ಭಯೋತ್ಪಾದನೆಯನ್ನು ಪೋಷಿಸುವ ಸಂಪೂರ್ಣ ವ್ಯವಸ್ಥೆಯನ್ನು ನಾಶಪಡಿಸುವುದು ಆವಶ್ಯಕ !

ಪಾಕಿಸ್ತಾನ ಬೆಂಬಲಿತ ಜಿಹಾದಿ ಭಯೋತ್ಪಾದಕರ ಕುರಿತು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರ ಹೇಳಿಕೆ

ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ

ಜಕಾರ್ತಾ (ಇಂಡೋನೇಶಿಯಾ) – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಸಧ್ಯ ಇಂಡೋನೇಶಿಯಾ ಪ್ರವಾಸದಲ್ಲಿದ್ದಾರೆ. ಇಲ್ಲಿ ಅವರು ಆಗ್ನೇಯ ಏಷ್ಯಾದ ದೇಶಗಳ `ಆಸಿಯಾನ’ ಪರಿಷತ್ತನ್ನು ಉದ್ದೇಶಿಸಿ ಮಾತನಾಡಲು ಬಂದಿದ್ದಾರೆ. ಭಯೋತ್ಪಾದನೆಯ ವಿಷಯದಲ್ಲಿ `ಸಮಾನತೆ, ಏಕೀಕೃತ ಮತ್ತು ಶೂನ್ಯ ಸಹಿಷ್ಣುತೆ’ ಧೋರಣೆಯನ್ನು ಹೊಂದಬೇಕೆಂದು ಅವರು `ಆಸಿಯಾನ’ ಸದಸ್ಯ ರಾಷ್ಟ್ರಗಳನ್ನು ಒತ್ತಾಯಿಸಿದರು. ಅದೇ ಸಮಯದಲ್ಲಿ ಎಸ್. ಜೈಶಂಕರ ಇವರು ಮಾತನಾಡುತ್ತಾ, ಭಯೋತ್ಪಾದಕರಿಗೆ ರಕ್ಷಣೆ ಮತ್ತು ಬೆಂಬಲಿಸುವವರ ಸಂಪೂರ್ಣ ವ್ಯವಸ್ಥೆಯನ್ನು ನಷ್ಟಗೊಳಿಸುವುದು ಅತ್ಯಂತ ಆವಶ್ಯಕವಾಗಿದೆಯೆಂದು ಹೇಳಿದರು.

1. ಜಕಾರ್ತದಲ್ಲಿ ಆಸಿಯಾನ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಜೈಶಂಕರ ಇವರು ಭಾರತ ಭಯೋತ್ಪಾದನೆಯನ್ನು ಎದುರಿಸಲು ಜಾಗತಿಕ ಸಹಕಾರವನ್ನು ಪ್ರೋತ್ಸಾಹಿಸುವ ಮೂಲಕ ಭಾರತ ಜಾಗತಿಕ ಸವಾಲುಗಳನ್ನು ಎದುರಿಸುತ್ತಿದೆಯೆಂದು ಹೇಳಿದರು. ದೇಶಗಳ ನಡುವಿನ ವಿವಾದಗಳನ್ನು ಬಗೆಹರಿಸಲು ರಾಜತಾಂತ್ರಿಕತೆ ಉಪಯೋಗಿಸಬೇಕು.

2. ಚೀನಾ ಬಗ್ಗೆ ಮಾತನಾಡುವಾಗ ಡಾ. ಜೈಶಂಕರ ಇವರು ನಾವು ಶಾಂತಿ ಮತ್ತು ಸ್ಥಿರತೆಗೆ ಧಕ್ಕೆ ತರುವ ಚೀನಾ ಕ್ರಮಗಳ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದೇವೆ. ಯಾವುದೇ ನೀತಿ ಸಂಹಿತೆಯನ್ನು ಮುಂದುವರಿಸುವ ಸಮಯದಲ್ಲಿ ಮೂರನೇ ವ್ಯಕ್ತಿಗಳ ಹಕ್ಕುಗಳು ಮತ್ತು ಹಿತಾಸಕ್ತಿಗಳ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗಬಾರದು.

3. ದಕ್ಷಿಣ ಚೀನಾ ಸಮುದ್ರದ ಸಂಪೂರ್ಣ ಪ್ರದೇಶವನ್ನು ಚೀನಾ ತನ್ನದು ಎಂದು ಹೇಳಿಕೊಂಡಿದೆ. ತೈವಾನ್, ಫಿಲಿಫೈನ್ಸ್, ಬ್ರುನೈ, ಮಲೇಶಿಯಾ ಮತ್ತು ವಿಯೆಟ್ನಾಂ ಈ ಆಗ್ನೇಯ ದೇಶಗಳೂ ಕೂಡ ಈ ಸಮುದ್ರದ ಕೆಲವು ಭಾಗಗಳ ಮೇಲೆ ಹಕ್ಕು ಸಾಧಿಸುತ್ತವೆ. ಚೀನಾ ಈ ಸಮುದ್ರದಲ್ಲಿ ಕೃತ್ರಿಮ ದ್ವೀಪಗಳನ್ನು ನಿರ್ಮಿಸಿದ್ದು, ಮಿಲಿಟರಿ ತಾಣಗಳನ್ನು ಸ್ಥಾಪಿಸಿದೆ.