ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ ! – ಅಮೇರಿಕಾ

ವಾಶಿಂಗ್ಟನ್ – ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ, ಎಂದು ಅಮೇರಿಕಾದ ಸಂಸದೀಯ ಸಮಿತಿಯು ಅಂಗೀಕರಿಸಿದ ನಿರ್ಣಯದಲ್ಲಿ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಮೇರಿಕಾ ಭೇಟಿಯ ಒಂದು ತಿಂಗಳ ನಂತರ ಸಂಸದೀಯ ಸಮಿತಿಯು ಈ ನಿರ್ಣಯವನ್ನು ಅಂಗೀಕರಿಸಿದೆ. ಇದರಿಂದ, ಅಮೇರಿಕಾವು ಅರುಣಾಚಲ ಪ್ರದೇಶವನ್ನು ಭಾರತದ ಅವಿಭಾಜ್ಯ ಅಂಗವೆಂದು ಪರಿಗಣಿಸುತ್ತದೆ, ಹೊರತು ಚೀನಾದದಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಲಾಗುತ್ತದೆ. ಈ ನಿರ್ಣಯವನ್ನು ಸಿನೆಟರ್ಸ ಜೆಫ್ ಮರ್ಕ್ಲೆ, ಬಿಲ ಹೆಗರ್ಟಿ, ಟಿಮ್ ಕೆನ ಮತ್ತು ಖ್ರಿಸ ವ್ಯಾನ ಅವರು ಮಂಡಿಸಿದರು.

ಭಾರತದ ಗಡಿಯಲ್ಲಿ ಚೀನಾ ನಿರಂತರವಾಗಿ ಅತಿಕ್ರಮಣ ಮಾಡುತ್ತಿದೆ. ಇತ್ತೀಚೆಗಷ್ಟೇ ಭಾರತದಲ್ಲಿನ ಅರುಣಾಚಲ ಪ್ರದೇಶದ ಒಂದು ಭಾಗವನ್ನು ಚೀನಾಕ್ಕೆ ವಶಪಡಿಸಿಕೊಂಡಿತ್ತು. ಈ ವಿಚಾರದಲ್ಲಿ ಅಮೇರಿಕಾ ಭಾರತದ ಪರ ನಿಂತಿದೆ. ಅಮೇರಿಕಾವು ಮ್ಯಾಕ್ ಮಹೊನ್ ರೇಖೆಯನ್ನು ಚೀನಾ ಮತ್ತು ಭಾರತದ ನಡುವಿನ ಅಂತರರಾಷ್ಟ್ರೀಯ ಗಡಿಯೆಂದು ಹೇಳಿರುವುದಾಗಿ ಈ ನಿರ್ಣಯದಲ್ಲಿ ನೊಂದಾಯಿಸಲಾಗಿದೆ ಹೇಳುತ್ತದೆ. ಸಿನೆಟರ ಕಾರ್ನಿನ ಇವರು, ಭಾರತ ಮತ್ತು ಚೀನಾ ನಡುವಿನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಮೇರಿಕಾವು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಧೃಢವಾಗಿ ನಿಲ್ಲಬೇಕು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಚೀನಾವನ್ನು ಅಮೇರಿಕಾ ತನ್ನ ದೊಡ್ಡ ಶತ್ರು ಎಂದು ಪರಿಗಣಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತವು ಚೀನಾದ ವಿರುದ್ಧ ಸ್ವಲ್ಪ ಪ್ರಮಾಣದಲ್ಲಿ ಆಕ್ರಮಣಕಾರಿ ನೀತಿಯನ್ನು ಅನುಸರಿಸುತ್ತಿದೆ. ಆದ್ದರಿಂದ ಭಾರತವನ್ನು ದಮನಿಸಲು ಪ್ರಯತ್ನಿಸುತ್ತಿದ್ದ ಅಮೇರಿಕಾ ಇಂತಹ ಹೇಳಿಕೆಗಳನ್ನು ನೀಡಿ ಭಾರತವನ್ನು ತನ್ನ ಪರವಾಗಿ ಮಾಡಿಕೊಳ್ಳಲು ಯತ್ನಿಸುತ್ತಿದೆ !