ಕರಾಚಿಯ ಶ್ರೀ ಮಾರಿಮಾತೆ ದೇವಸ್ಥಾನ ಕೆಡವಿದ ಪ್ರಕರಣ
ಕರಾಚಿ (ಪಾಕಿಸ್ತಾನ) – ಪಾಕಿಸ್ತಾನ ಸರಕಾರವು ಇಲ್ಲಿನ 150 ವರ್ಷಗಳಷ್ಟು ಪ್ರಾಚೀನವಾದ ಶ್ರೀ ಮಾರಿ ಮಾತೆ ದೇವಸ್ಥಾನವನ್ನು ಜುಲೈ 14, 2023 ರಂದು ಕೆಡವಿತ್ತು. ಆ ಸ್ಥಳದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಿದೆ. ದೇವಸ್ಥಾನವನ್ನು ಕೆಡವಿದ ನಂತರ ಅಲ್ಲಿರುವ ಹಿಂದೂಗಳು ಸರಕಾರವನ್ನು ವಿರೋಧಿಸಿದ್ದಾರೆ. ‘ಯಾವುದೇ ಪರಿಸ್ಥಿತಿಯಲ್ಲಿ ದೇವಸ್ಥಾನವನ್ನು ಅಲ್ಲೇ ಕಟ್ಟಿಕೊಡಬೇಕು, ಎಂಬ ಧೃಡ ನಿಲುವನ್ನು ಹಿಂದೂಗಳು ಸರಕಾರದ ಮುಂದೆ ಮಂಡಿಸಿದ್ದಾರೆ. ಈ ದೇವಸ್ಥಾನದಲ್ಲಿ ಪೂಜೆಗೆ ಅನುಮತಿ ನಿರಾಕರಿಸಲಾಗಿತ್ತು ಹಾಗೂ ವಿಗ್ರಹಗಳು ಕಳುವು ಆಗಿತ್ತು, ಎಂದು ಹಿಂದೂ ಮಹಿಳೆಯರು ಮಾಧ್ಯಮದ ಪ್ರತಿನಿಧಿಯೊಂದಿಗೆ ಮಾತನಾಡುವಾಗ ಹೇಳಿದರು. ಈ ದೇವಸ್ಥಾನದ ಪ್ರಾಂಗಣದಲ್ಲಿ ಪ್ರಾಚೀನ ನಿಧಿಯನ್ನೂ ಹೂಳಲಾಗಿದೆ.
(ಸೌಜನ್ಯ : Real entertainment tv)
ಸಂಪಾದಕರ ನಿಲುವು* ಪಾಕಿಸ್ತಾನದಲ್ಲಿ ಸಂತ್ರಸ್ತ ಹಿಂದೂಗಳ ಬೇಡಿಕೆಯನ್ನು ಭಾರತ ಸರಕಾರವು ಬೆಂಬಲಿಸಿ ಅದೇ ಸ್ಥಳದಲ್ಲಿ ದೇವಸ್ಥಾನವನ್ನು ನಿರ್ಮಿಸಲು ಪಾಕಿಸ್ತಾನದ ಸರಕಾರವನ್ನು ಅನಿವಾರ್ಯಗೊಳಿಸಬೇಕು ! |