ಅವ್ಯಾಹತ ಧರ್ಮಪ್ರಸಾರದ ಕಾರ್ಯವನ್ನು ಮಾಡುವ ಸನಾತನದ ಆಶ್ರಮಗಳಿಗೆ ಅಧಿಕ ಮಾಸದ ನಿಮಿತ್ತ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭ ಪಡೆಯಿರಿ !

ಎಲ್ಲೆಡೆಯ ಅರ್ಪಣೆದಾರರಿಗೆ ಅನ್ನದಾನದ ಸದವಕಾಶ

ಹಿಂದೂ ಸಂಸ್ಕೃತಿಯಲ್ಲಿ ದಾನಕ್ಕಿರುವ ಮಹತ್ವ !

ಭಾರತೀಯ ಸಂಸ್ಕೃತಿಯಲ್ಲಿ ದಾನಧರ್ಮಕ್ಕೆ ವಿಶೇಷ ಮಹತ್ವವಿದೆ. ದಾನದಲ್ಲಿ ಧನದಾನ, ಅನ್ನದಾನ, ವಸ್ತ್ರದಾನ, ಜ್ಞಾನದಾನ ಮುಂತಾದ ವಿಧಗಳಿವೆ. ದಾನವು ಪಾಪನಾಶಕವಾಗಿದ್ದು ಅದರಿಂದ ಪುಣ್ಯಬಲ ಪ್ರಾಪ್ತಿಯಾಗುತ್ತದೆ. ‘ಈ ಪೃಥ್ವಿಯಲ್ಲಿ ದಾನಧರ್ಮದಂತಹ ಇನ್ನೊಂದು ನಿಧಿ (ಖಜಾನೆ) ಇಲ್ಲ’, ಎಂದು ಮಹಾಭಾರತದಲ್ಲಿ ಹೇಳಲಾಗಿದೆ.

‘೧೮.೭.೨೦೨೩ ರಿಂದ ೧೬.೮.೨೦೨೩ ಈ ಅವಧಿಯಲ್ಲಿ ‘ಅಧಿಕ ಮಾಸ’ (ಮಲಮಾಸ) ಇದೆ. ಈ ಮಾಸದಲ್ಲಿ ನಾಮ, ಸತ್ಸಂಗ, ಸತ್ಸೇವೆ, ತ್ಯಾಗ, ದಾನ ಇತ್ಯಾದಿಗಳಿಗೆ ಹೆಚ್ಚು ಮಹತ್ವವಿರುತ್ತದೆ. ಈ ಮಾಸ ದಲ್ಲಿ ದಾನ ಮಾಡಿದರೆ ಹೆಚ್ಚು ಪಟ್ಟುಗಳಲ್ಲಿ ಫಲ ಸಿಗುತ್ತದೆ.

೧. ಅನ್ನದಾನದ ಅಸಾಧಾರಣ ಮಹತ್ವ !

‘ಅನ್ನದಾನವನ್ನು’, ಶ್ರೇಷ್ಠ ಕರ್ಮವೆಂದು ಪರಿಗಣಿಸ ಲಾಗಿದೆ. ಹಿಂದೂ ಧರ್ಮಶಾಸ್ತ್ರಕ್ಕನುಸಾರ ಯಾವ ಗೃಹಸ್ಥನು ಧನವನ್ನು ಸಂಪಾದಿಸುತ್ತಾನೆಯೋ ಮತ್ತು ಯಾರ ಮನೆ ಯಲ್ಲಿ ಪ್ರತಿದಿನ ಆಹಾರವನ್ನು ಬೇಯಿಸಲಾಗುತ್ತದೆಯೋ, ಅವನು ಅನ್ನದಾನ ಮಾಡುವುದು ಕರ್ತವ್ಯವೇ ಆಗಿದೆ. ‘ಸದ್ಭಾವನೆಯಿಂದ ‘ಸತ್ಪಾತ್ರರಿಗೆ ಅನ್ನದಾನ’ವನ್ನು ಮಾಡಿದರೆ ಅನ್ನದಾತರಿಗೆ ಅದರ ಯೋಗ್ಯ ಫಲ ಸಿಗುತ್ತದೆ, ಹಾಗೆಯೇ ಎಲ್ಲ ಪಾಪಗಳಿಂದ ಅವನ ಉದ್ಧಾರವಾಗಿ ಅವನು ಈಶ್ವರನ ಸಮೀಪಕ್ಕೆ ಹೋಗುತ್ತಾನೆ’, ಎಂದು ಧರ್ಮಶಾಸ್ತ್ರವು ಹೇಳುತ್ತದೆ. ಅನ್ನದಾನವನ್ನು ಮಾಡಿದರೆ ಅನ್ನದಾತನಿಗೆ ಆಧ್ಯಾತ್ಮಿಕ ಸ್ತರದಲ್ಲಿಯೂ ಲಾಭವಾಗುತ್ತದೆ.

೨. ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ !

ಸದ್ಯ ಧರ್ಮಗ್ಲಾನಿಯ ಕಾಲವಿರುವುದರಿಂದ ‘ಧರ್ಮ ಪ್ರಸಾರವು’, ಕಾಲಾನುಸಾರ ಆವಶ್ಯಕ ಕಾರ್ಯವಾಗಿದೆ. ‘ಧರ್ಮಪ್ರಸಾರದ ಕಾರ್ಯವನ್ನು ಮಾಡುವ ಸಂತರು, ಸಂಸ್ಥೆ ಅಥವಾ ಸಂಘಟನೆಗಳಿಗೆ ನೀಡಿದ ಅನ್ನದಾನವು’, ಸರ್ವಶ್ರೇಷ್ಠ ದಾನವಾಗಿದೆ. ಸನಾತನ ಸಂಸ್ಥೆಯು ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಇವುಗಳಿಗಾಗಿ ಕಟಿಬದ್ಧವಾಗಿದೆ. ಸನಾತನ ಸಂಸ್ಥೆಯ ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿ ಧರ್ಮಪ್ರಸಾರದ ಕಾರ್ಯವನ್ನು ಮಾಡಲಾಗುತ್ತದೆ. ಸದ್ಯದ ಕಾಲದಲ್ಲಿ ರಾಷ್ಟ್ರ ಮತ್ತು ಧರ್ಮ ಇವುಗಳ ಸೇವೆಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ನೂರಾರು ಸಾಧಕರು ಆಶ್ರಮಗಳಲ್ಲಿದ್ದು ಪೂರ್ಣವೇಳೆ ಸೇವೆಯನ್ನು ಮಾಡುತ್ತಿದ್ದಾರೆ. ಅವ್ಯಾಹತವಾಗಿ ಧರ್ಮಜಾಗೃತಿಯ ಕಾರ್ಯವನ್ನು ಮಾಡುವ ಸನಾತನದ ಆಶ್ರಮಗಳಿಗೆ ಅನ್ನದಾನಕ್ಕಾಗಿ ಧನರೂಪದಲ್ಲಿ ಸಹಾಯ ಮಾಡುವ ಅವಕಾಶವು ಅರ್ಪಣೆದಾರರಿಗೆ ದೊರಕಿದೆ.

ಅಧಿಕ ಮಾಸದ ನಿಮಿತ್ತ ಸಾಧಕರಿಗೆ ಅನ್ನದಾನಕ್ಕಾಗಿ ಧನರೂಪದಲ್ಲಿ ಸಹಾಯ ಮಾಡಿ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಲು ಬಯಸುವ ಅರ್ಪಣೆದಾರರು, ಕೆಳಗಿನ ಕ್ರಮಾಂಕವನ್ನು ಸಂಪರ್ಕಿಸಬೇಕು.

ಹೆಸರು ಮತ್ತು ಸಂಪರ್ಕ ಕ್ರಮಾಂಕ

ಸೌ. ಭಾಗ್ಯಶ್ರೀ ಸಾವಂತ – ೭೦೫೮೮೮೫೬೧೦

ವಿ-ಅಂಚೆ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಛಿ/o ‘ಸನಾತನ ಆಶ್ರಮ’, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – ೪೦೩೪೦೧

ಅನ್ನದಾನಕ್ಕಾಗಿ ಸಂಸ್ಥೆಗೆ ಧನಾದೇಶವನ್ನು ನೀಡುವುದಿದ್ದರೆ ಅದನ್ನು ‘ಸನಾತನ ಸಂಸ್ಥೆ’ ಈ ಹೆಸರಿನಲ್ಲಿ ನೀಡಬೇಕು. www.sanatan.org/en/donate ಇಲ್ಲಿಯೂ ದಾನವನ್ನು ಮಾಡುವ ಅವಕಾಶ ಲಭ್ಯವಿದೆ.’

– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ (೨೪.೬.೨೦೨೩)