|
ಹಿಂದುತ್ವನಿಷ್ಠ ರಾಜಕೀಯ ಪಕ್ಷಗಳು ಅಥವಾ ಜನಪ್ರತಿನಿಧಿ ಗಳು ಹಿಂದೂಗಳ ಘೋಷಣಾಪತ್ರದಲ್ಲಿನ ಬೇಡಿಕೆಗಳನ್ನು ತಮ್ಮ ಘೋಷಣಾಪತ್ರದಲ್ಲಿ ಸಮಾವೇಶಗೊಳಿಸಿ ಯಾರು ಆ ಬೇಡಿಕೆಗಳನ್ನು ಪೂರ್ಣಗೊಳಿಸಲು ಒಪ್ಪಿಕೊಳ್ಳುತ್ತಾರೆಯೋ, ಅಂತಹ ಜನಪ್ರತಿನಿಧಿಗಳಿಗೆ ಅಥವಾ ಪಕ್ಷಕ್ಕೆ ಮತವನ್ನು ನೀಡುವಂತೆ ಹಿಂದೂಗಳಿಗೆ ಕರೆ ನೀಡಲಾಗುವುದು. ರಾಜಕೀಯ ಪಕ್ಷಗಳು ಸ್ವಚ್ಛ ಚಾರಿತ್ರ್ಯದ ಮತ್ತು ಹಿಂದೂಹಿತದ ಕಾರ್ಯವನ್ನು ಮಾಡುವವರಿಗೆ ಅಭ್ಯರ್ಥಿಸ್ಥಾನವನ್ನು ನೀಡಬೇಕು. ಅಲ್ಪಸಂಖ್ಯಾತರ ಹೆಸರಿನಲ್ಲಿ ಓಲೈಕೆಯನ್ನು ಮಾಡದೇ ಎಲ್ಲ ನಾಗರಿಕರಿಗೆ ಸಮಾನ ಅಧಿಕಾರವನ್ನು ಕೊಡಬೇಕು. ಭಾರತವನ್ನು ‘ಹಿಂದೂ ರಾಷ್ಟ್ರವೆಂದು ಘೋಷಿಸಿ ಹಿಂದೂ ಗಳಿಗೆ ಸಂವಿಧಾನಾತ್ಮಕ ಅಧಿಕಾರವನ್ನು ಕೊಡಬೇಕು. – (ಸದ್ಗುರು) ಡಾ. ಚಾರುದತ್ತ ಪಿಂಗಳೆ |
‘ಮುಂಬರುವ ಕೆಲವು ದಿನಗಳಲ್ಲಿ ದೇಶಾದ್ಯಂತ ವರ್ಷ ೨೦೨೪ ರ ಚುನಾವಣೆಯಗಾಳಿ ಬೀಸಲು ಪ್ರಾರಂಭವಾಗುವುದು. ಚುನಾವಣೆಯ ಪ್ರಚಾರ ಪ್ರಾರಂಭವಾದರೆ ನಮ್ಮ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಮೂಡುತ್ತವೆ, ಉದಾ. ಮತದಾನ ಮಾಡಬೇಕೇ ? ಮಾಡಿದರೆ ಯಾರಿಗೆ ಮತದಾನ ಮಾಡಬೇಕು ?ಯಾವ ಪಕ್ಷಕ್ಕೆ ಮತದಾನ ಮಾಡಬೇಕು? ಈಗಿರುವ ಸರಕಾರ ಹಿಂದೂಗಳ ಅಪೇಕ್ಷೆ ಯನ್ನು ಪೂರ್ಣ ಮಾಡಿದೆಯೇ ? ಇಂತಹ ಅನೇಕ ಪ್ರಶ್ನೆಗಳನ್ನು ಹಿಂದುತ್ವನಿಷ್ಠ ಕಾರ್ಯಕರ್ತರೂ ನಮ್ಮಲ್ಲಿಯೂ ವಿಚಾರಿಸಬಹುದು. ನಿಜ ಹೇಳಬೇಕೆಂದರೆ ರಾಜಕೀಯ ಪಕ್ಷಗಳ ಘೋಷಣಾಪತ್ರಗಳು, ಪ್ರಚಾರಸಭೆಗಳು, ರಾಜಕೀಯ ಮುಖಂಡರ ಆಶ್ವಾಸನೆಗಳು, ಇವೆಲ್ಲವೂ ನಿಗದಿತ ಕಾರ್ಯ ಪ್ರಣಾಳಿಯಂತೆ ಕಾರ್ಯನಿರತವಾಗಿರುತ್ತವೆ; ಆದರೂ ಅನೇಕರ ಮನಸ್ಸಿನಲ್ಲಿ ಚುನಾವಣೆಯ ದೃಷ್ಟಿಯಿಂದ ತಮ್ಮ ನಿಲುವನ್ನು ದೃಢಪಡಿಸಿಕೊಳ್ಳಲು ಸ್ವಲ್ಪ ಮಾರ್ಗದರ್ಶನವೂ ಆವಶ್ಯಕವಾಗಿರುತ್ತದೆ. ಆ ದೃಷ್ಟಿಯಿಂದ ಕೆಲವು ಮಾರ್ಗದರ್ಶಕ ಅಂಶಗಳನ್ನು ಈ ಲೇಖನದಲ್ಲಿ ನೀಡುತ್ತಿದ್ದೇನೆ. ಮೂಲದಲ್ಲಿ ಚುನಾವಣೆಯೇ ರಾಜಸಿಕ ವಿಷಯವಾಗಿರುವುದ ರಿಂದ ಒಂದು ವೇಳೆ ಒಂದು ಮನೆಯಲ್ಲಿನ ಸದಸ್ಯರಲ್ಲಿ ಈ ವಿಷಯದ ಚರ್ಚೆ ಪ್ರಾರಂಭವಾದರೆ, ಆ ಚರ್ಚೆಯ ಅಂತ್ಯವು ವಾದದಲ್ಲಿ ಅಥವಾ ಭಿನ್ನಾಭಿಪ್ರಾಯದಲ್ಲಿ ಕೊನೆಗೊಳ್ಳುವುದು. ಆದುದರಿಂದ ಈ ಲೇಖನದಲ್ಲಿ ನೀಡಿರುವ ಅಂಶಗಳ ಸಂದರ್ಭದಲ್ಲಿ ಪ್ರತಿಯೊಬ್ಬರ ಅಭಿಪ್ರಾಯ ಬೇರೆ ಬೇರೆ ಆಗಿರಬಹುದು. ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರಿಗೂ ಬೇರೆ ಬೇರೆ ಅಭಿಪ್ರಾಯ ಮಂಡಿಸುವ ಅಧಿಕಾರ ನೀಡಲಾಗಿದೆ. ಆದುದರಿಂದ ನಮ್ಮ ಅಭಿಪ್ರಾಯ ಕೆಲವು ವಿಷಯಗಳ ಸಂದರ್ಭದಲ್ಲಿ ಸಮಾನ ವಾಗಿಲ್ಲದಿರಬಹುದು. ಚುನಾವಣೆಗಳು ಬರುವವು ಮತ್ತು ಹೋಗುವವು, ಆಡಳಿತಗಾರರು ಪದವಿಗಳನ್ನು ಪಡೆಯುವರು, ಆದರೆ ಇದರಿಂದ ತಕ್ಷಣವೇ ಹಿಂದೂಗಳ ಮುಂದಿರುವ ಸಮಸ್ಯೆಗಳೇನು ನಿವಾರಣೆಯಾಗುವುದಿಲ್ಲ.
ಆಡಳಿತದವರಿಗೆ ೫ ವರ್ಷಗಳಲ್ಲಿ ಒಂದು ಸಲ ಮಾತ್ರ ಕಾರ್ಯವನ್ನು ಮಾಡುವುದಿರುತ್ತದೆ ಮತ್ತು ನಮಗೆ ಪ್ರತಿಯೊಂದು ಕ್ಷಣ, ನಿರಂತರವಾಗಿ ಯಾವುದೇ ಅಪೇಕ್ಷೆಯನ್ನು ಇಟ್ಟುಕೊಳ್ಳದೇ ಹಿಂದುತ್ವಕ್ಕಾಗಿ ಹೋರಾಡಬೇಕಾಗಿರುತ್ತದೆ; ಹಿಂದೂ ರಾಷ್ಟ್ರವು ನಮ್ಮ ಮೂಲ ಉದ್ದೇಶವಾಗಿದೆ, ಇದನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ಮಾಡಬೇಕಾಗಿದೆ.
೧. ವರ್ತಮಾನದ ಚುನಾವಣೆಯು ಪಾಶ್ಚಿಮಾತ್ಯ ಸಂಕಲ್ಪನೆಯ ಕೊಡುಗೆಯಾಗಿದೆ ! : ವಾಸ್ತವದಲ್ಲಿ ವರ್ತಮಾನ ಕಾಲದಲ್ಲಿ ನಡೆಯುವ ಚುನಾವಣೆಗಳು ಭಾರತೀಯ ಸಂಕಲ್ಪನೆಯ ಆಧಾರದಲ್ಲಿಲ್ಲ, ಪಾಶ್ಚಿಮಾತ್ಯ ಕಲ್ಪನೆಯ ಮೇಲಾಧಾರಿತ ಪ್ರಜಾಪ್ರಭುತ್ವದ ವ್ಯವಸ್ಥೆಯ ಒಂದು ಮಹತ್ವದ ಭಾಗವಾಗಿದೆ. ಭಾರತೀಯ ಪರಂಪರೆಯಲ್ಲಿ ‘ಸಿಲೆಕ್ಷನ್ ಅರ್ಥಾತ್ ಎಲ್ಲ ದೃಷ್ಟಿ ಯಿಂದಲೂ ಯೋಗ್ಯ ವ್ಯಕ್ತಿಯ ಆಯ್ಕೆಯನ್ನು ಮಾಡಲಿರುತ್ತದೆ. ಈಗ ‘ಇಲೆಕ್ಷನ್ ಅಂದರೆ ಕೇವಲ ಬಹುಮತದ ಆಧಾರದಲ್ಲಿ ಚುನಾಯಿಸಲಾಗುತ್ತದೆ. ಇದರಲ್ಲಿ ಮತದಾರನಿಗೆ ಮತದಾನವನ್ನು ಹೊರತುಪಡಿಸಿ ಬೇರೆ ಯಾವ ಸ್ಥಾನವೂ ಇರುವುದಿಲ್ಲ. ಅದೇ ರೀತಿ ಚುನಾವಣೆಯನ್ನು ಎದುರಿಸಲು ಅರ್ಥಾತ್ ದೇಶ ಅಥವಾ ರಾಜ್ಯವನ್ನು ನಡೆಸಲು ನೇತಾರನಲ್ಲಿ ಯಾವುದೇ ಅರ್ಹತೆಯಿರುವುದರ ಆವಶ್ಯಕತೆಯೂ ಇಲ್ಲ.
ಮೊದಲು ಭಾರತದಲ್ಲಿ ರಾಜರು, ಪ್ರಧಾನರು, ಮಂತ್ರಿಗಳು, ಸೇನಾಪತಿ ಮುಂತಾದವರಿಗೆ ಗುರುಕುಲದಲ್ಲಿ ಎಲ್ಲ ರೀತಿಯ ತರಬೇತಿಯನ್ನು ನೀಡಲಾಗುತ್ತಿತ್ತು. ಶಸ್ತ್ರ ಮತ್ತು ಶಾಸ್ತ್ರ ಇವುಗಳಲ್ಲಿ ಅವರನ್ನು ನಿಪುಣರನ್ನಾಗಿ ಮಾಡಲಾಗುತ್ತಿತ್ತು. ರಾಜ್ಯವನ್ನು ನಡೆಸುವ ಯೋಗ್ಯತೆ ಮೈಗೂಡಿದ ಬಳಿಕವೇ ಅವರನ್ನು ಕಾರ್ಯಕ್ಕಾಗಿ ನಿಯುಕ್ತಗೊಳಿಸಲಾಗುತ್ತಿತ್ತು. ಆದರೆ ಇಂದು ‘ಮನಿ (ಹಣ) ‘ಜಾತಿ ಮತ್ತು ‘ಮಸಲ ಪವರ್ (ಶಾರೀರಿಕ ಶಕ್ತಿ) ಇವುಗಳ ವಿಚಾರವನ್ನು ಮಾಡಿ ರಾಜಕೀಯ ಪಕ್ಷಗಳಿಂದ ‘ಟಿಕೇಟು ಕೊಡಲಾಗುತ್ತದೆ. ಅದರಲ್ಲಿನ ಒಬ್ಬ ವ್ಯಕ್ತಿ ಶಾಸಕ ನಾಗುತ್ತಾನೆ ಮತ್ತು ಸಾಮಾನ್ಯವಾಗಿ ಚುನಾವಣೆಯ ಮೊದಲು ನೀಡಿರುವ ಎಲ್ಲ ಆಶ್ವಾಸನೆಗಳನ್ನು ಗಾಳಿಗೆ ತೂರುತ್ತಾನೆ. ಇಂತಹ ಎಷ್ಟೋ ಕೊರತೆಗಳು ಸದ್ಯದ ದೋಷಪೂರಿತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದೆ.
೨. ಹಿಂದೂಗಳು ರಾಜಕೀಯ ದೃಷ್ಟಿಯ ಅಭಾವದಿಂದ ‘ಸೆಕ್ಯುಲರ್ (ಜಾತ್ಯತೀತ) ಮಾನಸಿಕತೆಯನ್ನು ಸ್ವೀಕರಿಸುವುದು ಮತ್ತು ಮುಸಲ್ಮಾನ-ಕ್ರೈಸ್ತರು ರಾಜಕೀಯ ದೃಷ್ಟಿಯಿಂದ ಪ್ರಜಾಪ್ರಭುತ್ವವನ್ನು ಉಪಯೋಗಿಸುವುದು ಸದ್ಯದ ಪ್ರಜಾಪ್ರಭುತ್ವದ ಸಂಸತ್ತಿನಲ್ಲಿನ ಬಹುತೇಕ ಜನಪ್ರತಿ ನಿಧಿಗಳು ಹಿಂದೂಗಳಾಗಿದ್ದರೂ, ಕಳೆದ ೭೫ ವರ್ಷಗಳಲ್ಲಿ ಅಧಿಕಾರದಲ್ಲಿದ್ದ ವಿವಿಧ ರಾಜಕೀಯ ಪಕ್ಷಗಳಿಂದ ಹಿಂದೂಗಳ ಹಿತದ ದೃಷ್ಟಿಯಿಂದ ಅತ್ಯಂತ ಕಡಿಮೆ ಕಾರ್ಯಗಳಾಗಿವೆ. ಜನಪ್ರತಿನಿಧಿಗಳು ಹಿಂದೂಗಳಾಗಿದ್ದರೂ, ರಾಜ್ಯ ವ್ಯವಸ್ಥೆ ತನ್ನನ್ನು ‘ಸೆಕ್ಯುಲರ್ ಎಂದು ಘೋಷಿಸುತ್ತದೆ. ಇದರಿಂದ ಹಿಂದೂ ಜನಪ್ರತಿನಿಧಿಗಳ ಮಾನಸಿಕತೆಯೂ ‘ಸೆಕ್ಯುಲರ್ ಆಗಿದೆ. ಇದರ ವಿರುದ್ಧ ಮುಸಲ್ಮಾನರ ಮಾನಸಿಕತೆ ಪಂಥಸಾಪೇಕ್ಷ ಆಗಿರುವುದರಿಂದ, ಹಾಗೆಯೇ ಅವರಲ್ಲಿ ಒಂದು ಇಡುಗಂಟಿನ ಮತಗಳಿರುವುದರಿಂದ, ಅವುಗಳ ಬಲದ ಮೇಲೆ ಸೆಕ್ಯುಲರ ವ್ಯವಸ್ಥೆ ಯನ್ನು ಅವರಿಗೆ ಅನುಕೂಲಕರವಾಗುವಂತೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇಷ್ಟೇ ಅಲ್ಲ, ಅವರು ಪಂಥದ ಆಕ್ರಮಣಕಾರಿ ಬಲದಿಂದ ಅನೇಕ ಬಾರಿ ಸಂವಿಧಾನ, ಕಾನೂನುಗಳ ವಿರುದ್ಧ ಹೋಗಿ ಕೃತಿಗಳನ್ನು ಮಾಡುತ್ತಾರೆ; ಆದರೆ ಸರಕಾರ ಮತ್ತು ನ್ಯಾಯಾಲಯಗಳು ಇವುಗಳತ್ತ ಮೂಕಪ್ರೇಕ್ಷಕರಂತೆ ನೋಡುತ್ತವೆ.
‘ಇತ್ತೀಚೆಗೆ ನಡೆದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬಹುಮತ ಸಿಕ್ಕಿದ ಬಳಿಕ ಮುಸಲ್ಮಾನ ಮುಖಂಡರು ಮಾಡಿರುವ ಉಪಮುಖ್ಯಮಂತ್ರಿ ಹುದ್ದೆ ಮತ್ತು ಮಹತ್ವದ ಖಾತೆಗಳ ಬೇಡಿಕೆಯಿಂದ ಮುಸಲ್ಮಾನರ ರಾಜಕೀಯ ದೃಷ್ಟಿ ಸ್ಪಷ್ಟವಾಗುತ್ತದೆ. ಇದರ ವಿರುದ್ಧ ಹಿಂದೂಗಳು ತಮ್ಮ ಯಾವುದೇ ಭೂಮಿಕೆ, ಧರ್ಮನಿಷ್ಠ ಬೇಡಿಕೆಯನ್ನಿಡದೇ ಕೇವಲ ಪಕ್ಷವನ್ನು ನೋಡಿ ಮತದಾನ ಮಾಡುತ್ತಾರೆ ಮತ್ತು ಮುಂದಿನ ೫ ವರ್ಷಗಳಲ್ಲಿ ಹಿಂದುತ್ವಕ್ಕಾಗಿ ಏನಾದರೂ ಆಗಬಹುದು ಎಂದು ದಾರಿ ಕಾಯುತ್ತಿರುತ್ತಾರೆ. ಅದರಲ್ಲಿಯೂ ಹಿಂದುತ್ವಕ್ಕಿಂತ ಅನೇಕ ಸ್ಥಳಗಳಲ್ಲಿ ಉಚಿತ ಪ್ರವಾಸ, ಉಚಿತ ವಿದ್ಯುತ್, ಉಚಿತ ನೀರು ಮುಂತಾದ ಸೌಲಭ್ಯಗಳನ್ನು ನೀಡುವವರಿಗೆ ಮತ ನೀಡುವ ಪ್ರವೃತ್ತಿ ಹಿಂದೂಗಳಲ್ಲಿ ಕಂಡು ಬರುತ್ತದೆ. ಈ ಕಾರಣದಿಂದ ಹಿಂದೂಗಳ ರಾಜಕೀಯ ದೃಷ್ಟಿಯನ್ನು ಪರಿಪಕ್ವಗೊಳಿಸಲು ಪ್ರಯತ್ನಿಸಬೇಕಾಗಿದೆ. ಸ್ವಾತಂತ್ರ್ಯವೀರ ಸಾವರಕರರೂ ತಮ್ಮ ಲೇಖನದಲ್ಲಿ ಹಿಂದೂಗಳಲ್ಲಿ ರಾಜಕೀಯ ದೃಷ್ಟಿಯ ಕೊರತೆಯನ್ನು ಉಲ್ಲೇಖಿಸಿದ್ದಾರೆ. ಇನ್ನೂ ಎಷ್ಟು ವರ್ಷಗಳ ವರೆಗೆ ಈ ದೋಷವನ್ನು ನಾವು ನಮ್ಮಲ್ಲಿ ಹಾಗೆಯೇ ಇಟ್ಟುಕೊಳ್ಳುವುದು? ಆ ದೃಷ್ಟಿಯಿಂದ ಮುಂದಿನ ಪರ್ಯಾಯಗಳ ವಿಚಾರ ಮಾಡಬೇಕು.
೩. ಹಿಂದೂಗಳ ಒತ್ತಡಗುಂಪನ್ನು ತಯಾರಿಸುವುದು ಇಂದು ಹಿಂದೂ ಸಮಾಜದಲ್ಲಿ ರಾಜಕೀಯ ದೃಷ್ಟಿಯಿರುವ ಹಿಂದೂಗಳ ಸಂಘಟನೆಗಳು ಆವಶ್ಯಕವಾಗಿವೆ. ಸರಕಾರ ಯಾವುದೇ ಪಕ್ಷದ್ದಾಗಿರಲಿ, ಎಲ್ಲಿಯವರೆಗೆ ಜನಪ್ರತಿನಿಧಿಗಳಿಗೆ ಹಿಂದೂಗಳ ಮೇಲಿನ ಅನ್ಯಾಯದ ಬಗ್ಗೆ ಪ್ರಶ್ನೆಗಳನ್ನು ಕೇಳುವ, ಪ್ರತಿಯೊಂದರ ಸ್ಪಷ್ಟೀಕರಣವನ್ನು ಕೇಳುವ ಹಿಂದೂ ಸಂಘಟನೆಗಳು ಸಿದ್ಧವಾಗುವುದಿಲ್ಲವೋ, ಅಲ್ಲಿಯವರೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂದೂಹಿತದ ಕಾರ್ಯಗಳಾಗಲು ಕಠಿಣವಿದೆ. ಆದುದರಿಂದ ಎಲ್ಲ ಹಿಂದೂಗಳು, ಹಿಂದೂ ಸಂಘಟನೆಗಳು ಸಂಘಟಿತರಾಗಿ ತಮ್ಮ ಒತ್ತಡ ಗುಂಪನ್ನು ನಿರ್ಮಾಣ ಮಾಡಬೇಕು, ಮತ್ತು ಅದು ನಿರಂತರವಾಗಿ ಕಾರ್ಯನಿರತವಾಗಿರಬೇಕು.
೪. ಹಿಂದೂಗಳ ಬೇಡಿಕೆಯ ಪತ್ರವನ್ನು ಸಿದ್ಧಗೊಳಿಸಿ ಅವುಗಳನ್ನು ಒಪ್ಪಿಕೊಳ್ಳುವವರಿಗೆ ಮತ ನೀಡುವುದು ರಾಜಕೀಯ ಪಕ್ಷಗಳ ಘೋಷಣಾಪತ್ರಗಳನ್ನು ನಿಯಮಿತವಾಗಿ ತಯಾರಿಸಲಾಗುತ್ತದೆ; ಆದರೆ ಹಿಂದೂಗಳು ಸಂಘಟಿತರಾಗಿ ಧರ್ಮ ಮತ್ತು ರಾಷ್ಟ್ರಹಿತದ ತಮ್ಮ ಸ್ವಂತದ ಬೇಡಿಕೆಯ ಪತ್ರವನ್ನು ಮಂಡಿಸ ಬೇಕು, ಈ ಬೇಡಿಕೆ ಪತ್ರದಲ್ಲಿ ಹಿಂದೂ ಮತ್ತು ರಾಷ್ಟ್ರಹಿತದ ಎಲ್ಲ ರೀತಿಯ ವಿಷಯಗಳಿರಬೇಕು, ಉದಾ. ಭಾರತವನ್ನು ಸಂವಿಧಾನಾತ್ಮಕವಾಗಿ ‘ಹಿಂದೂ ರಾಷ್ಟ್ರ ಎಂದು ಘೋಷಿಸಿ, ದೇಶಾದ್ಯಂತ ಗೋಹತ್ಯೆ ನಿಷೇಧವನ್ನು ಜಾರಿಗೊಳಿಸಿರಿ, ದೇವತೆಗಳು ಮತ್ತು ಶ್ರದ್ಧಾಸ್ಥಾನಗಳನ್ನು ಅಪಮಾನಿಸುವವರನ್ನು ಕೂಡಲೇ ಶಿಕ್ಷಿಸುವ ಕಾನೂನನ್ನು ಮಾಡಿ, ಮತಾಂತರನಿಷೇಧ, ಲವ್ ಜಿಹಾದ್ ವಿರುದ್ಧ ಕಾನೂನು ದೇಶದ ಸ್ತರದಲ್ಲಿ ಜಾರಿಗೊಳಿಸಿ, ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಿ ಭಕ್ತರಿಗೆ ಒಪ್ಪಿಸಿ, ‘ಪ್ಲೇಸಸ್ ಆಫ್ ವರ್ಶಿಪ್ ಮತ್ತು ‘ವಕ್ಫ್ ಕಾನೂನು ರದ್ದುಗೊಳಿಸಿರಿ, ರಾಷ್ಟ್ರದ ಗಡಿಯನ್ನು ಭದ್ರಗೊಳಿಸಿ ಮುಂತಾದ ಅಂಶಗಳು ಇರಬೇಕು ಯಾವ ರಾಜಕೀಯ ಪಕ್ಷ ಚುನಾಯಿತಗೊಂಡ ಬಳಿಕ ಮೊದಲ ವರ್ಷದಲ್ಲಿ ಈ ಅಂಶಗಳನ್ನು ಪೂರ್ಣಗೊಳಿಸುವುದೋ, ಆ ಪಕ್ಷಕ್ಕೆ ಮತ ನೀಡುವ ವಿಚಾರ ಮಾಡಬಹುದು.
೫. ಹಿಂದೂಗಳಲ್ಲಿನ ರಾಜಕೀಯ ದೃಷ್ಟಿಯ ಅಭಾವದಿಂದ ಅಲ್ಪಸಂಖ್ಯಾತರ ಮತಗಳಿಗೆ ಮಹತ್ವ ಬರುವುದು ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣೆಗಳಲ್ಲಿ ಪ್ರತ್ಯಕ್ಷ ಮತದಾನದ ಪ್ರಮಾಣ ನಗರೀಕರಣಗೊಂಡಿರುವ ಕ್ಷೇತ್ರದಲ್ಲಿ ಶೇ. ೬೦ ರಿಂದ ೬೫ ರಷ್ಟೇ ಇರುತ್ತದೆ. ಇಲ್ಲಿ ತಮ್ಮನ್ನು ಗಣ್ಯರು ಎಂದು ತಿಳಿಯುವ ಶೇ. ೩೫ ರಿಂದ ೪೦ ಹಿಂದೂಗಳು ಮತದಾನವನ್ನೇ ಮಾಡುವುದಿಲ್ಲ. ಇದರರ್ಥ ೧೦೦ ಕೋಟಿ ಹಿಂದೂ ಜನಸಂಖ್ಯೆಯಲ್ಲಿ ೩೫ ರಿಂದ ೪೦ ಕೋಟಿ ಜನಸಂಖ್ಯೆ ಮತದಾನವನ್ನೇ ಮಾಡದಿದ್ದರೆ, ಅಲ್ಪಸಂಖ್ಯಾತರು ನಿರ್ಧರಿಸಿ ಮತದಾನ ಮಾಡುವ ೩೦ – ೩೫ ಕೋಟಿ ಜನಸಂಖ್ಯೆಯೇ ಅಧಿಕ ಪ್ರಭಾವಿಯಾಗುತ್ತದೆ. ಹಾಗಾಗಿ ಪ್ರತಿಯೊಂದು ರಾಜಕೀಯ ಪಕ್ಷವು ಅಲ್ಪಸಂಖ್ಯಾತರನ್ನು ಓಲೈಸಲು ಪ್ರಯತ್ನಿಸುವುದು ಸಹಜವಾಗಿದೆ. ಆದುದರಿಂದ ‘ಮತದಾನ ಕಡ್ಡಾಯದ ಕಾನೂನು ಮಾಡಲು ಬೇಡಿಕೆಯನ್ನು ಸಲ್ಲಿಸಿರಿ. ಯಾರೂ ಒಳ್ಳೆಯ ಅಭ್ಯರ್ಥಿಗಳು ಇಲ್ಲದಿದ್ದರೆ, ಯಾರಿಗೂ ಮತವನ್ನು ನೀಡದಿರುವ ‘ನೋಟಾ (ಓoಟಿe oಜಿ ಣhe ಚಿbove) ಪರ್ಯಾಯವನ್ನು ಉಪಯೋಗಿಸಿರಿ.
– (ಸದ್ಗುರು) ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ (ಮುಂದುವರಿಯುವುದು)