ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನದ ಮೇಲೆ ರಾಕೆಟ್ ದಾಳಿ !

ಹಿಂದೂಗಳ ಮನೆಯ ಮೇಲೆ ಮನಬಂದಂತೆ ಗುಂಡಿನದಾಳಿ

ಪಾಕಿಸ್ತಾನದಲ್ಲಿ ಎರಡು ದಿನಗಳ ಹಿಂದೆಯೂ ದೇವಸ್ಥಾನ ನೆಲಸಮ !

ಸೀಮಾ ಹೈದರ್ ಇವಳಿಂದಾಗಿ ದಾಳಿ ಮಾಡಿರುವ ಅನುಮಾನ !

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಕಳೆದ ೪೮ ಗಂಟೆಯಲ್ಲಿ ಹಿಂದುಗಳ ೨ ದೇವಸ್ಥಾನಗಳ ಮೇಲೆ ದಾಳಿ ಮಾಡಲಾಗಿದೆ. ಒಂದು ದೇವಸ್ಥಾನ ನೆಲೆಸಮ ಮಾಡಲಾಗಿದೆ ಮತ್ತು ಇನ್ನೊಂದರ ಮೇಲೆ ಗುಂಡಿನದಾಳಿ ಮತ್ತು ರಾಕೆಟ್ ಹಾರಿಸಲಾಗಿದೆ. ಪಾಕಿಸ್ತಾನದಲ್ಲಿ ವಿವಾಹಿತ ಮತ್ತು ೪ ಮಕ್ಕಳ ತಾಯಿಯಾಗಿರುವ ಸೀಮಾ ಹೈದರ್ ಎಂಬ ಮಹಿಳೆ ಭಾರತದಲ್ಲಿನ ಆಕೆಯ ಹಿಂದೂ ಪ್ರಿಯಕರನಿಗಾಗಿ ಭಾರತಕ್ಕೆ ಬಂದಿದ್ದಾಳೆ. ಆಕೆ ಭಾರತಕ್ಕೆ ಬಂದು ಹೋಗಿ ಮಾಡುತ್ತಾ ಹಿಂದೂ ಧರ್ಮ ಕೂಡ ಸ್ವೀಕರಿಸಿದ್ದಾಳೆ. ಇದರಿಂದ ಪಾಕಿಸ್ತಾನದಲ್ಲಿನ ಒಂದು ದರೋಡೆಕೋರರ ಗುಂಪು ಬೆದರಿಕೆ ನೀಡಿತ್ತು, ‘ಭಾರತದಿಂದ ಸೀಮಳನ್ನು ಮತ್ತೆ ಪಾಕಿಸ್ತಾನಕ್ಕೆ ಕಳುಹಿಸಬೇಕು, ಇಲ್ಲವಾದರೆ ಪಾಕಿಸ್ತಾನದಲ್ಲಿನ ಹಿಂದೂಗಳ ಮೇಲೆ ಮತ್ತು ಅವರ ದೇವಸ್ಥಾನಗಳ ಮೇಲೆ ದಾಳಿ ಮಾಡಲಾಗುವುದು.’ ಇದರಿಂದ ದೇವಸ್ಥಾನದ ಮೇಲೆ ದಾಳಿ ನಡೆಯುತ್ತಿರುವುದೆಂದು ಹೇಳಲಾಗುತ್ತಿದೆ. ಪೊಲೀಸರು ಕೂಡ ಈ ದಾಳಿಯ ಹಿಂದೆ ದರೋಡೆಕೋರರ ಗುಂಪು ಇರುವುದಾಗಿ ಹೇಳಿದೆ.

೧. ಪಾಕಿಸ್ತಾನದಲ್ಲಿನ ಸಿಂಧ ಪ್ರಾಂತ್ಯದಲ್ಲಿನ ಕಾಶಮೊರ ಪ್ರದೇಶದಲ್ಲಿ ಜುಲೈ ೧೭ ರಂದು ಬೆಳಿಗ್ಗೆ ಹಿಂದೂಗಳ ಒಂದು ದೇವಸ್ಥಾನದ ಮೇಲೆ ರಾಕೆಟ್ ದಾಳಿ ನಡೆಸಿದ್ದಾರೆ. ಹಾಗೂ ಈ ದೇವಸ್ಥಾನದ ಪರಿಸರದಲ್ಲಿ ಗುಂಡಿನದಾಳಿ ಮಾಡಿ ಪಲಾಯನ ಮಾಡಿದರು.

೨. ಗುಂಡಿನದಾಳಿಯ ಘಟನೆಯ ಕುರಿತು ಪೊಲೀಸರು, ಈ ಸಮಯದಲ್ಲಿ ದೇವಸ್ಥಾನ ಮುಚ್ಚಿತ್ತು, ಆದ್ದರಿಂದ ಜೀವಹಾನಿ ಆಗಿಲ್ಲ. ಗುಂಡಿನದಾಳಿ ನಡೆಸುವವರು ದೇವಸ್ಥಾನದ ನೆರೆಯ ಹಿಂದುಗಳ ಮನೆಯ ಮೇಲೆ ಕೂಡ ಗುಂಡಿನದಾಳಿ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ದಾಳಿ ನಡೆಸುವವರು ೯ ಜನರಿದ್ದರು. ಅವರ ಹುಡುಕಾಟ ನಡೆಸಲಾಗುತ್ತಿದೆ.

೩. ಈ ದೇವಸ್ಥಾನದ ವ್ಯವಸ್ಥಾಪನೆಯನ್ನು ಬಾಗಡಿ ಸಮಾಜದಿಂದ ನಡೆಯುತ್ತದೆ. ಈ ಸಮಾಜದಲ್ಲಿನ ಡಾ. ಸುರೇಶ ಇವರು, ದರೋಡೆಕೋರರು ಹಾರಿಸಿರುವ ರಾಕೆಟ್ ದೇವಸ್ಥಾನದಲ್ಲಿ ಸಿಡಿದಿಲ್ಲ. ಆದ್ದರಿಂದ ಜೀವಹಾನಿ ಆಗಿಲ್ಲ. ಈ ಘಟನೆಯಿಂದ ಸ್ಥಳೀಯ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಹಿಂದುಗಳಿಗೆ ರಕ್ಷಣೆ ನೀಡಬೇಕೆಂದು ಹೇಳಿದರು.

೪. ಈ ಹಿಂದೆ ಜುಲೈ ೧೫ ರ ರಾತ್ರಿ ಕರಾಚಿಯಲ್ಲಿ ೧೫೦ ವರ್ಷಗಳ ಪುರಾತನ ಮಾರಿಮಾತಾ ದೇವಸ್ಥಾನವನ್ನು ಬುಲ್ಡೋಜರ್ ನಿಂದ ನೆಲಸಮ ಮಾಡಲಾಗಿತ್ತು. ಮಾರಿಮಾತಾ ದೇವಸ್ಥಾನದ ಭೂಮಿ ೭ ಕೋಟಿ ರೂಪಾಯಿಗೆ ಮಾರಲಾಗಿದೆ ಎಂದು ಹೇಳಿ ದೇವಸ್ಥಾನ ನೆಲಸಮ ಮಾಡಲಾಯಿತು. ಈ ಹಿಂದೆ ಈ ದೇವಸ್ಥಾನದಲ್ಲಿನ ದೇವತೆಯ ಮೂರ್ತಿಗಳನ್ನು ಬಗ್ನಗೊಳಿಸಿರುವ ಘಟನೆ ಕೂಡ ಘಟಿಸಿತ್ತು.

೫. ಮಾರಿಮಾತಾ ದೇವಸ್ಥಾನದ ವ್ಯವಸ್ಥಾಪನೆ ತಮಿಳಿ ಹಿಂದೂ ಸಮಾಜದ ಬಳಿ ಇತ್ತು. ಅವರು, ಈ ದೇವಸ್ಥಾನ ಬಹಳ ಪ್ರಾಚೀನವಾಗಿತ್ತು ಮತ್ತು ಅದು ಜೀರ್ಣ ಆಗಿರುವುದರಿಂದ ಕುಸಿಯಬಹುದಾದಂಥ ಸ್ಥಿತಿಯಲ್ಲಿ ಇತ್ತು. ಆದ್ದರಿಂದ ನಾವು ಹೆಚ್ಚಿನ ಮೂರ್ತಿಗಳನ್ನು ತಾತ್ಕಾಲಿಕವಾಗಿ ಬೇರೆ ಸ್ಥಳಕ್ಕೆ ಸ್ಥಳಾಂತರಿಸಿದ್ದೆವು. ಹೊಸ ದೇವಸ್ಥಾನ ಕಟ್ಟಿದ ನಂತರ ಮೂರ್ತಿಗಳು ಮತ್ತೆ ಅದೇ ಜಾಗದಲ್ಲಿ ಸ್ಥಾಪಿಸಲಾಗುವುದು, ಹೀಗೆ ನಮಗೆ ಅನಿಸಿತ್ತು. ಈ ದೇವಸ್ಥಾನದ ಅಂಗಳದಲ್ಲಿ ಪ್ರಾಚೀನ ಖಜಾನೆ ಹೂಳಿರುವ ಕಥೆ ಕೂಡ ಇದೆ.

ಸಿಂಧನಲ್ಲಿ ದರೋಡೆಕೋರರಿಂದ ೩೦ ಹಿಂದುಗಳ ಒತ್ತೆಯಾಳು !

ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗವು, ಸಿಂಧ ಪ್ರಾಂತದಲ್ಲಿನ ಕಾಶಮೋರ ಮತ್ತು ಘೋಟಕಿ ಜಿಲ್ಲೆಯಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯಿಂದ ನಾವು ಚಿಂತಿತರಾಗಿದ್ದೇವೆ. ಇಲ್ಲಿ ಮಹಿಳೆ, ಮಕ್ಕಳು ಸಹಿತ 30 ಹಿಂದೂಗಳನ್ನು ದರೊಡೆಕೋರರು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಸಿಂಧಪ್ರಾಂತದ ಗೃಹ ಇಲಾಖೆಯು ತಕ್ಷಣ ಈ ಘಟನೆಯ ಸಮೀಕ್ಷೆ ನಡೆಸಬೇಕು ಎಂದು ಹೇಳಿದೆ.

ಸಂಪಾದಕರ ನಿಲುವು

* ಪಾಕಿಸ್ತಾನದಲ್ಲಿ ಕಳೆದ ೭೫ ವರ್ಷಗಳಿಂದ ಹಿಂದುಗಳ ನರಸಂಹಾರ ಮತ್ತು ಅವರ ಧಾರ್ಮಿಕ ಸ್ಥಳಗಳ ದ್ವಂಸ ನಡೆಯುತ್ತಲೇ ಇದೆ. ಅಪಘಾನಿಸ್ತಾನದಲ್ಲಿನ ಹಿಂದೂಗಳ ಅಸ್ತಿತ್ವ ಹೇಗೆ ನಾಶವಾಯಿತು ಹಾಗೆಯೇ ಕೆಲವು ವರ್ಷಗಳಲ್ಲಿ ಪಾಕಿಸ್ತಾನದಿಂದ ಹಿಂದೂಗಳ ಅಸ್ತಿತ್ವ ನಾಶವಾಗುವುದು. ಇದರ ಸಂದರ್ಭದಲ್ಲಿ ಜಗತ್ತಿನಾದ್ಯಂತ ಇರುವ ಹಿಂದುಗಳು ನಿಷ್ಕ್ರಿಯರಾಗಿದ್ದಾರೆ, ಇದು ಹಿಂದುಗಳಿಗೆ ಲಚ್ಚಾಸ್ಪದ !

* ಹಿಂದೂ ಸಹಿಷ್ಣುಗಳಾಗಿರುವುದರಿಂದಲೇ ಅವರು ಸೇಡು ತೀರಿಸಿಕೊಳ್ಳುವುದಕ್ಕಾಗಿ ಮತಾಂಧರ ಪ್ರಾರ್ಥನಾಸ್ಥಳಗಳ ಮೇಲೆ ಎಂದಿಗೂ ದಾಳಿ ಮಾಡುವುದಿಲ್ಲ; ಆದರೆ ಯಾವಾಗ ಹಿಂದುಗಳು ಬಾಬರಿ ಮಸೀದಿಯನ್ನು ನೆಲಸಮ ಮಾಡಿದರೋ ಅಂದಿನಿಂದ ಪಾಕಿಸ್ತಾನದಲ್ಲಿ ಮತಾಂಧ ಮುಸಲ್ಮಾನರು ಅನೇಕ ದೇವಸ್ಥಾನಗಳು ನೆಲೆಸಮ ಮಾಡಿದ್ದರು, ಇದು ಯಾರೂ ಕೂಡ ಮರೆಯುವುದಿಲ್ಲ !