ಸ್ತ್ರೀಯರೇ, ಕೂದಲು ಕತ್ತರಿಸುವುದರ ಆಧ್ಯಾತ್ಮಿಕ ಹಾನಿ ಮತ್ತು ಕೂದಲು ಬೆಳೆಸುವುದರ ಲಾಭಗಳನ್ನು ತಿಳಿದುಕೊಂಡು ಕೂದಲನ್ನು ಕತ್ತರಿಸುವ ಬದಲು ಬೆಳೆಸಿ !

ಹಿಂದಿನ ಕಾಲದಲ್ಲಿ ಮಹಿಳೆಯರು ತಮ್ಮ ಕೂದಲನ್ನು ಬೆಳೆಸುತ್ತಿದ್ದರು; ಆದರೆ ‘ಕಳೆದ ಕೆಲವು ವರ್ಷಗಳಿಂದ, ಅನೇಕ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುವ ಪ್ರವೃತ್ತಿಯನ್ನು ಹೊಂದಿರುವುದು ಕಂಡುಬರುತ್ತದೆ. ಕೆಲವರು ‘ಫ್ಯಾಶನ್ಗಾಗಿ ತಮ್ಮ ಕೂದಲನ್ನು ಕತ್ತರಿಸಿದರೆ, ಇನ್ನು ಕೆಲವರು ಅನುಕೂಲಕ್ಕಾಗಿ ಕತ್ತರಿಸುತ್ತಾರೆ. ‘ಸೌಂದರ್ಯದ ಉದ್ದೇಶದಿಂದ ಅನೇಕರು ತಮ್ಮ ಕೂದಲನ್ನು ಕತ್ತರಿಸಿ ಬೇರೆ ಬೇರೆ ವಿನ್ಯಾಸಗಳ ಕಟ್ ಮಾಡಿಸುತ್ತಾರೆ. ಕೂದಲನ್ನು ಕತ್ತರಿಸುವುದರಿಂದ ಅವುಗಳ ತುದಿಗಳು ತೆರೆದು, ಕೂದಲಿನ ತುದಿಗಳ ಮೂಲಕ ರಜ-ತಮ ಲಹರಿಗಳು ಕೂದಲಿನಲ್ಲಿ ಸುಲಭವಾಗಿ ಹರಡುತ್ತವೆ. ಇದರಿಂದ ನಕಾರಾತ್ಮಕ ಶಕ್ತಿಗಳ ತೊಂದರೆಯಾಗುವ ಸಾಧ್ಯತೆಯು ಹೆಚ್ಚಾಗುತ್ತದೆ ಮತ್ತು ಅವರಲ್ಲಿ ಬಹಿರ್ಮುಖತೆ, ಅಸ್ಥಿರತೆ, ಕೋಪ ಮತ್ತು ಭಾವನಾಪ್ರಧಾನತೆಯು ಹೆಚ್ಚಾಗಿರುವುದು ಗಮನಕ್ಕೆ ಬರುತ್ತದೆ. ಆದ್ದರಿಂದ ಸ್ತ್ರೀಯರು, ಕೂದಲು ಕತ್ತರಿಸುವುದು, ಕೂದಲನ್ನು ಸ್ವಚ್ಛಂದವಾಗಿ ಬಿಟ್ಟು ತಿರುಗುವುದು ಇತ್ಯಾದಿಗಳು ಸೌಂದರ್ಯದ ದೃಷ್ಟಿಯಿಂದ ಮಹಿಳೆಯರಿಗೆ ಒಳ್ಳೆಯದು ಎಂದು ಅನಿಸಿದರೂ ಇವುಗಳಿಂದ ಅನಿಷ್ಟ ಶಕ್ತಿಗಳ ದಾಳಿಗೆ ಆಮಂತ್ರಣ ನೀಡಿದಂತಾಗಿದೆ.
ಮಾನವ ಶರೀರದಲ್ಲಿ ಪ್ರಕೃತಿಯು ಮಾಡಿರುವ ಕೂದಲಿನ ಆಯೋಜನೆಯು ಸೌಂದರ್ಯಕ್ಕಾಗಿ ಮಾತ್ರವಲ್ಲ, ಕೂದಲಿನ ಮೂಲಕ ಈಶ್ವರನ ಚೈತನ ಗ್ರಹಿಸುವುದು ಮತ್ತು ಜೀವದ ಸಾತ್ವಿಕತೆಯನ್ನು ಹೆಚ್ಚಿಸಲಿಕ್ಕಾಗಿಯೂ ಇದೆ. ಈ ಎಲ್ಲಾ ವಿಷಯ ಗಳನ್ನು ತಿಳಿದುಕೊಂಡು, ಹಿಂದೂ ಧರ್ಮಶಾಸ್ತ್ರದ ಪ್ರಕಾರ ‘ಮಹಿಳೆಯರು ಕೂದಲು ಕತ್ತರಿಸುವುದನ್ನು ನಿಷಿದ್ಧವೆಂದು ಪರಿಗಣಿಸಲಾಗಿದೆ.
ಹಿಂದೂಗಳಲ್ಲಿ ಧಾರ್ಮಿಕ ಆಚರಣೆಗಳ ಬಗೆಗಿನ ಅಸಡ್ಡೆ ಯಿಂದಾಗಿ ಇಂತಹ ನಿಷಿದ್ಧ ವಿಷಯ
ಗಳಲ್ಲಿ ಹೆಚ್ಚಳವಾಗಿದ್ದು, ಇದರಿಂದ ಸ್ತ್ರೀಯರಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಅಪಾರ ಹಾನಿ ಯಾಗಿದೆ. ಸ್ತ್ರೀಯರು ಕೂದಲು ಬೆಳೆಸುವುದರಿಂದ ಅವರ ದೇಹದಲ್ಲಿನ ಶಕ್ತಿ ತತ್ತ್ವವು ನಿರಂತರ ಜಾಗೃತವಾಗಿರುತ್ತದೆ ಮತ್ತು ಆ ಮೂಲಕ ದುಷ್ಟಶಕ್ತಿಗಳ ದಾಳಿಯಿಂದ ರಕ್ಷಣೆಯಾಗುತ್ತದೆ. ಆದ್ದರಿಂದ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸಬಾರದು, ಅದನ್ನು ಬೆಳೆಸುವುದೇ ಯೋಗ್ಯವಾಗಿದೆ. (೯.೬.೨೦೨೩)