‘ ಓಪೆನಹಾಯಮರ’ ಚಲನಚಿತ್ರದ ಅಶ್ಲೀಲ ದೃಶ್ಯದ ಸಮಯದಲ್ಲಿ ಭಗವದ್ಗೀತೆ ತೋರಿಸಿದ್ದರಿಂದ ಹಿಂದುಗಳ ಆಕ್ರೋಶ !

ನವದೆಹಲಿ – ‘ಪರಮಾಣು ಬಾಂಬ್ ಜನಕ’ ಎಂದು ಪ್ರಸಿದ್ಧವಾಗಿರುವ ರಾಬರ್ಟ್ ಓಪೇನಹಾಯಮರ ಇವರ ಜೀವನಾಧಾರಿತ ಚಲನಚಿತ್ರ ‘ಓಪೆನಹಾಯಮರ’ನಲ್ಲಿ ಹಿಂದುಗಳ ಪವಿತ್ರ ಧರ್ಮಗ್ರಂಥ ಭಗವದ್ಗೀತೆಯನ್ನು ಅವಮಾನಿಸಲಾಗಿದೆ. ಇದರಲ್ಲಿ ಓಪೆನಹಾಯಮರನ ಪಾತ್ರ ನಿರ್ವಹಿಸಿರುವ ಕಲಾವಿದ ಸಿಲೀಯನ್ ಮರ್ಫಿ ಮತ್ತು ಪ್ರೇಯಸಿ ಜೀನ್ ಟೈಟಲಾಕ್ ಈ ಪಾತ್ರದಲ್ಲಿ ಇರುವ ಫ್ಲೋರೆನ್ಸ್ ಪುಘ ಇವರಲ್ಲಿನ ಅಶ್ಲೀಲ ದೃಶ್ಯದ ಸಮಯದಲ್ಲಿ ಭಗವದ್ಗೀತೆ ಕೂಡ ಕಾಣುತ್ತಿದೆ. ಇದರಿಂದ ಆಕ್ರೋಶಗೊಂಡ ಹಿಂದೂಗಳು ಇದನ್ನು ಖಂಡಿಸುತ್ತಿದ್ದಾರೆ .

೧. ಇದರ ಸಂದರ್ಭದಲ್ಲಿ ಕೆಲವು ಜನರು, ಈ ಚಲನಚಿತ್ರ ಭಾರತದಲ್ಲಿ ಪ್ರದರ್ಶಿಸುವುದಕ್ಕಾಗಿ ಸಂಬಂಧಿತ ಅಶ್ಲೀಲ ದೃಶ್ಯಗಳನ್ನು ಮಸುಕು ಮಾಡಿದ್ದರೂ ಕೂಡ ಅದರಲ್ಲಿ ಭಗವದ್ಗೀತೆ ಸ್ಪಷ್ಟವಾಗಿ ಹೇಗೆ ತೋರಿಸಲಾಗಿದೆ ? ಕೆಲವು ಜನರು, ಓಪೆನಹಾಯಮರ ಇವರ ಜೀವನಾಧಾರಿತ ಚಲನಚಿತ್ರದಲ್ಲಿ ಈ ದೃಶ್ಯ ತೋರಿಸುವುದು ಅನಾವಶ್ಯಕವಾಗಿದೆ ಎಂದು ಹೇಳಿದ್ದಾರೆ.

೨. ಓಪೆನಹಾಯಮರ ಇವರ ಜೀವನದಲ್ಲಿ ಭಗವದ್ಗೀತೆಯ ಮಹತ್ವ ಅಸಾಧಾರಣವಾಗಿತ್ತು. ಓಪೆನಹಾಯಮರ ಇವರು ಜಪಾನಿನ ಹೀರೋಶಿಮಾ ಮತ್ತು ನಾಗಸಾಕಿ ಈ ನಗರಗಳ ಮೇಲೆ ಪರಮಾಣು ಬಾಂಬ್ ಹಾಕಿದ ನಂತರ ಅವರಿಗೆ ಪಶ್ಚಾತಾಪವಾಯಿತು. ಆಗ ಅವರು ಭಗವದ್ಗೀತೆಯನ್ನು ಓದಿದ ನಂತರ ಅವರ ಮನಸ್ಸು ಶಾಂತವಾಗಿತ್ತು.

(ಸೌಜನ್ಯ – VK News)

ಸಂಪಾದಕೀಯ ನಿಲುವು

ಹಿಂದೂಗಳಲ್ಲಿನ ಧರ್ಮಾಭಿಮಾನದ ಕೊರತೆಯಿಂದ ಈ ರೀತಿ ಅವರ ಶ್ರದ್ಧಾ ಸ್ಥಾನಗಳನ್ನು ಅವಮಾನಿಸಲಾಗುತ್ತದೆ. ಈ ರೀತಿ ಮುಸಲ್ಮಾನ ಅಥವಾ ಕ್ರೈಸ್ತ ಧರ್ಮದ ಭಾವನೆಗೆ ಧಕ್ಕೆ ತರುವ ಧೈರ್ಯ ಯಾರು ಮಾಡುವುದಿಲ್ಲ, ಇದನ್ನು ತಿಳಿಯರಿ !

ಓಪೆನಹಾಯಮರ ಈ ಹಾಲಿವುಡ್ ಚಲನಚಿತ್ರದ ನಿರ್ಮಾಪಕ ಕ್ರಿಸ್ಟೋಫರ್ ನೋಲಾನ್ ಮತ್ತು ಕಲಾವಿದರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದುಗಳು ಅನಿವಾರ್ಯಗೊಳಿಸಬೇಕು !