* ಹೇ ಭಗವಂತಾ ನಿನ್ನಿಂದಾಗಿಯೇ ನಾವು ಉಸಿರಾಡುತ್ತಿದ್ದೇವೆ !
* ನಮಗಾಗಿ ನೀನೇ ಪ್ರಾಣವಾಯುವನ್ನು ನಿರ್ಮಿಸಿರುವೆ !
* ನೀನು ನಾವು ಎಲ್ಲ ರೀತಿಯ ಕೆಲಸಗಳನ್ನು ಮಾಡಲು ಬರುವಂತಹ ಕೈಗಳನ್ನು ಮತ್ತು ಅವುಗಳ ಬೆರಳುಗಳನ್ನು ರಚಿಸಿರುವೆ !
* ನೀನು ನಮಗೆ ನಡೆಯಲು, ಓಡಲು ಮತ್ತು ಕುಳಿತುಕೊಳ್ಳಲು ಬರುವಂತೆ ನಮ್ಮ ಕಾಲುಗಳನ್ನು ಮತ್ತು ಅವುಗಳ ಬೆರಳುಗಳನ್ನು ರಚಿಸಿರುವೆ !
* ಬೆನ್ನಿಗೆ ಕಶೇರುಖಂಡಗಳನ್ನು ನೀಡಿದ್ದರಿಂದ, ನಾವು ನೇರ ನಿಲ್ಲಬಹುದು ಹಾಗೂ ಬಗ್ಗಬಹುದು !
* ನೀನು ನಮಗೆ ಪಂಚಜ್ಞಾನೇಂದ್ರಿಯಗಳನ್ನು ನೀಡಿದ್ದರಿಂದ ನಮ್ಮ ಜೀವನಕ್ಕೆ ಅರ್ಥ ಪ್ರಾಪ್ತವಾಗಿದೆ !
* ನಾಲಿಗೆಯಿಂದ ನಾವು ವಿವಿಧ ರುಚಿಗಳನ್ನು ಅನುಭವಿಸಿ ಆನಂದಪಡುತ್ತೇವೆ, ತೃಪ್ತಿಯನ್ನೂ ಅನುಭವಿಸುತ್ತೇವೆ !
* ನಮಗೆ ಕಣ್ಣುಗಳನ್ನು ಕೊಟ್ಟಿದ್ದರಿಂದ ನಾವು ಸುಂದರ ಸೃಷ್ಟಿಯ ಆನಂದವನ್ನು ಅನುಭವಿಸುತ್ತೇವೆ !
* ನಮಗೆ ಕಿವಿಗಳನ್ನು ಕೊಟ್ಟಿದ್ದರಿಂದ ಭಗವಂತನು ರಚಿಸಿದ ಸುಮಧುರ ಸಂಗೀತ ಮತ್ತು ವ್ಯಕ್ತಿಯ ಮಾತುಗಳನ್ನು ಕೇಳಬಹುದು !
* ಚರ್ಮದಿಂದ ನಮ್ಮ ದೇಹದ ರಕ್ಷಣೆಯಾಗುತ್ತದೆ !
* ಹೃದಯ ರಕ್ತ ಶುದ್ಧಿ ಮಾಡುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ !
* ಹೊಟ್ಟೆಯಲ್ಲಿನ ಎಲ್ಲ ರಚನೆಯಿಂದ ಆಹಾರ ಪಚನವಾಗುತ್ತದೆ !
* ನಾವು ಸೇವಿಸಿದ ಆಹಾರದ ಪ್ರತಿಯೊಂದು ಕಣದಿಂದ ರಕ್ತವಾಗುತ್ತದೆ, ಇದು ಬಹಳ ವೈಶಿಷ್ಟ್ಯಪೂರ್ಣವಾಗಿದೆ !
* ಶ್ವಾಸಕೋಶ, ಮೂತ್ರಕೋಶ ಮುಂತಾದ ದೇಹದ ಅವಯವಗಳು ಅವುಗಳ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡುತ್ತಿರುತ್ತವೆ !
* ಮೆದುಳಿನ ವಿವಿಧ ಶಾಖೆಗಳಲ್ಲಿರುವ ಅನೇಕ ಜೀವಕೋಶಗಳಿಂದಾಗಿ ಎಲ್ಲವೂ ನಿಯಂತ್ರಣದಲ್ಲಿ ಇರುತ್ತದೆ !