ಸಾಧಕರ ರಕ್ಷಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದ ನಿರ್ಮಾಣ ಕಾರ್ಯಪೂರ್ಣವಾದಾಗ ಆಶ್ರಮದ ಸ್ವಾಗತಕಕ್ಷೆಯ ಸಮೀಪವಿದ್ದ ಮುಖ್ಯ ದ್ವಾರಕ್ಕೆ ಬೀಗ ಹಾಗೂ ಚಿಲಕ ಅಳವಡಿಸಲು ಬಾಕಿಯಿತ್ತು. ಅದಕ್ಕಾಗಿ ಗುರುದೇವರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ಸ್ವತಃ ಅಲ್ಲಿಗೆ ಬಂದಿದ್ದರು. ಅವರು ಬಾಗಿಲಿನ ಮೇಲೆ ಕೈ ಆಡಿಸಿ ಮೊದಲು ಬಾಗಿಲಿನ ಸ್ಪಂದನವನ್ನು ನೋಡಿದರು, ಅನಂತರ ಸೂಕ್ಷ್ಮದಿಂದ ಚಿಲಕ ಮತ್ತು ಬೀಗ ಹಾಕುವ ಸ್ಥಳ ನಿರ್ಧರಿಸಿದರು. ಅದಕ್ಕನುಸಾರ ನಿರ್ಮಾಣ ಕಾರ್ಯದ ಸೇವೆ ಮಾಡುವ ಸಾಧಕರು ಅಲ್ಲಿ ಚಿಲಕ ಮತ್ತು ಬೀಗ ಹಾಕುವ ಸೌಲಭ್ಯವನ್ನು ಮಾಡಿಕೊಟ್ಟರು. ಇದರಿಂದ ಅರಿವಾದ ಅಂಶವೆಂದರೆ, ಗುರುದೇವರ ಮೂಲಕ ಸಾಕ್ಷಾತ್‌ ಭಗವಂತನೇ ಆಶ್ರಮದ ಮುಖ್ಯ ದ್ವಾರದ ಬಾಗಿಲು ಹಾಗೂ ಅದರ ಚಿಲಕ ಮತ್ತು ಬೀಗವನ್ನು ಸ್ಪರ್ಶ ಮಾಡಿ ಆಶ್ರಮದ ಸುತ್ತಲೂ ಚೈತನ್ಯದ ವಜ್ರಕವಚ ನಿರ್ಮಿಸಿದನು. ಅನಂತರ ಸನಾತನದ ಮೇಲೆ ಅನೇಕ ಸಂಕಟಗಳು ಬಂದರೂ ಸಾಧಕರು ಆ ಎಲ್ಲ ಸಂಕಟಗಳನ್ನು ಜಯಿಸಿಕೊಂಡು ಮುಂದೆ ಹೋದರು. ಧನ್ಯ ಗುರುಕೃಪೆ ಮತ್ತು ಸಾಧಕರ ರಕ್ಷಕರಾದ ಗುರುದೇವರು ಧನ್ಯ ಧನ್ಯರು !

– ಸೌ. ಅಂಜಲಿ ಗಾಡಗೀಳ, ಕಾಂಚೀಪುರಮ್, ತಮಿಳುನಾಡು. (೪.೧೨.೨೦೨೪)