ಪ್ರತಿವರ್ಷ ರಾಜ್ಯದ ಶೈಕ್ಷಣಿಕ ಗುಣಮಟ್ಟದ ಒಂದು ವರದಿಯನ್ನು ಕೇಂದ್ರೀಯ ಶಿಕ್ಷಣ ಸಚಿವಾಲಯವು ಘೋಷಿಸುತ್ತದೆ. ಅದರಲ್ಲಿ ಅಧ್ಯಯನದ ನಿಷ್ಪತ್ತಿ, ಮೂಲಸೌಕರ್ಯ, ಆಡಳಿತಾತ್ಮಕ ಪ್ರಕ್ರಿಯೆ, ಶಿಕ್ಷಕರು, ಶಿಕ್ಷಣ ಮತ್ತು ತರಬೇತಿ, ಸಮಾನತೆ, ಲಭ್ಯತೆ ಮುಂತಾದ ವಿಷಯಗಳಲ್ಲಿ ಒಟ್ಟು ೭೩ ಅಂಶಗಳ ನಿಟ್ಟಿನಲ್ಲಿ ಫಲಶೃತಿ ಮತ್ತು ಆಡಳಿತಾತ್ಮಕ ವ್ಯವಸ್ಥಾಪನೆ ಈ ನಿರ್ಣಾಯಕ ಅಂಶಗಳ ಮೇಲೆ ಈ ಸ್ಥಾನಮಾನವನ್ನು ನಿರ್ಧರಿಸಲಾಗುತ್ತದೆ. ೨೦೨೧-೨೨ ನೇ ವರದಿಗನುಸಾರ ದೇಶದ ಒಂದೇ ಒಂದು ರಾಜ್ಯಕ್ಕೆ ಮೊದಲ ೫ ಶ್ರೇಣಿಯ ಸ್ಥಾನವನ್ನು ಪಡೆಯಲು ಸಾಧ್ಯವಾಗಿಲ್ಲ, ಮಹಾರಾಷ್ಟ್ರವು ೭ ನೇ ಸ್ಥಾನದಲ್ಲಿದೆ. ಕೆಲವು ವಿಷಯಗಳ ಅಧ್ಯಯನ ಮಾಡಿ ಅವುಗಳ ಕೊರತೆಯನ್ನು ಕೃತಿಯ ಸ್ತರದಲ್ಲಿ ಹೇಗೆ ಸುಧಾರಿಸಬಹುದು ? ಎಂದು ನೋಡುವುದು ಆವಶ್ಯಕವಾಗಿದೆ. ಒಂದು ಕಾಲದಲ್ಲಿ ಜಗತ್ತಿನ ವಿದ್ಯಾರ್ಥಿಗಳು ಭಾರತಕ್ಕೆ ಕಲಿಯಲು ಬರುತ್ತಿದ್ದರು, ಆದರೆ ಇಂದು ಸುಮಾರು ೧೭ ಲಕ್ಷಗಳಿಗಿಂತ ಹೆಚ್ಚು ವಿದ್ಯಾರ್ಥಿಗಳು ದೇಶದಿಂದ ವಿದೇಶಗಳಿಗೆ ಉಚ್ಚ ಶಿಕ್ಷಣ ಪಡೆಯಲು ಹೋಗುತ್ತಾರೆ. ಇದರಲ್ಲಿ ಮಿಸಲಾತಿ ಇಲ್ಲದಿರುವುದು, ಹೆಚ್ಚು ಹಣ, ಒಳ್ಳೆಯ ಜೀವನಶೈಲಿ, ಕಡಿಮೆ ಸಂಘರ್ಷದೊಂದಿಗೆ ಶಿಕ್ಷಣದ ಗುಣಮಟ್ಟವೂ ಒಂದು ಮಹತ್ವದ ಕಾರಣವಾಗಿದೆ. ಇಂದು ಜಗತ್ತಿನ ಮುಂಚೂಣಿಯಲ್ಲಿರುವ ೨೦೦ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಒಂದೇ ಒಂದು ಭಾರತೀಯ ವಿಶ್ವವಿದ್ಯಾಲಯ ಇಲ್ಲ. ಹಿಂದೆ ‘ಶಿಕ್ಷಕ’ರು ಊರಿನ ಬುದ್ಧಿವಂತ ಮತ್ತು ಅತ್ಯಂತ ಗೌರವಶಾಲಿ ವ್ಯಕ್ತಿಗಳಾಗಿದ್ದರು. ಬುದ್ಧಿವಂತರು ಶಿಕ್ಷಕರಾಗುವ ಪ್ರಮಾಣ ಅತಿ ಕಡಿಮೆಯಾಯಿತು. ಇಂದು ಹೆಚ್ಚಿನ ಅನರ್ಹ ವಿದ್ಯಾರ್ಥಿಗಳು ಅಧ್ಯಯನಶಾಸ್ತ್ರದ ಪದವಿಯನ್ನು (ಬಿ.ಎಡ್.) ಪಡೆಯುತ್ತಿರುವುದು ಕಂಡು ಬರುತ್ತದೆ. ಅದರಲ್ಲಿಯೂ ಮಿಸಲಾತಿಯಿಂದ ಗುಣಮಟ್ಟದ ಸ್ತರವು ಕುಸಿಯುತ್ತದೆ. ಎಷ್ಟೋ ಬಾರಿ ಭಾಷೆಯೂ ಶುದ್ಧವಿರುವುದಿಲ್ಲ. ಅನೇಕ ಜಿಲ್ಲಾ ಪರಿಷತ್ತುಗಳ ಶಾಲೆಗಳಲ್ಲಿ ಶಿಕ್ಷಕರಿಗೆ ಸ್ವಚ್ಛತೆಯಿಂದ ಹಿಡಿದು ಖಿಚಡಿ ತಯಾರಿಸುವವರೆಗಿನ ಅನೇಕ ಕೆಲಸಗಳನ್ನು ಮಾಡಬೇಕಾಗುತ್ತದೆ. ಕೆಲವೊಮ್ಮೆ ಶಿಕ್ಷಕರಿಗೆ ಕಲಿಸುವುದರ ಜೊತೆಗೆ ಇತರ ಸರಕಾರಿ ಉಪಕ್ರಮಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಇವೆಲ್ಲವುಗಳಿಂದ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮವಾಗುತ್ತದೆ. ಸರಕಾರಿ ಶಾಲೆ ಗಳ ಶಿಕ್ಷಕರು ತಮ್ಮ ಮಕ್ಕಳನ್ನು ಮಾತ್ರ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕರು ಶರಾಬು ಕುಡಿದು ಶಾಲೆಗೆ ಬರುವ ಬಗ್ಗೆಯೂ ವಾರ್ತೆಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ಹತ್ತನೇ ತರಗತಿಯ ಹುಡುಗನಿಗೆ ಸರಿಯಾಗಿ ಬರೆಯಲು-ಓದಲೂ ಬರುವುದಿಲ್ಲ, ಎಂಬಂತಹ ಉದಾಹರಣೆಗಳು ಬೆಳಕಿಗೆ ಬರುತ್ತವೆ. ವಿದೇಶಗಳಲ್ಲಿ ಉಪನ್ಯಾಸಕರಿಗೆ ಪ್ರತಿವರ್ಷ ಹೊಸದನ್ನು ಕಲಿಯುವುದು ಕಡ್ಡಾವಾಗಿದೆ, ನಮ್ಮಲ್ಲಿ ಅಂತಹದ್ದೇನೂ ಇಲ್ಲ.
ಅಮೇರಿಕಾದ ಶಾಲೆಗಳಲ್ಲಿ ಒಂದು ತರಗತಿಯಲ್ಲಿ ೩೦ ಕ್ಕಿಂತ ಹೆಚ್ಚು ಮಕ್ಕಳು ಇರುವುದಿಲ್ಲ. ನಮ್ಮಲ್ಲಿ ಪ್ರತಿಯೊಂದು ತರಗತಿಯಲ್ಲಿ ೬೦ ರಿಂದ ೭೦ ಮಕ್ಕಳು ಇರುತ್ತಾರೆ. ಸಹಜವಾಗಿಯೇ ವಿದ್ಯಾರ್ಥಿಗಳ ಕಡೆಗೆ ವೈಯಕ್ತಿಕ ಗಮನ ನೀಡಲು ಅಸಾಧ್ಯವಾಗುತ್ತದೆ, ಇದು ಬುದ್ಧಿಕ್ಷಮತೆ ಕಡಿಮೆ ಇರುವ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಎರಡು ದಶಕಗಳ ಹಿಂದೆ, ದೊಡ್ಡ ನಗರಗಳಲ್ಲಿ ಅಥವಾ ಹಳ್ಳಿಗಳಲ್ಲಿಯೂ ಕೆಲವು ಪ್ರಖ್ಯಾತ ಶಾಲೆಗಳ ವಿದ್ಯಾರ್ಥಿ ಗಳು ಬಹುತೇಕ ಬಾರಿ ಒಳ್ಳೆಯ ಶ್ರೇಣಿಯಲ್ಲಿ (ಬೋರ್ಡ್’ನಲ್ಲಿ) ಪಾಸಾಗುತ್ತಿದ್ದರು. ಈ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ, ಶಿಸ್ತು ಸಾಕಷ್ಟು ಮೆಚ್ಚಿಕೊಳ್ಳುವಂತಿರುತ್ತಿತ್ತು. ಇಂತಹ ಶಾಲೆಗಳಲ್ಲಿ ಹೆಚ್ಚಾಗಿ ಮಧ್ಯಮವರ್ಗದ ವಿದ್ಯಾರ್ಥಿಗಳು ಇರುತ್ತಿದ್ದರು. ಈಗ ಮಧ್ಯಮವರ್ಗದವರು ಉಚ್ಚಮಧ್ಯಮವರ್ಗದವರಾಗಿದ್ದಾರೆ ಮತ್ತು ಅವರ ಮಕ್ಕಳು ಅಂತರರಾಷ್ಟ್ರೀಯ ಗುಣಮಟ್ಟದ ಆಂಗ್ಲ ಶಾಲೆಗಳಿಗೆ ಹೋಗತೊಡಗಿದ್ದಾರೆ. ಈಗ ಈ ಶಾಲೆಗಳಲ್ಲಿ ಕೆಳ ದರ್ಜೆಯ ಮತ್ತು ಕೊಳೆಗೇರಿಯ ಮಕ್ಕಳು ಬರುತ್ತಾರೆ. ಇದು ನಿಜವಾಗಿಯೂ ಒಳ್ಳೆಯ ವಿಷಯವಿದ್ದರೂ, ಈ ಶಾಲೆಗಳಲ್ಲಿನ ಶಿಕ್ಷಕರ ಗುಣಮಟ್ಟವೂ ಮಿಸಲಾತಿಯಿಂದಾಗಿ ಕುಸಿಯಿತು. ಶಿಕ್ಷಕರು ಮತ್ತು ವಿದ್ಯಾರ್ಥಿ ಇವರಿಬ್ಬರ ಗುಣಮಟ್ಟ ಕುಸಿದ ಕಾರಣ ಈ ಖ್ಯಾತಿ ಪಡೆದ ಶಾಲೆಗಳ ಗುಣಮಟ್ಟವು ಕುಸಿಯಿತು. ಎರಡು ದಶಕಗಳ ಹಿಂದೆ ಶಾಲೆಯ ಮತ್ತು ವಿಶ್ವವಿದ್ಯಾಲಯದ ಶಿಕ್ಷಕರು ಪಾಠಗಳನ್ನು ಕಲಿಸುವಾಗ ಅದಕ್ಕೆ ಸಂಬಂಧಪಟ್ಟಂತೆ ಇತರ ವಿಷಯಗಳನ್ನು ಹೇಳುತ್ತಿದ್ದರು. ಈಗ ಶಿಕ್ಷಕರೇ ಅಧ್ಯಯನ ಮಾಡುವುದಿಲ್ಲ. ಎಷ್ಟೋ ಶಾಲೆಗಳಲ್ಲಿ ‘ಗೈಡ್’ ಇಟ್ಟುಕೊಂಡು ಕಲಿಸುವ ಪದ್ಧತಿ ಆರಂಭವಾಗಿದೆ. ಸದ್ಯ ಶಿಕ್ಷಕರ ಗುಣಮಟ್ಟ ಎಷ್ಟು ಕುಸಿದಿದೆ ಎಂದರೆ, ಸಮಾನ ಶಿಕ್ಷಣದ ಉದ್ದೇಶದಿಂದ ಹೊಸ ಪಠ್ಯಪುಸ್ತಕಗಳಿಂದ ‘ಶಿಕ್ಷಕರು ಏನು ಕಲಿಸಬೇಕು ?’, ಎಂದೂ ಸಹ ಪ್ರತಿಯೊಂದು ಪಾಠದ ನಂತರ ಪಠ್ಯಪುಸ್ತಕಗಳಲ್ಲಿ ಮುದ್ರಿಸಲಾಗಿರುತ್ತದೆ. ಮಕ್ಕಳಿಗೆ ‘ಅಃSಇ’ (ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳ) ಶಾಲೆಗಳಿಗೆ ಕಳುಹಿಸುವ ಸೆಳೆತ ಹೆಚ್ಚಾದುದರಿಂದ ಆಂಗ್ಲ ಮಾಧ್ಯಮ ಅನಿವಾರ್ಯವಾಯಿತು ಮತ್ತು ಅದರ ಪರಿಣಾಮವಾಗಿ ಉದ್ಯೋಗಗಳಲ್ಲಿ ಭಾಷೆಯ ಶೇಕಡಾವಾರು ಪ್ರಮಾಣವೂ ಕಡಿಮೆಯಾಗಲು ಇದು ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಾತೃಭಾಷೆಯ ಶಿಕ್ಷಣದಿಂದ ವಿದ್ಯಾರ್ಥಿ ಗಳು ದೂರವಾಗುತ್ತಿರುವುದರಿಂದ ಅವರ ಶಿಕ್ಷಣದ ಗುಣಮಟ್ಟವು ಕುಸಿದಿದೆ. ಆಂಗ್ಲ ಮಾಧ್ಯಮಗಳಿಗೆ ಹೋಗುವ ವಿದ್ಯಾರ್ಥಿ ಗಳಿಗೆ ಆರಂಭದ ತರಗತಿಗಳಲ್ಲಿ ನಿಬಂಧ, ಲೇಖನ ಇತ್ಯಾದಿ ವಿಷಯಗಳು ಕಠಿಣವಾಗುತ್ತವೆ. ಆದುದರಿಂದ ಸದ್ಯ ನಗರದ ಹೆಚ್ಚಿನ ಮಕ್ಕಳು ತಮ್ಮ ಸ್ವಭಾಷೆಯ ವಿಕಾಸವನ್ನು ಕುಂಠಿತಗೊಳಿಸಿ ಮಾತೃಭಾಷೆ, ಆಂಗ್ಲ ಮತ್ತು (ಕಲಿಯದ ಕಾರಣ) ಹಿಂದಿ ಇಂತಹ ಒಂದು ‘ಸಮ್ಮಿಶ್ರ ಭಾಷೆ’ಯನ್ನು ಸಂಭಾಷಣೆಗಾಗಿ ಬಳಸುತ್ತಿದ್ದಾರೆ. ಇದು ಸಹ ವಿಚಾರಗಳನ್ನು ವ್ಯಕ್ತಪಡಿಸುವಲ್ಲಿ ಮತ್ತು ಸ್ವಭಾಷೆಯ ಗುಣಮಟ್ಟವನ್ನು ಸುಧಾರಿಸುವಲ್ಲಿ ಒಂದು ಅಡಚಣೆಯಾಗಿದೆ. ಖಾಸಗಿ ಶಿಕ್ಷಣದ ಹೆಚ್ಚಳದಿಂದಾಗಿ ಈಗ ಶಾಲೆ ಅಥವಾ ವಿಶೇಷವಾಗಿ ಮಹಾವಿದ್ಯಾಲಯಗಳಲ್ಲಿ ದೈನಂದಿನ ಶಿಕ್ಷಣವನ್ನು ಕಡಿತಗೊಳಿಸಲಾಗಿದೆ. ಇದರಿಂದ ಮಕ್ಕಳ ಗುಣಮಟ್ಟದ ಸರ್ವಾಂಗೀಣ ವಿಕಾಸದ ಮೇಲೆ ಪರಿಣಾಮವಾಗಿ ವಿದ್ಯಾರ್ಥಿಗಳು ಯಾಂತ್ರಿಕವಾಗಿ ಅಂಕಗಳನ್ನು ಗಳಿಸುತ್ತಿದ್ದಾರೆ. ೨೦೦೮ ರಲ್ಲಿ ದುರ್ಗಮ, ಗ್ರಾಮೀಣ ಮತ್ತು ಹಿಂದುಳಿದ ಸ್ತರದ ವಿದ್ಯಾರ್ಥಿಗಳನ್ನು ಮೇಲೆತ್ತಲು ಮತ್ತು ಹೆಚ್ಚೆಚ್ಚು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ಎಲ್ಲರಿಗೂ ಎಂಟನೇ ತರಗತಿಯವರೆಗೆ ಅಂಕಗಳನ್ನು ನೀಡದೇ ‘ಗ್ರೇಡಿಂಗ್’ ನೀಡುವ, ಹಾಗೆಯೇ ಅವರನ್ನು ಉತ್ತೀರ್ಣಗೊಳಿಸುವ ನೀತಿ ಯನ್ನು ರೂಪಿಸಲಾಯಿತು. ಇದರಿಂದ ಶಾಲಾ ವಿದ್ಯಾರ್ಥಿ ಗಳಲ್ಲಿ ಕೂಲಂಕುಷವಾಗಿ ಮತ್ತು ಮೂಲದಿಂದ ಅಧ್ಯಯನ ಮಾಡುವ ವೃತ್ತಿಯೇ ಮಾಯವಾಯಿತು. ಪರೀಕ್ಷೆಯ ಕಾಠಿಣ್ಯದ ಮಟ್ಟವನ್ನು ಕಡಿಮೆ ಮಾಡಲಾಯಿತು. ಈ ರೀತಿ ಗುಣಮಟ್ಟವನ್ನು ಹೆಚ್ಚಿಸುವ ಬದಲು ಅದನ್ನು ಅವನತಿಗೆ ಕೊಂಡೊಯ್ಯುವ ಪ್ರಕ್ರಿಯೆಯಾಯಿತು.
ಗುಣಮಟ್ಟವನ್ನು ಸುಧಾರಿಸುವ ಪ್ರಯತ್ನ
ಶಾಲೆಗಳ ಅಂತರ್ಗತ ಮೌಲ್ಯಮಾಪನ ಅಂಕಗಳನ್ನು ನೀಡುವ ಪದ್ಧತಿಯನ್ನು ೨೦೧೮ ರಿಂದ ನಿಲ್ಲಿಸಲಾಗಿದೆ. ಪ್ರಸ್ತುತ ನಮ್ಮಲ್ಲಿ ೧೧ ನೇ – ೧೨ ನೇ ತರಗತಿಗಳಿಗೆ ಕನಿಷ್ಠ ಕೌಶಲ್ಯ ಆಧಾರಿತ ಪಠ್ಯಕ್ರಮ (ಒ.ಅ.ಗಿ.ಅ) ಇದೆ. ಆದರೆ ವಿದ್ಯಾರ್ಥಿಗಳು ಈ ಪಠ್ಯಕ್ರಮಗಳ ಕಡೆಗೆ ಹೆಚ್ಚು ಆಕರ್ಷಿತರಾಗುವುದಿಲ್ಲ. ಉಪಯೋಜಿತ ಕಲೆಗಳಿಂದ ಹೊಸ ತಂತ್ರಜ್ಞಾನದ ವರೆಗಿನ ಎಲ್ಲ ಕ್ಷೇತ್ರಗಳಿಗೆ, ವಿಶಿಷ್ಟ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಇಂತಹ ಅನೇಕ ಸುಧಾರಣೆಗಳು ಜಾರಿಯಲ್ಲಿವೆ. ಗುಮಾಸ್ತರನ್ನು ರೂಪಿಸಲು ಮೆಕಾಲೆಯು ಆರಂಭಿಸಿದ ಮತ್ತು ಈಗಿನ ‘೪+೬+೨’ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಿ ಗುಣಕರ್ಮಗಳಿಗನುಸಾರ ಕೌಶಲ್ಯ ತರಬೇತಿ ಆರಂಭಿಸಿದರೆ ವಿದ್ಯಾರ್ಥಿಗಳ ಮತ್ತು ಪರ್ಯಾಯವಾಗಿ ದೇಶದಲ್ಲಿ ನಿಜವಾದ ಅರ್ಥದಲ್ಲಿ ಗುಣಾತ್ಮಕ ಅಭಿವೃದ್ಧಿಯಾಗುತ್ತದೆ.