ಡೆನ್ಮಾರ್ಕನ ಈಜಿಪ್ತ ಮತ್ತು ತುರ್ಕಿಯ ರಾಯಭಾರ ಕಚೇರಿಗಳ ಮುಂದೆ ಕುರಾನಗೆ ಬೆಂಕಿ !

ಕೋಪೆನಹೆಗನ – ಡೆನ್ಮಾರ್ಕನ ರಾಜಧಾನಿ ಕೋಪೆನಹೆಗನಲ್ಲಿ ಜುಲೈ ೨೫ ರಂದು, ಈಜಿಪ್ಟ್ ಮತ್ತು ತುರ್ಕಿಯ ರಾಯಭಾರ ಕಚೇರಿಗಳ ಮುಂದೆ ಮೂರನೇ ಬಾರಿ ಕುರಾನ ಸುಡಲಾಯಿತು. ಈ ಘಟನೆಯ ಕುರಿತು ಜಗತ್ತಿನಾದ್ಯಂತ ಇಸ್ಲಾಮಿಕ್ ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿವೆ. ಡೆನ್ಮಾರ್ಕ ಈ ಘಟನೆಯನ್ನು ಖಂಡಿಸಿದೆ; ಆದರೆ ಅದೇ ಸಮಯದಲ್ಲಿ, ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ನಿಯಮಗಳಿಂದ ಈ ಘಟನೆಗಳನ್ನು ನಿಲ್ಲಿಸಲಾಗುವುದಿಲ್ಲ’ ಎಂದು ಅವರ ಅಭಿಪ್ರಾಯವಾಗಿದೆ.

‘ಡ್ಯಾನಿಷ್ ಪ್ಯಾಟ್ರಿಯಟ್ಸ್’ ಎಂಬ ಗುಂಪುಯೊಂದು ಕೋಪೆನಹೆಗನಲ್ಲಿ ಕುರಾನ ಅನ್ನು ಸುಟ್ಟು ಹಾಕಿತು. ಈ ಗುಂಪು ಈ ಹಿಂದೆ ಇರಾಕಿನ ರಾಯಭಾರಿ ಕಚೇರಿಯ ಮುಂದೆ ಕುರಾನ ಅನ್ನು ಸುಟ್ಟು ಹಾಕಿತ್ತು. ಕಳೆದ ತಿಂಗಳು ಇಂತಹ ೨ ಘಟನೆಗಳು ಸ್ವೀಡನ್‌ನಲ್ಲಿ ನಡೆದಿವೆ. ತುರ್ಕಿಯು ಇಸ್ಲಾಂ ವಿರುದ್ಧದ ದ್ವೇಷಪೂರ್ಣ ಅಪರಾಧಗಳನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಡೆನ್ಮಾರ್ಕ್‌ಗೆ ಕರೆ ನೀಡಿದೆ.