ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ದೇಶದಾದ್ಯಂತ ೮೩ ಸ್ಥಳಗಳಲ್ಲಿ ಆಚರಿಸಲಾದ ‘ಗುರುಪೂರ್ಣಿಮಾ ಮಹೋತ್ಸವ’ದಲ್ಲಿ ಹಿಂದೂ ರಾಷ್ಟ್ರದ ಘೋಷಣೆ !

ಹಿಂದೂ ಜನಜಾಗೃತಿ ಸಮಿತಿ ವತಿಯಿಂದದೇಶಾದ್ಯಂತ ೮೩ ಸ್ಥಳಗಳಲ್ಲಿ ಅದರಲ್ಲಿ ಕರ್ನಾಟಕದ ೨೮ ಕಡೆಗಳಲ್ಲಿ ‘ಗುರುಪೂರ್ಣಿಮಾ ಮಹೋತ್ಸವ’ವನ್ನು ಆಚರಿಸಲಾಯಿತು. ಗುರುಪೂರ್ಣಿಮಾ ಮಹೋತ್ಸವದ ಆರಂಭದಲ್ಲಿ ಶ್ರೀ ವ್ಯಾಸಪೂಜೆ ಹಾಗೂ ಪ.ಪೂ. ಭಕ್ತರಾಜ ಮಹಾರಾಜರ ಭಾವಚಿತ್ರಕ್ಕೆ ಪೂಜೆಯನ್ನು ಮಾಡಲಾಯಿತು. ಹೇಗೆ ರಾತ್ರಿಯ ನಂತರ ಸೂರ್ಯೋದಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೋ, ಅದೇ ರೀತಿ ಕಾಲಮಹಾತ್ಮೆಗನುಸಾರ ನಡೆಯುವ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಮಯವು ಅದೇ ದಿಕ್ಕಿನಲ್ಲಿ ಚಲಿಸುತ್ತಿದೆ. ಆದ್ದರಿಂದ ಈ ಅವಧಿಯಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯವನ್ನು ಮಾಡಿದರೆ ಕಾಲಾನುಸಾರ ಧರ್ಮ ಕಾರ್ಯಗಳನ್ನು ಮಾಡಿ ಈ ಮೂಲಕ ನಮ್ಮ ಸಾಧನೆ ಆಗುತ್ತದೆ. ಆದ್ದರಿಂದ ಈ ಬಾರಿಯ ಗುರುಪೂರ್ಣಿಮೆಯ ಸಂದರ್ಭದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಾರ್ಯ ಮಾಡಲು ನಿರ್ಧರಿಸಬೇಕು ಎಂದು ವಕ್ತಾರರು ಮನವಿ ಮಾಡಿದರು. ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಜಿಜ್ಞಾಸುಗಳು ಈ ಮಹೋತ್ಸವಗಳ ಲಾಭವನ್ನು ಪಡೆದರು.

ಶಿವಮೊಗ್ಗದಲ್ಲಿ ನಡೆದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಪಂಚಶಿಲ್ಪಕಾರರಾದ ಪೂ. ಕಾಶಿನಾಥ ಕವಟೆಕರ ಗುರೂಜಿಯವರ ವಂದನೀಯ ಉಪಸ್ಥಿತಿ ಇತ್ತು.

ಮಂಗಳೂರಿನಲ್ಲಿ ನಡೆದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಸನಾತನದ ಧರ್ಮಪ್ರಚಾರಕ ಸಂತರಾದ ಪೂ. ರಮಾನಂದ ಗೌಡ ಸನಾತನದ ಸಂತರಾದ ಪೂ. ವಿನಾಯಕ ಕರ್ವೇ, ಪೂ. ರಾಧಾ ಪ್ರಭು ಹಾಗೂ ಸನಾತನದ ಮೊದಲ ಬಾಲಕಸಂತರಾದ ಪೂ. ಭಾರ್ಗವರಾಮ ಪ್ರಭು ಇವರ ವಂದನೀಯ ಉಪಸ್ಥಿತಿ ಇತ್ತು.

೪ ಭಾಷೆಗಳಲ್ಲಿ ‘ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವ

ಈ ವರ್ಷ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ, ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವವು ಹಿಂದಿ, ಬಂಗಾಲಿ, ಒಡಿಯಾ ಮತ್ತು ಗುಜರಾತಿ ಈ ೪ ಭಾಷೆಗಳಲ್ಲಿ ಸಂಪನ್ನಗೊಂಡಿತು.

ಉಡುಪಿಯಲ್ಲಿ ನಡೆದ ಗುರುಪೂಜೆಯ ಕ್ಷಣಮಂಗಳೂರಿನ ಮಹೋತ್ಸವದಲ್ಲಿ ಉಪಸ್ಥಿತರಿದ್ದ ಧರ್ಮಾಭಿಮಾನಿಗಳು