ಕೇಂದ್ರ ಸಚಿವ ನಿತಿನ ಗಡಕರಿಯವರಿಗೆ ಹಫ್ತಾ(ಸುಲಿಗೆ) ಕೇಳುವವ ಲಷ್ಕರ್-ಎ-ತೊಯಬಾದ ಭಯೋತ್ಪಾದಕ !

ನವದೆಹಲಿ – ಕೇಂದ್ರ ಸಚಿವ ನಿತಿನ ಗಡಕರಿಯವರಿಗೆ ಹಣಕ್ಕಾಗಿ ಎರಡು ಬೆದರಿಕೆಯ ಕರೆ ಬಂದಿತ್ತು. ಜನೆವರಿಯಿಂದ ಮಾರ್ಚ್ 2023 ರ ಕಾಲಾವಧಿಯಲ್ಲಿ ನಡೆದ ಈ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ನ ಹೆಸರು ಅಫ್ಸರ ಪಾಶಾ ಆಗಿದ್ದು, ಅವನು ಲಷ್ಕರ-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕನಾಗಿರುವುದು ಬೆಳಕಿಗೆ ಬಂದಿದೆ. ಸಧ್ಯ ಆತ ಬೆಳಗಾವಿಯ ಜೈಲಿನಲ್ಲಿದ್ದಾನೆ. ಅವನ ಹೇಳಿಕೆಯಂತೆ ಅವನ ಸಹಚರ ಜಯೇಶ ಕಂಥಾ ಉರ್ಫ ಜಯೇಶ ಪುಜಾರಿ ಇವನು ಜನೆವರಿ 14 ಮತ್ತು ಮಾರ್ಚ 21 ರಂದು ಗಡಕರಿಯವರ ಕಾರ್ಯಾಲಯಕ್ಕೆ ಕರೆ ಮಾಡಿ 100 ಕೋಟಿ ಮತ್ತು 10 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಒಡ್ಡಿದ್ದನು. ಹಣ ಕೊಡದಿದ್ದರೆ ಗಡಕರಿಯವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದನು.

1. ಅಫ್ಸರ್ ಪಾಶಾನು ನಿಷೇಧಿತ ಜಿಹಾದಿ ಸಂಘಟನೆ `ಪಾಪ್ಯುಲರ ಫ್ರಂಟ ಆಫ್ ಇಂಡಿಯಾ’ದ ಮಾಜಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದು ಬಾಂಬ್ ತಯಾರಿಕೆಯಲ್ಲಿ ನಿಪುಣನಾಗಿದ್ದಾನೆ. ಅವನ ಮೇಲೆ 2003 ರಲ್ಲಿ ಢಾಕಾದಲ್ಲಿ ಮತ್ತು 2008 ರಲ್ಲಿ ಬೆಂಗಳೂರಿನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂಚನ್ನು ರೂಪಿಸಿರುವ ಆರೋಪವಿದೆ.

2. ಜಯೇಶ ಪುಜಾರಿ ಸಧ್ಯಕ್ಕೆ ನಾಗ್ಪುರ ಜೈಲಿನಲ್ಲಿದ್ದು, ಅವನಿಂದ ಮೊಬೈಲ್ ಮತ್ತು ಸಿಮ್ ಕಾರ್ಡ ವಶಪಡಿಸಿಕೊಳ್ಳಲಾಗಿದೆ. ಅಫ್ಸರ್ ಪಾಶಾನ ಕೋಣೆಯ ತಪಾಸಣೆಯನ್ನು ನಡೆಸಲಿದ್ದಾರೆ.

3. ಮಹಾರಾಷ್ಟ್ರ ಪೊಲೀಸರು ಅಫ್ಸರ ಪಾಶಾನನ್ನು ವಶಕ್ಕೆ ಪಡೆಯಲು ಕರ್ನಾಟಕಕ್ಕೆ ಹೋಗುವ ಸಾಧ್ಯತೆಯಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿರುವ ಜಿಹಾದಿ ಭಯೋತ್ಪಾದನೆಯನ್ನು ಬುಡಸಮೇತ ನಿರ್ಮೂಲನೆ ಮಾಡಲು ದೃಢ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಾಗಿದೆ !