ಚಲನಚಿತ್ರ ನಿರ್ಮಾಪಕರು ಕ್ಷಮಾ ಯಾಚನೆ ಮಾಡುತ್ತಾ ಆಕ್ಷೇಪಾರ್ಹ ದೃಶ್ಯ ತೆಗೆದು ಹಾಕಿದರು !
ಭಾಗ್ಯನಗರ (ತೆಲಂಗಾಣ) – ‘ರಾಜುಗಾರಿ ಕೊಡಿ ಪುಲಾವ’ (ರಾಜನ ಕೋಳಿ ಪುಲಾವ) ಈ ಮುಂಬರುವ ತೆಲುಗು ಚಲನಚಿತ್ರದಲ್ಲಿ ದೇವತೆಗಳು ಮತ್ತು ಸಂತರ ಅವಮಾನ ಮಾಡಲಾಗಿರುವುದರಿಂದ ಹಿಂದುತ್ವ ನಿಷ್ಠರು ಅದನ್ನು ವಿರೋಧಿಸಿದರು. ಅದರ ನಂತರ ನಿರ್ಮಾಪಕರು ಚಲನಚಿತ್ರದಿಂದ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕಿರುವ ಮಾಹಿತಿ ನೀಡಿದರು. ಈ ಚಲನಚಿತ್ರ ಜುಲೈ ೨೯ ರಂದು ಪ್ರದರ್ಶಿತಗೊಳ್ಳುವುದು.
ಈ ಚಲನಚಿತ್ರದ ಕೆಲವು ಭಾಗ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು. ಇದರಲ್ಲಿ ದೇವತೆಯ ಅವಮಾನ ಮಾಡುವ ದೃಶ್ಯವಿತ್ತು. ಇದನ್ನು ನೋಡಿ ಭಾಗ್ಯನಗರದಲ್ಲಿನ ಹಿಂದುತ್ವನಿಷ್ಠ ಶ್ರೀ. ಚಿಕೋಟಿ ಪ್ರವೀಣ, ರಾಷ್ಟ್ರೀಯ ದಲಿತ ಸೇನೆಯ ಅಧ್ಯಕ್ಷ ವರಪ್ರಸಾದ ಮತ್ತು ಹಿಂದುತ್ವನಿಷ್ಠ ಹಾಗೂ ನಟಿ ಕರಾಟೆ ಕಲ್ಯಾಣಿ ಇವರು ಇದನ್ನು ವಿರೋಧಿಸುತ್ತಾ ಈ ದೃಶ್ಯ ತೆಗೆದು ಹಾಕಲು ಒತ್ತಾಯಿಸಿದ್ದರು. ಇದರ ಜೊತೆಗೆ ಕರಾಟೆ ಕಲ್ಯಾಣಿ ಇವರು ಪೊಲೀಸ ಠಾಣೆಯಲ್ಲಿ ದೂರು ಕೂಡ ದಾಖಲಿಸಿದರು. ಇದರ ನಂತರ ಚಲನಚಿತ್ರದ ನಿರ್ಮಾಪಕ ಶಿವಕೋನ ಮತ್ತು ನಾಯಕ ಕುಣಾಲ ಕೌಷಿಕ ಇವರು ಬಹಿರಂಗವಾಗಿ ಕ್ಷಮೆಯಾಚಿಸುತ್ತಾ ಆಕ್ಷೇಪಿತ ದೃಶ್ಯಗಳನ್ನು ತೆಗೆದ ಹಾಕಿರುವ ಮಾಹಿತಿ ನೀಡಿದರು.