೈತನ್ಯಮಯ ವಾಗುತ್ತದೆ, ಎಂಬುದನ್ನು ಸಮಾಜಕ್ಕೆ ತಿಳಿಸಿ ಅವರನ್ನೂ ಸಾಧನೆಗೆ ಪ್ರವೃತ್ತಗೊಳಿಸಬಹುದು.

೧ ಇ. ಆಧ್ಯಾತ್ಮಿಕ ವಾಸ್ತು : ಇದರಲ್ಲಿ ಮುಂದಿನ ವಿಧಗಳಿರುತ್ತವೆ. ಇದರಿಂದ ಆಧ್ಯಾತ್ಮಿಕ ವಾಸ್ತುಗಳ ಮಹತ್ತ್ವ ಎಲ್ಲರಿಗೂ ಗಮನಕ್ಕೆ ಬರುವುದು. ಹಾಗೆಯೇ ಅಲ್ಲಿನ ಚೈತನ್ಯವನ್ನು ಉಳಿಸಿ ಕೊಳ್ಳುವುದು ಎಷ್ಟು ಆವಶ್ಯಕವಾಗಿದೆ ? ಮತ್ತು ಅದಕ್ಕಾಗಿ ಹೇಗೆ ಪ್ರಯತ್ನಿಸಬಹುದು ? ಎಂಬುದನ್ನೂ ಸಮಾಜಕ್ಕೆ ಹೇಳಬಹುದು.

೧. ದೇವತೆಗಳ ದೇವಸ್ಥಾನಗಳು : ಶ್ರೀರಾಮ, ಶ್ರೀಕೃಷ್ಣ, ಹನುಮಾನ, ಗಣಪತಿ, ದತ್ತ, ಶಿವ, ಶ್ರೀ ದುರ್ಗಾದೇವಿ ಮೊದಲಾದ ಉಚ್ಚ ದೇವತೆಗಳು, ಕುಲದೇವತೆ ಮತ್ತು ಗ್ರಾಮದೇವತೆಯ ದೇವಸ್ಥಾನಗಳು.

೨. ತೀರ್ಥಕ್ಷೇತ್ರಗಳು : ಜ್ಯೋತಿರ್ಲಿಂಗಗಳು, ಶಕ್ತಿಪೀಠಗಳು, ಚಾರಧಾಮ ಇತ್ಯಾದಿ

೩. ಸಂತರಿಗೆ ಸಂಬಂಧಿಸಿರುವ : ಸಂತರ ಮಠಗಳು / ಆಶ್ರಮ / ನಿವಾಸಸ್ಥಾನ / ಉಪಾಸನಾ-ಸ್ಥಾನಗಳು (ತಪೋಸ್ಥಾನ) / ಸಮಾಧಿಸ್ಥಳಗಳು

೪. ಆಧ್ಯಾತ್ಮಿಕ ಸಂಸ್ಥೆಗಳು : ಸಂಸ್ಥೆಯ ಕಚೇರಿಗಳು, ಅವರ ಆಶ್ರಮಗಳು ಇತ್ಯಾದಿ.

೨. ವಾಸ್ತುಗಳ ಸಂಶೋಧನೆ

ವಾಸ್ತುಗಳ ಸಂಶೋಧನೆಯನ್ನು ಮುಂದೆ ಕೊಟ್ಟಿರುವ ಮಾಧ್ಯಮದಿಂದ ಮಾಡಬಹುದು.

೨ ಅ. ವಾಸ್ತುಶಾಸ್ತ್ರದ ದೃಷ್ಟಿಯಿಂದ ವಾಸ್ತುವಿನ ಅಧ್ಯಯನ

೧. ವಾಸ್ತು, ವಾಸ್ತುಶಾಸ್ತ್ರದ ನಿಯಮಕ್ಕನುಸಾರ ಇದೆಯೇ ? ಇದ್ದರೆ ಶೇಕಡಾವಾರು ಎಷ್ಟಿದೆ ?
೨. ವಾಸ್ತುವಿನಲ್ಲಿನ ದೇವರಕೋಣೆಯ ಜಾಗ ಮತ್ತು ದೇವರಕೋಣೆಯಲ್ಲಿನ ದೇವತೆಗಳ ರಚನೆಗಳ ಅಧ್ಯಯನ
೩. ವಾಸ್ತುವಿನ ಶುದ್ಧಿಯನ್ನು ಮಾಡಲಾಗುತ್ತದೆಯೇ ? ಯಾವ ರೀತಿ ಮತ್ತು ಎಷ್ಟು ಬಾರಿ ಮಾಡಲಾಗುತ್ತದೆ ?

೨ ಆ. ಸಾಧನೆಯಿಂದ ವಾಸ್ತುವಿನ ಮೇಲಾಗುವ ಪರಿಣಾಮ : ವಾಸ್ತವ್ಯವಿರುವ ವಾಸ್ತುಗಳ ಸಂದರ್ಭದಲ್ಲಿ ಮುಂದಿನ ಮಾಹಿತಿ ಯನ್ನು ಸಂಗ್ರಹಿಸಬಹುದು.

೧. ಮನೆಯ ಸದಸ್ಯರು ಕುಲಾಚಾರಗಳನ್ನು ಪಾಲಿಸುತ್ತಾರೆಯೇ ?

೨. ಮನೆಯ ಸದಸ್ಯರು ಉಪಾಸನೆ (ಸಾಧನೆ) ಮಾಡುತ್ತಾರೆಯೇ ಮತ್ತು ಯಾವುದು ಮಾಡುತ್ತಾರೆ ? ಉಪಾಸನೆಯು ನಿಯಮಿತವೋ ಅಥವಾ ಪ್ರಾಸಂಗಿಕವೋ ?

೩. ಮನೆಯಲ್ಲಿ ವಾಸಿಸುವವರಿಗೆ ಪೂರ್ವಜರ ಅಥವಾ ಕೆಟ್ಟ ಶಕ್ತಿಗಳ ತೊಂದರೆ ಇದೆಯೇ ? ಇದ್ದರೆ ಅವುಗಳ ತೀವ್ರತೆ ಎಷ್ಟಿದೆ ? ತೊಂದರೆಯ ಸ್ವರೂಪ ಹೇಗಿದೆ ?

೪. ಮನೆಯಲ್ಲಿ ಸತ್ಸಂಗ ನಡೆಯುತ್ತದೆಯೇ ? ಅಥವಾ ಸಂತರ ಆಗಮನ ಇರುತ್ತದೆಯೇ ? ಅಥವಾ ಅವರ ಸ್ಥಳ, ಹಾಸಿಗೆ ಏನಾದರೂ ಇದೆಯೇ ?

೫. ಸಾಧನೆಯನ್ನು ಮಾಡುವವರಿಗೆ ಅವರ ಮನೆಯಲ್ಲಿ ಏನಾದರು ವೈಶಿಷ್ಟ್ಯಪೂರ್ಣ ಬದಲಾವಣೆಯ ಅರಿವಾಗುತ್ತದೆಯೇ ?
ಈ ಬದಲಾವಣೆಯು ಯಾವಾಗಿನಿಂದ ಅರಿವಾಗತೊಡಗಿತು ?

೨ ಇ. ಸೂಕ್ಷ್ಮ ಪರೀಕ್ಷಣೆ : ವಾಸ್ತುವಿನಲ್ಲಿ ಹೋದನಂತರ ‘ಮನಸ್ಸಿಗೆ ಏನು ಅರಿವಾಗುತ್ತದೆ ?, ಎಂಬುದರ ಅಧ್ಯಯನ ಮಾಡುವುದು.

೨ ಈ. ಲೋಲಕ ಪರೀಕ್ಷಣೆ : ವಾಸ್ತುವಿನಲ್ಲಿನ ಸಕಾರಾತ್ಮಕ ಮತ್ತು ನಕಾರಾತ್ಮಕ ಸ್ಪಂದನಗಳ ಅಧ್ಯಯನ.

೨ ಉ. ವೈಜ್ಞಾನಿಕ ಉಪಕರಣದಿಂದ ಸಂಶೋಧನೆ

೧. ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣದಿಂದ ವಾಸ್ತು ಮತ್ತು ಅಲ್ಲಿನ ಮಣ್ಣು (ಧೂಳು ಇತ್ಯಾದಿ), ನೀರು ಮತ್ತು ವಾಯುಮಂಡಲದಲ್ಲಿನ ಸಕಾರಾತ್ಮಕ ಮತ್ತು ನಕಾರಾತ್ಮಕ ಸ್ಪಂದನಗಳ ಅಧ್ಯಯನ ಮಾಡುವುದು.

೨. ‘ಪಾಲಿಕಾಂಟ್ರಾಸ್ಟ ಇಂಟರಫೆರನ್ಸ್ ಫೊಟೊಗ್ರಾಫಿ (ಪಿ.ಐ.ಪಿ.) ತಂತ್ರಜ್ಞಾನದ ಮೂಲಕ ವಾಸ್ತುವಿನಲ್ಲಿನ ಸಾತ್ತ್ವಿಕತೆಯ ಅಧ್ಯಯನ ಮಾಡುವುದು.

೩. ‘ರಿಝೋನೆನ್ಸ್ ಫಿಲ್ಡ್ ಇಮೇಜಿಂಗ್ (ಆರ್.ಎಫ್.ಐ.) ಉಪಕರಣದಿಂದ ವಾಸ್ತುವಿನ ಊರ್ಜಾಕ್ಷೇತ್ರದ ಸ್ಥಿತಿಯ ಅಧ್ಯಯನ ಮಾಡುವುದು.

ಮೇಲೆ ಕೊಟ್ಟಿರುವುದನ್ನು ಹೊರತುಪಡಿಸಿ ಇತರ ಕೆಲವು ವೈಜ್ಞಾನಿಕ ಉಪಕರಣಗಳಿಂದ ಸಂಶೋಧನೆಯನ್ನು ಮಾಡಲು ಸಾಧ್ಯವಾದರೆ ಅದರ ಸವಿಸ್ತಾರ ಮಾಹಿತಿಯನ್ನು ‘ವಿ-ಅಂಚೆಯ ಮೂಲಕ ಕಳುಹಿಸಬೇಕು.

ಶ್ರೀಗುರುಚರಣಗಳಲ್ಲಿ ಕೃತಜ್ಞತೆಗಳು !

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ ಮತ್ತು ಶ್ರೀ. ಧನಂಜಯ ಕರ್ವೆ, ಫೋಂಡಾ, ಗೋವಾ. (೨೮.೬.೨೦೨೩)

ಸಾಧಕರಿಗೆ ಸೂಚನೆ ಮತ್ತು ವಾಸ್ತುತಜ್ಞರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಡಿಯಲ್ಲಿ ‘ವಾಸ್ತುಗಳಲ್ಲಿನ ಸಾತ್ತ್ವಿಕತೆಯ ಅಧ್ಯಯನ ಈ ಸಂದರ್ಭದಲ್ಲಿನ ಸಂಶೋಧನಾ ಕಾರ್ಯದಲ್ಲಿ ಪಾಲ್ಗೊಂಡು ಸಾಧನೆಯ ಸುವರ್ಣಾವಕಾಶದ ಲಾಭವನ್ನು ಪಡೆಯಿರಿ !

ಈ ಸಂಶೋಧನೆಯ ಕಾರ್ಯದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಜಿಲ್ಲಾಸೇವಕರ ಮಾಧ್ಯಮದಿಂದ ಮುಂದಿನ ಕೋಷ್ಟಕಕ್ಕನುಸಾರ ತಮ್ಮ ಮಾಹಿತಿಯನ್ನು [email protected] ಈ ಗಣಕೀಯ ವಿಳಾಸಕ್ಕೆ ಅಥವಾ ಅಂಚೆಯ ವಿಳಾಸಕ್ಕೆ ಕಳುಹಿಸಬೇಕು. ವಿ-ಅಂಚೆಯನ್ನು ಕಳುಹಿಸುವಾಗ ಅದರ ವಿಷಯದಲ್ಲಿ ದಯವಿಟ್ಟು ‘ಸಾತ್ತ್ವಿಕತೆಯ ದೃಷ್ಟಿಕೋನದಿಂದ ವಾಸ್ತುವಿನ ಅಧ್ಯಯನ ಎಂದು ಉಲ್ಲೇಖಿಸಿ.

ಅಂಚೆಗಾಗಿ ವಿಳಾಸ : ಶ್ರೀ. ಆಶಿಷ ಸಾವಂತ, ಛಿ/o ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’, ಭಗವತಿಕೃಪಾ ಅಪಾರ್ಟಮೆಂಟ್ಸ್, ಎಸ್-೧, ಎರಡನೇ ಮಹಡಿ, ಬಿಲ್ಡಿಂಗ್ ಎ, ಢವಳಿ, ಫೋಂಡಾ, ಗೋವಾ – ೪೦೩೪೦೧.