ಖಲಿಸ್ತಾನಿಗಳಿಂದ ವಿವಿಧ ದೇಶಗಳಲ್ಲಿ ಆಯೋಜಿಸಲಾಗಿರುವ `ಕಿಲ್ ಇಂಡಿಯಾ’ (ಭಾರತವನ್ನು ಕೊಲ್ಲು) ಮೆರವಣಿಗೆಗಳ ಫಜಿತಿ !

ನವ ದೆಹಲಿ – ಖಲಿಸ್ತಾನಿ ಬೆಂಬಲಿಗರು ಜುಲೈ 8 ರಂದು ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಆಯೋಜಿಸಲಾಗಿದ್ದ `ಕಿಲ್ ಇಂಡಿಯಾ’ (ಭಾರತವನ್ನು ಕೊಲ್ಲಿರಿ) ಮೆರವಣಿಗೆಯ ಫಜೀತಿಯಾಯಿತು. ಈ ಮೆರವಣಿಗೆಯ ಮೂಲಕ ಭಾರತೀಯ ರಾಯಭಾರ ಕಚೇರಿಯ ಹೊರಗೆ ಆಂದೋಲನ ನಡೆಸುವವರಿದ್ದರು; ಆದರೆ ಈ ಮೆರವಣಿಗೆಯಲ್ಲಿ ಬೆರಳೆಣಿಕೆಯಷ್ಟು ಸಿಖ್ಖರು ಭಾಗವಹಿಸಿದ್ದರಿಂದ ಇದಕ್ಕೆ ಪ್ರಾಮುಖ್ಯತೆ ಸಿಗದಿರುವುದು ಕಂಡು ಬಂದಿತು. ರಾಯಭಾರ ಕಚೇರಿಯ ಹೊರಗೆ ಪೊಲೀಸರು ಬಿಗಿ ಭದ್ರತೆಯನ್ನು ಏರ್ಪಡಿಸಿದ್ದರು. ಕೆನಡಾದ ಭಾರತಮಾತಾ ದೇವಸ್ಥಾನದ ಹೊರಗೆ ಖಲಿಸ್ತಾನಿ ಬೆಂಬಲಿಗರು ಖಲಿಸ್ತಾನವನ್ನು ಬೆಂಬಲಿಸುವ ಭಿತ್ತಿಪತ್ರಗಳನ್ನು ಅಂಟಿಸಿದ್ದರು. ಖಲಿಸ್ತಾನಿ ಭಯೋತ್ಪಾದಕ ಹರದೀಪಸಿಂಹ ನಿಜ್ಜರ ಹತ್ಯೆಯ ಬಳಿಕ ಖಲಿಸ್ತಾನಿಗಳು ಈ ಮೆರವಣಿಗೆಯ ಆಯೋಜಿಸಿದ್ದರು.

ಖಲಿಸ್ತಾನಿಗಳ ಈ ಮೆರವಣಿಗೆಗೆ ಸೂಕ್ತ ಪ್ರತಿಕ್ರಿಯೆ ಸಿಗದಿರುವ ಹಿಂದೆ ಭಾರತ ಹೇರಿರುವ ಒತ್ತಡ ಹಾಗೆಯೇ ಖಲಿಸ್ತಾನಿಗಳು ಭಾರತೀಯ ರಾಯಭಾರ ಕಚೇರಿ ಮತ್ತು ಅಲ್ಲಿಯ ಅಧಿಕಾರಿಗಳ ಮೇಲೆ ದಾಳಿ ನಡೆಸುವುದಾಗಿ ಹಾಕಿರುವ ಬೆದರಿಕೆಯಾಗಿದೆಯೆಂದು ಹೇಳಲಾಗುತ್ತಿದೆ. ಭಾರತವು ಸ್ಪಷ್ಟ ಶಬ್ದಗಳಲ್ಲಿ `ಒಂದು ವೇಳೆ ಖಲಿಸ್ತಾನಿಗಳಿಗೆ ಸಹಾಯ ಮಾಡಿದರೆ, ಭಾರತದೊಂದಿಗೆ ಆ ದೇಶಗಳ ಸಂಬಂಧ ಹದಗೆಡಬಹುದು’ ಎಂದು ತಿಳಿಸಿತ್ತು. ಇದರಿಂದಲೇ ಎಲ್ಲ ದೇಶಗಳು ಎಚ್ಚರಿಕೆ ವಹಿಸಿವೆಯೆಂದು ಈ ಮೆರವಣಿಗೆಯ ಸಂದರ್ಭದಿಂದ ಕಂಡು ಬಂದಿತು.

ಟೊರಂಟೊ (ಕೆನಡಾ) ಇಲ್ಲಿ ಭಾರತೀಯರಿಂದ ಖಲಿಸ್ತಾನ ಬೆಂಬಲಿಗರಿಗೆ ತಕ್ಕ ಪ್ರತ್ಯುತ್ತರ !

ಕೆನಡಾದ ಟೊರಂಟೊ ನಗರದ ಭಾರತದ ವಾಣಿಜ್ಯ ರಾಯಭಾರ ಕಚೇರಿಯ ಎದುರು ಖಲಿಸ್ತಾನಿ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಭಾರತೀಯ ಮೂಲದ ನಾಗರಿಕರು ಅವರಿಗೆ ತಕ್ಕ ಪ್ರತ್ಯುತ್ತರವನ್ನು ನೀಡುತ್ತಾ ಅವರ ಎದುರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ, ಭಾರತದ ಬಾವುಟವನ್ನು ಹಾರಿಸಿ ಘೋಷಣೆಯನ್ನು ಕೂಗಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.

ಲಂಡನ(ಬ್ರಿಟನ್) ಇಲ್ಲಿ ಪೊಲೀಸರು ಖಲಿಸ್ತಾನ ಬೆಂಬಲಿಗರನ್ನು ಓಡಿಸಿದರು !

ಲಂಡನನಲ್ಲಿರುವ ಭಾರತೀಯ ಹೈ ಕಮೀಷನ್ ಕಚೇರಿಯ ಹೊರಗೆ 30 ರಿಂದ 40 ಖಲಿಸ್ತಾನ ಬೆಂಬಲಿಗರು ಜಮಾಯಿಸಿ ಪ್ರತಿಭಟನೆ ನಡೆಸಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ಅಲ್ಲಿಂದ ಓಡಿಸಿದರು. ಅದಕ್ಕಿಂತ ಮೊದಲು ಲಂಡನನಲ್ಲಿ ಖಲಿಸ್ತಾನಿಗಳು ಮೆರವಣಿಗೆ ನಡೆಸಿದ್ದರು. ಇದರಲ್ಲಿ ಅತ್ಯಲ್ಪ ಜನರು ಭಾಗವಹಿಸಿದ್ದರು. ಅವರ ಕೈಯಲ್ಲಿ ಭಾರತೀಯ ಹೈಕಮೀಷನರ ವಿಕ್ರಮ ದೊರೈಸ್ವಾಮಿ ಮತ್ತು ಬರ್ಮಿಂಗಮ್ ನಲ್ಲಿರುವ ಭಾರತದ ವಾಣಿಜ್ಯ ಕಚೇರಿ ರಾಯಭಾರಿ ಡಾ. ಶಶಾಂಕ ಇವರ ಛಾಯಾಚಿತ್ರಗಳಿದ್ದವು. ಅದರ ಮೇಲೆ ಆಕ್ಷೇಪಾರ್ಹ ವಿಷಯಗಳನ್ನು ಬರೆಯಲಾಗಿತ್ತು. ಈ ಮೆರವಣಿಗೆಯ ಸಮಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸರು ಉಪಸ್ಥಿತರಿದ್ದರು.

ಬ್ರಿಟನ್ ನಿಂದ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸುವಲ್ಲಿ ನಿರ್ಲಕ್ಷ್ಯ !

ಭಾರತೀಯ ರಾಯಭಾರ ಕಚೇರಿಯ ಎದುರು ಖಲಿಸ್ತಾನಿಗಳಿಂದ ನಡೆದ ಪ್ರತಿಭಟನೆಗಳ ಮೇಲೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗಚಿ ಇವರು, ಭಾರತವು ಲಂಡನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಸಿಕ್ಕ ಬೆದರಿಕೆಯ ವಿಷಯಗಳನ್ನು ಬ್ರಿಟನ್ ಗೆ ಮಂಡಿಸಲಾಗಿದೆ; ಆದರೆ ಅಲ್ಲಿಯ ಅಧಿಕಾರಿಗಳು ಇದನ್ನು ಸಾಮಾನ್ಯ ಘಟನೆಯ ದೃಷ್ಟಿಯಿಂದ ನೋಡುತ್ತಿದ್ದಾರೆ. ಈ ಬೆದರಿಕೆಗಳ ಗಾಂಭಿರ್ಯ ಮತ್ತು ಅದರ ಹಿಂದಿರುವ ಉದ್ದೇಶಗಳನ್ನು ನೋಡುವ ಆವಶ್ಯಕತೆಯಿದೆ. (ಬ್ರಿಟನ್ ಪ್ರಧಾನಮಂತ್ರಿ ಋಷಿ ಸುನಕ ಇವರು ಭಾರತೀಯ ವಂಶದವರಾಗಿದ್ದರೂ, ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಹಾಕಲಾಗಿರುವ ಬೆದರಿಕೆಗಳನ್ನು ಯಾವ ರೀತಿ ನೋಡುತ್ತಿದ್ದಾರೆಂದು ಗಮನಿಸಿರಿ ! – ಸಂಪಾದಕರು)

ಸಂಪಾದಕರ ನಿಲುವು

ಕೆನಡಾದಲ್ಲಿ ಭಾರತಮಾತಾ ದೇವಸ್ಥಾನದ ಹೊರಗೆ ಖಲಿಸ್ತಾನಿಗಳು ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಬೆದರಿಕೆ ಹಾಕುವ ಭಿತ್ತಿಪತ್ರವನ್ನು ಅಂಟಿಸಿದ್ದಾರೆ !