ಬ್ರಂಪ್ಟನ್ (ಕೆನಡಾ)ನಲ್ಲಿ ಖಲೀಸ್ತಾನಿಗಗಳು ಪ್ರಧಾನಮಂತ್ರಿ ಮೋದಿಯ ಮೇಲೆ ದಾಳಿ ನಡೆಸುತ್ತಿರುವಂತೆ ಫಲಕ ಪ್ರದರ್ಶನ !

ಬ್ರಂಪ್ಟನ್ (ಕೆನಡಾ) – ಕೆನಡಾದ ಬ್ರಂಪ್ಟನ್ ನಗರದಲ್ಲಿನ ‘ಶ್ರೀ ಭಗವದ್ಗೀತಾ ಪಾರ್ಕ್’ ನಲ್ಲಿ ಹಾಕಲಾಗಿರುವ ಫಲಕಗಳು ತೆರೆವುಗೊಳಿಸಲಾಗಿದ್ದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಮೇಲೆ ದಾಳಿ ನಡೆಸುತ್ತಿರುವಂತಹ ಫಲಕಗಳು ಹಾಕಲಾಗಿದೆ. ಇಲ್ಲಿಯ ಸ್ವಚ್ಛತಾ ಕಾರ್ಮಿಕರ ಗಮನಕ್ಕೆ ಬಂದ ನಂತರ ಅವರು ತಕ್ಷಣ ಅದನ್ನು ತೆಗೆದು ಹಾಕಿ ಮತ್ತೆ ಹಳೆಯ ಫಲಕಗಳನ್ನು ಹಾಕಿದರು. ಕೆನಡಾದ ಮಿಸಿಸಾಗಾ ನಗರದಲ್ಲಿ ಖಲಿಸ್ತಾನಿ ಬೆಂಬಲಿಗರಿಂದ ಜುಲೈ ೧೬ ರಂದು ಖಲೀಸ್ತಾನಿಗಾಗಿ ಜನಾಭಿಪ್ರಾಯ ಸಂಗ್ರಹ ಮಾಡುವರು. ಈ ಹಿಂದೆ ಕೂಡ ಈ ರೀತಿಯ ಘಟನೆ ನಡೆದಿದೆ ಮತ್ತು ಅದರ ಹಿಂದೆ ಖಲಿಸ್ತಾನಿ ಬೆಂಬಲಿಗರ ಕೈವಾಡವಿರುವುದೆಂದು ಹೇಳಲಾಗುತ್ತಿದೆ. ಈ ಪಾರ್ಕ್ ನ ಹೆಸರು ಕೆಲವು ತಿಂಗಳ ಹಿಂದೆ ಬದಲಾಯಿಸಿ ‘ಶ್ರೀ ಭಗವದ್ಗೀತಾ ಪಾರ್ಕ್’ ಎಂದು ಮಾಡಲಾಗಿದೆ. ಇಲ್ಲಿ ದೇವತೆಗಳ ಮೂರ್ತಿ ಕೂಡ ಸ್ಥಾಪಿಸಲಾಗುವುದು. ಇದರಲ್ಲಿ ಶ್ರೀ ಕೃಷ್ಣಾರ್ಜುನರ ರಥಾರೂಢ ಮೂರ್ತಿ ಇರಲಿದೆ.

೧. ಈ ಘಟನೆಯಿಂದ ಬ್ರಂಪ್ಟನ್ ನಗರದ ಆಡಳಿತದಿಂದ ಟ್ವೀಟ್ ಮಾಡಿ, ಪಾರ್ಕನಲ್ಲಿ ಫಲಕಗಳನ್ನು ಗುರಿ ಮಾಡಿದ್ದರಿಂದ ನಿರಾಶೆ ಆಗಿದೆ. ಇದು ಒಂದು ಧಾರ್ಮಿಕ ಸಮುದಾಯದ ಮೇಲಿನ ದಾಳಿ ಆಗಿದೆ. ಈ ಪ್ರಕರಣ ಪೊಲೀಸರ ಬಳಿ ಕಳುಹಿಸಲಾಗಿದೆ. ದುರ್ದೈವದಿಂದ ಈ ಪ್ರದೇಶದಲ್ಲಿ ಈ ರೀತಿಯ ಘಟನೆಗಳು ಈ ಹಿಂದೆ ಕೂಡ ಘಟಿಸಿದ್ದರು ಆ ಪ್ರಕರಣಗಳಲ್ಲಿ ಇಲ್ಲಿಯವರೆಗೆ ಯಾರನ್ನು ಬಂಧಿಸಲಾಗಿಲ್ಲ. (ಕೆನಡಾದಲ್ಲಿನ ಪೊಲೀಸರ ನಿಷ್ಕ್ರಿಯತೆ ಎಂದು ಹೇಳಬೇಕೇ ಅಥವಾ ಖಲಿಸ್ತಾನಿಗಳಿಗೆ ಬೆಂಬಲಿಸುವ ವೃತ್ತಿ ಎಂದು ಹೇಳಬೇಕೇ ! – ಸಂಪಾದಕರು) ಬ್ರಂಪ್ಟನ್ ನಗರದಲ್ಲಿ ನಾವು ಅಸಹಿಷ್ಣುತೆ ಮತ್ತು ಭೇದಭಾವದ ಸಂದರ್ಭದ ಕೃತ್ಯಗಳು ವಿರುದ್ಧ ಸಂಘಟಿತರಾಗಿದ್ದೇವೆ. ನಾವು ವಿವಿಧತೆ, ಸರ್ವಸಮಾವೇಶಕತೆ ಮತ್ತು ಎಲ್ಲರ ಕುರಿತು ಗೌರವ ಕಾಯಂ ಇರಿಸುತ್ತಾ ದ್ವೇಷದ ಕೃತ್ಯಗಳನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

೨. ನಗರದ ಮೇಯರ್ ಪ್ಯಾಟ್ರಿಕ್ ಬ್ರೌನ್ ಇವರು, ನಗರದಲ್ಲಿ ಯಾವುದೇ ಧಾರ್ಮಿಕ ಸಮಾಜಕ್ಕೆ ಬೆದರಿಕೆ ನೀಡುವವರ ಕುರಿತು ಶೂನ್ಯ ಸಹನಶೀಲತೆ ನೀತಿ ಜಾರಿ ಮಾಡಲಾಗಿದೆ ಎಂದು ಹೇಳಿದರು.

೩. ಈ ಹಿಂದೆ ಜುಲೈ ೭ ರಂದು ಬ್ರಂಪ್ಟನ್ ನಗರದಲ್ಲಿನ ಭಾರತಮಾತ ಮಂದಿರದ ಹೊರಗೆ ಭಾರತೀಯ ರಾಯಭಾರಿ ಕಚೇರಿಯಲ್ಲಿನ ಅಧಿಕಾರಿಗಳ ವಿರುದ್ಧ ಒಂದು ಬಿತ್ತಿಪತ್ರ ಹಚ್ಚಿರುವ ಘಟನೆ ಘಟಿಸಿತ್ತು. ಹಾಗೂ ಖಲಿಸ್ತಾನವನ್ನು ಬೆಂಬಲಿಸುವ ಘೋಷಣೆ ಬರೆಯಲಾಗಿತ್ತು.

ಸಂಪಾದಕರ ನಿಲುವು

ಈಗ ಕೆನಡಾ ‘ಖಲೀಸ್ತಾನಿ ದೇಶ’ವಾಗಿದ್ದು ಅಲ್ಲಿಯ ಹಿಂದುಗಳು ಮತ್ತು ಅವರ ಧಾರ್ಮಿಕ ಸ್ಥಳಗಳು ಅಸುರಕ್ಷಿತವಾಗಿವೆ. ಇದರ ಬಗ್ಗೆ ಈಗ ಭಾರತ ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !