ಜಗತ್ತಿನಾದ್ಯಂತದ ಹಿಂದೂಗಳು ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಬೇಕು ! – ಪಾಕಿಸ್ತಾನದ ಮಾಜಿ ಕ್ರಿಕೆಟ್‌ ಪಟು ದಾನಿಶ ಕನೇರಿಯಾ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿರುವ ಐತಿಹಾಸಿಕ ದೇವಸ್ಥಾನಗಳು ನಾಶವಾಗುತ್ತಿರುವಾಗ ಅಂತರರಾಷ್ಟ್ರೀಯ ಸಮುದಾಯ ಏಕೆ ಮೌನವಾಗಿದೆ ? ಇಲ್ಲಿ ಪ್ರತಿದಿನ ಮತಾಂತರ, ಅಪಹರಣ, ಬಲಾತ್ಕಾರ ಮತ್ತು ಹತ್ಯೆಗಳಂತಹ ಹಲವಾರು ಪ್ರಕರಣಗಳು ನಡೆಯುತ್ತಿವೆ. ಇಲ್ಲಿ ಧಾರ್ಮಿಕ ಸ್ವಾತಂತ್ರ್ಯವಿಲ್ಲ. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ಜಗತ್ತಿನಾದ್ಯಂತ ಇರುವ ಹಿಂದೂಗಳು ಧ್ವನಿಯೆತ್ತಬೇಕು ಎಂದು ಪಾಕಿಸ್ತಾನ ಕ್ರಿಕೆಟ ತಂಡದ ಮಾಜಿ ಕ್ರಿಕೆಟ ಪಟು ಮತ್ತು ಹಿಂದೂ ಆಗಿರುವ ದಾನಿಶ ಕನೇರಿಯಾ ಇವರು ಟ್ವೀಟ್ ಮಾಡಿದ್ದಾರೆ. ಕಳೆದ 4 ದಿನಗಳಲ್ಲಿ ಪಾಕಿಸ್ತಾನದಲ್ಲಿ ಹಿಂದೂಗಳ 2 ದೇವಸ್ಥಾನಗಳ ಮೇಲೆ ದಾಳಿ ನಡೆಸಲಾಗಿದೆ. ಈ ಬಗ್ಗೆ ಕನೇರಿಯಾ ಮೇಲಿನಂತೆ ಟ್ವೀಟ್ ಮಾಡಿದ್ದಾರೆ. ಕನೇರಿಯಾ ಹಿಂದೂ ಆಗಿದ್ದರಿಂದ ಅವನನ್ನು ಪಾಕಿಸ್ತಾನಿ ಕ್ರಿಕೆಟ್ ತಂಡದಿಂದ ಅವಮಾನ ಮಾಡಲಾಯಿತು ಮತ್ತು ಆಡಲು ಸಾಕಷ್ಟು ಅವಕಾಶಗಳನ್ನು ನೀಡಲಿಲ್ಲ ಎಂದು ಸ್ವತಃ ಕನೇರಿಯಾ ಕೆಲವು ವರ್ಷಗಳ ಹಿಂದೆ ಆರೋಪಿಸಿದ್ದರು.

ಸಂಪಾದಕೀಯ ನಿಲುವು

ಪಾಕಿಸ್ತಾನಿ ಹಿಂದೂಗಳ ವ್ಯಥೆಯ ಕುರಿತಾಗಿ ಅಲ್ಲ: ಆದರೆ ಕನಿಷ್ಟ ಪಕ್ಷ ಭಾರತೀಯ ಹಿಂದೂಗಳ ಮೇಲಾಗುವ ಅತ್ಯಾಚಾರಗಳ ವಿರುದ್ಧವಾದರೂ ಸಚಿನ ತೆಂಡೂಲ್ಕರ, ಸುನೀಲ ಗಾವಸ್ಕರ, ಸೌರವ ಗಂಗೂಲಿ, ಮಹೇಂದ್ರಸಿಂಹ ಧೋನಿ, ವಿರಾಟ ಕೊಹಲಿ ಮುಂತಾದ ಇಂದಿನ ಅಥವಾ ಮಾಜಿ ಕ್ರಿಕೆಟ ಪಟುಗಳು ಎಂದೂ ಏನೂ ಮಾತನಾಡುವುದಿಲ್ಲ ಎನ್ನುವುದನ್ನು ಗಮನಿಸಬೇಕು. ಇಂತಹವರನ್ನು ಬಹುಸಂಖ್ಯಾತ ಹಿಂದೂಗಳು ಏಕೆ ಬೆಳೆಸಬೇಕು ಎಂದು ಯಾರಾದರೂ ಕೇಳಿದರೆ ಆಶ್ಚರ್ಯಪಡಬಾರದು !