ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೆ ಫ್ರಾನ್ಸಿನ ಸರ್ವೋಚ್ಚ ಗೌರವ ಪುರಸ್ಕಾರ

ಈ ಗೌರವ ಪಡೆದ ಭಾರತದ ಮೊದಲ ಪ್ರಧಾನ ಮಂತ್ರಿ ಮೋದಿ !

ಪ್ಯಾರಿಸ್ (ಫ್ರಾನ್ಸ್) – ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರು 2 ದಿನಗಳ ಕಾಲ ಫ್ರಾನ್ಸ್ ನ ಪ್ರವಾಸದಲ್ಲಿದ್ದಾರೆ. ಜುಲೈ ೧೩ ರಂದು ರಾತ್ರಿ ಫ್ರಾನ್ಸ್ ನ ರಾಷ್ಟ್ರಪತಿ ಇಮ್ಯಾನ್ಯುಯೆಲ್ ಮ್ಯಕ್ರಾನ್ ಇವರ ಅರಮನೆಯಲ್ಲಿ ಫ್ರಾನ್ಸ್ ನ ಸರ್ವೋಚ್ಚ ಗೌರವ ಪುರಸ್ಕಾರ ‘ದಿ ಗ್ರಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್’ ಅನ್ನು ನೀಡಿ ಪ್ರಧಾನಮಂತ್ರಿ ಮೋದಿ ಇವರನ್ನು ಸನ್ಮಾನಿಸಿದರು. ಈ ಗೌರವ ಪಡೆದಿರುವ ನರೇಂದ್ರ ಮೋದಿ ಇವರು ಭಾರತೀಯ ಪ್ರಧಾನ ಮಂತ್ರಿಯಾದರು. ಪ್ರಧಾನಮಂತ್ರಿ ಮೋದಿ ಇವರು ಪ್ಯಾರಿಸ್ ನಲ್ಲಿ ‘ಲಾ ಸೀನ್ ಮ್ಯೂಸಿಕಲ್’ನಲ್ಲಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದರು. ಅವರು, ಫ್ರಾನ್ಸ್ ಗೆ ಬರುವುದು ಅಂದರೆ ಮನೆಗೆ ಬಂದ ಹಾಗೆ ಇದೆ. ಭಾರತೀಯರು ಎಲ್ಲಿಗೆ ಹೋಗುತ್ತಾರೆ ಅಲ್ಲಿ ಪುಟ್ಟ ಭಾರತ ನಿರ್ಮಿಸುತ್ತಾರೆ. ಅಂತರಾಷ್ಟ್ರೀಯ ವ್ಯವಸ್ಥೆಯಲ್ಲಿ ಭಾರತದ ವಿಶೇಷ ಪಾತ್ರವಿದೆ. ಪ್ರತಿಯೊಂದು ಸವಾಲು ಎದುರಿಸಲು ಭಾರತದ ಅನುಭವ ಮತ್ತು ಪ್ರಯತ್ನ ಜಗತ್ತಿಗೆ ಉಪಯುಕ್ತವಾಗುತ್ತಿದೆ. ಭಾರತ ಮುಂದಿನ ೨೫ ವರ್ಷದ ವಿಕಾಸದ ಗುರಿಯನ್ನು ಹೊಂದಿದೆ. ಇಂದು ಪ್ರತಿಯೊಂದು ಅಂತರಾಷ್ಟ್ರೀಯ ಸಂಸ್ಥೆಗಳು ಭಾರತ ಮುಂದೆ ಹೋಗುತ್ತಿದೆ ಎಂದು ಹೇಳುತ್ತಿದೆ, ಎಂದು ಹೇಳಿದರು.


ಫ್ರಾನ್ಸ್ ನಲ್ಲಿ ಕೂಡ ‘ಯುಪಿಐ’ ಮೂಲಕ (ಆನ್ಲೈನ್) ಆರ್ಥಿಕ ವ್ಯವಹಾರ ನಡೆಸಬಹುದು !

ಫ್ರಾನ್ಸ್ ನಲ್ಲಿ ‘ಯುಪಿಐ’ (ಆನ್ಲೈನ್ ಹಣಕಾಸು ವ್ಯವಹಾರ ಮಾಡುವ ವ್ಯವಸ್ಥೆ) ಉಪಯೋಗಿಸುವುದಕ್ಕಾಗಿ ಭಾರತ ಮತ್ತು ಫ್ರಾನ್ಸ್ ನಲ್ಲಿ ಒಪ್ಪಂದ ಆಗಿದೆ. ಪ್ರಧಾನಮಂತ್ರಿ ಮೋದಿ ಇವರು, ಈ ಒಪ್ಪಂದದಿಂದಾಗಿ ಈಗ ಫ್ರಾನ್ಸ್ ನಲ್ಲಿನ ಜನರಿಗೂ ಕೂಡ ‘ಯುಪಿಐ’ ಉಪಯೋಗಿಸಲು ಸಾಧ್ಯವಾಗುವುದು. ಇದರಿಂದ ಭಾರತದ ನವ ನಿರ್ಮಾಣಕ್ಕಾಗಿ ದೊಡ್ಡ ಮಾರುಕಟ್ಟೆ ಉಪಲಬ್ಧವಾಗುವುದು. ಯುಪಿಐ ಉಪಯೋಗಕ್ಕಾಗಿ ಈ ವರ್ಷ ಸಿಂಗಪೂರದ ‘ಪೆ ನಾವು’ ಜೊತೆಗೆ ಭಾರತದ ಒಪ್ಪಂದವಾಗಿದೆ. ಇದರ ಜೊತೆಗೆ ಸಂಯುಕ್ತ ಅರಬ್ ಅಮಿರಾತ್, ಭೂತಾನ್ ಮತ್ತು ನೇಪಾಳ ಈ ದೇಶಗಳಲ್ಲಿ ಈ ಹಿಂದೆಯೇ ಈ ವ್ಯವಸ್ಥೆ ಆರಂಭವಾಗಿದೆ. ಈಗ ಅಮೆರಿಕಾ, ಯುರೋಪಿಯನ್ ದೇಶ ಮತ್ತು ಪಶ್ಚಿಮ ಏಷ್ಯಾದಲ್ಲಿ ಅಂತರರಾಷ್ಟ್ರೀಯ ಯುಪಿಐ ಸೇವೆ ಆರಂಭ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.