ಭಗವಾನ ಶ್ರೀಕೃಷ್ಣನು ಭಾಗವತದಲ್ಲಿ ಹೇಳುತ್ತಾನೆ, ‘ನಾನು ಮುಗ್ದ ಭಕ್ತರನ್ನು ಅತ್ಯಂತ ಪ್ರೀತಿಸುತ್ತೇನೆ. ಆ ಮಾಧುರ್ಯದ ಬಗ್ಗೆ ನಿನಗೇನು ಹೇಳಲಿ ? ಅವರು ಇಲ್ಲದಿದ್ದರೆ, ಯಾರು ಎಷ್ಟೇ ಸುಖ ನೀಡುವ ಉಪಚಾರ ಮಾಡಿದರೂ ನನಗೆ ಇಷ್ಟವಾಗುವುದಿಲ್ಲ. ಅಂತಹ ಮುಗ್ಧ ಭಕ್ತರನ್ನು ನಾನು ಉತ್ತಮ ‘ಭಾಗವತ್, ಅಂದರೆ ‘ಭಕ್ತ ಎಂದು ತಿಳಿಯುತ್ತೇನೆ. ನಾನು ಭಗವಂತನಾಗಿದ್ದರೂ ಅವರ ಪಾದಗಳನ್ನು ಹಿಡಿಯುತ್ತೇನೆ. ಅಂತಹ ಭಕ್ತರನ್ನು ಭೇಟಿ ಯಾಗಲು ನಾನು ನಿಸ್ಸಂದೇಹವಾಗಿ ತುಂಬಾ ಉತ್ಸುಕನಾಗಿರುತ್ತೇನೆ. ಆ ಭಕ್ತನು ಜಾಗರೂಕನಾಗಿರುತ್ತಾನೆ. ಅಂತಹ ನನ್ನ ಪ್ರಾಮಾಣಿಕ ಮತ್ತು ಭಾವವಿರುವ ನನ್ನ ಮುಗ್ಧ ಭಕ್ತನು ಎಲ್ಲಿದ್ದರೂ, ನಾನು ಅವನ ಬಳಿಗೆ ಧಾವಿಸುತ್ತೇನೆ. ಅಂತಹ ಭಕ್ತರು ದುರ್ಲಭ. ಉದ್ಧವಾ, ನಾನು ನಿಮಗೇನು ಹೇಳಲಿ ! ಅಂತಹ ಮುಗ್ಧ ಭಕ್ತನಿಗೆ ನನ್ನನ್ನೇ ಮಾರಿಕೊಳ್ಳುತ್ತೇನೆ ಮತ್ತು ಅವನನ್ನು ನನ್ನವನನ್ನಾಗಿಸುತ್ತೇನೆ. ನನಗೆ ನನಗಿಂತ ನನ್ನ ಭಕ್ತರು ಮಹತ್ವದವರಾಗಿದ್ದಾರೆ; ಅದಕ್ಕಾಗಿ ನಾನು ಅವರ ವಶದಲ್ಲಿದ್ದು ಎಂದಿಗೂ ಅವರ ಮಾತನ್ನು ಉಲ್ಲಂಘಿಸುವುದಿಲ್ಲ.
(ಆಧಾರ : ಸಾರ್ಥ ಶ್ರೀ ಏಕನಾಥಿ ಭಾಗವತ (೧೧ ನೇ ಅಧ್ಯಾಯ, ಸಾಲು ೧೧೭೬ ರಿಂದ ೧೧೮೦))