ಟರ್ಕಿ ಜನರು ೧೪ ಕ್ಕಿಂತಲೂ ಹೆಚ್ಚಿನ ಜನರೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುತ್ತಾರೆ. ಹಾಗೂ ಆಸ್ಟ್ರೇಲಿಯಾ, ಇಟಲಿ, ಅಮೇರಿಕಾ, ಕೆನಡಾ ಇಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇದರ ಪ್ರಮಾಣ ೧೦ ಕ್ಕಿಂತ ಅಧಿಕ !ಕೆಲವು ಭಾರತಿಯರು ತಮ್ಮ ಜೀವಿತಾವಧಿಯಲ್ಲಿ ಸರಾಸರಿ ೩ ಜನರ ಜೊತೆಗೆ ಶಾರೀರಿಕ ಸಂಬಂಧ ಹೊಂದಿರುತ್ತಾರೆ. |
ವಾಷಿಂಗ್ಟನ್ ( ಅಮೇರಿಕಾ) – ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿನ ಜನರು ತಮ್ಮ ಜೀವನದಲ್ಲಿ ಎಷ್ಟು ಜನರ ಜೊತೆಗೆ ಲೈಂಗಿಕ ಸಂಬಂಧ ಹೊಂದಿರುತ್ತಾರೆ, ಎನ್ನುವ ಸಂದರ್ಭದಲ್ಲಿ ಇತ್ತೀಚಿಗೆ ಸಮೀಕ್ಷೆ ನಡೆಸಲಾಯಿತು. ದಿ ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ನಡೆಸಿರುವ ಈ ಸಮೀಕ್ಷೆಯ ಪ್ರಕಾರ ಇಸ್ಲಾಮಿಕ್ ದೇಶ ಟರ್ಕಿ ಈ ಯಾದಿಯಲ್ಲಿ ಮೊದಲ ಸ್ಥಾನದಲ್ಲಿದೆ. ಟರ್ಕಿಯ ಜನರು ಸುಮಾರು ೧೪ ಕ್ಕಿಂತಲೂ ಹೆಚ್ಚಿನ ಜನರೊಂದಿಗೆ ಲೈಂಗಿಕ ಸಂಬಂಧ ಹೊಂದಿರುತ್ತಾರೆ. ಅದರ ನಂತರ ಆಸ್ಟ್ರೇಲಿಯಾ ೧೩, ನ್ಯೂಜಿಲ್ಯಾಂಡ್ ೧೩, ಮತ್ತು ಐರ್ಲಾಂಡ ೧೩, ಹಾಗೂ ದಕ್ಷಿಣ ಆಫ್ರಿಕಾದ ಜನರು ೧೨ ಜನರೊಂದಿಗೆ ಶಾರೀರಿಕ ಸಂಬಂಧ ಹೊಂದಿರುತ್ತಾರೆ, ಎಂದು ಈ ವರದಿಯಿಂದ ಬೆಳಕಿಗೆ ಬಂದಿದೆ. ಈ ಯಾದಿಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳ ವಿಚಾರ ಮಾಡಿದರೆ ಇಟಲಿ ಜನರು ಸುಮಾರು ೧೧ ಜನರ ಜೊತೆಗೆ ಲೈಂಗಿಕ ಸಂಬಂಧ ಇಡುತ್ತಾರೆ ಹಾಗೂ ಅಮೆರಿಕ, ಕೆನಡಾ ಮತ್ತು ಜಪಾನ್ ಜನರು ೧೦, ಯುನೈಟೆಡ್ ಕಿಂಗ್ ಡಮ್ ಮತ್ತು ರಷ್ಯಾ ೯ ಹಾಗೂ ಜರ್ಮನಿ ದೇಶದಲ್ಲಿ ಇದರ ಪ್ರಮಾಣ ೬ ರಷ್ಟು ಇದೆ. ಈ ಯಾದಿಯ ಪ್ರಕಾರ ಕೆಲವು ಭಾರತೀಯರು ಅವರ ಜೀವನದಲ್ಲಿ ಸರಾಸರಿ ೩ ಜನರ ಜೊತೆಗೆ ಶಾರೀರಿಕ ಸಂಬಂಧ ಹೊಂದಿರುತ್ತಾರೆ. (ಭಾರತದಲ್ಲಿ ಲಿವ್ ಇನ್ ರಿಲೇಶನ್ ಶಿಪ್ ನಂತಹ ಸ್ವೇಚ್ಛಾಚಾರ ಹೆಚ್ಚಾಗಿರುವುದರಿಂದಲೇ ನೈತಿಕತೆ ಕುಸಿಯುತ್ತಿದೆ , ಎನ್ನುವುದಕ್ಕೆ ಇದು ಉದಾಹರಣೆ ! – ಸಂಪಾದಕರು )
ಸಂಪಾದಕರ ನಿಲುವು* ಮನುಷ್ಯನಲ್ಲಿ ಸ್ವೇಚ್ಛಾಚಾರ ವೃತ್ತಿಗೆ ಬಲ ನೀಡುವ ಭೌತಿಕತೆಯ ಕಾರಣದಿಂದ ಇದು ನಡೆಯುತ್ತದೆ ಎನ್ನುವುದನ್ನು ಅರಿಯಬೇಕು ! * ಸಂಯಮದ ಕಾಮದಿಂದ ಮೋಕ್ಷದ ಕಡೆಗೆ ಹೋಗುವ ಬೋಧನೆ ಕೇವಲ ಹಿಂದೂ ಧರ್ಮ ನೀಡುತ್ತದೆ ! ಆದ್ದರಿಂದ ಯಾವ ವ್ಯಕ್ತಿ ಹಿಂದೂ ಧರ್ಮಾನುಸಾರ ಆಚರಣೆ ಮಾಡುತ್ತಾನೆಯೋ ಆ ವ್ಯಕ್ತಿ ನೈತಿಕತೆ ಹೊಂದಿರುತ್ತಾನೆ ಎನ್ನುವುದು ಕೂಡ ಅಷ್ಟೇ ಸತ್ಯ ! |